ಕೇಂದ್ರ ಸರಕಾರವು ಸೆಪ್ಟೆಂಬರ್ ೨೦೨೦ ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಿದ ಕೃಷಿ ಕಾನೂನುಗಳ ವಿರುದ್ಧ ದೆಹಲಿಯ ಗಡಿಯಲ್ಲಿ ರೈತರು ಆಂದೋಲನವನ್ನು ಆರಂಭಿಸಿದ್ದರು. ಇದನ್ನು ಬೆಂಬಲಿಸುವಾಗ ಆಂದೋಲನದ ದಿಶೆಯು ಹೇಗಿರಬೇಕು ಎಂಬ ಯೋಜನೆಯನ್ನು ರಚಿಸಲಾಗಿತ್ತು. ಇದೇ ನಂತರ ‘ಟೂಲ್ ಕಿಟ್’ ಎಂದು ಸ್ವೀಡನ್‌ನಲ್ಲಿ ಪರಿಸರವಾದಿ ಗ್ರೆಟಾ ಥನ್‌ಬರ್ನ್ರ ಮಾಧ್ಯಮದಿಂದ ಬಹಿರಂಗವಾಗಿತ್ತು. ಅದರಿಂದ ರೈತರ ಆಂದೋಲನದ ಹೆಸರಿನಲ್ಲಿ ಭಾರತವಿರೋಧಿ ಚಟುವಟಿಕೆಗಳನ್ನು ನಡೆಸುವ ಸಂಚು ಬಹಿರಂಗವಾಗಿತ್ತು. ಇದರಿಂದ ‘ಟೂಲ್ ಕಿಟ್’ ಎಂಬ ಹೆಸರು ದೇಶದಲ್ಲಿ ಪ್ರಸಿದ್ಧವಾಯಿತು. ಇದೇ ಮಾದರಿಯಲ್ಲಿ ಹಿಂದೂಗಳು ಸಹ ರಾಷ್ಟ್ರ ಮತ್ತು ಧರ್ಮ ಪ್ರೇಮಿಗಳು ಕೃತಿ ಮಾಡಲು ತಮ್ಮ ‘ಟೂಲ್ ಕಿಟ್’ಅನ್ನು ಸಿದ್ಧ ಮಾಡಬೇಕು. ಈ ರೀತಿಯ ಒಂದು ಪ್ರತಿನಿಧಿಕ ‘ಟೂಲ್ ಕಿಟ್’ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಅದನ್ನು ಇಲ್ಲಿ ನೀಡುತ್ತಿದ್ದೇವೆ.
೧. ತಮ್ಮನ್ನು ಹಿಂದುತ್ವದ ಕಾರ್ಯದಲ್ಲಿ ತೊಡಗಿಸಿಕೊಳ್ಳಿರಿ. ಅದಕ್ಕಾಗಿ ನಿಮ್ಮ ಪ್ರಯತ್ನವನ್ನು ಕೇವಲ ಮಾತೃಭಾಷೆ ಮತ್ತು ರಾಜ್ಯ ಇಲ್ಲಿಯವರೆಗಷ್ಟೇ ಸೀಮಿತವಾಗಿಡಬೇಡಿ. ಗಮನದಲ್ಲಿಡಿ, ಯಾವಾಗ ದೇಶವಿರೋಧಿ ಮತ್ತು ಹಿಂದೂ ಧರ್ಮವಿರೋಧಿ ಶಕ್ತಿಗಳು ನಿಮ್ಮ ಮೇಲೆ ದಾಳಿ ಮಾಡುವವೋ, ಆಗ ಆ ದಾಳಿ ‘ನೀವು ಹಿಂದೂ ಆಗಿರುವಿರಿ’, ಎಂದೇ ಆಗುವುದು. ನಿಮ್ಮ ಜಾತಿ ಅಥವಾ ಭಾಷೆ ಯಾವುದಿದೆ, ಎಂಬುದನ್ನು ಆ ಶಕ್ತಿಗಳು ನೋಡುವುದಿಲ್ಲ. ಕ್ರೈಸ್ತರಿಗೆ ಎಲ್ಲಕ್ಕಿಂತ ದೊಡ್ಡ ಭಯವೆಂದರೆ ಹಿಂದೂ ಐಕ್ಯತೆಯದ್ದಾಗಿದೆ; ಆದುದರಿಂದಲೇ ಅವರು ಭಾರತದ ಹಿಂದೂಗಳಲ್ಲಿ ಪ್ರಾಂತ, ಜಾತಿ ಮತ್ತು ಭಾಷೆ ಈ ಸ್ತರಗಳಲ್ಲಿ ಒಡಕನ್ನುಂಟು ಮಾಡುತ್ತಾರೆ. ಜಮ್ಮು, ಪಶ್ಚಿಮ ಉತ್ತರಪ್ರದೇಶ, ಬಂಗಾಲ ಅಥವಾ ಕೇರಳ, ಹಾಗೆಯೇ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿನ ಹಿಂದೂಗಳ ಮೇಲಾಗುವ ದೌರ್ಜನ್ಯಗಳು ಜಗತ್ತಿನ ಎಲ್ಲ ಹಿಂದೂಗಳ ಆತಂಕಕ್ಕೆ ಕಾರಣವಾಗಿವೆ. ಗಮನದಲ್ಲಿಡಿ, ಒಂದು ವೇಳೆ ಇಂದು ಧ್ವನಿ ಎತ್ತದಿದ್ದರೆ, ಒಂದು ದಿನ ಈ ಘಾತಕ ಶಕ್ತಿಗಳು ನಿಮ್ಮವರೆಗೆ ತಲುಪುವುದು ಮತ್ತು ನಂತರ ಧ್ವನಿ ಎತ್ತಲು ಯಾರು ಬಾಕಿ ಉಳಿಯುವುದೇ ಇಲ್ಲ
೨. ಸ್ಥಳೀಯ ಹಿಂದುತ್ವನಿಷ್ಠರ ಸಂಪರ್ಕದಲ್ಲಿರಿ. ಅವರು ನಿಮಗೆ ಆವಶ್ಯಕತೆ ಬಿದ್ದಲ್ಲಿ ಸಹಾಯವನ್ನು ಮಾಡುವರು ಮತ್ತು ನಿಮಗೆ ಪ್ರೇರಣೆಯನ್ನು ನೀಡುವರು.
೩. ಫ್ರಾನ್ಸ್ನ ರಾಷ್ಟ್ರಾಧ್ಯಕ್ಷ ಇಮ್ಯನ್ಯುಎಲ್ ಮ್ಯಕ್ರಾನ್ ಇವರು ಅಕ್ಟೋಬರ್ ೨೦೨೦ ರಲ್ಲಿ ನೀಡಿದ ಸಂದೇಶದಲ್ಲಿ ಬಹುದೊಡ್ಡ ಅರ್ಥ ಅಡಗಿತ್ತು. ‘ನಮಗೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಇಸ್ಲಾಮ್‌ಅನ್ನು ಮಣಿಸುವ ಆವಶ್ಯಕತೆ ಇದೆ. ಇಸ್ಲಾಮ್ ಕೇವಲ ಈ ದೇಶದಲ್ಲಿಯೇ ಅಲ್ಲ, ಜಗತ್ತಿನಲ್ಲಿ ಕಠಿಣ ಪರಿಸ್ಥಿತಿಯನ್ನು ನಿರ್ಮಿಸಿದೆ’, ಎಂದು ಅವರು ಹೇಳಿದ್ದರು.
೪. ನಿಮ್ಮ ಇತಿಹಾಸ ಮತ್ತು ಧರ್ಮಗ್ರಂಥಗಳನ್ನು ಓದಿರಿ. ಹಿಂದೂ ಧರ್ಮದ ಮೇಲಾಗುವ ಸುಳ್ಳು ಟೀಕೆಗೆ ಬಹಳ ಚಾತುರ್ಯದಿಂದ ಮತ್ತು ದೃಢತೆಯಿಂದ ಪ್ರತ್ಯುತ್ತರ ನೀಡಿರಿ. ಎಲ್ಲ ವಾದವಿವಾದ ಮತ್ತು ಚರ್ಚೆಗಳಲ್ಲಿ ಪಾಲ್ಗೊಳ್ಳಿ. ಸನಾತನ ಧರ್ಮದ ಮೂಲ ತತ್ತ್ವಗಳನ್ನು ತಿಳಿದುಕೊಳ್ಳಿ.
೫. ಹಿಂದೂಗಳ ಎಲ್ಲ ಹಬ್ಬ ಮತ್ತು ಉತ್ಸವಗಳನ್ನು ಉತ್ಸಾಹದಿಂದ ಆಚರಿಸಿ. ಯಾರಾದರೂ ಹಿಂದೂ ಎಂದು ನಿಮ್ಮನ್ನು ತಿರಸ್ಕರಿಸುತ್ತಿದ್ದರೆ ಅವರನ್ನು ದುರ್ಲಕ್ಷಿಸಿ. ‘ನಾನು ಹಿಂದೂ ಇದ್ದೇನೆ’ ಎಂದು ಸ್ವಾಭಿಮಾನದಿಂದ ಹೇಳಿರಿ. ಭಾರತೀಯ ಉಡುಪನ್ನು ಧರಿಸುವುದು, ಹಣೆಯ ಮೇಲೆ ತಿಲಕ ಅಥವಾ ಕುಂಕುಮವನ್ನು ಹಚ್ಚಿಕೊಳ್ಳುವುದು, ಕೈಗಳಲ್ಲಿ ಬಳೆಗಳನ್ನು ಅಥವಾ ಸಾಂಸ್ಕೃತಿಕ ಆಭರಣಗಳನ್ನು ಧರಿಸುವುದು, ಇದು ನಿಮ್ಮ ಧರ್ಮದ ಬಗ್ಗೆ ಗೌರವ ತೋರಿಸುವುದಾಗಿದೆ. ಹೆಚ್ಚು ಬಚಾವಾತ್ಮಕವಾಗಿರಬೇಡಿ, ದೃಢತೆಯಿಂದ ನಡೆದುಕೊಳ್ಳಿ.
೬. ನಿಮ್ಮನ್ನು ಬದಲಾಯಿಸಿಕೊಳ್ಳಬೇಡಿ. ಗೌರವದಿಂದ ಬಾಳಿರಿ ದಯೆಯಿಂದಿರಿ. ಯಾವುದೇ ಒಬ್ಬ ವ್ಯಕ್ತಿ, ಯಾವ ಧರ್ಮದವನಾಗಿದ್ದಾನೆ, ಯಾವ ಸಂಪ್ರದಾಯವನ್ನು ಪಾಲಿಸುತ್ತಾನೆಂಬ ಬಗ್ಗೆ ಪರೀಕ್ಷಿಸುವುದು ಬೇಡ. ಸಂಕ್ಷಿಪ್ತದಲ್ಲಿ ಒಳ್ಳೆಯ ಹಿಂದೂ ಆಗಿ; ಆದರೆ ಯಾವಾಗ ಹಿಂದೂ ಎಂದು ಪರಿಚಯವನ್ನು ನೀಡಬೇಕಾದಲ್ಲಿ, ಅಭಿಮಾನದಿಂದ ತಲೆ ಎತ್ತಿ ನಿಲ್ಲಿರಿ. ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಮಹಾರಾಣಾ ಪ್ರತಾಪ ಇತ್ಯಾದಿ ರಾಷ್ಟ್ರಪುರುಷರ ಚರಿತ್ರೆ ಓದಿ.
೭. ಚುನಾವಣೆಯಲ್ಲಿ ನಿಮ್ಮ ಮತವನ್ನು ಜಾಣತನದಿಂದ ಬಳಸಿ. ಯಾರು ಹತನಾದ ಭಯೋತ್ಪಾದಕರ ಮನೆಗೆ ಹೋಗುವರೋ ಅಥವಾ ಯಾರು ಹುತಾತ್ಮರಾದ ಸೈನಿಕರ ಮತ್ತು ಪೊಲೀಸರ ಮನೆಗಳಿಗೆ ಭೇಟಿ ನೀಡುತ್ತಾರೆಯೋ, ಅವರಲ್ಲಿನ ವ್ಯತ್ಯಾಸವನ್ನು ಅರಿತುಕೊಳ್ಳಿ. ಮಹತ್ವದ್ದೆಂದರೆ ಯಾವ ಪಕ್ಷಗಳು ಪುಕ್ಕಟೆಯಾಗಿ ಬಹುಮಾನವನ್ನು ಹಂಚುತ್ತವೆಯೋ, ಅವುಗಳಿಗೆ ಮತವನ್ನು ನೀಡಬೇಡಿ. ಇದರಿಂದಲೇ ದೆಹಲಿ ರಾಜ್ಯದ ಜನರು ಮೋಸ ಹೋದರು. ನಿಮ್ಮ ಸ್ಥಿತಿ ಹಾಗಾಗಲು ಬೀಡಬೇಡಿ.
ಹಿಂದೂಗಳು ಎಲ್ಲ ಸ್ತರಗಳಲ್ಲಿನ ರಾಜಕಾರಣದಲ್ಲಿ ಪಾಲ್ಗೊಳ್ಳಬೇಕು. ಮೇಲಿನ ಬದಲಾವಣೆಗಳನ್ನು ತರಲು ಸಹಾಯ ಮಾಡುವ ಜನರನ್ನು ಆಯ್ಕೆ ಮಾಡಿ. ೧೦೦ ಕೋಟಿ ಹಿಂದೂಗಳ ಒಂದು ದೊಡ್ಡ ಮತಪೆಟ್ಟಿಗೆ ಇದೆ. ಅದನ್ನು ಬಳಸುವುದು ನಮ್ಮಂತಹ ಹೊರಗಿನ ಜನರ ಕೆಲಸವಲ್ಲ; ಆದರೆ ಯಾವಾಗ ನಮ್ಮ ಅಸ್ತಿತ್ವವೇ ಸಂಕಟದಲ್ಲಿ ಸಿಲುಕುತ್ತದೋ ಆಗ ನಮಗೆ ಬೇರೆ ಉಪಾಯವಿಲ್ಲ.
೮. ಹಿಂದೂ ಧರ್ಮದ ಅವಮಾನ ಮಾಡುವ ಚಲನಚಿತ್ರ, ಧಾರಾವಾಹಿಗಳು, ಬ್ಲಾಗರ್‌ಗಳು, ಲೇಖಕರು, ಕಲಾವಿದರು, ರಾಜಕಾರಣಿಗಳು, ಪಠ್ಯಪುಸ್ತಕಗಳು, ಶಾಲೆ, ಜಾಹೀರಾತುಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಖಂಡಿಸಿ.
(ಆಧಾರ : ಸಾಮಾಜಿಕ ಜಾಲತಾಣದ ಲೇಖನ)