ಮುಂಬಯಿಯಲ್ಲಿ ಕೇವಲ 11 ತಿಂಗಳಲ್ಲಿ 156 ಬಾಂಗ್ಲಾದೇಶಿ ನುಸುಳುಕೋರರ ಗಡಿಪಾರು !

2 ಸಾವಿರ ರೂಪಾಯಿಗೆ ಭಾರತೀಯ ದಾಖಲೆಗಳು ಲಭ್ಯ

ಮುಂಬಯಿ, ಜನವರಿ 2 – ಬಾಂಗ್ಲಾದೇಶಿ ಮುಸ್ಲಿಮರ ಒಳನುಸುಳುವಿಕೆಯ ಸಮಸ್ಯೆ ದೇಶದಾದ್ಯಂತ ಕಾಡುತ್ತಿದೆ. ಹಲವು ಸಂಘಟನೆಗಳು ಬಾಂಗ್ಲಾದೇಶಿಯರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಯತ್ನಿಸುತ್ತಿವೆ. ಕಳೆದ 11 ತಿಂಗಳಲ್ಲಿ ಮುಂಬಯಿಯಿಂದ ಹೊರಹಾಕಲ್ಪಟ್ಟ ಬಾಂಗ್ಲಾದೇಶೀಯರ ಅಂಕಿಅಂಶಗಳು ಬೆಳಕಿಗೆ ಬಂದಿವೆ. ಕಳೆದ 11 ತಿಂಗಳಲ್ಲಿ 156 ಬಾಂಗ್ಲಾದೇಶೀಯರನ್ನು ಮುಂಬಯಿಂದ ಗಡೀಪಾರು ಮಾಡಲಾಗಿದ್ದು, 6 ಮಹಿಳೆಯರನ್ನು ಹಸ್ತಾಂತರ ಮಾಡಲಾಗಿದೆ. ‘ವಿಶೇಷ ಶಾಖೆ I’ ಶಾಖೆಯಿಂದ 2024 ರಲ್ಲಿ ಶಿಕ್ಷೆಯಿಂದ ಮುಕ್ತರಾಗಿರುವ ಬಾಂಗ್ಲಾದೇಶದ ನಾಗರಿಕರ ವಿರುದ್ಧ ಕ್ರಮದ ವರದಿಯನ್ನು ಪ್ರಕಟಿಸಿದೆ. ಇದರಿಂದ ಈ ಮಾಹಿತಿ ಹೊರಬಿದ್ದಿದೆ.

1. ಭಾರತದಲ್ಲಿ ವಾಸಿಸಲು ಈ ಆರೋಪಿಗಳು ನಕಲಿ ದಾಖಲೆಗಳ ಆಧರದ ಮೇಲೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮಾಡಿಸಿಕೊಂಡಿದ್ದರು. 500ರಿಂದ 2000 ರೂಪಾಯಿಗೆ ಭಾರತೀಯ ದಾಖಲೆಗಳನ್ನು ಪಡೆದಿರುವುದು ತನಿಖೆಯಿಂದ ತಿಳಿದುಬಂದಿದೆ.

2. ಕಳೆದ ವರ್ಷ ಮುಂಬಯಿ ಒಂದರಲ್ಲೇ 368 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿತ್ತು. ಅದಕ್ಕೂ ಮೊದಲು, 2022 ರಲ್ಲಿ, 147 ಬಾಂಗ್ಲಾದೇಶಿ ಪ್ರಜೆಗಳನ್ನು ಮುಂಬಯಿಯಿಂದ ಬಂಧಿಸಲಾಗಿತ್ತು. ಇದಕ್ಕೂ ಮೊದಲು, ರಾಜ್ಯ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕಳೆದ ವಾರ ಮುಂಬಯಿ ಸೇರಿದಂತೆ ಥಾಣೆ, ನವಿ ಮುಂಬಯಿ ಮತ್ತು ಸೊಲ್ಲಾಪುರ, ನಾಸಿಕ ಜಿಲ್ಲೆಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಒಂದು ತಿಂಗಳಲ್ಲಿ 43 ಬಾಂಗ್ಲಾದೇಶಿ ನುಸುಳುಕೋರರನ್ನು ಬಂಧಿಸಿತ್ತು.

ಒಳನುಸುಳುಕೋರಿಗೆ ಸಹಾಯ ಮಾಡುವ ಸ್ಥಳೀಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು !

ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿದ ನಂತರ ಸ್ವದೇಶಕ್ಕೆ ಕಳುಹಿಸುವ ಪ್ರಕ್ರಿಯೆಗೆ ಅನೇಕ ವರ್ಷ ತಗಲುತ್ತದೆ. ಆ ಸಮಯದಲ್ಲಿ, ನುಸುಕೋರ ಬಾಂಗ್ಲಾದೇಶದ ನಾಗರಿಕರು ಸರಕಾರದ ವಿವಿಧ ಯೋಜನೆಗಳ ಲಾಭವನ್ನು ಪಡೆದುಕೊಳ್ಳುತ್ತಾರೆ. ಅವರು ಇತರ ಬಾಂಗ್ಲಾದೇಶಿ ನುಸುಳುಕೋರರನ್ನು ಭಾರತದಲ್ಲಿ ನೆಲೆಗೊಳಿಸುವ ಕಾನೂನುಬಾಹಿರ ಕೆಲಸವನ್ನು ಮಾಡುತ್ತಾರೆ. ಆದ್ದರಿಂದ, ನುಸುಳುಕೋರರಿಗೆ ಭಯೋತ್ಪಾದನಾ ನಿಗ್ರಹ ದಳವು ದಾಖಲೆಗಳು ಮತ್ತು ಇತರ ಸಹಾಯವನ್ನು ಒದಗಿಸುವ ಸಂಪೂರ್ಣ ಸರಪಳಿಯ ವಿರುದ್ಧ ಕ್ರಮವನ್ನು ಪ್ರಾರಂಭಿಸಿದೆ. ಅದರ ಅಡಿಯಲ್ಲಿ, ಶಂಕಿತ ಬಾಂಗ್ಲಾದೇಶಿ ನಾಗರಿಕರ ಬ್ಯಾಂಕ್ ಖಾತೆಗಳನ್ನು ಮುಚ್ಚಲು ಬ್ಯಾಂಕ್‌ಗಳಿಗೆ ನೋಟಿಸ್ ಕಳುಹಿಸಲಾಗುವುದು ಮತ್ತು ಪಡಿತರ ಚೀಟಿ, ಚಾಲನಾ ಪರವಾನಗಿಯನ್ನು ರದ್ದುಗೊಳಿಸಲು ಸಂಬಂಧಿಸಿದ ಇಲಾಖೆಗಳೊಂದಿಗೆ ಪತ್ರವ್ಯವಹಾರವನ್ನೂ ಮಾಡಲಾಗುತ್ತದೆ.

ಸಂಪಾದಕೀಯ ನಿಲುವು

ದೇಶದಲ್ಲಿ 5-6 ಕೋಟಿ ಬಾಂಗ್ಲಾದೇಶಿ ನುಸುಳುಕೋರರಿದ್ದಾರೆ ಎಂಬುದು ಬಹಿರಂಗವಾಗಿದ್ದರೂ ಅವರ ವಿರುದ್ಧ ಏಕೆ ಕಠಿಣ ಕ್ರಮ ತೆಗೆದು ಕೊಳ್ಳಲಾಗುತ್ತಿಲ್ಲ ? ಬಾಂಗ್ಲಾದೇಶಿ ಮುಸ್ಲಿಂ ನುಸುಳುಕೋರರನ್ನು ಭಾರತದಲ್ಲಿ ನುಸುಳಲು ಸಹಾಯ ಮಾಡುತ್ತಿರುವ ಸ್ಥಳೀಯರು ಮತ್ತು ಅವರ ವಿರುದ್ಧ ಕ್ರಮ ತೆಗೆದುಕೊಳ್ಳದಿರುವವರ ಹೀಗೆ ಎಲ್ಲರ ವಿರುದ್ಧ ಕ್ರಮ ಕೈಕೊಳ್ಳಬೇಕು !