ಔರಂಗಜೇಬನ ಗೋರಿಗೆ ನೀಡಲಾಗುವ ಸಹಾಯವನ್ನು ನಿಲ್ಲಿಸಿ ಛತ್ರಪತಿ ಶಿವಾಜಿ ಮಹಾರಾಜರ ದೇವಸ್ಥಾನಕ್ಕೆ ಹೇರಳವಾಗಿ ಸಹಾಯ ನೀಡಿ! – ಹಿಂದೂ ಜನಜಾಗೃತಿ ಸಮಿತಿಯ ಬೇಡಿಕೆ
ಮುಂಬಯಿ – ಔರಂಗಜೇಬನ ಗೋರಿಯ ನಿರ್ವಹಣೆಗಾಗಿ ಕೇಂದ್ರ ಸರಕಾರದ ಭಾರತೀಯ ಪುರಾತತ್ವ ಇಲಾಖೆಯಿಂದ ಪ್ರತಿ ವರ್ಷ ಲಕ್ಷಾಂತರ ರೂಪಾಯಿಗಳ ಸಹಾಯ ನೀಡಲಾಗುತ್ತಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, 2021-22 ರಲ್ಲಿ 2 ಲಕ್ಷ 55 ಸಾವಿರ 160 ರೂಪಾಯಿಗಳು ಮತ್ತು 2022-23 (ನವೆಂಬರ್ ವರೆಗೆ) 2 ಲಕ್ಷ 626 ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.
ಈ ರೀತಿ ಇಲ್ಲಿಯವರೆಗೆ 6 ಲಕ್ಷ 50 ಸಾವಿರ ರೂಪಾಯಿಗಳ ನಿಧಿಯನ್ನು ಖರ್ಚು ಮಾಡಲಾಗಿದೆ; ಆದರೆ ಮತ್ತೊಂದೆಡೆ, ಮಹಾರಾಷ್ಟ್ರದ ವೈಭವದ ಇತಿಹಾಸದ ಸಂಕೇತವಾದ ಮಾಲ್ವಾಣದ ಸಿಂಧುದುರ್ಗ ಕೋಟೆಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ದೇವಸ್ಥಾನಕ್ಕೆ ರಾಜ್ಯ ಸರಕಾರದಿಂದ ಕೇವಲ 250 ರೂಪಾಯಿಗಳ ಅಲ್ಪ ಮೊತ್ತವನ್ನು ನೀಡಲಾಗುತ್ತದೆ. ಇದು ಖೇದಕರವಾಗಿದ್ದು, ಹಿಂದೂ ಧರ್ಮ ಮತ್ತು ಮಹಾರಾಷ್ಟ್ರದ ಸಂಸ್ಕೃತಿಯನ್ನು ಉಳಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಛತ್ರಪತಿ ಶಿವಾಜಿ ಮಹಾರಾಜರ ದೇವಸ್ಥಾನಕ್ಕೆ ಸರಕಾರವು ಸೂಕ್ತವಾದ ನಿಧಿಯನ್ನು ನೀಡುತ್ತಿಲ್ಲ. ಬದಲಾಗಿ, ಔರಂಗಜೇಬನಂತಹ ಕ್ರೂರ ಆಕ್ರಮಣಕಾರನ ಗೋರಿಗೆ ನಿರ್ವಹಣೆಗೆ ಹೆಚ್ಚಿನ ನಿಧಿಯನ್ನು ನೀಡಲಾಗುತ್ತಿದೆ. ಛತ್ರಪತಿ ಸಂಭಾಜಿ ಮಹಾರಾಜರ ಮೇಲೆ ಅಮಾನವೀಯ ದೌರ್ಜನ್ಯ ಎಸಗಿದ ಔರಂಗಜೇಬನಿಗೆ ಈ ಖರ್ಚು ಮಾಡುವುದು ಸರಿಯೇ? ಈ ಸಹಾಯವನ್ನು ತಕ್ಷಣವೇ ನಿಲ್ಲಿಸಿ, ಛತ್ರಪತಿ ಶಿವಾಜಿ ಮಹಾರಾಜರ ದೇವಸ್ಥಾನಕ್ಕೆ ಹೇರಳ ಆರ್ಥಿಕ ಸಹಾಯವನ್ನು ಘೋಷಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಂಘಟಕ ಶ್ರೀ. ಸುನೀಲ್ ಘನವಟ್ ಆಗ್ರಹಿಸಿದ್ದಾರೆ. ಸರಕಾರವು ತಕ್ಷಣವೇ ಇದರಲ್ಲಿ ಗಮನಹರಿಸಿ ಮಹಾರಾಷ್ಟ್ರದ ಅಸ್ಮಿತೆಯನ್ನು ಪರಿಗಣಿಸಬೇಕು.
ಸಂಪಾದಕೀಯ ನಿಲುವುರಾಷ್ಟ್ರಪ್ರೇಮಿಗಳು ಮತ್ತು ಧರ್ಮಪ್ರೇಮಿ ಸಂಘಟನೆಗಳಿಗೆ ಇಂತಹ ಬೇಡಿಕೆ ಇಡುವ ಸ್ಥಿತಿ ಏಕೆ ಬರುತ್ತದೆ? ಸರಕಾರವೇ ಈ ಕಾರ್ಯವನ್ನು ಮಾಡುವುದು ಅಪೇಕ್ಷಿತವಾಗಿದೆ! |