ಬ್ರಿಟನ್‌ನಲ್ಲಿರುವ ಮತಾಂಧರಿಂದಾಗಿ ಅಲ್ಲಿನ ಹಿಂದೂಗಳು ಅಸುರಕ್ಷಿತರಾಗಿದ್ದಾರೆ !

೧. ಬ್ರಿಟನ್‌ನಲ್ಲಿರುವ ಮತಾಂಧರಿಂದಾಗಿ ಅಲ್ಲಿನ ಹಿಂದೂಗಳು ಅಸುರಕ್ಷಿತರಾಗಿದ್ದಾರೆ !

ಮುಸಲ್ಮಾನರು ಸೆಪ್ಟೆಂಬರ್ ೧೮ ರಂದು ಬ್ರಿಟನ್ನಿನ ಲಿಸೆಸ್ಟರ ನಗರದಲ್ಲಿ ಹಿಂದೂಗಳನ್ನು ಗುರಿಯಾಗಿಸಿದರು. ಕೋಲುಗಳೊಂದಿಗೆ ಬಂದ ಮುಸಲ್ಮಾನರು ಹಿಂದೂ ದೇವಾಲಯದ ಮೇಲಿನ ಕೇಸರಿ ಧ್ವಜವನ್ನು ತೆಗೆದು ಅದನ್ನು ಸುಟ್ಟು ಹಾಕಿದರು.

೨. ಖಲಿಸ್ತಾನವಾದವನ್ನು ನಾಶ ಮಾಡಲು ಸರಕಾರವು ಕಠಿಣ ಹೆಜ್ಜೆಯಿಡುವುದು ಅವಶ್ಯಕ !

ಭಾರತದಿಂದ ಪ್ರತ್ಯೇಕ ಖಲಿಸ್ತಾನವನ್ನು ರಚಿಸಲು ಕೆನಡಾದ ಟೊರಂಟೊದಲ್ಲಿ ಖಲಿಸ್ತಾನವಾದಿಗಳು ಜನಾಭಿಪ್ರಾಯವನ್ನು ಸಂಗ್ರಹಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ೧ ಲಕ್ಷ ೧೦ ಸಾವಿರ ಜನರು ಮತದಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

೩. ಹಿಂದೂಗಳು ಇದನ್ನು ಕೇಳುತ್ತಾರೆಯೇ ?

ಹಿಂದೂಗಳು ಸಂಘಟಿತರಾಗದಿದ್ದರೆ ಅವರು ಕೊಲ್ಲಲ್ಪಡುತ್ತಾರೆ. ಹಿಂದೂಗಳು ಒಟ್ಟಾಗುವುದು ಅಗತ್ಯವಿದೆ’, ಎಂದು ಪುರಿಯ ಪೂರ್ವಾಮ್ನಾಯ ಗೋವರ್ಧನ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಜಯಪುರದಲ್ಲಿ ಪ್ರತಿಪಾದಿಸಿದರು.

೪. ಈಗ ಪಿ.ಎಫ್.ಐ. ವನ್ನು ನಿಷೇಧಿಸಿ !

ಎನ್.ಐ.ಎ. ಮತ್ತು ಜಾರಿ ನಿರ್ದೇಶನಾಲಯ (ಇಡಿ)ವು ೧೨ ರಾಜ್ಯಗಳಲ್ಲಿರುವ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಸ್ಥಳಗಳಲ್ಲಿ ದಾಳಿ ನಡೆಸಿ ೧೦೬ ಜನರನ್ನು ಬಂಧಿಸಿದೆ. ಜಿಹಾದಿ ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುವ ಸಂದರ್ಭದಲ್ಲಿ ಈ ದಾಳಿಗಳನ್ನು ನಡೆಸಲಾಗಿದೆ.

೫. ದೇವಸ್ಥಾನ ಸರಕಾರೀಕರಣದ ದುಷ್ಪರಿಣಾಮಗಳನ್ನು ತಿಳಿಯಿರಿ !

ತೆಲಂಗಾಣ ರಾಜ್ಯದ ಧಾರ್ಮಿಕದತ್ತಿ ಇಲಾಖೆಯು ವಾರಂಗಲ್‌ನಲ್ಲಿ ತನ್ನ ೩ ಅಂತಸ್ತಿನ ಕಚೇರಿಯ ಕಟ್ಟಡ ನಿರ್ಮಿತಿಗಾಗಿ ತಲಾ ೧ ಕೋಟಿ ರೂಪಾಯಿ ನೀಡುವಂತೆ ೩ ದೇವಾಲಯಗಳಿಗೆ ಹೇಳಿದೆ.

೬. ಹಿಂದೂಗಳಿಗೆ ಯಾರು ರಕ್ಷಣೆ ನೀಡುತ್ತಾರೆ ?

ಜಗತ್ತಿನಾದ್ಯಂತದ ಹಿಂದೂಗಳ ಮೇಲಿನ ದಾಳಿಯಲ್ಲಿ ಹೆಚ್ಚಳವಾಗಿದೆ. ಈ ಪ್ರಮಾಣವು ಶೇ. ೧ ಸಾವಿರದಷ್ಟು ಹೆಚ್ಚಿದೆ ಎಂದು ಅಮೆರಿಕದ ಸಂಸ್ಥೆ ‘ನೆಟವರ್ಕ ಕೆಂಟೆಜಿಯನ್ ರಿಸರ್ಚ ಇನ್ಸ್ಟಿಟ್ಯೂಟ್’ನ ವರದಿಯಲ್ಲಿ ಬೆಳಕಿಗೆ ಬಂದಿದೆ.

೭. ಇವರನ್ನು ಸಹ ಜೈಲಿಗೆ ಹಾಕಿ !

ಪಿಎಫ್‌ಐ ಕಾರ್ಯಕರ್ತರು ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳನ್ನು ಕೂಗುವುದು ಇದು ಅವರ ವಿರೋಧದ ಒಂದು ಪದ್ಧತಿಯಾಗಿದೆ ಎಂದು ರಾಷ್ಟ್ರೀಯ ಜನತಾ ದಳದ ಉಪಾಧ್ಯಕ್ಷ ಶಿವಾನಂದ ತಿವಾರಿ ಹೇಳಿದ್ದಾರೆ.