ಹಲಾಲ್ ಪ್ರಮಾಣಪತ್ರದ ಮೂಲಕ ‘ಹಲಾಲ್ ಜಿಹಾದ್ ?

ಶ್ರೀ.ರಮೇಶಶಿಂದೆ

ಇಂದು ಆರ್ಥಿಕಸಂಪನ್ನ ವ್ಯಕ್ತಿಯನ್ನೇ ರಾಜ್ಯವ್ಯವಸ್ಥೆಯಲ್ಲಿ ಪ್ರಭಾವಶಾಲಿ ಎಂದು ಪರಿಗಣಿಸಲಾಗುತ್ತದೆ. ಹಾಗೂ ಆರ್ಥಿಕ ಸಂಪನ್ನತೆಯಿಂದಲೇ ಅಮೇರಿಕಾ, ಇಂಗ್ಲೆಂಡ್, ಮುಂತಾದ ದೇಶಗಳನ್ನು ಪ್ರಗತ ದೇಶಗಳು ಎನ್ನಲಾಗುತ್ತದೆ. ಅದಕ್ಕಾಗಿಯೇ ಅರ್ಥಕಾರಣವು ಮಹತ್ವದ್ದಾಗಿದೆ. ಇಂತಹ ಸ್ಥಿತಿಯಲ್ಲಿ ಜಗತ್ತಿನ ವಿನಾಶವನ್ನು ಮಾಡಲು ಪ್ರಯತ್ನಿಸುತ್ತಿರುವ ಜಿಹಾದಿಗಳ ಕೈಯಲ್ಲಿ ಒಂದುವೇಳೆ ಈ ಅರ್ಥಕಾರಣ ಸಿಕ್ಕಿದರೆ ? ಎಂಬ ಭೀತಿಗೆ ಸದ್ಯಸ್ಥಿತಿಯ ಮುಖ್ಯ ಕಾರಣವೇನೆಂದರೆ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇಸ್ಲಾಮೀ ಶರೀಯತ್‌ನ ಆಧಾರಿತ ‘ಹಲಾಲ್ ಅರ್ಥವ್ಯವಸ್ಥೆ. ಈ ಅರ್ಥವ್ಯವಸ್ಥೆಯಿಂದ ‘ಸ್ಥಳೀಯ ವ್ಯಾಪಾರಿಗಳು, ಉದ್ಯಮಿಗಳಿಗೆ ಹಾಗೂ ಕೊನೆಗೆ ರಾಷ್ಟ್ರಕ್ಕಾಗುವ ಅಪಾಯ ಏನು  ಇದರ ವಿಚಾರ ಮಾಡಲು ಈ ವಿಷಯವನ್ನು ಅರಿತುಕೊಳ್ಳುವುದು ಅವಶ್ಯಕವಾಗಿದೆ.

೧ ಹಲಾಲ್ ಎಂದರೇನು ?

ಇಸ್ಲಾಮಿನಲ್ಲಿ ‘ಹಲಾಲ್ ಮತ್ತು ‘ಹರಾಮ್ ಎಂಬ ಎರಡು ಮೂಲ ಅರಬಿ ಭಾಷೆಯಲ್ಲಿನ ಶಬ್ದಗಳು ಪ್ರಸಿದ್ಧವಾಗಿವೆ. ‘ಹಲಾಲ್ ಶಬ್ದದ ಅರ್ಥ ಇಸ್ಲಾಮಿಗನುಸಾರ ನ್ಯಾಯಸಮ್ಮತ, ಅನುಮೋದಿಸಿದ, ಮಾನ್ಯತೆಯಿರುವ ಎಂದಾಗಿದೆ ಮತ್ತು ಅದರ ವಿರುದ್ಧಾರ್ಥಕ ಶಬ್ದವೆಂದರೆ ‘ಹರಾಮ್, ಅಂದರೆ ಇಸ್ಲಾಮಿಗನುಸಾರ ಕಾನೂನುಬಾಹಿರ, ನಿಷಿದ್ಧ ಅಥವಾ ವರ್ಜಿಸಲಾದ ಎಂದರ್ಥ.

೨. ‘ಹಲಾಲ್ ಪದ್ಧತಿಗನುಸಾರ ಪ್ರಾಣಿವಧೆಯ ನಿಯಮ

‘ಹಲಾಲ್ ಎಂಬುದು ಮುಖ್ಯವಾಗಿ ಆಹಾರದ ಸಂದರ್ಭದಲ್ಲಿ ಇರುವುದರಿಂದ, ಹಾಗೆಯೇ ಅದರಲ್ಲೂ ಅದು ಪ್ರಾಣಿವಧೆಯನ್ನು ಮಾಡಿ ಮಾಂಸ ಪಡೆಯುವ ಸಂದರ್ಭದಲ್ಲಿರುವುದರಿಂದ, ಅದರ ಕುರಿತಾದ ನಿಯಮಗಳನ್ನು ಸ್ಪಷ್ಟಪಡಿಸಲಾಗಿದೆ.

ಅ. ‘ಪಶುಹತ್ಯೆ (ಕುರ್ಬಾನಿ)ಯನ್ನು ಮುಸಲ್ಮಾನನೇ ಮಾಡಬೇಕು.

ಆ. ವಧೆ ಮಾಡುವಂತಹ ಪಶುವು ಆರೋಗ್ಯವಂತ ಮತ್ತು ಸುದೃಢವಾಗಿರಬೇಕು.

ಇ. ಪಶುವಧೆ (ಜಬಿಹಾ, ಜಿಬಾ) ಮಾಡುವ ಮೊದಲು ‘ಬಿಸ್ಮಿಲ್ಲಾಹ ಅಥವಾ ‘ಬಿಸ್ಮಿಲ್ಲಾಹ ಅಲ್ಲಾಹೂ ಅಕಬರ ಎಂದು ಉಚ್ಚರಿಸಬೇಕು.

ಈ. ಪಶುವಿನ ಕುತ್ತಿಗೆಯನ್ನು ಕೊಯ್ಯುವಾಗ ಆ ಪ್ರಾಣಿಯ ತಲೆ ಮಕ್ಕಾದ ಕಾಬಾದ ಕಡೆಗೆ ಇರಬೇಕು.

ಉ. ಹರಿತಾದ ಚೂರಿಯಿಂದ ಒಂದೇ ಏಟಿನಲ್ಲಿ ಆ ಪ್ರಾಣಿಯ ಶ್ವಾಸನಾಳ, ರಕ್ತವನ್ನು ಪ್ರವಹಿಸುವ ಧಮನಿಗಳು ಮತ್ತು ಕುತ್ತಿಗೆಯ ನರಗಳನ್ನು ಕತ್ತರಿಸಬೇಕು. ರಕ್ತವನ್ನು ‘ಹರಾಮ್ (ನಿಷಿದ್ಧ) ಎಂದು ಪರಿಗಣಿಸಿರುವುದರಿಂದ ಅದು ಸಂಪೂರ್ಣ ಹರಿದು ಹೋಗುವುದು ಆವಶ್ಯಕವಾಗಿದೆ.

ಊ. ಪಶುವಧೆ (ಕುರ್ಬಾನಿ) ಮಾಡುವಾಗ ಅದಕ್ಕೆ ವೇದನೆಯಾಗ ಬಾರದೆಂದು ಮೊದಲೇ ವಿದ್ಯುತ್ ಆಘಾತ ಕೊಡುವುದು ಅಥವಾ ಸ್ಮೃತಿ ತಪ್ಪಿಸುವುದು ನಿಷಿದ್ಧವಾಗಿದೆ.

೩. ‘ಹಲಾಲ್ ಪದ್ಧತಿಯು ಪಶುಗಳಿಗೆ ಎಲ್ಲಕ್ಕಿಂತ ಕಡಿಮೆ ವೇದನಾದಾಯಕ ಎಂಬ ಸುಳ್ಳು ಪ್ರಚಾರ ಮಾಡುವುದು !

‘ಹಲಾಲ್ ಪದ್ಧತಿಯೇ ಎಲ್ಲಕ್ಕಿಂತ ಕಡಿಮೆ ವೇದನಾದಾಯಕ ವಾಗಿರುವುದು ದೃಢಪಟ್ಟಿದೆ ಎಂದು ಮುಸಲ್ಮಾನರು ಹೇಳು ತ್ತಾರೆ. ಪ್ರತ್ಯಕ್ಷದಲ್ಲಿ ಇದರ ಬಗ್ಗೆ ಪಾಶ್ಚಾತ್ಯ ದೇಶಗಳಲ್ಲಿ ಸಂಶೋಧನೆ ಯಾಗಿದ್ದು ಈ ಹೇಳಿಕೆ ಸುಳ್ಳೆಂದು ಸಾಬೀತಾಗಿದೆ.

೨೦೦೯ ರಲ್ಲಿ ನ್ಯೂಜಿಲೆಂಡ್‌ನ ‘ಮ್ಯಾಸಿ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಯಲ್ಲಿ ‘ಹಲಾಲ್ ಪದ್ಧತಿಯಿಂದ  ಪಶುವಿನ ಕುತ್ತಿಗೆ ಕೊಯ್ಯುವುದರಿಂದ ೧೦ ರಿಂದ ೩೦ ಸೆಕೆಂಡುಗಳಲ್ಲಿ ಅದರ ಪ್ರಜ್ಞೆ ತಪ್ಪಿದರೂ, ಆ ಸ್ಥಿತಿಯಲ್ಲೂ ಕುತ್ತಿಗೆ ಕೊಯ್ದ ನಂತರ ೨ ನಿಮಿಷ ಗಳ ವರೆಗೆ ‘ಹಲಾಲ್ ಮಾಡಿದ ಪಶುವು ವೇದನೆಗಳನ್ನು ಸಹಿಸ ಬೇಕಾಗುತ್ತದೆ ಎಂಬುದು ದೃಢಪಟ್ಟಿದೆ. ಇದರಿಂದ ‘ಹಲಾಲ್ ಪದ್ಧತಿಯು ಪಶುಗಳಿಗೆ ಕ್ರೂರವಾಗಿರುವುದು ಸಾಬೀತಾಗಿದ್ದು, ಜಗತ್ತಿನಾದ್ಯಂತ ‘ಹಲಾಲ್ಗೆ ವಿರೋಧವಾಗತೊಡಗಿದೆ.

‘ಹಲಾಲ್ ಪದ್ಧತಿಯು ಅಮಾನವೀಯವೆಂದು ಸಾಬೀತಾದ ನಂತರ ಈಗ ಯುರೋಪಿನ ಡೆನ್ಮಾರ್ಕ್, ನೆದರಲ್ಯಾಂಡ್, ಸ್ವೀಡನ್, ಸ್ವಿಜರ್ಲ್ಯಾಂಡ್, ಲಕ್ಸಮ್‌ಬರ್ಗ್, ಬೆಲ್ಜಿಯಮ್ ಮತ್ತು ಇಂಗ್ಲೆಂಡ್ ಮುಂತಾದ ಅನೇಕ ದೇಶಗಳಲ್ಲಿ ಜಾಗೃತ(ಪ್ರಜ್ಞೆಯಿರುವ) ಪಶುವಿನ ‘ಹಲಾಲ್ ಮಾಡುವುದಕ್ಕೆ ೨೦೧೭ ರಲ್ಲಿ ಕಾನೂನಾತ್ಮಕ ನಿರ್ಬಂಧ ಹಾಕಲಾಗಿದೆ. ಈಗ ಮುಸಲ್ಮಾನರಿಗೆ ಯಾವುದೇ ಪರ್ಯಾಯ ಇಲ್ಲದಿರುವುದರಿಂದ ಅವರಿಗೆ ಕಾನೂನಿನ ಎದುರು ಬಗ್ಗಲೇ ಬೇಕಾಯಿತು ಮತ್ತು ಅವರು ವಿದ್ಯುತ್ ಆಘಾತದಿಂದ ಪಶುವಿನ ಸ್ಮೃತಿ ತಪ್ಪಿಸಿದರೆ ಅದನ್ನು ‘ಹಲಾಲ್ ಎಂದು ಪರಿಗಣಿಸುವುದಾಗಿ ಸ್ವೀಕರಿಸಿದ್ದಾರೆ. ಆದರೆ ಭಾರತದಲ್ಲಿನ ‘ಪಶು  ಹಿಂಸೆ ನಿವಾರಣೆ ಅಧಿನಿಯಮ, ೧೯೬೦ ರ ಕಾಯಿದೆಯಲ್ಲಿ ಧಾರ್ಮಿಕ ಕಾರಣಗಳಿ ಗಾಗಿ ಮಾಡಿದ ಪಶುಹತ್ಯೆಯಲ್ಲಿನ ಕ್ರೂರತೆಗೆ ಸಂರಕ್ಷಣೆ ನೀಡಲಾಗಿದೆ.

೪. ‘ಹಲಾಲ್ ಚಳುವಳಿಯ ಉದ್ದೇಶ

೪ ಅ. ಮಾಂಸ ವ್ಯಾಪಾರದ ಮೇಲೆ ನಿಯಂತ್ರಣ ಸಾಧಿಸುವುದು : ‘ಹಲಾಲ್ ಮಾಂಸದ ಸಂದರ್ಭದಲ್ಲಿ ಪ್ರಾಣಿವಧೆ ಮಾಡುವವನು ಮುಸಲ್ಮಾನನಾಗಿರಬೇಕೆಂದು ಮೊದಲನೇ ಷರತ್ತಿರುವುದರಿಂದ ಮುಸಲ್ಮಾನೇತರ ವ್ಯಕ್ತಿಯಿಂದ ಮಾಡಲಾದ ಪ್ರಾಣಿವಧೆಯನ್ನು ‘ಹಲಾಲ್ ಎಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ‘ಹಲಾಲ್ ಮಾಂಸಕ್ಕೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ತನ್ನಿಂದತಾನೇ ಈ ಮಾಂಸ ವ್ಯಾಪಾರದ ಸುಮಾರು ೩ ಲಕ್ಷ ಕೋಟಿ ರೂಪಾಯಿಗಳ ಸಂಪೂರ್ಣ ವ್ಯಾಪಾರವು ಮುಸಲ್ಮಾನರ ನಿಯಂತ್ರಣಕ್ಕೆ ಹೋಗುತ್ತಿದೆ.

೪ ಆ. ‘ಹಲಾಲ್ ಚಳುವಳಿಯ ಮೂಲಕ ಜಾಗತಿಕ ಆರ್ಥಿಕವ್ಯವಸ್ಥೆಯ ಮೇಲೆ ಆಡಳಿತ ನಡೆಸುವುದು : ‘ಮುಸಲ್ಮಾನರು ಜಾಗತಿಕ ಆರ್ಥಿಕ ವ್ಯವಸ್ಥೆಯ ಮೇಲೆ ಆಡಳಿತ ನಡೆಸಲು ನೇತೃತ್ವ ವಹಿಸುವ ಶಕ್ತಿಯು ‘ಹಲಾಲ್ ಚಳವಳಿಯಲ್ಲಿದೆ. ಅದಕ್ಕಾಗಿ ಪಾಶ್ಚಿಮಾತ್ಯರು ಆರ್ಥಿಕ ಸಮೃದ್ಧಿಯ ಸಾಧನವೆಂದು ಬಳಸಲ್ಪಡುವ ತಂತ್ರಜ್ಞಾನವನ್ನು ಬಿಟ್ಟು ಮುಸಲ್ಮಾನ ಸಮಾಜವು ಆಹಾರ ಉತ್ಪಾದನೆಗಳ ಶಕ್ತಿಶಾಲಿ ಆಧಾರವನ್ನು ವಿಕಸಿತಗೊಳಿಸುವ ಕಡೆಗೆ ಗಮನ  ಕೊಡಬೇಕು; ಎಂದು ಬೊಸ್ನಿಯಾದ ಗ್ರಾಂಡ್ ಮುಫ್ತಿ ಡಾ. ಮುಸ್ತಾಫಾ ಸೆರಿಕ್ ಇವರು ಪಾಕಿಸ್ತಾನದಲ್ಲಿ ಭಾಷಣ ಮಾಡುತ್ತಿರುವಾಗ ಹೇಳಿದ್ದರು.

೫. ‘ಹಲಾಲ್ ಆರ್ಥಿಕವ್ಯವಸ್ಥೆ : ಸ್ವರೂಪ, ವ್ಯಾಪ್ತಿ ಮತ್ತು ಪ್ರಚಾರ

೫ ಅ. ಇಸ್ಲಾಮಿನ ಆಧಾರದಲ್ಲಿ ‘ಹಲಾಲ್ ಉದ್ಯೋಗದ ಮತ್ತು ‘ಹಲಾಲ್ ಆರ್ಥಿಕವ್ಯವಸ್ಥೆಯ ಆಧಾರದಲ್ಲಿ ‘ಇಸ್ಲಾಮಿಕ್ ಬ್ಯಾಂಕ್ನ ಬೆಳವಣಿಗೆಯಾಗುವುದು : ‘ಹಲಾಲ್ ಆರ್ಥಿಕವ್ಯವಸ್ಥೆಯ ಮೂಲ ಪರಿಕಲ್ಪನೆಯು ‘ಕೃಷಿಭೂಮಿಯಿಂದ ಗ್ರಾಹಕರ ವರೆಗೆ (ಈಡಿom ಜಿಚಿಡಿm ಣo ಜಿoಡಿಞ) ಎಂದಿತ್ತು. ಈ ಸಂಕಲ್ಪನೆಯನ್ನು ವಿಸ್ತರಿಸಲು ‘ಊSಃಅ – ಅಮಾನಾಹ್ ಮಲೇಶಿಯಾ ಎಂಬ ಇಸ್ಲಾಮಿಕ್ ಬ್ಯಾಂಕ್‌ನ ಕಾರ್ಯಕಾರಿ ಅಧಿಕಾರಿಗಳಾದ ರೇಫ್ ಹನೀಫ್ ಇವರು, “ಒಂದು ವೇಳೆ ನಮಗೆ ‘ಹಲಾಲ್ ಆರ್ಥಿಕವ್ಯವಸ್ಥೆಯ ಕಡೆ ಹೆಜ್ಜೆ ಇಡಬೇಕಾಗಿದ್ದರೆ, ನಾವು ಹೆಚ್ಚು ವ್ಯಾಪಕ ವಿಚಾರಗಳನ್ನು ಮಾಡ ಬೇಕು ಮತ್ತು ಆರ್ಥಿಕ ಯೋಜನೆಗಳಿಂದ ಹಿಡಿದು ಉತ್ಪನ್ನಗಳ ವರೆಗಿನ ಸಂಪೂರ್ಣ ಸರಪಳಿಯನ್ನು ‘ಹಲಾಲ್ ಮಾಡಲು ಪ್ರಯತ್ನಿಸಬೇಕಾಗುವುದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಂದರೆ ‘ಹಲಾಲ್ ಉತ್ಪನ್ನಗಳಿಂದ ಲಾಭ ಪಡೆದು ಆ ಹಣವನ್ನು ‘ಇಸ್ಲಾಮಿಕ್ ಬ್ಯಾಂಕ್ನಲ್ಲಿ ಸಂಗ್ರಹಿಸಬೇಕು. ಅನಂತರ ‘ಇಸ್ಲಾಮಿಕ್ ಬ್ಯಾಂಕ್ವು ಆ ಹಣದಿಂದ ‘ಹಲಾಲ್ ಉತ್ಪಾದಕರಿಗೆ ಆರ್ಥಿಕ ಸಹಾಯವನ್ನು ಮಾಡಬೇಕು. ಈ ರೀತಿ ‘ಹಲಾಲ್ ಉತ್ಪನ್ನಗಳು ಮತ್ತು ಲಾಭ ಇವುಗಳಲ್ಲಿ ಹೆಚ್ಚಳವನ್ನು ಮಾಡಿ ಜಾಗತಿಕ ಸ್ತರದಲ್ಲಿನ ಮಾರುಕಟ್ಟೆಯ ಮೇಲೆ ನಿಯಂತ್ರಣ ಪಡೆಯಲು ಪ್ರಯತ್ನಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ ಇಸ್ಲಾಮಿನ ಆಧಾರದಲ್ಲಿ ‘ಹಲಾಲ್ ಉದ್ಯೋಗ ಮತ್ತು ‘ಹಲಾಲ್ ಆರ್ಥಿಕವ್ಯವಸ್ಥೆಯ ಆಧಾರದಲ್ಲಿ ‘ಇಸ್ಲಾಮಿಕ್ ಬ್ಯಾಂಕ್ ಇವು ಬಹಳ ದೊಡ್ಡದಾಗಿ ಬೆಳೆಯುತ್ತಿವೆ.

೫ ಆ. ಇಸ್ಲಾಮಿ ದೇಶಗಳಿಗೆ ಉತ್ಪನ್ನಗಳನ್ನು ರಫ್ತು ಮಾಡಲು ‘ಹಲಾಲ್ ಪ್ರಮಾಣಪತ್ರ ಪಡೆಯುವುದು ಕಡ್ಡಾಯಗೊಳಿಸುವುದು ! :

‘ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋ-ಆಪರೇಶನ್ (OIC) ಇದು  ಇಸ್ಲಾಮಿ ದೇಶಗಳಿಗೆ ಉತ್ಪನ್ನಗಳನ್ನು ರಫ್ತು ಮಾಡುವುದಿದ್ದಲ್ಲಿ ಮೊದಲು ಆ ಉತ್ಪನ್ನಗಳಿಗೆ ‘ಹಲಾಲ್ ಪ್ರಮಾಣೀಕೃತಗೊಳಿಸುವ ಅಧಿಕೃತ ಇಸ್ಲಾಮಿಕ್ ಸಂಘಟನೆಯಿಂದ ‘ಹಲಾಲ್ ಪ್ರಮಾಣಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಿತು. ಇದು ಒಂದು ರೀತಿಯ ‘ಜಿಝಿಯಾ ತೆರಿಗೆಯೇ ಆಗಿದೆ.

೬. ‘ಹಲಾಲ್ ಆರ್ಥಿಕವ್ಯವಸ್ಥೆಗಾಗಿ ‘ಹಲಾಲ್ ಪರಿಕಲ್ಪನೆಯ ವ್ಯಾಪ್ತಿ !

ಇಸ್ಲಾಮಿ ಧರ್ಮಗ್ರಂಥಗಳಲ್ಲಿ ಮಾಂಸದ ಹೊರತು ಇತರ ಕ್ಷೇತ್ರಗಳಿಗೆ ‘ಹಲಾಲ್ ಪರಿಕಲ್ಪನೆಯನ್ನು ಸ್ಪಷ್ಟವಾಗಿ ಹೇಳಿಲ್ಲ. ಹಾಗಾಗಿ ಮೌಲಾನಾಗಳಿಂದ ‘ಹಲಾಲ್ ಪರಿಕಲ್ಪನೆಯನ್ನು ಹೇಗೆ ವಿಸ್ತರಿಸಲಾಗುತ್ತಿದೆ ಎಂದು ನೋಡೋಣ.

೬ ಅ. ‘ಹರಾಮ್ ಎಂದು ಪರಿಗಣಿಸಲ್ಪಟ್ಟ ವಿಷಯಗಳನ್ನೂ ಇಂದು ‘ಹಲಾಲ್ ಎಂದು ನಿರ್ಧರಿಸುವುದು : ‘ಹರಾಮ್ ವಸ್ತುಗಳನ್ನು‘ಹಲಾಲ್ ಎಂದು ನಿರ್ಧರಿಸುವ ಉದಾಹರಣೆಯೆಂದರೆ ಕೆಲವು ವರ್ಷಗಳ ಹಿಂದೆ ‘ಅಜಾನ್ನ ಕರೆಯನ್ನು ಈಶ್ವರನ ಪವಿತ್ರ ಧ್ವನಿಯಾಗಿದೆ ಎಂದು ಪರಿಗಣಿಸಲಾಗುತ್ತಿತ್ತು, ಇಂದು ಧ್ವನಿವರ್ಧಕ ಯಂತ್ರವನ್ನು ‘ಹಲಾಲ್ ಎಂದು ನಿರ್ಧರಿಸಿ ಪ್ರತಿಯೊಂದು ಮಸೀದಿಯಲ್ಲಿ ಅಳವಡಿಸಲಾಯಿತು. ಅದೇ ರೀತಿ ಕೆಲವು ವರ್ಷಗಳ ಹಿಂದೆ ಸೌಂದರ್ಯವರ್ಧಕಗಳನ್ನು ಬಳಸಿ ‘ಮೇಕಪ್ ಮಾಡುವುದು ‘ಹರಾಮ್ ಆಗಿತ್ತು. ಆದರೆ ಇಂದು ಸೌಂದರ್ಯ ವರ್ಧಕಗಳಿಗೇ ‘ಹಲಾಲ್ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ.

೬ ಆ. ಮಾಂಸಾಹಾರಿ ಮತ್ತು ಸಸ್ಯಾಹಾರಿ ಖಾದ್ಯಪದಾರ್ಥಗಳು : ಈಗ ಮಾಂಸಾಹಾರಿ ಪದಾರ್ಥಗಳಷ್ಟೇ ಅಲ್ಲ, ಸುಪ್ರಸಿದ್ಧ ‘ಹಲ್ದೀರಾಮ್ನ ಶುದ್ಧ ಸಸ್ಯಾಹಾರಿ ನಮಕೀನಗಳೂ (ಖಾದ್ಯಗಳೂ) ‘ಹಲಾಲ್ ಪ್ರಮಾಣೀಕೃತವಾಗಿವೆ. ಧಾನ್ಯ, ಅಡುಗೆ ಎಣ್ಣೆ, ಗೋಧಿಹಿಟ್ಟು, ಒಣಹಣ್ಣುಗಳು (ಡ್ರೈ ಫ್ರೂಟ್ಸ್), ಮಿಠಾಯಿಗಳು, ಚಾಕಲೇಟ್, ತಂಪುಪಾನೀಯ ಇತ್ಯಾದಿಗಳನ್ನೂ ‘ಹಲಾಲ್ ಪ್ರಮಾಣೀಕೃತಗೊಳಿಸಲಾಗಿದೆ.

೬ ಇ. ಔಷಧಗಳು : ಯುನಾನಿ, ಆಯುರ್ವೇದೀಯ ಇತ್ಯಾದಿ ಔಷಧಗಳು, ಹಾಗೆಯೇ ಜೇನುತುಪ್ಪ ಇವುಗಳಿಗೂ ‘ಹಲಾಲ್ನ ಪರಿಕಲ್ಪನೆಯನ್ನು ಅನ್ವಯಿಸಲಾಗಿದೆ. ಇಷ್ಟು ಮಾತ್ರವಲ್ಲ ತುಳಸಿ ಅರ್ಕ, ಹಾಗೆಯೇ ತುಳಸಿ-ಶುಂಠಿ ಚಹಾ ಈ ಉತ್ಪನ್ನಗಳೂ ‘ಹಲಾಲ್ ದೃಢೀಕೃತವಾಗಿವೆ. .

೬ ಇ. ಸೌಂದರ್ಯವರ್ಧಕಗಳು : ಸಾಬೂನು, ಕಾಡಿಗೆ, ‘ಶ್ಯಾಂಪು, ‘ಟೂತ್‌ಪೇಸ್ಟ್, ‘ನೈಲ್‌ಪಾಲಿಶ್, ‘ಲಿಪ್‌ಸ್ಟಿಕ್ ಇತ್ಯಾದಿ ಸೌಂದರ್ಯ ವರ್ಧಕಗಳನ್ನೂ ಈಗ ‘ಹಲಾಲ್ ದೃಢೀಕೃತಗೊಳಿಸಲಾಗಿದೆ.

೬ ಉ. ‘ಹಲಾಲ್ ಫ್ಯಾಶನ್ : ಇದರ ಅಂತರ್ಗತ ಮುಸಲ್ಮಾನ ಸ್ತ್ರೀಯರಿಗೆ ಕಡ್ಡಾಯವಾಗಿರುವ ‘ಹಿಜಾಬ್, ‘ಬುರ್ಖಾ, ಹಾಗೆಯೇ ಇತರ ಇಸ್ಲಾಮಿ ಉಡುಗೆತೊಡುಗೆಗಳನ್ನು ಆಧುನಿಕ ಪದ್ಧತಿಯಲ್ಲಿ ಉಪಲಬ್ಧ ಮಾಡಿಕೊಡಲಾಗಿದೆ.

೬ ಊ. ಹಲಾಲ್ ಡೇಟಿಂಗ ಜಾಲತಾಣಗಳು : ಯುವಕ ಯುವತಿ ಯರನ್ನು ಪರಸ್ಪರ ಪರಿಚಯಿಸಿಕೊಡುವ ‘ಆನ್ ಲೈನ್ ಡೇಟಿಂಗ್ ಕ್ಷೇತ್ರದಲ್ಲಿಯೂ ಶರಿಯತ್ ಆಧಾರಿತ ‘ಹಲಾಲ್ ಡೇಟಿಂಗ ಅಂತರ್ಜಾಲ (ವೆಬ್‌ಸೈಟ್ಸ್) ಗಳೂ ಇವೆ.

೬ ಎ. ‘ಹಲಾಲ್ ಗೃಹೋಪಯೋಗಿ ಯಂತ್ರೋಪಕರಣಗಳು : ಇಂಡೋ ನೇಶಿಯಾದಲ್ಲಿ ‘ರೆಫ್ರಿಜಿರೇಟರ್, ಹಾಗೆಯೇ ‘ಮೈಕ್ರೋವೇವ್ ಓವನ್ನಂತಹ ಗೃಹೋಪಯೋಗಿ ಯಂತ್ರೋಪಕರಣಗಳಿಗೂ ಮೊದಲ ಬಾರಿಗೆ ‘ಹಲಾಲ್ ಪ್ರಮಾಣಪತ್ರವನ್ನು ನೀಡಲಾಗಿದೆ.

೬ ಏ. ‘ಹಲಾಲ್ ದೃಢೀಕೃತ ವಸತಿಸಮುಚ್ಚಯ : ಕೇರಳ ರಾಜ್ಯದ ಕೊಚ್ಚಿ ನಗರದಲ್ಲಿ ಶರಿಯತ್‌ನ ನಿಯಮಗಳ ಆಧಾರದಲ್ಲಿ ಭಾರತದಲ್ಲಿನ ಮೊದಲ ‘ಹಲಾಲ್ ದೃಢೀಕೃತ ವಸತಿಸಮುಚ್ಚಯ ನಿರ್ಮಾಣವಾಗುತ್ತಿದೆ. ಇದರಲ್ಲಿ ಸ್ತ್ರೀ-ಪುರುಷರಿಗೆ ಪ್ರತ್ಯೇಕ ಈಜುಕೊಳ, ಪ್ರತ್ಯೇಕ ಪ್ರಾರ್ಥನಾಕೋಣೆ, ಕಾಬಾದ ದಿಶೆಯಿಂದ ದೂರವಿರುವ ಶೌಚಾಲಯಗಳು, ಇಂತಹ ವಿವಿಧ ಸೌಲಭ್ಯಗಳ ಮತ್ತು ಶರಿಯತ್‌ನ ನಿಯಮಗಳ ಉಲ್ಲೇಖಗಳಿವೆ.

೬ ಒ. ‘ಹಲಾಲ್ ದೃಢೀಕೃತ ಆಸ್ಪತ್ರೆಗಳು : ಚೆನ್ನೈ, ತಮಿಳುನಾಡಿನಲ್ಲಿನ ‘ಗ್ಲೋಬಲ್ ಹೆಲ್ತ್ ಸಿಟಿ ಎಂಬ ಆಸ್ಪತ್ರೆಯನ್ನು ‘ಹಲಾಲ್ ದೃಢೀಕೃತ ಆಸ್ಪತ್ರೆ ಎಂದು ಘೋಷಿಸಲಾಗಿದೆ. ಅವರ ಹೇಳಿಕೆ ಯೇನೆಂದರೆ, ನಾವು ಇಸ್ಲಾಂನಲ್ಲಿದ್ದಂತೆ ಸ್ವಚ್ಛತೆ ಮಾಡುತ್ತೇವೆ ಮತ್ತು ‘ಹಲಾಲ್ ಆಹಾರ ಕೊಡುತ್ತೇವೆ. ಕೊಲ್ಲಿ ದೇಶಗಳ ಶ್ರೀಮಂತ ಮುಸಲ್ಮಾನ ರೋಗಿಗಳನ್ನು ಆಕರ್ಷಿಸುವುದೇ ಇದರ ಮುಖ್ಯ ಕಾರಣವಾಗಿದೆ.

೬ ಔ. ‘ಹಲಾಲ್ ಪ್ರವಾಸ (ಟೂರಿಸಮ್) : ಮುಸಲ್ಮಾನರ ಪಾಶ್ಚಾತ್ಯ ದೇಶಗಳ ಪ್ರವಾಸಕ್ಕೆ ಖರ್ಚಾಗುವ ಹಣವು ಇಸ್ಲಾಮಿ ದೇಶಗಳಿಗೆ ಸಿಗಬೇಕು ಅಥವಾ ಇಸ್ಲಾಮೇತರ ದೇಶಗಳು ಮುಸಲ್ಮಾನ ಪ್ರವಾಸಿಗರನ್ನು ಆಕರ್ಷಿಸಲು ವಿಶೇಷ ‘ಇಸ್ಲಾಮಿ ಸೌಲಭ್ಯಗಳನ್ನು ನೀಡಬೇಕು ಎಂಬುದೂ ಇದರ ಹಿಂದಿನ ಒಂದು ಉದ್ದೇಶವಾಗಿದೆ.

೬ ಅಂ ‘ಹಲಾಲ್ ಆರ್ಥಿಕವ್ಯವಸ್ಥೆಯು ಜಗತ್ತಿನಲ್ಲಿ ವೇಗವಾಗಿ ಬೆಳೆ ಯುತ್ತಿರುವ ಆರ್ಥಿಕವ್ಯವಸ್ಥೆ ! : ೨೦೧೭ ರಲ್ಲಿ ‘ಹಲಾಲ್ ಆರ್ಥಿಕ ವ್ಯವಸ್ಥೆಯು ೨.೧ ಟ್ರಿಲಿಯನ್ ಅಮೇರಿಕನ್ ಡಾಲರ್ಸ್ (೧ ಟ್ರಿಲಿಯನ್ ಅಂದರೆ ೧ ರ ಮುಂದೆ ೧೨  ಸೊನ್ನೆಗಳು)ನಷ್ಟಿತ್ತು.

೨೦೧೯ ರಲ್ಲಿ ಭಾರತದ ಆರ್ಥಿಕ ವ್ಯವಸ್ಥೆಯು ೨.೭ ಟ್ರಿಲಿಯನ್ ಅಮೇರಿಕನ್ ಡಾಲರ್ಸ್‌ಗಳಷ್ಟಿತ್ತು ಮತ್ತು ೨೦೨೪ ರಲ್ಲಿ ಅದು ೫ ಟ್ರಿಲಿಯನ್ ಅಮೇರಿಕನ್ ಡಾಲರ್ಸ್‌ಗಳಾಗಬೇಕೆಂದು ಭಾರತ ಸರಕಾರ ಪ್ರಯತ್ನಿಸುತ್ತಿದೆ. ಇದರ ಅರ್ಥ ‘ಹಲಾಲ್ ಆರ್ಥಿಕ ವ್ಯವಸ್ಥೆಯ ವೇಗವನ್ನು ನೋಡಿದರೆ ಅದು ಬೇಗನೇ ಭಾರತದ ಆರ್ಥಿಕವ್ಯವಸ್ಥೆಯನ್ನು ಹಿಂದೆ ಹಾಕಬಹುದು.

‘೭. ಹಲಾಲ್ ಪ್ರಮಾಣಪತ್ರ ಪಡೆಲು ಮುಸಲ್ಮಾನ ನಿರೀಕ್ಷಕರನ್ನು ನೇಮಿಸುವುದು ಅವಶ್ಯಕ!

‘ಮಾಂಸ ಸಂಸ್ಕರಣಾ ಯೂನಿಟ್ನ ಮೂಲಕ ‘ಹಲಾಲ್ನ ನಿಯಮಗಳ ಪಾಲನೆ ಮಾಡಲಾಗುತ್ತಿದೆ ಎಂಬುದನ್ನು ಖಚಿತ ಗೊಳಿಸಲು ಕಾರ್ಖಾನೆಗಳಲ್ಲಿ ‘ಹಲಾಲ್ ಪ್ರಮಾಣಪತ್ರ ಕೊಡುವ ಸಂಸ್ಥೆಯ ಓರ್ವ ನಿರೀಕ್ಷಕನನ್ನು (ಹಲಾಲ್ ಆಡಿಟರ್) ಅಲ್ಲಿ ನೇಮಕ ಮಾಡಬೇಕು ಎಂಬ ಷರತ್ತನ್ನು ಹಾಕಲಾಗುತ್ತದೆ. ಹಾಗೂ ಇತರ ಎಲ್ಲ ಕೆಲಸಗಾರರಿಗೆ ‘ಹಲಾಲ್ ಅಲ್ಲದ ಖಾದ್ಯಪದಾರ್ಥ ಅಥವಾ ಪಾನೀಯಗಳನ್ನು ಆ ಉತ್ಪಾದನಾ ಕ್ಷೇತ್ರದಲ್ಲಿ ತರಲು ನಿರ್ಬಂಧಿಸಬೇಕೆಂದು ಬೇಡಿಕೆ ಇಡಲಾಗುತ್ತದೆ. – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಇದರ ಮುಂದಿನ ಲೇಖನವನ್ನು ಓದಲು ಲಿಂಕ್ : https://sanatanprabhat.org/kannada/73535.html