ಹಲಾಲ್ ಪ್ರಮಾಣಪತ್ರದ ಮೂಲಕ ‘ಹಲಾಲ್ ಜಿಹಾದ್ ?

೨೩/೪೮ ಈ ಸಂಚಿಕೆಯಲ್ಲಿ ನಾವು ಹಲಾಲ್ ಎಂದರೇನು ? ಹಲಾಲ್ ಪದ್ಧತಿಗನುಸಾರ ಪಶುಹತ್ಯೆಯ ನಿಯಮಗಳು, ಹಲಾಲ್ ಚಳುವಳಿಯ ಉದ್ದೇಶ, ಹಲಾಲ್ ಅರ್ಥವ್ಯವಸ್ಥೆ, ಸ್ವರೂಪ, ವಿಸ್ತಾರ ಮತ್ತು ಪ್ರಚಾರ ಮತ್ತು ಹಲಾಲ್ ಪ್ರಮಾಣಪತ್ರ ಸಿಗಲು ಮುಸಲ್ಮಾನ ನಿರೀಕ್ಷಕರನ್ನು ನೇಮಿಸುವುದು ಅವಶ್ಯಕ ಮುಂತಾದ ಅಂಶಗಳನ್ನು ನೋಡಿದೆವು. ಇಂದು ಅದರ ಮುಂದಿನ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ.

೮. ‘ಹಲಾಲ್ ಪ್ರಮಾಣಪತ್ರಕ್ಕಾಗಿ ವಿಧಿಸಲಾಗುವ ಶುಲ್ಕಪಟ್ಟಿ

‘ಹಲಾಲ್ ಪ್ರಮಾಣಪತ್ರವನ್ನು ನೀಡಲು ‘ಜಮಿಯತ್-ಉಲೇಮಾ-ಎ-ಹಿಂದ್-ಹಲಾಲ್ ಟ್ರಸ್ಟ್ ಎಂಬ ಸಂಸ್ಥೆಯಿಂದ ಜ್ಯಾರಿ ಗೊಳಿಸಲಾದ ಶುಲ್ಕಪಟ್ಟಿಯನ್ನು ಮುಂದೆ ಮಾದರಿಗಾಗಿ ನೀಡಲಾಗಿದೆ. ಇದರಿಂದ ‘ಪ್ರತಿವರ್ಷ ಒಂದೊಂದು ಉತ್ಪನ್ನಗಳಿಗೆ ಎಷ್ಟು ಮಿತಿಮೀರಿ ಶುಲ್ಕ ವಿಧಿಸಲಾಗುತ್ತದೆ ಎಂಬುದರ ಕಲ್ಪನೆ ಬರುವುದು.

೯. ‘ಹಲಾಲ್ ಪ್ರಮಾಣಪತ್ರ ಕೊಡುವ ಭಾರತೀಯ ಸಂಸ್ಥೆಗಳು

ಭಾರತದಲ್ಲಿ ‘ಹಲಾಲ್ ಪ್ರಮಾಣಪತ್ರ ಕೊಡುವ ಅನೇಕ ಖಾಸಗಿ ಸಂಸ್ಥೆಗಳಿದ್ದು ಪ್ರಮುಖವಾದುದನ್ನು ಇಲ್ಲಿ ಕೊಡಲಾಗಿದೆ.

೧. ಹಲಾಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್

೨. ಹಲಾಲ್ ಸರ್ಟಿಫಿಕೇಶನ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್

೩. ಜಮಿಯತ್ ಉಲೇಮಾ-ಎ-ಹಿಂದ್-ಹಲಾಲ್ ಟ್ರಸ್ಟ್

೪. ಜಮಿಯತ್ ಉಲೇಮಾ-ಎ-ಮಹಾರಾಷ್ಟ್ರ

೫. ಹಲಾಲ್ ಕೌನ್ಸಿಲ್ ಆಫ್ ಇಂಡಿಯಾ

೬. ಗ್ಲೋಬಲ್ ಇಸ್ಲಾಮಿಕ್ ಶರಿಯಾ ಸರ್ವಿಸಸ್

ಇವೆಲ್ಲವೂ ಸರಕಾರೇತರ ಸಂಸ್ಥೆಗಳಾಗಿದ್ದು, ಧಾರ್ಮಿಕ ದತ್ತಿ ಸಂಸ್ಥೆಗಳಿಗೆ ಈ ರೀತಿ ವ್ಯಾವಹಾರಿಕ ಕಾರ್ಯದ ಅಥವಾ ಪ್ರಮಾಣ ಪತ್ರ ನೀಡುವ ಅನುಮತಿಯಿರುವುದಿಲ್ಲ; ಆದರೂ ಅವರು ಬಹಿರಂಗವಾಗಿ ‘ಹಲಾಲ್ ಪ್ರಮಾಣಪತ್ರದಿಂದ ಹಣ ಸಂಗ್ರಹಿಸುತ್ತಿದ್ದಾರೆ !

೧೦ ‘ಹಲಾಲ್ ಪ್ರಮಾಣಪತ್ರದ ನಿರರ್ಥಕತೆ !

೬ ಅ. ಭಾರತ ಸರಕಾರದ ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSI) ಇರುವಾಗ ‘ಹಲಾಲ್ ಪ್ರಮಾಣಪತ್ರ ನೀಡುವ ಖಾಸಗಿ ಇಸ್ಲಾಮಿ ಸಂಸ್ಥೆಗಳ ಆವಶ್ಯಕತೆಯೇನು : ಭಾರತ ಸರಕಾರದ ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂತ ರ್ಗತ ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (Food Safety and Standard Authority of India – FSSAI) ಹಾಗೆಯೇ ವಿವಿಧ ರಾಜ್ಯಗಳಲ್ಲಿ ‘ಆಹಾರ ಮತ್ತು ಔಷಧ ಆಡಳಿತ (Food and Drug Administration – FDA) ಈ ಇಲಾಖೆಗಳನ್ನು ಸ್ಥಾಪಿಸಲಾಗಿದೆ. ಖಾದ್ಯಪದಾರ್ಥಗಳು ಹಾಗೆಯೇ ಔಷಧಗಳಿಗೆ ಸಂಬಂಧಿತ ಎಲ್ಲ ಅನುಮತಿ ನೀಡುವ ಹಕ್ಕು ಈ ಇಲಾಖೆಗಳಿಗಿರುತ್ತದೆ. ‘ಯಾವುದಾದರೊಂದು ಪದಾರ್ಥವು ಸಸ್ಯಾಹಾರಿಯೋ, ಮಾಂಸಾಹಾರಿ ಎಂಬುದನ್ನೂ ಈ ಇಲಾಖೆಗಳಿಂದ ವಿವಿಧ ಪರಿಶೀಲನೆಗಳನ್ನು ಮಾಡಿ ಅದರಲ್ಲಿನ ಘಟಕಗಳ ಮತ್ತು ಅವುಗಳ ಪ್ರಮಾಣದ ಒಂದು ಪಟ್ಟಿಯನ್ನು ಆ ಉತ್ಪನ್ನದ ಮೇಲೆ ಅಂಟಿಸ ಲಾಗುತ್ತದೆ. ಇಷ್ಟೇ ಅಲ್ಲದೇ ಸಸ್ಯಾಹಾರಿ ಪದಾರ್ಥದ ಮೇಲೆ ಒಂದು ಚೌಕೋನದಲ್ಲಿ ಹಸಿರು ಬಣ್ಣದ ದೊಡ್ಡ ಚುಕ್ಕೆಯನ್ನು ಮುದ್ರಿಸಲಾಗುತ್ತದೆ ಮತ್ತು ಅದರಲ್ಲಿ ಒಂದೇ ಒಂದು ಮಾಂಸಾಹಾರಿ ಘಟಕವಿದ್ದರೂ ಅದರ ಮೇಲೆ ಚೌಕೋನದಲ್ಲಿ ಕೆಂಪು ಅಥವಾ ಕಂದು ಬಣ್ಣದ ಚುಕ್ಕೆಯನ್ನು ಮುದ್ರಿಸಲಾಗುತ್ತದೆ. ಅದಕ್ಕೂ ಮುಂದೆ ೧೬.೧೨.೨೦೨೧ ರಂದು ದೆಹಲಿ ಉಚ್ಚ ನ್ಯಾಯಾಲಯವು ಈ ಸಂದರ್ಭದಲ್ಲಿನ ಒಂದು ಅರ್ಜಿಯ ತೀರ್ಪು ಕೊಡುವಾಗ ಸಂಬಂಧಿತ ಪದಾರ್ಥಗಳಲ್ಲಿನ ಘಟಕಗಳ ಮೂಲ ಸ್ರೋತವನ್ನೂ ಮುಂಭಾಗದಲ್ಲಿ ಮುದ್ರಿಸುವ ಆದೇಶವನ್ನು ನೀಡಿದೆ. ಅಂದರೆ, ‘ಚ್ಯುಯಿಂಗ್ ಗಮ್ನಲ್ಲಿ ಬಳಸುವ ‘ಜಿಲೆಟಿನ್ನ್ನು ಹಂದಿ ಅಥವಾ ಗೋವಂಶದ ಅವಯವಗಳಿಂದ ಪಡೆದಿದ್ದಲ್ಲಿ ಅದನ್ನು ಉಲ್ಲೇಸುವುದು ಕಡ್ಡಾಯವಾಗಿದೆ.

‘FSSI’ ವತಿಯಿಂದ ಎಲ್ಲ ಪರೀಕ್ಷಣೆಗಳನ್ನು ಮಾಡಿ ಯಾವುದಾದರೊಂದು ಪದಾರ್ಥವು ಸಸ್ಯಾಹಾರಿಯಾಗಿರುವುದರ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಆ ಸರಕಾರಿ ಪ್ರಮಾಣಪತ್ರದ ಮೇಲೆ ವಿಶ್ವಾಸವನ್ನಿಡದೇ ಮತ್ತೊಮ್ಮೆ ಆ ಪದಾರ್ಥದಲ್ಲಿ ‘ಹರಾಮ್ ಅಥವಾ ಹಂದಿಯ ಮಾಂಸವಿಲ್ಲ ಎಂಬುದನ್ನು ಹೇಳುವ ‘ಹಲಾಲ್ ಪ್ರಮಾಣಪತ್ರ ಕೊಡುವ ಅನುಮತಿಯನ್ನು ಒಂದು ತಟಸ್ಥ ಖಾಸಗಿ ಇಸ್ಲಾಮಿ ಸಂಸ್ಥೆಗೆ ಏಕೆ ಕೊಡಲಾಗಿದೆ ?

೧೦ಆ. ಜಾಗತಿಕ ಸ್ತರದಲ್ಲಿ ಇಂದಿನವರೆಗೆ ಯಾವುದೇ ಮಾನದಂಡ ವಿಲ್ಲದ ದೋಷಪೂರ್ಣ ‘ಹಲಾಲ್ ಪ್ರಮಾಣಪತ್ರ ಪ್ರಕ್ರಿಯೆ ! : ‘ಹಲಾಲ್ ಪ್ರಮಾಣಪತ್ರ ಕೊಡುವ ಪ್ರತಿಯೊಂದು ಖಾಸಗಿ ಇಸ್ಲಾಮಿ ಸಂಸ್ಥೆಯು ತನ್ನದೇ ಆದ ನಿಯಮಗಳನ್ನು ಮಾಡಿಕೊಳ್ಳುತ್ತದೆ. ಈ ನಿಯಮಗಳಿಗೆ ಮಾನದಂಡ (ಸ್ಟ್ಯಾಂಡರ್ಡೈ ಸೇಶನ್) ನಿರ್ಧರಿಸಲಾಗಿಲ್ಲ. ಆದ್ದರಿಂದ ಆ ಸಂಸ್ಥೆಯು ಯಾವ ಮುಸಲ್ಮಾನ ಪಂಥದೊಂದಿಗೆ (ಶಿಯಾ, ಸುನ್ನಿ, ದೇವಬಂದಿ ಇತ್ಯಾದಿ) ಸಂಬಂಧಿಸಿದೆಯೋ, ಆ ಪಂಥದ ಬಹುಸಂಖ್ಯಾತ ಮುಸಲ್ಮಾನರ ದೇಶವು ಅವರ ‘ಹಲಾಲ್ ಪ್ರಮಾಣಪತ್ರವನ್ನು ಅಧಿಕೃತವೆಂದು ಪರಿಗಣಿಸುತ್ತದೆ; ಆದರೆ ಅದೇ ಪ್ರಮಾಣ ಪತ್ರವನ್ನು ಇನ್ನೊಂದು ಇಸ್ಲಾಮಿ ದೇಶದಲ್ಲಿನ ‘ಶರೀಯತ್ ಬೋರ್ಡ್ ಅನಧಿಕೃತವೆಂದು ಪರಿಗಣಿಸುತ್ತದೆ. ಆದ್ದರಿಂದ ಒಂದು ದೇಶದಲ್ಲಿ ‘ಹಲಾಲ್ ಪ್ರಮಾಣಿತ ಎಂದು ಪರಿಗಣಿಸಲಾಗುವ ಉತ್ಪನ್ನಗಳನ್ನು ಇನ್ನೊಂದು ಮುಸಲ್ಮಾನ ದೇಶಕ್ಕೆ ರಫ್ತು ಮಾಡಿದಲ್ಲಿ ಅಲ್ಲಿ ಅವರಿಗೆ ‘ಹಲಾಲ್ ಉತ್ಪನ್ನದ ಮಾನ್ಯತೆ ಸಿಗುವುದಿಲ್ಲ, ಉದಾ. ಭಾರತದಲ್ಲಿನ ‘ಹಲಾಲ್ ಪ್ರಮಾಣಪತ್ರವನ್ನು ಸಂಯುಕ್ತ ಅರಬ್ ಎಮಿರೇಟ್ (UAE) ನಲ್ಲಿ ಅನಧಿಕೃತವೆಂದು ಪರಿಗಣಿಸಲಾಗುತ್ತದೆ.

೧೦ ಇ. ‘ಹಲಾಲ್ ಪ್ರಮಾಣಪತ್ರವನ್ನು ಕೊಡುವವರ ಭ್ರಷ್ಟಾಚಾರ : ಜಾಗತಿಕ ಸ್ತರದಲ್ಲಿ ‘ಹಲಾಲ್ ಆರ್ಥಿಕವ್ಯವಸ್ಥೆಯ ಮೂಲ ಪರಿಕಲ್ಪನೆ ಮಂಡಿಸಲಾದ ಮಲೇಶಿಯಾದಲ್ಲೇ ೨೦೨೦ ರಲ್ಲಿ ಮುಸಲ್ಮಾನರಿಗೆ ನಕಲಿ ‘ಹಲಾಲ್ ಮಾಂಸ ಮಾರಾಟ ಮಾಡಿ ಮಲೇಶಿಯಾದಲ್ಲಿನ ಮುಸಲ್ಮಾನರನ್ನು ಭ್ರಷ್ಟಗೊಳಿಸುವ ಕೃತ್ಯವು ಒಂದೆರಡು ವರ್ಷಗಳದ್ದಲ್ಲ, ಬರೋಬ್ಬರಿ ೪೦ ವರ್ಷಗಳಿಂದ ನಡೆಯುತ್ತಿತ್ತು ಎಂದು ಬಹಿರಂಗವಾಯಿತು ! ಮಲೇಶಿಯಾದಲ್ಲಿನ ಈ ವ್ಯಾಪಾರಿಗಳ ಗುಂಪು ಚೀನಾ, ಬ್ರೆಜಿಲ್, ಕೆನಡಾ, ಬೊಲಿವಿಯಾ, ಕೊಲಂಬಿಯಾ, ಮೆಕ್ಸಿಕೋ, ಸ್ಪೇನ್ ಮತ್ತು ಯುಕ್ರೇನ್ ಮುಂತಾದ ದೇಶಗಳಿಂದ ಕಾಂಗರೂ, ಹಾಗೆಯೇ ಕುದುರೆಯ ಮಾಂಸವನ್ನು ತಂದು ಅದನ್ನು ‘ಹಲಾಲ್ ಮಾಂಸದಲ್ಲಿ ಬೆರೆಸಿ ‘ಹಲಾಲ್ ಬೀಫ್ ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದರು ಈ ಮಾಂಸದ ಕಳ್ಳಸಾಗಾಣಿಕೆಗಾಗಿ ಮತ್ತು ಅದರ ಮೇಲೆ ‘ಹಲಾಲ್ನ ಮೊಹರನ್ನು ಒತ್ತಲು ಸರಕಾರಿ ಇಲಾಖೆಗಳಲ್ಲಿನ ಅನೇಕ ಹಿರಿಯ ಅಧಿಕಾರಿಗಳಿಗೆ ಲಂಚ ಕೊಟ್ಟಿರುವುದು ಬಹಿರಂಗವಾಯಿತು. ಇದೇ ರೀತಿ ಅಮೇರಿಕಾದಲ್ಲಿನ ‘ಇಸ್ಲಾಮಿಕ್ ಸರ್ವಿಸಸ್ ಆಫ್ ಅಮೇರಿಕಾ (ISA) ಎಂಬ ಹೆಸರಿನ ‘ಹಲಾಲ್ ಪ್ರಮಾಣ ಪತ್ರವನ್ನು ಕೊಡುವ ಸಂಸ್ಥೆಯನ್ನು ನಡೆಸುವ ಜಲೀಲ್ ಆವೊಸಿ, ಹಾಗೆಯೇ ಯಾಹ್ಯಾ ಆವೊಸಿ ಇವರೂ ಹಲಾಲ್ ಮಾಂಸದಲ್ಲಿ ಭ್ರಷ್ಟಾಚಾರ ಮಾಡಿದ್ದರು. ಸ್ಥಳೀಯ ಮಿನೆಸೊಟಾದಲ್ಲಿ ಸಾಮಾನ್ಯ ಕಸಾಯಿಖಾನೆಗಳಿಂದ ಮಾಂಸದ ಪೊಟ್ಟಣಗಳನ್ನು ತರಿಸಿ ಅದರ ಮೇಲಿನ ಮೊಹರನ್ನು ರಾಸಾಯನಿಕಗಳನ್ನು ಹಚ್ಚಿ ತೆಗೆಯಲಾಗುತ್ತಿತ್ತು ಮತ್ತು ಅದರ ಮೇಲೆ ‘ಹಲಾಲ್ ಪ್ರಮಾಣಿತ ಬೀಫ್ ಎಂದು ಮೊಹರನ್ನು ಒತ್ತಲಾಗುತ್ತಿತ್ತು. ಈ ಪ್ರಕರಣದಲ್ಲಿ ಅವರನ್ನ್ನು ದೋಷಿಗಳೆಂದು ನಿರ್ಧರಿಸಿ ಶಿಕ್ಷೆಯನ್ನು ವಿಧಿಸಲಾಯಿತು.

೧೧. ‘ಹಲಾಲ್ ಆರ್ಥಿಕವ್ಯವಸ್ಥೆಯ ದುಷ್ಪರಿಣಾಮಗಳು

೭ ಅ. ಹಿಂದೂ ಸಮಾಜದ ಮೇಲಾಗುವ ದುಷ್ಪರಿಣಾಮಗಳು

೭ ಅ ೧. ಹಿಂದೂ ಕಸಾಯಿಗಳ ಪಾರಂಪಾರಿಕ ವ್ಯಾಪಾರ ಮುಚ್ಚಿ ಹೋಗುವುದು ! : ಹಿಂದೂ ಧರ್ಮದಲ್ಲಿನ ಕಸಾಯಿ ಸಮಾಜವು ಮಾಂಸದ ವ್ಯಾಪಾರ ಮಾಡಿ ತಮ್ಮ ಮತ್ತು ತಮ್ಮ ಕುಟುಂಬದ ಉದರನಿರ್ವಹಣೆಯನ್ನು ಮಾಡುತ್ತಿತ್ತು. ಸದ್ಯ ಮುಸಲ್ಮಾನರ ‘ಹಲಾಲ್ ಪ್ರಮಾಣಪತ್ರದ ಆಗ್ರಹದಿಂದ ಹೆಚ್ಚಿನವರು ಕೇವಲ ಇಸ್ಲಾಮಿ ಪದ್ಧತಿಯ ‘ಹಲಾಲ್ ಮಾಂಸದ ಬೇಡಿಕೆಯನ್ನು ಮಾಡು ತ್ತಾರೆ. ಹಿಂದೂ ಕಸಾಯಿ ಸಮಾಜದ ಮಾರಾಟಗಾರರ ಬಳಿಯ ಮಾಂಸವನ್ನು ‘ಹರಾಮ್ ಎಂದು ಪರಿಗಣಿಸಲಾಗುವುದರಿಂದ ಸಹಜವಾಗಿಯೇ ಅದನ್ನು ನಿರಾಕರಿಸಲಾಗುತ್ತಿದೆ. ಇದರಿಂದ ಹಿಂದೂ ಕಸಾಯಿ ಸಮಾಜದ ವಂಶಪಾರಂಪರಿಕ ವ್ಯಾಪಾರವು ತಾನಾಗಿಯೇ ಮುಸಲ್ಮಾನರ ಹಿಡಿತಕ್ಕೆ ಹೋಗಲಾರಂಭಿಸಿದೆ.

೧೧ಆ. ‘ಬಹುಸಂಖ್ಯಾತ ಹಿಂದೂಗಳ ಮೇಲೆ ಅಲ್ಪಸಂಖ್ಯಾತರ ದಬ್ಬಾಳಿಕೆ ! : ನಸೀಮ್ ನಿಕೋಲಸ್ ತಾಲೇಬ್ ಎಂಬ ಇಂಗ್ಲೆಂಡ್‌ನ ಪ್ರಸಿದ್ಧ ಲೇಖಕನು ಹೀಗೆ ಬರೆದಿದ್ದಾನೆ. ಗರ್ವಿಷ್ಠ ಅಲ್ಪಸಂಖ್ಯಾತರ ಗುಂಪು ಸತತವಾಗಿ ತಮಗೆ ಅನುಕೂಲ ವಿಷಯಗಳ ಬೇಡಿಕೆಯನ್ನು ಮಾಡಿ ಅಲ್ಲಿನ ಬಹುಸಂಖ್ಯಾತರನ್ನು ತಮ್ಮ ಇಚ್ಛೆಗನುಸಾರ ವರ್ತಿಸಲು ಒತ್ತಡ ಹೇರುತ್ತದೆ. ಇಂದು ಭಾರತದಲ್ಲಿ ಶೇ. ೮೦ ರಷ್ಟು ಜನರು ಹಿಂದೂಗಳಾಗಿ ದ್ದಾರೆ. ಅದರಲ್ಲೂ ಶೇ. ೫೮ ರಷ್ಟು ಹಿಂದೂಗಳು ಮಾಂಸಾಹಾರಿ ಗಳಾಗಿದ್ದಾರೆ. ಈ ಮಾಂಸಾಹಾರಿ ಹಿಂದೂಗಳಿಗೆ ‘ಹಲಾಲ್ ಮಾಂಸ ಭಕ್ಷಣೆ ನಿಷಿದ್ಧವಾಗಿದೆ ಎಂದು ಗೊತ್ತಿಲ್ಲದ ಕಾರಣ ಅವರು ‘ಹಲಾಲ್ ಮಾಂಸವನ್ನೇ ತಿನ್ನುತ್ತಾರೆ. ಇನ್ನೊಂದೆಡೆ ಅಲ್ಪಸಂಖ್ಯಾತ ಮುಸಲ್ಮಾನರು ಯಾವುದೇ ಹೊಂದಾಣಿಕೆಯನ್ನು ಮಾಡದೇ ‘ತಮಗೆ ಇಸ್ಲಾಂಗನುಸಾರ ‘ಹಲಾಲ್ ಮಾಂಸವೇ ಬೇಕು ಎಂಬ ಬೇಡಿಕೆಯನ್ನಿಟ್ಟು ಪ್ರಚಂಡ ಒತ್ತಡವನ್ನು ನಿರ್ಮಿಸುತ್ತಾರೆ. ಆದ್ದರಿಂದ ಬಹುಸಂಖ್ಯಾತ ಹಿಂದೂಗಳನ್ನು ದುರ್ಲಕ್ಷಿಸಿ ಪ್ರತಿಯೊಂದು ಕಡೆ ‘ಹಲಾಲ್ ಮಾಂಸವನ್ನೇ ಬಳಸಲಾಗುತ್ತದೆ. ಇದು ಒಂದು ರೀತಿಯಲ್ಲಿ ‘ಮಾನಸಿಕ ಇಸ್ಲಾಮೀಕರಣವೇ ಆಗಿದೆ.

೮. ‘ಹಲಾಲ್ ಆರ್ಥಿಕವ್ಯವಸ್ಥೆ ಮತ್ತು ‘ಜಿಹಾದ್ ಭಯೋತ್ಪಾದನೆಗಳ ನಂಟು !

ಇತ್ತೀಚೆಗಿನ ಕಾಲದಲ್ಲಿ ಜಾಗತಿಕ ಸ್ತರದಲ್ಲಿ ‘ಹಲಾಲ್ ಆರ್ಥಿಕವ್ಯವಸ್ಥೆ ಮತ್ತು ‘ಜಿಹಾದಿ ಭಯೋತ್ಪಾದನೆ ಇವುಗಳ ನಂಟನ್ನು ಜೋಡಿಸಲಾಗುತ್ತಿದೆ. ಇದರ ಬಗೆಗಿನ ಕೆಲವು ವಾರ್ತೆ ಗಳನ್ನು ಮತ್ತು ವರದಿಗಳನ್ನು ಮುಂದೆ ಕೊಡಲಾಗಿದೆ.

೮ ಅ. ಅಮೇರಿಕಾದಲ್ಲಿನ ‘ಹಲಾಲ್ ಪ್ರಮಾಣಪತ್ರ ಕೊಡುವ ಸಂಸ್ಥೆಗಳಿಂದ ಭಯೋತ್ಪಾದನೆ, ಹಾಗೆಯೇ ಕಟ್ಟರಪಂಥೀಯ ಸಂಸ್ಥೆ ಗಳಿಗೆ ಆರ್ಥಿಕ ಸಹಾಯ ! : ‘ಮಿಡಲ್ ಈಸ್ಟ್ ಫೋರಮ್ನ ಸಮೀಕ್ಷೆಯಲ್ಲಿ, ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ‘ಹಲಾಲ್ ಪ್ರಮಾಣಪತ್ರ ನೀಡುವ ಸಂಸ್ಥೆಯು ೨೦೧೨ ರಿಂದ ಇಸ್ಲಾಮಿಕ್ ಕಟ್ಟರ್‌ಪಂಥೀಯ ಇಸ್ಲಾಮಿ ಸಂಘಟನೆಗಳಿಗೆ ದೊಡ್ಡ ಪ್ರಮಾಣ ದಲ್ಲಿ ಹಣವನ್ನು ಕೊಟ್ಟಿದೆ ಎಂದು ಕಂಡುಬಂದಿದೆ. ಅದರಲ್ಲಿ ‘ಜಮಾತ್-ಎ-ಇಸ್ಲಾಮಿಯಾ, ‘ಹಮಾಸ್ ಮತ್ತು ‘ಅಲ್-ಕಾಯದಾ ಎಂಬ ಸಂಘಟನೆಗಳು ಬರುತ್ತವೆ.

೧೨ ಆ. ಆಸ್ಟ್ರೇಲಿಯಾದಲ್ಲಿ ‘ಹಲಾಲ್ ಪ್ರಮಾಣಪತ್ರದ ಹಣ ಭಯೋತ್ಪಾದಕರಿಗೆ ಸಹಾಯ : ‘ಹಲಾಲ್ ಪ್ರಮಾಣಪತ್ರವನ್ನು ನೀಡುವ ‘ಇಸ್ಲಾಮಿಕ್ ಕೌನ್ಸಿಲ್ ಆಫ್ ವೆಸ್ಟರ್ನ್ ಆಸ್ಟ್ರೇಲಿಯಾ (IಅWಂ)ದ ಅಧ್ಯಕ್ಷ ಡಾ. ರತೆಬ್ ಜೆನೀದ್‌ರವರ ೨೦೧೩ ರ ವಾರ್ಷಿಕ ವರದಿಯಲ್ಲಿ ನೀಡಿದ ಪ್ರಕಾರ ಅದರಲ್ಲಿ ‘ICWA ಯು ನಾಗರಿಕರ ಪರಿಸ್ಥಿತಿಯಿಂದ ಸಿರಿಯಾಗೆ ಸತತವಾಗಿ ದೇಣಿಗೆಗಳನ್ನು ಕೊಟ್ಟಿದೆ. ‘ಅಲ್ ಇಮದಾದ್ ಸಂಸ್ಥೆಯು ಸಿರಿಯಾ ದೇಶದಲ್ಲಿನ ‘ಐಸಿಸ್, ‘ಹಮಾಸ್, ನಿಷೇಧಿತ ‘ಮುಸ್ಲಿಮ್ ಬ್ರದರ್‌ಹುಡ್ ಮತ್ತು ಇತರ ಅನೇಕ ಜಿಹಾದಿ ಬಣಗಳಿಗೆ ಹಣವನ್ನು ಪೂರೈಸುತ್ತದೆ.

೧೨ ಇ. ಭಾರತದಲ್ಲೂ ‘ಜಮಿಯತ್ ಉಲೇಮಾ-ಎ-ಹಿಂದ್ನ ಭಯೋತ್ಪಾದನಾ ಚಟುವಟಿಕೆಗಳಲ್ಲಿನ ಆರೋಪಿಗಳಿಗೆ ಕಾನೂನು ನೆರವು ! : ಭಾರತದಲ್ಲಿ ‘ಹಲಾಲ್ ಪ್ರಮಾಣಪತ್ರವನ್ನು ನೀಡುವ ‘ಜಮಿಯತ್ ಉಲೇಮಾ-ಎ-ಹಿಂದ್ ಹಲಾಲ್ ಟ್ರಸ್ಟ್ವು ಒಂದು ಮುಖ್ಯ ಸಂಘಟನೆಯಾಗಿದೆ. ಡಿಸೆಂಬರ್ ೨೦೧೯ ರಲ್ಲಿ ‘ಜಮಿಯತ್ ಉಲೇಮಾ-ಎ-ಹಿಂದ್ನ ಬಂಗಾಳದ ರಾಜ್ಯಾಧ್ಯಕ್ಷ ಸಿದ್ಧಿಕುಲ್ಲಾ ಚೌಧರಿಯು ‘ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವಾಗ ‘ಕೇಂದ್ರ ಗೃಹಮಂತ್ರಿ ಅಮಿತ್ ಶಾ ಇವರನ್ನು ಕೋಲಕಾತಾ ವಿಮಾನನಿಲ್ದಾಣದ ಹೊರಗೆ ಬರಲು ಬಿಡುವುದಿಲ್ಲ ಎಂಬ ಬೆದರಿಕೆಯನ್ನು ಹಾಕಿದ್ದನು. ಇದೇ ಸಂಘಟನೆಯು ಉತ್ತರ ಪ್ರದೇಶದ ಹಿಂದುತ್ವವಾದಿ ಮುಖಂಡ ಕಮಲೇಶ ತಿವಾರಿಯ ಹತ್ಯೆ ಯನ್ನು ಮಾಡಿದ ಆರೋಪಿಗಳ ಖಟ್ಲೆಯನ್ನು ಹೋರಾಡಲು ಕಾನೂನು ಸಹಾಯ ಮಾಡುತ್ತಿದೆ.

ಈ ಸಂಘಟನೆಯು ‘೭/೧೧ರ ಮುಂಬೈ ರೈಲ್ವೇ ಬಾಂಬ್‌ಸ್ಫೋಟ, ೨೦೦೬ ರ ಮಾಲೆಗಾವ್ ಬಾಂಬ್‌ಸ್ಫೋಟ, ಪುಣೆಯ ಜರ್ಮನ್ ಬೇಕರಿ ಬಾಂಬ್‌ಸ್ಫೋಟ, ‘೨೬/೧೧ರ ಮುಂಬೈ ಮೇಲಿನ ಭಯೋತ್ಪಾದನಾ ಆಕ್ರಮಣ, ಮುಂಬೈಯ ಝವೇರಿ ಮಾರುಕಟ್ಟೆಯ ಸರಣಿ ಬಾಂಬ್‌ಸ್ಫೋಟ, ದೆಹಲಿಯ ಜಾಮಾ ಮಸೀದಿ ಬಾಂಬ್‌ಸ್ಫೋಟ, ಕರ್ಣಾವತಿ (ಅಹಮದಾಬಾದ್) ಬಾಂಬ್‌ಸ್ಫೋಟ ಇತ್ಯಾದಿ ಅನೇಕ ಭಯೋತ್ಪಾದನೆಯ ಪ್ರಕರಣಗಳ ಆರೋಪಿಗಳಿಗೆ ಕಾನೂನು ನೆರವು ದೊರಕಿಸಿಕೊಟ್ಟಿದೆ. ‘ಜಮಿಯತ್ ಉಲೇಮಾ-ಎ-ಹಿಂದ್ ಸದ್ಯ ಇಂತಹ ರೀತಿಯ ‘ಲಷ್ಕರ್-ಎ-ತೊಯ್ಬಾದಿಂದ ಹಿಡಿದು ‘ಇಂಡಿಯನ್ ಮುಜಾಹಿದಿನ್, ‘ಇಸ್ಲಾಮಿಕ್ ಸ್ಟೇಟ್ ಇಂತಹ ವಿವಿಧ ಭಯೋತ್ಪಾದನೆಯ ಸಂಘಟನೆ ಗಳಿಗೆ ಸಂಬಂಧಿಸಿದ ಸುಮಾರು ೭೦೦ ಶಂಕಿತ ಆರೋಪಿಗಳ ಖಟ್ಲೆಗಳನ್ನು ಹೋರಾಡುತ್ತಿದೆ. ಅವರು ಈ ಖಟ್ಲೆಗಳಿಂದ ೧೯೨ ಆರೋಪಿಗಳನ್ನು ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದರ ಹಿಂದಿನ ಲೇಖನವನ್ನು ಓದಲು ಲಿಂಕ್ ಭಾಗ ೧ : https://sanatanprabhat.org/kannada/69053.html

ಇದರ ಮುಂದಿನ ಲೇಖನವನ್ನು ಓದಲು ಲಿಂಕ್ ಭಾಗ ೩ : https://sanatanprabhat.org/kannada/70115.html