ಕಡಬದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ತಾಲೂಕು ಮಟ್ಟದ ಮಂದಿರ ಅಧಿವೇಶನ

ಕಡಬ : ಭಾರತಾದ್ಯಂತ ಮಂದಿರ ಮಹಾಸಂಘದ ಕಾರ್ಯಕ್ಕೆ ಹಿಂದೂಗಳ ಅತ್ಯುತ್ತಮ ಬೆಂಬಲದಿಂದ ಸಿಕ್ಕಿದ ಯಶಸನ್ನು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ ಚಂದ್ರ ಮೊಗೇರ ಇವರು ಹೇಳಿದರು. ಕರ್ನಾಟಕ ರಾಜ್ಯದ ದೇವಸ್ಥಾನಗಳ ಅಭಿವೃದ್ಧಿಗಾಗಿ ಹಿಂದೂಗಳು ತಮ್ಮ ಕೈ ಜೋಡಿಸಬೇಕೆಂದು ಇವರು ಕರೆ ನೀಡಿದರು.
ದೇವಸ್ಥಾನಗಳ ಸಂಸ್ಕೃತಿ ರಕ್ಷಣೆಗಾಗಿ ಕರ್ನಾಟಕ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಆಯೋಜನೆಯಲ್ಲಿ ‘ ತಾಲೂಕು ಮಟ್ಟದ ಮಂದಿರ ಅಧಿವೇಶನ’ವು ಕಡಬದ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಶಂಖನಾದದೊಂದಿಗೆ ಪ್ರಾರಂಭವಾಯಿತು. ಶ್ರೀ ವಿಶ್ವೇಶ್ವರ ಭಟ್ ,ಶ್ರೀ ಮಹಾಬಲೇಶ್ವರ ದೇವಸ್ಥಾನ,ಕಡಬ, ಮರ್ದಾಳ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋಧ್ದಾರ ಅಧ್ಯಕ್ಷರಾದ ಶ್ರೀ ಸತ್ಯನಾರಾಯಣ ಹೆಗ್ಡೆ, ಶ್ರೀ ಸುರೇಶ್ ಕೆ ಎಸ್ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ ಚಂದ್ರ ಮೊಗವೀರ ಇವರು ದೀಪಪ್ರಜ್ವಲನೆಯನ್ನು ಮಾಡಿದರು.
ದೇವಸ್ಥಾನಗಳ ಮೂಲಕ ಹಿಂದೂಗಳು ಒಟ್ಟಾಗಿ ಕಾರ್ಯ ಮಾಡಿದರೆ ಹಿಂದೂ ಧರ್ಮದ ರಕ್ಷಣೆ ಸಾಧ್ಯ ! – ಶ್ರೀ ಸುರೇಶ್ ಕೆ ಎಸ್
ದೇವಸ್ಥಾನದ ಜೀರ್ಣೋಧ್ದಾರದ ಸಮಯದಲ್ಲಿ ರಚಿಸಿರುವ ದೇವಸ್ಥಾನದ ವ್ಯವಸ್ಥಾಪನೆಯು ಪೂರ್ಣ ವರ್ಷ ಕಾರ್ಯನಿರತರಾಗಿರಬೇಕು. ಕಾರ್ಯಕರ್ತರು, ಭಕ್ತಾದಿಗಳು ದೇವಸ್ಥಾನದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮದಲ್ಲಿ ಹೆಚೆಚ್ಚು ಹಿಂದೂಗಳನ್ನು ಸೇರಿಸಬೇಕು. ಹಿಂದೂಗಳು ಸಂಘಟಿತರಾಗಿ ಸಹಭಾಗವನ್ನು ಹೆಚ್ಚಿಸಬೇಕೆಂದು ಶ್ರೀ ಸುರೇಶ್ ಇವರು ಕರೆ ನೀಡಿದರು.
ದೇವಸ್ಥಾನದಂತಹ ಪವಿತ್ರ ಕ್ಷೇತ್ರದ ಕಾರ್ಯವನ್ನು ವಿಶ್ವಸ್ಥರು ಶ್ರದ್ಧೆ, ಭಕ್ತಿಯಿಂದ ಮಾಡಬೇಕು – ಶ್ರೀ ಸತ್ಯನಾರಾಯಣ ಹೆಗ್ಡೆ
ದೇವಸ್ಥಾನವೆಂದರೆ ಗ್ರಾಮಕ್ಕೆ ಒಂದು ದೊಡ್ಡ ಸಂಪತ್ತು. ಶಾಂತಿ, ನೆಮ್ಮದಿಯನ್ನು ನೀಡುವ ಸ್ಥಾನವೆಂದರೆ ದೇವಸ್ಥಾನ. ಪರಹಿತರಿಗಾಗಿ ಕಾರ್ಯ ಮಾಡುವ ಪುರೋಹಿತರು, ಭಜನಾ ಮಂಡಳಿ, ನಿತ್ಯ ಆರತಿ, ಯಜ್ನ್ಯ -ಯಾಗ, ಪೂಜಾ ಸೇವೆಗಳನ್ನು ಭಕ್ತಿಯಿಂದ ಮಾಡಿದರೆ ದೇವಸ್ಥಾನ ಉತ್ತಮವಾಗಿ ನಡೆಯುತ್ತದೆ ಎಂದು ಶ್ರೀ ಮರ್ದಾಳ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋಧಾರ ಕಾರ್ಯದರ್ಶಿಗಳಾದ ಶ್ರೀ ಸತ್ಯನಾರಾಯಣ ಹೆಗ್ಡೆ ಇವರು ಹೇಳಿದರು.
ದೇವಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡಿ ದೇವಸ್ಥಾನಗಳ ಚೈತನ್ಯ ವೃದ್ದಿಸಲು ಪ್ರಯತ್ನಿಸಬೇಕು ! – ಪ್ರಪ್ರಶಾಂತ್ ಶಬರಾಯ
ದೇವಸ್ಥಾನಗಳು ೧೪ ವಿದ್ಯೆ ಮತ್ತು ೪೪ ಕಲೆಗಳು ಕಲಿಸುತ್ತಿದ್ದವು. ಗ್ರಾಮದ ಜನರ ಶ್ರದ್ಧಾಸ್ಥಾನವೆಂದರೆ ದೇವಸ್ಥಾನ. ದೇವಸ್ಥಾನದಿಂದ ಚೈತನ್ಯ ಪೂರ್ಣ ಗ್ರ್ರಾಮದಲ್ಲಿ ಹರಡಬೇಕಾದರೆ ದೇವಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ದೇವಸ್ಥಾನವನ್ನು ಸ್ವಚ್ಛವಾಗಿಡುವುದು, ದೇವರ ಅಪಹಾಸ್ಯ ಮಾಡುವವರ ಮೇಲೆ ಪ್ರವೇಶ ನಿರ್ಬಂಧ ಹೇರುವುದು, ದೇವಸ್ಥಾನದ ಸುತ್ತಮುತ್ತಲಿನಲ್ಲಿ ಮದ್ಯ ಮಾಂಸ ಮಾರಾಟದ ನಿಶೇಧ ಹೇರುವುದು, ನಿಯಮಿತ ಉತ್ಸವಗಳಲ್ಲಿ ಧಾರ್ಮಿಕ ಪ್ರವಚನಗಳ ಆಯೋಜನೆಯನ್ನು ಮಾಡುವುದು ಹೀಗೆ ದೇವಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡಿ ದೇವಸ್ಥಾನಗಳ ವಾತಾವರಣದ ಚೈತನ್ಯ ವೃದ್ಧಿಸಲು ಪ್ರಯತ್ನಿಸಬೇಕು ಎಂದು ಪಟ್ರಮೆಯ ಪ್ರಶಾಂತ್ ಪ್ರಶಾಂತ ಶಬರಾಯ ಇವರು ಉಪಸ್ಥಿತ ದೇವಸ್ಥಾನ ವಿಶ್ವಸ್ಥರಿಗೆ ಕರೆ ನೀಡಿದರು.
ಶ್ರೀ ವಿಶ್ವೇಶ್ವರ ಭಟ್ ಇವರು ಮಾತಾಡುತ್ತಾ ಬೆಂಗಳೂರಲ್ಲಿ ನಡೆದ ರಾಜ್ಯಮಟ್ಟದ ಮಂದಿರ ಅಧಿವೇಶನಕ್ಕೆ ಭಾಗವಹಿಸಿ ಅಲ್ಲಿಂದ ಪ್ರೇರಣೆಯನ್ನು ಪಡೆದು ನಮ್ಮ ತಾಲೂಕಿನಲ್ಲೂ ಅಧಿವೇಶನ ಮಾಡಬೇಕೆಂದು ತಮ್ಮೆಲ್ಲರ ಸಹಕಾರದಿಂದ ಇಲ್ಲಿ ಇಂದು ಈ ಕಾರ್ಯಕ್ರಮ ಮಾಡಲು ಸಾಧ್ಯವಾಯಿತು. ಇನ್ನು ಮುಂದೆಯೂ ತಾವೆಲ್ಲರೂ ದೇವಸ್ಥಾನ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಸಂಘಟಿರಾಗಿ ಕಾರ್ಯಮಾಡಬೇಕೆಂದು ಉಪಸ್ಥಿತರಿಗೆ ಕರೆ ನೀಡಿದರು.