ಹಲಾಲ್ ಪ್ರಮಾಣಪತ್ರದ ಮೂಲಕ `ಹಲಾಲ್ ಜಿಹಾದ್’ ?

೨೩/೫೦ ರ ಸಂಚಿಕೆಯಲ್ಲಿ ಮುದ್ರಿತವಾದ ಲೇಖನದಲ್ಲಿ ನಾವು `ಹಲಾಲ್ ಪ್ರಮಾಣಪತ್ರ’ಕ್ಕಾಗಿ ಶುಲ್ಕ ವಿಧಿಸುವ ಭಾರತದಲ್ಲಿ `ಹಲಾಲ್ ಪ್ರಮಾಣಪತ್ರ” ನೀಡುವ ಸಂಸ್ಥೆ, `ಹಲಾಲ್ ಪ್ರಮಾಣ ಪತ್ರ’ದ ನಿರರ್ಥಕತನ, ಹಲಾಲ್ ಅರ್ಥವ್ಯವಸ್ಥೆಯ ದುಷ್ಪರಿಣಾಮಗಳು ಮತ್ತು `ಹಲಾಲ್ ಅರ್ಥವ್ಯವಸ್ಥೆ’ ಮತ್ತು `ಜಿಹಾದಿ ಭಯೋತ್ಪಾದನೆ’ ಇವುಗಳ ಸಂಬಂಧ ಮುಂತಾದ ಅಂಶಗಳನ್ನು ನೋಡಿದೆವು. ಅದರ ಮುಂದಿನ ಭಾಗವನ್ನು ನಾವೀಗ ಈ ಸಂಚಿಕೆಯಲ್ಲಿ ನೀಡುತ್ತಿದ್ದೇವೆ.

ಶ್ರೀ.ರಮೇಶ ಶಿಂದೆ

ಹಲಾಲ್ ಅರ್ಥವ್ಯವಸ್ಥೆ’ಗೆ ದೇಶವಿದೇಶಗಳಲ್ಲಾಗುತ್ತಿರುವ ವಿರೋಧ

೧೩ ಅ. ವಿದೇಶಗಳಲ್ಲಿನ ಪಾರಂಪರಿಕ ಮುಸಲ್ಮಾನರಿಂದಲೇ `ಹಲಾಲ್ ಪ್ರಮಾಣಪತ್ರ’ಕ್ಕೆ ವಿರೋಧ : `ಹಲಾಲ್ ಅರ್ಥವ್ಯವಸ್ಥೆ’ಯ ಬಗ್ಗೆ ಇಂದು ದೇಶವಿದೇಶಗಳ ನಾಗರಿಕರು ಮತ್ತು ಕೆಲವು ಮುಸಲ್ಮಾನರು ಜಾಗೃತರಾಗಿದ್ದು `ಹಲಾಲ್ ಪ್ರಮಾಣಪತ್ರ’ ಹಾಗೂ `ಹಲಾಲ್’ ಮಾಂಸ ಇವುಗಳನ್ನು ವಿರೋಧಿಸುತ್ತಿದ್ದಾರೆೆ. ಅದರ ಉದಾಹರಣೆಗಳು ಮತ್ತು ಕಾರಣಗಳನ್ನು ಮುಂದೆ ನೀಡಲಾಗಿದೆ.

೧೩ ಅ ೧. ಇಸ್ಲಾಮಿಕ್ ಆಡಳಿತದ ಕಾಯ್ದೆಗಳಲ್ಲಿ `ಹಲಾಲ್ ಪ್ರಮಾಣಪತ್ರ’ದ ಉಲ್ಲೇಖವಿಲ್ಲದಿರುವುದು ! : ಆಸ್ಟ್ರೇಲಿಯಾ ಮತ್ತು ಜಪಾನ್‌ನ ಇಸ್ಲಾಮಿಕ್ ವಿದ್ವಾಂಸರ ಪ್ರಕಾರ `ಅಲ್ಲಾಹನು ಇಸ್ಲಾಂನ್ನು ಪರಿಪೂರ್ಣ ಧರ್ಮವನ್ನಾಗಿ ಮಾಡಿದ್ದಾನೆ. ಅದು ಪರಿಪೂರ್ಣವಾಗಿರುವುದರಿಂದ ಅದರಲ್ಲಿ ಯಾವುದೇ ಹೊಸ ವಿಷಯವನ್ನು ಸೇರಿಸುವ ಆವಶ್ಯಕತೆಯಿಲ್ಲ, ಹಾಗೆಯೇ ಅದಕ್ಕೆ ಅನುಮತಿಯೂ ಇಲ್ಲ. `ಇಸ್ಲಾಮಿಕ್ ಬಿದಾಹ್’ನಂತೆ ಕುರಾನಿನ ಕಾಯ್ದೆಯಲ್ಲೂ `ಕಯಾಮತ್’ವರೆಗೆ (ಜಗತ್ತಿನ ಅಂತ್ಯದ ವರೆಗೆ) ಯಾವುದೇ ಬದಲಾವಣೆಯಾಗಲು ಸಾಧ್ಯವಿಲ್ಲ. `ಕುರಾನ್’ನಲ್ಲಿ `ಹಲಾಲ್’ ಮತ್ತು `ಹರಾಮ್’ ಇವುಗಳ ಬಗ್ಗೆ ಸ್ಪಷ್ಟವಾಗಿ ಬರೆಯಲಾಗಿದೆ. ಅದರಲ್ಲಿ `ಹಲಾಲ್ ಪ್ರಮಾಣಪತ್ರ’ದ ಉಲ್ಲೇಖವಿಲ್ಲ. ಹಾಗಾಗಿ `ಇಂದು ಈ ಆಧುನಿಕ ಪರಿಕಲ್ಪನೆ ಸ್ವೀಕರಿಸುವುದು’ ಎಂದರೆ ಇಸ್ಲಾಮಿನ `ಬಿದಾಹ್’ನ ಸಿದ್ಧಾಂತದ ವಿರುದ್ಧ ಹೋದಂತಾಗಿದೆ.

೧೦ ಅ ೨. `ಹಲಾಲ್ ಪ್ರಮಾಣಪತ್ರ’ಕ್ಕಾಗಿ ಹಣ ತೆಗೆದುಕೊಳ್ಳುವುದು’ ಇಸ್ಲಾಮಿಕ್ ನ್ಯಾಯದ ಅವಮಾನ ! : ದಕ್ಷಿಣ ಆಫ್ರಿಕಾದ ಇಸ್ಲಾಂನ ವಿದ್ವಾಂಸ ಶೇಖ್ ಹಬೀಬ್ ಬೆವಲಿಯವರ ಅಭಿಪ್ರಾಯದಂತೆ, `ಇಸ್ಲಾಮ್‌ನ ಪ್ರಮಾಣಪತ್ರವನ್ನು ಕೊಡಲು ಶುಲ್ಕ ವಿಧಿಸಿ ಅದರ ಮಾಧ್ಯಮದಿಂದ ಹಣ ಸಂಪಾದಿಸುವುದು ಅಯೋಗ್ಯವಾಗಿದೆ. ವ್ಯಾವಹಾರಿಕ ದೃಷ್ಟಿಯಿಂದಲೂ ಈ ರೀತಿ `ಹಲಾಲ್ ಪ್ರಮಾಣಪತ್ರ’ ಕೊಡಲು ಇಸ್ಲಾಮಿಕ್ ಸಂಸ್ಥೆಗಳ ಮೂಲಕ ಶುಲ್ಕ ವಿಧಿಸುವುದು ಯೋಗ್ಯವಲ್ಲ. ಈ ಶುಲ್ಕದ ಹಣವನ್ನು ಉತ್ಪಾದಕರು ಎಂದಿಗೂ ತಮ್ಮ ಜೇಬಿನಿಂದ ಕೊಡುವುದಿಲ್ಲ; ತದ್ವಿರುದ್ಧ ಉತ್ಪಾದಕರು ಆ ಶುಲ್ಕವನ್ನು ಉತ್ಪನ್ನಗಳ ಬೆಲೆ ಹೆಚ್ಚಿಸಿ ಗ್ರಾಹಕರಿಂದ ವಸೂಲಿ ಮಾಡುವರು. ಇದು ಸಾಮಾನ್ಯ ಆರ್ಥಿಕ ಕ್ಷಮತೆಯಿರುವ ಮುಸಲ್ಮಾನರ ದೃಷ್ಟಿಯಿಂದ ಅನ್ಯಾಯಕರವಾಗಿದೆ.

೧೩ ಅ ೩ `ಹಲಾಲ್ ಪ್ರಮಾಣಪತ್ರ’ ಕೊಡುವುದು ಇಸ್ಲಾಮ್‌ನ ಧರ್ಮಬಂಧುತ್ವದ, ಅಂದರೆ `ಉಮ್ಮಾಹ್’ನ ವಿರುದ್ಧವಾಗಿದೆ ! : `ಉಮ್ಮಾಹ್’ನ ಸಂಜ್ಞೆಗನುಸಾರ ಸೀಮಾರಹಿತ ಧರ್ಮಬಂಧುತ್ವವು ಕೇವಲ ಮುಸಲ್ಮಾನ ಸಮುದಾಯದಲ್ಲಿನ ಪರಸ್ಪರರ ಮೇಲಿನ ವಿಶ್ವಾಸದ ಮೇಲಾಧಾರಿತವಾಗಿದೆ; ಆದರೆ `ಹಲಾಲ್ ಪ್ರಮಾಣ ಪತ್ರ’ದಿಂದಾಗಿ ಮುಸಲ್ಮಾನ ವ್ಯಕ್ತಿಗಿಂತ ಪ್ರಮಾಣಪತ್ರದ ಮೇಲೆ ಹೆಚ್ಚಿನ ವಿಶ್ವಾಸವಿಡುವ ಪ್ರಕ್ರಿಯೆ ನಡೆಯುತ್ತಿದೆ.

೧೩ಆ. ಆಸ್ಟ್ರೇಲಿಯಾದಲ್ಲಿ ಖಾಸಗಿ ಇಸ್ಲಾಮಿ ಸಂಸ್ಥೆಗಳಿಂದ ಕೊಡಲಾಗುವ `ಹಲಾಲ್ ಪ್ರಮಾಣಪತ್ರ’ಕ್ಕೆ ವಿರೋಧ ! : ಆಸ್ಟ್ರೇಲಿಯಾ ದಲ್ಲಿ ಖಾಸಗಿ ಇಸ್ಲಾಮಿ ಸಂಸ್ಥೆಗಳು `ಹಲಾಲ್ ಪ್ರಮಾಣಪತ್ರ’ ಕೊಡುವುದನ್ನು ಜನತೆಯು ವಿರೋಧಿಸುತ್ತಿದ್ದಾರೆ. ಇದರ ಬಗ್ಗೆ ಆಸ್ಟ್ರೇಲಿಯಾದ ಸಂಸತ್ತು ಸಂಸದೀಯ ಸಮಿತಿಯನ್ನು ಸ್ಥಾಪಿಸಿ ಈ ವಿಷಯದ ಬಗ್ಗೆ ವಿಚಾರಣೆ ಮಾಡಲು ಸೂಚನೆಯನ್ನು ನೀಡಿದೆ.

೧೩ ಇ. ಶ್ರೀಲಂಕಾದಲ್ಲಿ ಬೌದ್ಧ ಸಂಘಟನೆಗಳು ಮಾಡಿದ ಜಾಗೃತಿ ಯಿಂದ ದೇಶದಲ್ಲಿ `ಹಲಾಲ್ ಪ್ರಮಾಣಪತ್ರ’ವನ್ನು ನೀಡಲು ನಿರ್ಬಂಧ ! : ಶ್ರೀಲಂಕಾದಲ್ಲಿ ಸ್ಥಳೀಯ `ಬೊಡೂ ಬಾಲಾ ಸೇನಾ’ ಎಂಬ ಬೌದ್ಧ ರಾಷ್ಟçವಾದಿ ಸಂಘಟನೆಯು `ಹಲಾಲ್ ಪ್ರಮಾಣಪತ್ರ’ಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಈ ಸಂಘಟನೆಯ ಹೇಳಿಕೆಯೇನೆಂದರೆ  `ಆಲ್ ಸಿಲೋನ್ ಜಮಿಯತುಲ ಉಲೆಮಾ’ ಎಂಬ ಸಂಸ್ಥೆಯು `ಹಲಾಲ್ ಪ್ರಮಾಣಪತ್ರ’ದ ಹೆಸರಿನಲ್ಲಿ ಮಿತಿಮೀರಿದ ಹಣ ಸಂಪಾದಿಸಿ ಅದನ್ನು ಇಸ್ಲಾಂನ್ನು ವಿಸ್ತರಿಸಲು ಬಳಸುತ್ತಿದೆ.’ ಸ್ಥಳೀಯ ಜನರ ತೀವ್ರ ವಿರೋಧದ ನಂತರ `ಆಲ್ ಸಿಲೋನ್ ಜಮಿಯತುಲ ಉಲೆಮಾ’ವು `ಹಲಾಲ್ ಪ್ರಮಾಣಪತ್ರ’ ನೀಡುವುದನ್ನು ನಿಲ್ಲಿಸಿದ್ದು, ಈಗ ಅದನ್ನು `ಹಲಾಲ್ ಆಕ್ರಿಡೇಶನ್ ಕೌನ್ಸಿಲ್’ನ ಬಳಿ ಒಪ್ಪಿಸಲಾಗಿದೆ.

೧೪. `ಹಲಾಲ್ ಅರ್ಥವ್ಯವಸ್ಥೆ’ಯ ವಿಷಯದಲ್ಲಿ ಹಿಂದೂಗಳ ಯೋಗ್ಯ ನಿಲುವು ಹಾಗೂ ಕೃತಿ !

೧೪ ಅ. ಇಸ್ಲಾಂನ ಶ್ರದ್ಧಾಸ್ಥಾನಕ್ಕೆ ಅರ್ಪಣೆ ಮಾಡಿದ `ಹಲಾಲ್’ ಆಹಾರವನ್ನು ಹಿಂದೂಗಳು ಏಕೆ ಸ್ವೀಕರಿಸಬೇಕು ? `ಹಲಾಲ್’ ಕ್ಕನುಸಾರ ಪಶುಹತ್ಯೆ ಮಾಡುವಾಗ `ಬಿಸ್ಮಿಲ್ಲಾಹ’ನ ಕಲ್ಮಾ (ಕಲ್ಮಾ ಎಂದರೆ ಇಸ್ಲಾಮೀ ಪ್ರಾರ್ಥನೆ) ಹೇಳಿ ಪಶುವಿನ ಮುಖ ಮೆಕ್ಕಾದೆಡೆ ಗಿರಿಸಿ ಆ ಪಶುವನ್ನು `ಅಲ್ಲಾಹ’ನಿಗೆ ಅರ್ಪಿಸಲಾಗುತ್ತದೆ. `ಅಲ್ಲಾಹ’ ನಿಗೆ ಅರ್ಪಿಸಿದ ಆಹಾರವನ್ನು ಅವನನ್ನು ನಂಬುವ ಮುಸಲ್ಮಾನರು ಸೇವಿಸಬಹುದು; ಆದರೆ ಅದೇ ಆಹಾರವನ್ನು ಹಿಂದೂ, ಸಿಕ್ಖ್ ಹಾಗೂ ಇತರ ಧರ್ಮ-ಪಂಥೀಯರು ಏಕೆ ಸ್ವೀಕರಿಸಬೇಕು ? ಅಲ್ಲದೆ ಯಾವ ಮಂದಿರದಲ್ಲಿ ಮಾಂಸದ ನೈವೇದ್ಯವನ್ನು ನೀಡುವ ಪರಂಪರೆಯಿದೆಯೋ, ಅಲ್ಲಿನ ಹಿಂದೂಗಳು ಮಾಂಸ `ಹಲಾಲ್’ ಅಲ್ಲವೆಂಬುದನ್ನು ಖಚಿತಗೊಳಿಸಬೇಕು. ಈ ಬಗ್ಗೆ ಮುಸಲ್ಮಾನರ `ಹಲಾಲ್’ಗೆ ಬಹಿಷ್ಕಾರ ಹಾಕುವುದು ಅಯೋಗ್ಯವೆಂದು ಯಾರಾದರೂ ಹೇಳಿದರೆ ಅವರಿಗೆ ಅರಿವು ಮಾಡಿಕೊಡಬೇಕು ಏನೆಂದರೆ, ೨೦೦೭ ರಲ್ಲಿ ಮಧ್ಯಪ್ರದೇಶ ಸರಕಾರ `ಇಸ್ಕಾನ್’ ಮಂದಿರದವರಿಗೆ ಶಾಲೆಗಳಿಗೆ ಮಧ್ಯಾಹ್ನದ ಭೋಜನವನ್ನು ಪೂರೈಸಲು ಗುತ್ತಿಗೆಯನ್ನು ನೀಡಿದಾಗ ಅದನ್ನು ಮುಸಲ್ಮಾನರು ವಿರೋಧಿಸಿದ್ದರು. ಮುಸಲ್ಮಾನ ಮೌಲ್ವಿಯರ ದಾವೆ ಏನಿತ್ತು ಅಂದರೆ `ಇಸ್ಕಾನ್’ ಸಂಸ್ಥೆ ಯವರು ತಯಾರಿಸಿದ ಆಹಾರವನ್ನು ಮೊದಲು ಶ್ರೀ ಜಗನ್ನಾಥನಿಗೆ ಅರ್ಪಿಸುತ್ತಾರೆ. ಆದ್ದರಿಂದ `ಆ ಪ್ರಸಾದವನ್ನು ಮುಸಲ್ಮಾನ ಮಕ್ಕಳಿಗೆ ಕೊಡುವುದು’,  ಇಸ್ಲಾಂನ ಅವಮಾನವಾಗಿದೆ. ಆದ್ದರಿಂದ `ಇಸ್ಕಾನ್’ನವರು ತಯಾರಿಸಿದ ಭೋಜನ ಮುಸಲ್ಮಾನರಿಗೆ ಸ್ವೀಕಾರವಿಲ್ಲ ದಿದ್ದರೆ, `ಹಲಾಲ್’ ಭೋಜನವನ್ನು ಹಿಂದೂಗಳೇಕೆ ಸ್ವೀಕರಿಸಬೇಕು ?

೧೪ ಆ. `ಹಲಾಲ್’ ಮಾಂಸವನ್ನು ಅನಿವಾರ್ಯಗೊಳಿಸುವವರ ವಿರುದ್ಧ ಗ್ರಾಹಕ ಅಧಿಕಾರವನ್ನು ಉಪಯೋಗಿಸಿರಿ ! : `ಹಲಾಲ್’ದ ಅನಿವಾರ್ಯತೆಯು ಮುಸಲ್ಮಾನರಿಗಿದೆ; ಇತರ ಧರ್ಮ-ಪಂಥದವರಿಗಲ್ಲ. ಆದ್ದರಿಂದ `ಹಲಾಲ್’ ಮಾಂಸ ಅಥವಾ ಉತ್ಪಾದನೆಗಳ ಮಾರಾಟಗಾರರು ಮುಸಲ್ಮಾನರಿಗೆ `ಹಲಾಲ್’ ಮಾಂಸ ಅಥವಾ ಉತ್ಪಾದನೆಗಳನ್ನು ಮಾರಾಟ ಮಾಡಬಹುದು; ಆದರೆ ಹಿಂದೂಗಳು ಅದೇ ಮಾಂಸವನ್ನು ಅಥವಾ ಉತ್ಪಾದನೆಯನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಪಡಿಸುವುದು `ಭಾರತೀಯ ಸಂವಿಧಾನ’ವು ನೀಡಿದ ಧಾರ್ಮಿಕಸ್ವಾತಂತ್ರ್ಯದ ಹಾಗೂ ಗ್ರಾಹಕ ಅಧಿಕಾರದ ವಿರುದ್ಧ ವಿದೆ. ಮ್ಯಾಕ್‌ಡೊನಾಲ್ಡ್’, `ಕೆ.ಎಫ್.ಸಿ.’ಯಂತಹ ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿನ ಅವರ ಎಲ್ಲ ಅಂಗಡಿಗಳು ಶೇ. ೧೦೦ ರಷ್ಟು ಹಲಾಲ್’ ಪುರಸ್ಕೃತವಾಗಿದೆಯೆಂದು ಘೋಷಿಸಿವೆ. `ಮ್ಯಾಕ್‌ಡೊನಾಲ್ಡ್’ಗೆ ಹೋಗುವ ಹೆಚ್ಚಿನ ಹಿಂದೂಗಳಿಗೆ ಇಸ್ಲಾಮೀ ಮನ್ನಣೆಗನುಸಾರ `ಹಲಾಲ್’ ಪದಾರ್ಥವನ್ನೆ ಬಡಿಸುವುದೆಂದರೆ ಇದು ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯದ ಅಗೌರವವಾಗಿದೆ. ಆದ್ದರಿಂದ ಇಂತಹ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಖಟ್ಲೆಯನ್ನು ದಾಖಲಿಸಬೇಕು. ಇದೇ ರೀತಿಯಲ್ಲಿ `ಭಾರತೀಯ ಪ್ರವಾಸೋದ್ಯಮ ವಿಕಾಸ ಮಹಾಮಂಡಳ’ (ಐ.ಟಿ.ಡಿ.ಸಿ.) ಹಾಗೂ ರೈಲ್ವೆಯ `ಐ.ಆರ್.ಸಿ.ಟಿ.ಸಿ.’ಯಂತಹ ಸರಕಾರಿ ಸಂಸ್ಥೆಗಳ ವಿರುದ್ಧವೂ `ಹಲಾಲ್’ ಮಾಂಸವನ್ನು ಪೂರೈಸುವವರಿಗೇ ಗುತ್ತಿಗೆಯನ್ನು ಕೊಡಲಾಗುತ್ತಿದೆಯೆಂದು ಆರೋಪವಾಗುತ್ತಿದೆ. ಸರಕಾರಕ್ಕೆ ಒತ್ತಡ ಹೇರಿ ಈ ಸರಕಾರಿ ಸಂಸ್ಥೆಗಳಿಂದ `ಹಲಾಲ್’ ಭೋಜನವನ್ನು ಅನಿವಾರ್ಯಗೊಳಿಸು ವುದನ್ನು ನಿಲ್ಲಿಸಬೇಕು.

೧೪ ಇ. ಮಾಂಸಾಹಾರಿ ಹಿಂದೂ ಹಾಗೂ ಸಿಕ್ಖ್ ಸಮಾಜದವರು `ಝಟಕಾ’ ಮಾಂಸವನ್ನು ಆಗ್ರಹಿಸಬೇಕು ! : ಹಿಂದೂ ಹಾಗೂ ಸಿಕ್ಖ್ ಸಮಾಜದವರಿಗೆ `ಹಲಾಲ್’ ಮಾಂಸ ನಿಷೇಧಾರ್ಹವೆಂದು ಮನ್ನಿಸಲಾಗುತ್ತದೆ. ಅವರ ಧರ್ಮದಲ್ಲಿ `ಝಟಕಾ’, ಎಂದರೆ ಪಶುಹತ್ಯೆಯಲ್ಲಿ ಕತ್ತಿಯ ಒಂದು ಹೊಡೆತದಿಂದ ಪಶುವಿನ ರುಂಡವನ್ನು ಹಾರಿಸಿದ ಮಾಂಸಕ್ಕೆ ಮನ್ನಣೆಯಿದೆ. ಆದ್ದರಿಂದ ಮಾಂಸಾಹಾರಿ ಹಿಂದೂ ಹಾಗೂ ಸಿಕ್ಖ್ ಸಮಾಜದವರು ಪ್ರತಿಯೊಂದು ಭೋಜನಾಲಯದಲ್ಲಿ `ಝಟಕಾ’ ಮಾಂಸವನ್ನು ಬೇಡಿಕೆ ಮಾಡಿದರೆ ಅವರಿಗೆ ಹಲಾಲ್’ ಮಾಂಸ ಭಕ್ಷಣೆ ಮಾಡುವ ಪ್ರಮೇಯ ಬರಲಿಕ್ಕಿಲ್ಲ ಹಾಗೂ ಅದರಿಂದ ಹಿಂದೂ ಕಟುಕ ಸಮಾಜಬಾಂಧವರಿಗೆ ಉದ್ಯೋಗವೂ ಸಿಗಬಹುದು.

೧೪ ಈ. ಕರ್ನಾಟಕ ರಾಜ್ಯದಲ್ಲಿ ಹಿಂದೂಗಳು `ಹಲಾಲ್’ ಪದ್ಧತಿಗೆ ಮಾಡಿದ ವಿರೋಧ : ಕರ್ನಾಟಕ ರಾಜ್ಯದಲ್ಲಿ ಯುಗಾದಿಯ ಮರುದಿನ ಮಾಂಸಾಹಾರ ಮಾಡುವ (ಹೊಸತೊಡಕು) ರೂಢಿಯಿದೆ. ಆ ದಿನ ಕರ್ನಾಟಕದಲ್ಲಿನ ಹಿಂದೂಗಳು ಮೊತ್ತಮೊದಲು `ಹಲಾಲ್’ ಮಾಂಸವನ್ನು ಖರೀದಿಸದಿರಲು ನಿರ್ಣಯಿಸಿದರು ಹಾಗೂ ಲಭ್ಯ ಮಾಹಿತಿಗನುಸಾರ ಆ ದಿನ ಮುಸಲ್ಮಾನರ ವ್ಯಾಪಾರ ಶೇ. ೭೦ ರಷ್ಟು ಕಡಿಮೆಯಾಗಿತ್ತು. ಅದೇ ರೀತಿ ದೇವತೆ ಗಳ ಜಾತ್ರೆಯಲ್ಲಿ ಮುಸಲ್ಮಾನರಿಗೆ `ಪಶುಬಲಿ ಕೊಡಲು ಬರಬೇಡಿ’, ಎಂದು ಹೇಳಿ ಹಿಂದೂಗಳು `ಹಲಾಲ್’ಅನ್ನು ವಿರೋಧಿಸಿದರು. ಇದನ್ನು ದೇಶದಾದ್ಯಂತದ ಹಿಂದೂಗಳು ಅನುಸರಿಸಬೇಕು.

೧೪ ಉ. ಹಿಂದೂಗಳ ವಿರೋಧದ ನಂತರ `ಬಿಗ್ ಬಾಸ್ಕೇಟ್’ ಕಂಪನಿ `ಝಟಕಾ’ಮಾಸವನ್ನು ಮಾರಲು ಆರಂಭಿಸಿತು : `ಆನ್‌ಲೈನ್’ ಖಾದ್ಯಪದಾರ್ಥಗಳ ಮಾರಾಟ ಮಾಡುವ `ಬಿಗ್ ಬಾಸ್ಕೇಟ್’ ಈ ಕಂಪನಿಯು `ನಾವು ಕೇವಲ `ಹಲಾಲ್’ ಮಾಂಸವನ್ನೇ ಮಾರಾಟ ಮಾಡುತ್ತೇವೆ’, ಎಂದು ಘೋಷಣೆ ಮಾಡಿತ್ತು; ಅದರಿಂದ ಆಕ್ರೋಶಗೊಂಡ ಹಿಂದೂಗಳು `ಬಿಗ್‌ಬಾಸ್ಕೇಟ್’ನ ವಿರುದ್ಧ ಅಭಿಯಾನ ಆರಂಭಿಸಿದರು. ಹಿಂದೂಗಳ ಈ ತೀವ್ರ ವಿರೋಧ ದಿಂದ ಅದು ಒಂದು ಹೆಜ್ಜೆ ಹಿಂದಿಟ್ಟು ಝಟಕಾ’ ಮಾಂಸವನ್ನೂ ಮಾರಾಟ ಮಾಡುತ್ತಿದೆ.

– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ.

ಇದರ ಹಿಂದಿನ ಲೇಖನವನ್ನು ಓದಲು ಲಿಂಕ್ : https://sanatanprabhat.org/kannada/69053.html

ಅದರ ಮುಂದಿನ ಲೇಖನವನ್ನು ಓದಲು ಲಿಂಕ್  : https://sanatanprabhat.org/kannada/73535.html