ಸ್ವೀಡನ್ ಸಂಸತ್ತು ‘ಕ್ರಿಶ್ಚನ್ ಮಾಡರೆಟ್ಸ್’ ಪಕ್ಷದ ಉಲ್ಫ ಕ್ರಿಸ್ಟರಸನ್ ಇವರನ್ನು ಪ್ರಧಾನಮಂತ್ರಿಯೆಂದು ಆಯ್ಕೆ ಮಾಡಿತು. ಒಂದು ಕಡೆಗೆ ರಷ್ಯಾ-ಉಕ್ರೆನ್ ಯುದ್ಧದಿಂದ ಯುರೋಪ್‌ನ ಹೆಚ್ಚಿನ ದೇಶಗಳು ಒಟ್ಟುಗೂಡಿದಂತೆ ಕಂಡು ಬಂದರೂ ಈ ಯುದ್ಧಕ್ಕಿಂತ ಮುಂಚಿನ ಈ ವಿವಾದದಿಂದ ಅವು ವೈಚಾರಿಕ ಮತ್ತು ಧೋರಣಾತ್ಮಕವಾಗಿ ವಿಭಜಿಸಲ್ಪಟ್ಟಿವೆ. ಇತ್ತೀಚೆಗಷ್ಟೇ ಸ್ವೀಡನ್‌ನಲ್ಲಿ ನಡೆದ ಚುನಾವಣೆಯ ಫಲಿತಾಂಶದಲ್ಲಿ ಇದನ್ನು ತೀವ್ರವಾಗಿ ಅನುಭವಿಸಲಾಗಿದೆ. ಯಾವ ದೇಶವು ಜಗತ್ತಿಗೆ ‘ಗ್ರೇಟಾ ಥನ್‌ಬರ್ಗ್’ ಹೆಸರಿನ ಜಗತ್ಪ್ರಸಿದ್ಧ ತಥಾಕಥಿತ ಪರಿಸರವಾದಿಯನ್ನು ನೀಡಿತೋ ಅಲ್ಲಿ ಪರಿಸರ ರಕ್ಷಣೆಗೆ ರಾಜಕೀಯ ಸ್ತರದಲ್ಲಿ ಮಹತ್ವ ಸಿಕ್ಕಿಲ್ಲ. ಯಾವ ದೇಶದ ಜಾಗತಿಕ ಸ್ತರದಲ್ಲಿ ‘ಪ್ರಗತಿಪರ ಉದಾರತಾವಾದಿ’ ಎಂದು ಗುರುತಿಸಲ್ಪಟ್ಟಿತೋ, ಆ ಚಿತ್ರಣವೂ ಇಂದು ಬದಲಾಗಿದೆ. ಕಳೆದ ೮ ವರ್ಷಗಳಿಂದ ಅಧಿಕಾರದಲ್ಲಿರುವ ಎಡ ಪಂಥೀಯ ‘ಸೊಶಲ್ ಡೆಮೊಕ್ರಾಟ್ಸ್ ಪಕ್ಷವು ಕೆಳಗಿಳಿಯಬೇಕಾಗಿ ಬಂದಿದ್ದು ಸ್ವೀಡನ್ ಸಂಸತ್ತು ಉಲ್ಫ್ ಕ್ರಿಸರಸನ್‌ರನ್ನು ಪ್ರಧಾನಮಂತ್ರಿ ಹುದ್ದೆಗೆ ಆಯ್ಕೆ ಮಾಡಿದೆ. ಅವರ ‘ಕ್ರಿಶ್ಚನ್ ಮಾಡರೆಟ್ಸ್’ ಪಕ್ಷವು ಮೂಲಭೂತ ರಾಷ್ಟ್ರವಾದಿ ಮತ್ತು ಮುಸಲ್ಮಾನವಿರೋಧಿ ಪಕ್ಷ ‘ಸ್ವೀಡನ್ ಡೆಮೊಕ್ರಾಟ್ಸ್’ನಿಂದ (‘ಎಸ್.ಡಿ.’ಯ) ಬೆಂಬಲವನ್ನು ಪಡೆಯಬೇಕಾಗಿದೆ. ಸ್ವೀಡನ್ ಡೆಮೊಕ್ರಟ್ಸ್‌ಗಳು ಬಾಹ್ಯದಿಂದ ಬೆಂಬಲ ನೀಡಿದರೂ ಕ್ರಿಸ್ಟರಸನ್ ಇವರು ಮುಸ್ಲಿಂ ನಿರಾಶ್ರಿತರನ್ನು ಸ್ವೀಕರಿಸುವ ಬಗ್ಗೆ ಕಠಿಣ ನೀತಿಗಳನ್ನು ಅವಲಂಬಿಸಬೇಕು ಹಾಗೂ ಪೊಲೀಸರಿಗೆ ಹೆಚ್ಚು ಅಧಿಕಾರ ಕೊಡಬೇಕು ಎಂಬ ಬೇಡಿಕೆಯನ್ನು ಒಪ್ಪಿಕೊಳ್ಳಬೇಕಾಗಿದೆ. ಸ್ವೀಡನ್‌ನ ರಾಜಕೀಯ ನಕ್ಷೆಯು ಬಲಪಂಥೀಯದತ್ತ ವಾಲತೊಡಗಿದೆ.
ಹಂಗೇರಿಯಿಂದ ಸ್ವೀಡನ್ !
ಸ್ವೀಡನ್ ಇದು ಪ್ರಗತಿಪರ ವಿಚಾರಗಳ ದೇಶ ಎಂದು ಖ್ಯಾತಿ ಪಡೆದಿದೆ. ಕಳೆದ ಎರಡು ಚುನಾವಣೆಗಳಲ್ಲಿ, ಹೇಗೆ ಪ್ರಗತಿಪರ ಫ್ರಾನ್ಸ್‌ನಲ್ಲಿ ‘ಎಸ್.ಡಿ.’ನಂತೆ ಇಲ್ಲಿಯ ‘ನ್ಯಾಶನಲ್ ರ‍್ಯಾಲಿ’ ಪಕ್ಷವು ಅತಿದೊಡ್ಡ ವಿಪಕ್ಷವಾಗಿ ಹೊರಹೊಮ್ಮಿತು. ಅಷ್ಟೇ ಅಲ್ಲ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಎಡಪಂಥೀಯ ಒಲವನ್ನು ಹೊಂದಿದ್ದರೂ, ಅವರು ಜಿಹಾದಿ ಭಯೋತ್ಪಾದನೆಗೆ ಮಾರಕ ಮತ್ತು ರಾಷ್ಟ್ರೀಯತೆಗೆ ಪೂರಕವಾಗಿರುವ ಕಾನೂನುಗಳನ್ನು ಅಂಗೀಕರಿಸಬೇಕಾಯಿತು, ಅದೇ ರೀತಿಯಲ್ಲಿ ಸ್ವೀಡನ್ ಸಹ ಈಗ ಆ ದಿಕ್ಕಿನಲ್ಲಿ ಹೆಚ್ಚು ವೇಗವಾಗಿ ಸಾಗುತ್ತಿದೆ. ಇಟಲಿಯಲ್ಲಿಯೂ ಮುಸ್ಲಿಂ ನಿರಾಶ್ರಿತರಿಗೆ ವಿರುದ್ಧವಾಗಿರುವ ‘ಬ್ರದರ್ಸ್ ಆಫ್ ಇಟಲಿ’ ಪಕ್ಷದ ಸರಕಾರ ತನ್ನ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆ, ಸಂಪ್ರದಾಯ ಇತ್ಯಾದಿಗಳನ್ನು ಸಂರಕ್ಷಿಸುವುದಾಗಿ ಭರವಸೆ ನೀಡಿದೆ. ಹಂಗೇರಿ ಮತ್ತು ಪೋಲೆಂಡ್‌ನಂತಹ ದೇಶಗಳಲ್ಲಿ, ಮೊದಲಿನಿಂದಲೂ ಮೂಲಭೂತವಾದ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಬೆಳೆಸುವ ಸರಕಾರಗಳು ಅಧಿಕಾರದಲ್ಲಿವೆ. ಹಂಗೇರಿಯ ಪ್ರಧಾನಿ ವಿಕ್ಟರ್ ಓರ್ಬನ್ ಇದರಲ್ಲಿ ಮುಂಚೂಣಿಯಲ್ಲಿದ್ದಾರೆ. ಫಿನ್‌ಲ್ಯಾಂಡ್ ಮತ್ತು ನೆದರ್‌ಲ್ಯಾಂಡ್‌ನಂತಹ ಮುಂದುವರಿದ ದೇಶಗಳಲ್ಲಿ, ಪ್ರಮುಖ ವಿಪಕ್ಷಗಳು ಬಲಪಂಥೀಯವಾಗಿವೆ. ಒಟ್ಟಾರೆಯಾಗಿ ಯುರೋಪನಲ್ಲಿ, ಸುಧಾರಣಾವಾದಿ ವಿಚಾರಶೈಲಿಗಿಂತ ಪುರಾಣ ಮತವಾದಿ ವಿಚಾರಗಳ ಸುದಿನ ಬಂದಿದೆ. ವಾಷಿಂಗ್ಟನ್‌ನಲ್ಲಿರುವ ವಿಶ್ವಪ್ರಸಿದ್ಧ ‘ಪ್ಯೂ ರೀಸರ್ಚ ಸೆಂಟರ್’ ಇದು ಈ ತಿಂಗಳ ಆರಂಭದಲ್ಲಿ ಪ್ರಕಟಿಸಿದ ವರದಿಯಲ್ಲಿ, ‘ಹಂಗೆರಿ, ಫ್ರಾನ್ಸ್, ಸ್ಪೇನ್, ಬೆಲ್ಜಿಯಂ, ಸ್ವೀಡನ್ ದೇಶಗಳಲ್ಲಿ ಬಲಪಂಥೀಯ ಪಕ್ಷಗಳಿಗೆ ಹೆಚ್ಚು ಜನಪ್ರಿಯತೆ ಸಿಗುತ್ತಿದೆ’, ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ, ‘ಎಸ್.ಡಿ.’ ಪಕ್ಷದ ಇತಿಹಾಸ ಮತ್ತು ಬೆಳವಣಿಗೆಯನ್ನು ಅಧ್ಯಯನ ಮಾಡಬೇಕಾಗಿದೆ. ಈ ಪಕ್ಷ ೧೯೮೮ ರಲ್ಲಿ ಹುಟ್ಟಿಕೊಂಡಿತು. ನಾಜಿ ಸಿದ್ಧಾಂತವನ್ನು ಆಧರಿಸಿದ ಪಕ್ಷವು ಕೆಲವೇ ವರ್ಷಗಳಲ್ಲಿ ಇದರಿಂದ ದೂರವಾಯಿತು. ೨೦೧೦ ರಿಂದ ಈ ಪಕ್ಷವು ಗಣನೀಯವಾಗಿ ಕಾರ್ಯನಿರ್ವಹಿಸಿದೆ ಮತ್ತು ಈ ವರ್ಷದ ಚುನಾವಣೆಯಲ್ಲಿ ಶೇ. ೨೦ ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಪಕ್ಷವು ‘ವೆಲ್ಫೆರ ಶಾವಿನಿಝಮ್’ (ನಿರಾಶ್ರಿತರಿಗಲ್ಲ, ಬದಲಾಗಿ ದೇಶದ ಮೂಲ ಜನರಿಗೆ ಎಲ್ಲಾ ಹಕ್ಕುಗಳಿರಬೇಕು ಎಂಬ ಸಿದ್ಧಾಂತ), ‘ವೈಟ್ ನ್ಯಾಶನಲಿಸಮ್’ (ಬಿಳಿಯರಿಂದ ಪ್ರಾಬಲ್ಯ ಹೊಂದಿರುವ ರಾಷ್ಟ್ರೀಯತೆ) ಮತ್ತು ‘ಮಲ್ಟಿಕಲ್ಚರಲಿಝಮ್’ ಅಂದರೆ ವಿಭಿನ್ನ ಸಂಸ್ಕೃತಿಗಳ ಜನರಿಗೆ ಅವಕಾಶ ಕಲ್ಪಿಸಲು ಪ್ರತಿಕೂಲ, ಈ ಸಿದ್ಧಾಂತಗಳು ಕಳೆದ ಕೆಲವು ವರ್ಷಗಳಿಂದ ಯುರೋಪಿನ ಜನರು ಮತ್ತು ರಾಜಕೀಯದಲ್ಲಿ ಬೇರೂರಿದೆ. ಈ ವರ್ಷದ ಚುನಾವಣೆಯಲ್ಲೂ ‘ಎಸ್.ಡಿ.’ಯು ಈ ಅಂಶಗಳನ್ನು ಅಸ್ತ್ರವನ್ನಾಗಿ ಮಾಡಿತು. ‘ಯೂರೋನ್ಯೂಸ್’ ಪ್ರಕಾರ, ‘ಎಸ್.ಡಿ.’ಯು ತನ್ನ ಚುನಾವಣಾ ಪ್ರಚಾರದಲ್ಲಿ ‘ಅಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಹಿಂದೆ ಮುಸಲ್ಮಾನ ನಿರಾಶ್ರಿತರಿದ್ದಾರೆ’, ‘ಸ್ವೀಡನ್‌ನ ಹೆಚ್ಚಿನ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳಿಗೆ ಇಸ್ಲಾಂ ಕಾರಣವಾಗಿದೆ’ ಎಂಬ ವಿಷಯಗಳಿಗೆ ಬಲ ನೀಡಿತು. ಸ್ವೀಡಿಷ್ ಸಾರ್ವಜನಿಕರು ಈ ಅಂಶವನ್ನು ಎತ್ತಿ ಹಿಡಿದರು ಮತ್ತು ಪ್ರತಿ ೫ ನಾಗರಿಕರಲ್ಲಿ ಒಬ್ಬರು ‘ಎಸ್.ಡಿ.’ ಗೆ ಮತ ಹಾಕಿದರು.
ಸಾಮಾನ್ಯ ೨೦೧೫-೨೦೧೬ರಲ್ಲಿ ಇರಾಕ, ಸಿರಿಯಾ, ಉತ್ತರ ಆಫ್ರಿಕಾದ ದೇಶಗಳಲ್ಲಿ ಐಸಿಸ್, ಬೊಕೊ ಹರಾಮ ನಡೆಸಿದ ಅಮಾನವೀಯ ಹಿಂಸಾಚಾರದಿಂದ ಲಕ್ಷಾಂತರ ಜನರು ತಮ್ಮ ತಾಯ್ನಾಡನ್ನು ತೊರೆದು ಸಮೃದ್ಧ ಯುರೋಪಿಗೆ ನಿರಾಶ್ರಿತರಾಗಿ ಬಂದರು, ಅವರಲ್ಲಿ ಹೆಚ್ಚಿನವರು ಮುಸಲ್ಮಾನರಾಗಿದ್ದರು. ಜರ್ಮನಿಯ ಆಗಿನ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರ ಪ್ರಭಾವಶಾಲಿ ಹಠದಿಂದಾಗಿ, ಅವರು ಅನೇಕ ದೇಶಗಳಿಗೆ ಇಚ್ಛೆ ಇಲ್ಲದಿದ್ದರೂ ಲಕ್ಷಾಂತರ ನಿರಾಶ್ರಿತರಿಗೆ ತಮ್ಮ ದೇಶದಲ್ಲಿ ಅವಕಾಶ ನೀಡಿದರು. ಸ್ವೀಡನ್ ಕೂಡ ಈ ಮುಸಲ್ಮಾನ ನಿರಾಶ್ರಿತರಿಗೆ ‘ಸೋಶಿಯಲ್ ಡೆಮಾಕ್ರಟ್ಸ್’ ಪಕ್ಷದ ನೇತೃತ್ವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಶ್ರಯ ನೀಡಿತು. ಆದರೆ, ಇಂದು ಸ್ವೀಡನ್‌ನಲ್ಲಿ ಜನಪ್ರಿಯತೆಯು ಮರ್ಕೆಲ್‌ರ ಸೈದ್ಧಾಂತಿಕ ಸೋಲು ನಡೆಯುತ್ತಿರುವುದರ ಸೂಚನೆಯಾಗಿದೆ, ಇಲ್ಲಿ ಗಮನಿಸಬೇಕಾದ ಅಂಶವಾಗಿದೆ !
ಭಾರತೀಯರ ನಿರೀಕ್ಷೆಗಳು !
ಮೂಲತಃ ಅನೇಕ ಯುರೋಪಿಯನ್ ‘ಕ್ರೈಸ್ತ’ ದೇಶಗಳು ಭಾರತದಲ್ಲಿನ ಪ್ರತ್ಯೇಕ ರಾಜ್ಯಗಳು ಅಥವಾ ಜಿಲ್ಲೆಗಳಷ್ಟು ಹರಡಿಕೊಂಡಿದ್ದೂ ಅವುಗಳಲ್ಲಿ ಹಲವು ದೇಶಗಳು ಸಮೃದ್ಧ ಮತ್ತು ಪ್ರಗತಿ ಹೊಂದಿವೆ; ಆದರೆ ಅಲ್ಲಿನ ಸಾಮಾಜಿಕ ವ್ಯವಸ್ಥೆಯು ಬಹುಸಂಸ್ಕೃತಿವಾದಿ ಅಲ್ಲದ ಕಾರಣ, ಈ ‘ನ್ಯಾಯಸಮ್ಮತ’ ನಿರಾಶ್ರಿತರಿಗೂ ಆಶ್ರಯ ನೀಡುವುದು ಅನೇಕರಿಗೆ ಕಷ್ಟಕರವಾಗಿದೆ. ಆದರೆ ‘ಹಿಂದೂ’ ಭಾರತದ ಚಿತ್ರಣವೇ ಬೇರೆಯಾಗಿದೆ. ಭಾರತವು ಜಗತ್ತಿನೆದುರು ಎರಡೂವರೆ ಸಾವಿರ ವರ್ಷಗಳ ಕಾಲ ‘ಪರ್ಷಿಯನ್’, ‘ಜ್ಯೂ’ ಮುಂತಾದ ಸಂಸ್ಕೃತಿಗಳನ್ನು ಸ್ವೀಕರಿಸುವ ಆದರ್ಶವನ್ನಿಟ್ಟಿದೆ. ಇಂದು ಲಕ್ಷಾಂತರ ಬಾಂಗ್ಲಾದೇಶಿಯರು ಮತ್ತು ರೋಹಿಂಗ್ಯಾ ಮುಸಲ್ಮಾನರು ಭಾರತದೊಳಗೆ ನುಸುಳುತ್ತಿದ್ದಾರೆ ಮತ್ತು ಸಂಪನ್ಮೂಲಗಳ ಮೇಲಿನ ಹಕ್ಕುಗಳನ್ನು ಕೇಳುತ್ತಿದ್ದಾರೆ. ಅನೇಕ ಹಿಂಸಾಚಾರದ ಹಿಂದೆ ಅವರ ಕೈವಾಡವಿದೆ ಎಂಬುದು ಸ್ಪಷ್ಟವಾದ ಸತ್ಯವಾಗಿದೆ. ಮತ್ತೊಂದೆಡೆ, ಆಡಳಿತಾರೂಢ ಭಾಜಪವನ್ನು ಪಾಶ್ಚಿಮಾತ್ಯ ಮಾಧ್ಯಮಗಳಲ್ಲಿ ‘ನಿಯೊ-ನಾಜಿ’, ‘ಹಿಂದೂ ನ್ಯಾಶನಿಲಿಸ್ಟ’ ಎಂದು ವಿವಿಧ ಪದಗಳಲ್ಲಿ ಹೀಯಾಳಿಸಲಾಗುತ್ತಿದೆ; ಆದರೆ ಭಾರತ ಈಗ ಅಂತಹವರ ಬಗ್ಗೆ ಕಣ್ಣುಮುಚ್ಚಿ ಮುಸ್ಲಿಂ ನುಸುಳುಕೋರರನ್ನು ಹೊರಹಾಕುವ ಹೊಸ ಮಾದರಿಯನ್ನು ರಚಿಸಬೇಕಾಗಿದೆ. ಇಟಲಿ ಮತ್ತು ಸ್ವೀಡನ್‌ನ ಫಲಿತಾಂಶಗಳು ಅದನ್ನೇ ಸೂಚಿಸುತ್ತಿವೆ ಮತ್ತು ಸಾಂಸ್ಕೃತಿಕ ರಾಷ್ಟ್ರೀಯತೆಯ ಜೊತೆಗೆ ಸಮಾನ ನಾಗರಿಕ ಕಾನೂನು, ಕಟ್ಟುನಿಟ್ಟಾದ ನಿರಾಶ್ರಿತರ ನೀತಿಯಂತಹ ಸಮಸ್ಯೆಗಳನ್ನು ಭಾರತ ಪರಿಣಾಮಕಾರಿಯಾಗಿ ಎದುರಿಸಬೇಕು ಎಂದು ಭಾರತೀಯರು ಆಶಿಸುತ್ತಾರೆ !