ಹಿಂದೂಗಳು ಮಕ್ಕಳಿಗೆ ಹಿಂದುಸ್ಥಾನದ ಭೌಗೋಳಿಕ ಹಾಗೂ ಧಾರ್ಮಿಕ ಇತಿಹಾಸ ಹೇಳಬೇಕು – ಮೀನಾಕ್ಷಿ ಶರಣ, ಅಧ್ಯಕ್ಷೆ, ಅಯೋಧ್ಯಾ ಫೌಂಡೆಶನ್, ಇಂದೂರ, ಮಧ್ಯಪ್ರದೇಶ

ಹಿಂದುಸ್ಥಾನದ ಹಿಂದೂಗಳ ಭೂಮಿ ಇದು ಹಿಂದೂಗಳ ರಾಷ್ಟ್ರವಾಗಿದೆ. ಇತಿಹಾಸವು ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುತ್ತದೆ. ಇತಿಹಾಸದ ಸಂಪೂರ್ಣ ಮಾಹಿತಿ ಇಲ್ಲದೆ ನಾವು ಹೋರಾಡಲು ಸಾಧ್ಯವಿಲ್ಲ. ಏಕೆಂದರೆ ಇತಿಹಾಸ ನಮ್ಮ ಜೀವನದೊಂದಿಗೆ ಜೋಡಿಸಿದೆ ದೇಶದ ವಿಭಜನೆಯ ನಂತರ ಲಕ್ಷ ಲಕ್ಷ ಹಿಂದೂಗಳ ಹತ್ಯೆಯನ್ನು ಮಾಡಲಾಯಿತು ಈ ಇತಿಹಾಸವನ್ನು ನಾವು ಮರೆಯಲು ಸಾಧ್ಯವಿಲ್ಲ. ಮೌಲಾನಾ ಅಬುಲ ಕಲಾಮರು “ಮತಾಂತರ ಮಾಡಿ ನಾವು ಭಾರತವನ್ನು ಹತೋಟಿಗೆ ತೆಗೆದುಕೊಂಡು ಅದನ್ನು ಇಸ್ಲಾಮೀಕರಣ ಮಾಡುವೆವು’’ ಎಂದು ಹೇಳುತ್ತಾರೆ. ಅದುದರಿಂದ ನಾವು ನಮ್ಮ ಮಕ್ಕಳಿಗೆ ನಮ್ಮ ಭೌಗೋಲಿಕ ಹಾಗೂ ಧಾರ್ಮಿಕ ಇತಿಹಾಸವನ್ನು ಹೇಳಬೇಕು. ಇದು ಪ್ರತಿಯೊಬ್ಬರ ಕರ್ತವ್ಯವೇ ಆಗಿದೆ.