ರಾಜ್ಯದಲ್ಲಿ ಗೋರಕ್ಷಣೆ ?

ಕರ್ನಾಟಕ ರಾಜ್ಯದಲ್ಲಿ ಕಳೆದ ಕೆಲವು ದಿನಗಳಲ್ಲಿ ಗೋಹತ್ಯೆಯ ಪ್ರಕರಣಗಳು ಹೆಚ್ಚಾಗಿವೆ. ಅಲ್ಲಿ ಗೋವಂಶಗಳ ಕಳ್ಳಸಾಗಾಟ, ದೊಡ್ಡ ಪ್ರಮಾಣದಲ್ಲಿ ಗೋಮಾಂಸದ ಮಾರಾಟ ಇತ್ಯಾದಿಗಳು ಸಾರಾಸಗಟಾಗಿ ನಡೆಯುತ್ತಿದೆ. ಆದ್ದರಿಂದ ರಾಜ್ಯದ ಹಿಂದೂಗಳಲ್ಲಿ ಆಕ್ರೋಶವಿದೆÉ. ಹಿಂದೂಗಳು ವಿವಿಧ ಮಾಧ್ಯಮಗಳಿಂದ ಗೋಕಳ್ಳರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಧ್ವನಿ ಎತ್ತುತ್ತಿದ್ದಾರೆ. ‘ಬಟೇಂಗೆ ತೊ ಕಟೇಂಗೆ’ (ಸಂಘಟಿತರಾಗದಿದ್ದರೆ ಕತ್ತರಿಸಲ್ಪಡುವೆವು), ಎಂಬ ಘೋಷಣೆಯಿಂದ ಮಹಾರಾಷ್ಟ್ರದ ರಾಜಕಾರಣದಲ್ಲಿ ಹೇಗೆ ಪರಿಣಾಮವಾಯಿತು ಹಾಗೂ ಕಾಂಗ್ರೆಸ್‌ನಂತಹ ಹಿಂದೂದ್ವೇಷಿ ಪಕ್ಷವನ್ನು ಹಿಂದೂಗಳು ಹೇಗೆ ಮಣ್ಣುಮುಕ್ಕಿಸಿದರು, ಎಂಬುದನ್ನು ಎಲ್ಲ ಜಾತ್ಯತೀತ ಪಕ್ಷಗಳು ಅನುಭವಿಸಿವೆ. ಆದ್ದರಿಂದ ‘ಹಿಂದೂ ಗಳ ರೋಷ ಎದುರು ಹಾಕಿಕೊಳ್ಳುವುದು ಬೇಡ’, ಎಂಬುದನ್ನು ಗಮನಿಸಿ ರಾಜ್ಯದ ಕಾಂಗ್ರೆಸ್‌ ಸರಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಮಂಕಾಳ ವೈದ್ಯ ಇವರು ‘ಗೋ ಕಳ್ಳತನ ಮಾಡುವವರಿಗೆ ನಡುರಸ್ತೆಯಲ್ಲಿ ನಿಲ್ಲಿಸಿ ಗುಂಡು ಹಾರಿಸಬೇಕೆಂದು ಆದೇಶಿಸುವೆನು’, ಎಂದು ಹೇಳಿ ದ್ದಾರೆ. ವೈದ್ಯ ಇವರು ಚಾತುರ್ಯದಿಂದ ಹೇಳಿಕೆ ನೀಡಿದ್ದಾರೆ, ಎಂಬುದನ್ನು ಗಮನಿಸಬೇಕು. ‘ಒಂದೆಡೆ ಹಿಂದೂಗಳಿಗೆ ನೋಯಿಸಬಾರದು ಹಾಗೂ ಮುಸಲ್ಮಾನರ ಓಲೈಕೆಯನ್ನೂ ನಿಲ್ಲಿಸಲಿಕ್ಕಿಲ್ಲ’, ಹೀಗೆ ವಿಚಾರ ಮಾಡಿ ಕಾಂಗ್ರೆಸ್‌ ಇಂತಹ ಹೇಳಿಕೆ ನೀಡುತ್ತಿದೆ. ಹಾಗೆ ನೋಡಿದರೆ ಈ ವೈದ್ಯ ಸಚಿವರಾಗಿದ್ದಾರೆ. ಈ ಹುದ್ದೆಯಲ್ಲಿರುವ ವ್ಯಕ್ತಿಗೆ ಇಂತಹ ಯಾವುದೇ ಅಧಿಕಾರವಿರುವುದಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಗೃಹಸಚಿವ ಅಥವಾ ಮುಖ್ಯಮಂತ್ರಿ ಇವರು ಮುಂದಾಳತ್ವ ವಹಿಸಿ ಅದಕ್ಕೆ ಸಂಬಂಧಿಸಿದ ಆದೇಶ ಅಥವಾ ಸಂಬಂಧಪಟ್ಟವರಿಗೆ ಸೂಚನೆ ನೀಡಲಿಕ್ಕಿರುತ್ತದೆ. ವೈದ್ಯರಲ್ಲಿ ಇಂತಹ ಯಾವ ಅಧಿಕಾರವಿದೆ ? ಒಂದು ವೇಳೆ ನಾಳೆ ಅವರು ಆದೇಶ ನೀಡಿದರೆ, ಅದು ರಾಜ್ಯದಲ್ಲಿ ಅನ್ವಯವಾಗಬಹುದೇ ?

ಅಥವಾ ಅವರ ಚುನಾವಣಾಕ್ಷೇತ್ರದ ಪೊಲೀಸರಾದರೂ ಈ ಆದೇಶವನ್ನು ಪಾಲಿಸುವರೆ ? ಅದಕ್ಕೂ ಮುಂದೆ ಹೋಗಿ ಗಮನಿಸಬೇಕಾದ ಅಂಶವೆಂದರೆ, ಜಿ. ಪರಮೇಶ್ವರ ಇವರು ಕರ್ನಾಟಕದ ಗೃಹಸಚಿವ ಆಗಿದ್ದಾರೆ. ಗಣೇಶಚತುರ್ಥಿಯ ಅವಧಿಯಲ್ಲಿ ಶ್ರೀ ಗಣೇಶಮೂರ್ತಿಯ ಮೆರವಣಿಗೆಯ ಮೇಲೆ ಮುಸಲ್ಮಾನರು ಪೆಟ್ರೋಲ್‌ ಬಾಂಬ್‌ ಎಸೆದು ಗಲಭೆ ಎಬ್ಬಿಸಿದ್ದರು. ಆ ಸಂದರ್ಭದಲ್ಲಿ ಪರಮೇಶ್ವರ ಇವರು ‘ಮೆರವಣಿಗೆಯ ಮೇಲೆ ಕಲ್ಲು ತೂರಾಟವೆಂದರೆ, ಇದು ಆಕಸ್ಮಿಕ ಆಗಿರಬಹುದು’, ಎಂದು ಹೇಳಿದ್ದರು. ಆದ್ದರಿಂದ ವೈದ್ಯ ಇವರ ಹೇಳಿಕೆಯನ್ನು ಹಿಂದೂಗಳು ಗಂಭೀರವಾಗಿ ಪರಿಗಣಿಸಬಾರದು. ರಾಜ್ಯದ ಹಿಂದೂಗಳು ಗಮನಿಸಬೇಕಾದ ವಿಷಯವೆಂದರೆ, ರಾಜ್ಯದಲ್ಲಿ ಧರ್ಮರಕ್ಷಣೆಗಾಗಿ ಅವರು ದೀರ್ಘಕಾಲದ ಹೋರಾಟ ನಡೆಸ ಬೇಕಾಗುತ್ತದೆ. ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಇವಳು ಲವ್‌ ಜಿಹಾದ್‌ನಲ್ಲಿ ಸಿಲುಕಿ ಅದರಲ್ಲಿ ಅವಳು ಸಾವನ್ನಪ್ಪಿದಳು. ಅವಳ ತಂದೆ ನಿರಂಜನ ಹಿರೇಮಠ ಇವರು ಕಾಂಗ್ರೆಸ್ಸಿನ ಮುಖಂಡರಾಗಿದ್ದರು. ಅವರು ತಾವಾಗಿ ‘ತನ್ನ ಮಗಳು ಲವ್‌ ಜಿಹಾದ್‌ಗೆ ಬಲಿಯಾದಳು’, ಎಂದು ಹೇಳಿದ್ದರು; ಕಾಂಗ್ರೆಸ್‌ ಸರಕಾರವು ಹಿರೇಮಠ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಲು ಸಾಧ್ಯವಿಲ್ಲ. ಯಾವ ಪಕ್ಷ ಮುಸಲ್ಮಾನರ ಓಲೈಕೆಗಾಗಿ ಸ್ವಪಕ್ಷದ ಮುಖಂಡರನ್ನೆ ಕಡೆಗಣಿಸುತ್ತದೊ, ಅದು ರಾಜ್ಯದಲ್ಲಿನ ಸಾಮಾನ್ಯ ಹಿಂದೂಗಳಿಗೆ ಹೇಗೆ ನ್ಯಾಯ ಕೊಡಿಸಬಹುದು ?

ಆದ್ದರಿಂದ ರಹಿಂದೂಗಳು ಜನಾಂದೋಲನ ಕೈಗೊಳ್ಳದ ಹೊರತು ಬೇರೆ ಪರ್ಯಾಯವಿಲ್ಲ !