2018 ರಲ್ಲಿ ತ್ರಿವರ್ಣ ಯಾತ್ರೆಯ ಮೇಲೆ ದಾಳಿ ಮಾಡಿ ಹಿಂದೂ ಯುವಕರನ್ನು ಕೊಂದ 28 ಮುಸ್ಲಿಂ ತಪ್ಪಿತಸ್ಥರು

ಇಂದು ಶಿಕ್ಷೆ ಪ್ರಕಟ

ಕಾಸಗಂಜ (ಉತ್ತರ ಪ್ರದೇಶ) – ಇಲ್ಲಿನ ಚಂದನ ಗುಪ್ತಾ ಹತ್ಯೆ ಪ್ರಕರಣದ 28 ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳದ ನ್ಯಾಯಾಲಯವು ದೋಷಿಗಳೆಂದು ಘೋಷಿಸಿದೆ. 2 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಜನವರಿ 2 ರಂದು ಲಕ್ಷ್ಮಣಪುರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಆ 28 ಆರೋಪಿಗಳಿಗೆ ಇಂದು ಶಿಕ್ಷೆ ಪ್ರಕಟವಾಗಲಿದೆ. ಜನವರಿ 26, 2018 ರಂದು ತ್ರಿವರ್ಣ ಯಾತ್ರೆಯಲ್ಲಿ ಭಾಗವಹಿಸಿದ್ದ ಚಂದನ ಗುಪ್ತಾ ಅವರನ್ನು ಮತಾಂಧ ಮುಸ್ಲಿಮರು ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಆಸಿಫ್ ಖುರೇಷಿ ಉರ್ಫ್ ಹಿಟ್ಲರ್, ಅಸ್ಲಾಂ, ಅಸಿಮ್, ಶಬಾಬ್, ಸಾಕಿಬ್, ಮುನಾಜಿರ ರಫಿ, ಅಮೀರ ರಫಿ, ಸಲೀಂ, ವಾಸಿಂ, ನಸೀಮ, ಬಬ್ಲು, ಅಕ್ರಮ, ತೌಫಿಕ, ಮೊಹ್ಸಿನ, ರಾಹತ, ಸಲ್ಮಾನ, ಆಸಿಫ ಜಿಮ್ವಾಲಾ, ನಿಶು, ವಾಸಿಫ, ಇಮ್ರಾನ, ಶಂಶಾದ, ಜಾಫರ, ಶಾಕಿರ, ಖಾಲಿದ ಪರ್ವೇಜ, ಫೈಜಾನ, ಇಮ್ರಾನ, ಶಾಕಿರ, ಜಾಹಿದ ಉರ್ಫ ಜಗ್ಗಾ ಇವರನ್ನು ದೋಷಿಗಳೆಂದು ತೀರ್ಪು ನೀಡಿದ್ದಾರೆ.

ಜನವರಿ 26, 2018 ರಂದು, ಗಣರಾಜ್ಯೋತ್ಸವದಂದು ಚಂದನ ಗುಪ್ತಾ ಇತರ ಯುವಕರೊಂದಿಗೆ ಕಾಸಗಂಜ್‌ನಲ್ಲಿ ದ್ವಿಚಕ್ರ ವಾಹನದಲ್ಲಿ ಫೇರಿ ಹೋಗುತ್ತಿದ್ದರು. ಈ ಫೇರಿ ತ್ರಿವರ್ಣ ಧ್ವಜಗಳೊಂದಿಗೆ ನಡೆಸಲಾಗಿತ್ತು. ಈ ಫೇರಿ ಬಾಲಕಿಯರ ಸರಕಾರಿ ಇಂಟರ್ ಕಾಲೇಜು ಬಳಿ ಬಂದಾಗ ಮುಸ್ಲಿಂ ಯುವಕರು ಫೇರಿ ಮೇಲೆ ದಾಳಿ ನಡೆಸಿದರು. ಅವರು ಗುಂಡು ಹಾರಿಸಿ ಕಲ್ಲು ತೂರಾಟ ನಡೆಸಿದರು. ಚಂದನ ಗುಪ್ತಾ ಅವರನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಲಾಗಿತ್ತು. ಇದರಲ್ಲಿ ಅವರು ಮೃತಪಟ್ಟರು. ಇದಾದ ನಂತರ ಕಾಸಗಂಜನಲ್ಲಿ ಭಾರೀ ಹಿಂಸಾಚಾರ ನಡೆದಿತ್ತು.

ಚಂದನ ಗುಪ್ತಾ ಇವರ ಕುಟುಂಬದ ಕ್ರಮೇಣ ತೋರಿದ ನಿರ್ಲಕ್ಷ !

ಚಂದನ್ ಗುಪ್ತಾ ಅವರ ತಂದೆ ಸುಶೀಲ್ ಗುಪ್ತಾ ಇವರು ಮಾತನಾಡುತ್ತಾ,

1. ಚಂದನ್ ಹತ್ಯೆಯ ನಂತರ ನನ್ನ ಕುಟುಂಬಕ್ಕೆ ಸುಮಾರು 1 ವರ್ಷ ಪೊಲೀಸ್ ರಕ್ಷಣೆ ಸಿಕ್ಕಿತ್ತು. ನಂತರ ಅದನ್ನು ತೆಗೆದುಹಾಕಲಾಯಿತು. ನನ್ನ ಹಿರಿಯ ಮಗ ವಿವೇಕ ಗುಪ್ತಾ ಈ ಪ್ರಕರಣದ ಸಾಕ್ಷಿದಾರನಾಗಿದ್ದಾನೆ. ಹಿಂದೆ ವೈದ್ಯಕೀಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದನು; ಆದರೆ ಈಗ ಭಯದಿಂದ ಕೆಲಸ ಕಳೆದುಕೊಂಡಿದ್ದಾನೆ. ನಮಗೂ ಹಲವು ಬೆದರಿಕೆಗಳು ಬಂದಿವೆ. ಈಗ ಮನೆಯ ಖರ್ಚಿನ ಸಂಪೂರ್ಣ ಜವಾಬ್ದಾರಿ ನನ್ನ ಮೇಲಿದೆ. ಹುಡುಗಿಯ ಮದುವೆಯ ಜವಾಬ್ದಾರಿಯೂ ಇದೆ.

2. ಚಂದನ ಹತ್ಯೆಯ 29 ಆರೋಪಿಗಳ ಪೈಕಿ 28 ಮಂದಿ ಜೈಲಿನಿಂದ ಹೊರಬಂದಿದ್ದಾರೆ. ಇವರೆಲ್ಲರಿಗೂ ಉಚ್ಚ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಆರೋಪಿಗಳು ಆರ್ಥಿಕವಾಗಿ ಸಬಲರು. ಹಾಗಾಗಿ ಪ್ರಕರಣದ ವಿರುದ್ಧ ಹೋರಾಡಲು ಅವರು ಸಮರ್ಥರಾಗಿದ್ದಾರೆ.

3. ಕಾಸಗಂಜ ನ್ಯಾಯಾಲಯದಲ್ಲಿ ವಿಚಾರಣೆ ನಡೆದಾಗ ನಮ್ಮ ಪರವಾಗಿ 3-4 ಮಂದಿ ಇರುತ್ತಿದ್ದರು, ಆದರೆ ಆರೋಪಿಗಳ ಪರವಾಗಿ 100-200 ಜನ ಸೇರುತ್ತಿದ್ದರು. ಒತ್ತಡ ಸೃಷ್ಟಿಸಲು ಅವರು ಯತ್ನಿಸುತ್ತಿದ್ದರು. ಹೀಗಾಗಿ ನಮ್ಮದೇ ಹಣದಲ್ಲಿ ಉಚ್ಚ ನ್ಯಾಯಾಲಯದಲ್ಲಿ ಹೋರಾಟ ನಡೆಸಿದೆವು ಮತ್ತು ಪ್ರಕರಣವನ್ನು ಲಕ್ಷ್ಮಣಪುರಿಗೆ ವರ್ಗಾಯಿಸಿದೆವು. ಈಗ ನಾವು ವಿಚಾರಣೆಗೆ ಭದ್ರತೆ ಇಲ್ಲದೆ ಲಕ್ಷ್ಮಣಪುರಿಗೆ ಹೋಗುತ್ತೇವೆ.

4. ಚಂದನ್ ಹತ್ಯೆ ಪ್ರಕರಣದಲ್ಲಿ 6ಕ್ಕೂ ಹೆಚ್ಚು ಸಾಕ್ಷಿಗಳಿದ್ದರು; ಆದರೆ ಈಗ ಕೆಲವರನ್ನು ಹೊರತುಪಡಿಸಿ ಉಳಿದವರು ಸಾಕ್ಷಿ ಹೇಳುವುದರಿಂದ ಹಿಂದೆ ಸರಿದಿದ್ದಾರೆ. ಈಗ ನನ್ನ ಸ್ವಂತ ಮಗ ಪ್ರತ್ಯಕ್ಷದರ್ಶಿಯಾಗಿದ್ದಾನೆ. ಹಾಗಾಗಿ ಅವನ ಸುರಕ್ಷತೆಯ ಬಗ್ಗೆ ನಮಗೆ ಚಿಂತೆ ಇದೆ.

5. ಚಂದನ್ ನಿಧನದ ನಂತರ ಹಲವು ಭರವಸೆಗಳನ್ನು ನೀಡಲಾಗಿತ್ತು. ‘ನನ್ನ ಮಗಳಿಗೆ ಸರಕಾರಿ ನೌಕರಿ ಕೊಡಿಸುತ್ತೇವೆ, ನಗರದಲ್ಲಿ ಒಂದು ವೃತ್ತಕ್ಕೆ ಚಂದನ್ ಹೆಸರಿಡುತ್ತೇವೆ’, ಎಂದು ಹೇಳಲಾಗಿತ್ತು. ನನ್ನ ಮಗಳು ಎಂ.ಎಸ್ಸಿ ಮಾಡಿದ್ದಾಳೆ. ಆಕೆಗೆ ಸ್ಥಳೀಯ ಕೆಲಸವನ್ನು ನೀಡಲಾಯಿತು, ಅದು 5 ತಿಂಗಳ ನಂತರ ಕೊನೆಗೊಳಿಸಲಾಯಿತು. ಹತ್ಯೆಯ ನಂತರ ಸರಕಾರ ನಮಗೆ 20 ಲಕ್ಷ ರೂಪಾಯಿಗಳ ಸಹಾಯ ಮಾಡಿತ್ತು. ಆ ಮೊತ್ತವನ್ನು ಈ ಪ್ರಕರಣದ ವಿಚಾರಣೆಗೆ ಮಾತ್ರ ಬಳಸಲಾಗುತ್ತಿದೆ.

6. ಈ ಪ್ರಕರಣವನ್ನು ಮುಗಿಸಲು ಒತ್ತಡ ಹೇರಲು ಕಳುಹಿಸುತ್ತಿರುವವರು ಹಿಂದೂಗಳಾಗಿದ್ದಾರೆ. ಅವರು ಎಲ್ಲಾ ರೀತಿಯ ಪ್ರಸ್ತಾಪನೆಗಳು ಮತ್ತು ಆಮಿಷಗಳೊಂದಿಗೆ ನನ್ನ ಬಳಿಗೆ ಬರುತ್ತಾರೆ. ನನ್ನ ಮಗ ಬದುಕಿಲ್ಲ. ನಾನೂ ಸಾಯಲು ಸಿದ್ಧನಾಗಿದ್ದೇನೆ; ಆದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಇದಕ್ಕಾಗಿ ನನ್ನ ಕೊನೆಯ ಉಸಿರು ಇರುವವರೆಗೂ ಹೋರಾಡುತ್ತೇನೆ ಎಂದು ಹೇಳಿದರು.

ಸಂಪಾದಕೀಯ ನಿಲುವು

7 ವರ್ಷಗಳ ನಂತರ ನ್ಯಾಯ ಸಿಗುವುದು ಒಂದು ರೀತಿಯ ಅನ್ಯಾಯವೇ ಆಗಿದೆ!