ಸಾಧಕರೇ, ದೆಹವನ್ನು ನಿರ್ಲಕ್ಷಿಸಬೇಡಿರಿ !

ವೈದ್ಯ ಮೇಘರಾಜ ಮಾಧವ ಪರಾಡಕರ

‘ಮನುಷ್ಯಜನ್ಮವು ತುಂಬ ಪುಣ್ಯದಿಂದ ಸಿಗುತ್ತದೆ. ಸಾಧನೆಯನ್ನು ಮಾಡಿ ಈಶ್ವರಪ್ರಾಪ್ತಿ ಮಾಡಿಕೊಂಡಾಗಲೇ ಈ ಮನುಷ್ಯಜನ್ಮವು ಸಾರ್ಥಕವಾಗುತ್ತದೆ. ದೇಹವು ಆರೋಗ್ಯಕರವಾಗಿದ್ದರೆ ಮಾತ್ರ ಸಾಧನೆಯನ್ನು ಮಾಡಲು ಸುಲಭವಾಗುತ್ತದೆ. ‘ಶರೀರವು ಆರೋಗ್ಯವಾಗಿಡಲು ಏನು ಮಾಡಬೇಕು ?’, ಎಂಬುದನ್ನು ಪ್ರತಿದಿನ ‘ಆರೋಗ್ಯಕರ ಜೀವನಕ್ಕಾಗಿ ಆಯುರ್ವೇದ’ ಇದು ‘ಸನಾತನ ಪ್ರಭಾತ’ದಲ್ಲಿನ ಲೇಖನಗಳಿಂದ ಹೇಳಲಾಗುತ್ತಿದ್ದರೂ, ಸಾಧಕರಲ್ಲಿ ಆರೋಗ್ಯದ ವಿಷಯದಲ್ಲಿ ಗಾಂಭೀರ್ಯವು ಕಂಡುಬರುವುದಿಲ್ಲ. ಅವೇಳೆಯಲ್ಲಿ ಮಲಗುವುದು, ಅವೇಳೆ ಏಳುವುದು, ಅವೇಳೆಯಲ್ಲಿ ಊಟವನ್ನು ಮಾಡುವುದು ಇದು ಅತ್ಯಂತ ತಪ್ಪು ರೂಢಿಯಾಗಿವೆ. ಇವುಗಳನ್ನು ಬಿಡಲೇ ಬೇಕು. ‘ನನಗೆ ಇದು ವರೆಗೆ ಏನೂ ಆಗಲಿಲ್ಲ’, ಎಂದು ಹೇಳಿ ತಪ್ಪು ಅಭ್ಯಾಸಗಳನ್ನು ಹಾಗೆಯೇ ಮುಂದುವರೆಸುವರಿದ್ದರೆ, ನಿಲ್ಲಿ! ವಿಚಾರ ಮಾಡಿ ! ದೂರದ ಪ್ರವಾಸಕ್ಕೆ ಹೋಗುವಾಗ ನಾವು ‘ನಮ್ಮ ವಾಹನವು ಉತ್ತಮ ಸ್ಥಿತಿಯಲ್ಲಿದೆಯಲ್ಲ’, ಎಂಬುದನ್ನು ಖಚಿತಪಡಿಸಿಕೊಳ್ಳುತ್ತೇವೆ; ಏಕೆಂದರೆ ಅದು ಉತ್ತಮ ಸ್ಥಿತಿಯಲ್ಲಿರದಿದ್ದರೆ, ದಾರಿಯಲ್ಲಿ ಅಡಚಣೆಗಳು ಬರುತ್ತವೆ. ಈಶ್ವರಪ್ರಾಪ್ತಿಯು ನಮ್ಮ ಧ್ಯೇಯವಾಗಿದೆ. ಇದು ದೂರದ ಪ್ರವಾಸವಿದೆ. ಆದುದರಿಂದ ಅದಕ್ಕಾಗಿ ಅತ್ಯಾವಶ್ಯಕ ದೇಹದ ಕಾಳಜಿ ವಹಿಸಿ !’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೯.೯.೨೦೨೨)