
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಫ್ರಾನ್ಸ್ ಹಾಗೂ ಅಮೇರಿಕಾದ ಪ್ರವಾಸವನ್ನು ಇತ್ತೀಚೆಗಷ್ಟೆ ಮುಗಿಸಿಕೊಂಡು ಅವರು ಭಾರತಕ್ಕೆ ಹಿಂತಿರುಗಿದರು. ಭಾರತ ಮಹಾಶಕ್ತಿಯಾಗುವ ದಿಕ್ಕಿನಲ್ಲಿ ಮುನ್ನುಗ್ಗುತ್ತಿರುವುದರಿಂದ ಮೋದಿಯವರ ವಿದೇಶ ಭೇಟಿ ಮತ್ತು ಅದರಿಂದ ಸಿಗುವ ಫಲಿತಾಂಶವು ಜಾಗತಿಕ ಸ್ತರದಲ್ಲಿ ಭವಿಷ್ಯದ ರಾಜಕೀಯ ದೂರದೃಷ್ಟಿ, ಅಂತಾರಾಷ್ಟ್ರೀಯ ಸಂಬಂಧ ಮತ್ತು ರಾಜಕೀಯ ಸಮೀಕರಣಗಳ ಸ್ವರೂಪದ ಮೇಲೆ ಪ್ರಭಾವ ಬೀರಲಿಕ್ಕಿದೆ. ಪ್ರಧಾನಮಂತ್ರಿಗಳು ಈ ಬಾರಿ ಅಮೇರಿಕಾಗೆ ಹೋದಾಗ ಅಮೇರಿಕಾ ತನ್ನದೆ ಹಿತ ಕಾಪಾಡಲು ಪ್ರಯತ್ನ ಮಾಡುತ್ತಿದ್ದು ಅದರಿಂದ ವೈಶ್ವಿಕ ಸಂಬಂಧ ಬುಡಮೇಲಾಗಲು ಆರಂಭವಾಗಿದೆ. ಅಮೇರಿಕಾದ ಬಹುಶಃ ಡೊನಾಲ್ಡ್ ಟ್ರಂಪ್ ಇವರ ಅತೀಮಹತ್ತ್ವಾಕಾಂಕ್ಷೆ ಇದಕ್ಕೆ ಕಾರಣವಾಗಿದ್ದು ‘ಆಕ್ರಮಣವು ಸ್ವಸಂರಕ್ಷಣೆಯ ಎಲ್ಲಕ್ಕಿಂತ ಒಳ್ಳೆಯ ನಡವಳಿಯಾಗಿರುತ್ತದೆ’, ಎನ್ನುವ ಗಾದೆಗನುಸಾರ ಅಮೇರಿಕಾ ತನ್ನ ಹೆಜ್ಜೆ ಇಡುತ್ತಿದೆ. ಕೆನಡಾವನ್ನು ಅಮೇರಿಕಾದೊಂದಿಗೆ ವಿಲೀನಗೊಳಿಸುವ ಬಗ್ಗೆ ಟ್ರಂಪ್ ಇವರ ಪುನರುಚ್ಚಾರವಿರಲಿ ಅಥವಾ ಗ್ರೀನ್‌ಲ್ಯಾಂಡನ್ನು ಖರೀದಿಸುವ ಮಾನಸಿಕತೆ, ‘ಯು.ಎಸ್.ಎ.ಐ.ಡಿ.’ ಮಾಡುತ್ತಿರುವ ‘ನಿರರ್ಥಕ ಖರ್ಚು’ ನಿಲ್ಲಿಸಿ ‘ಡೀಪ್ ಸ್ಟೇಟ್’ಗೆ ಅದರ ಸ್ಥಾನ ತೋರಿಸುವುದಾಗಿರಲಿ ಅಥವಾ ವ್ಯಾವಹಾರಿಕ ಪಾಲುಗಾರಿಕೆ ಈ ಎಲ್ಲ ಸ್ತರದಲ್ಲಿ ಬದಲಾವಣೆ ಯಾಗುತ್ತಿದೆ. ‘ಯಾವ ದೇಶ ಅಮೇರಿಕಾದೊಂದಿಗೆ ವ್ಯಾಪಾರ ಮಾಡುವಾಗ ಹೇಗೆ ತೆರಿಗೆಯನ್ನು ಹೇರುತ್ತದೋ, ಹಾಗೆಯೇ ಅಷ್ಟೇ ಪ್ರಮಾಣದಲ್ಲಿ ಅಮೇರಿಕಾ ಆ ದೇಶದ ಮೇಲೆ ತೆರಿಗೆ (ರೆಸಿಪ್ರೋಕಲ್ ಟ್ಯರೀಫ್) ಹೇರುವುದು’, ಎಂದು ಟ್ರಂಪ್ ಇವರು ಸ್ಪಷ್ಟವಾಗಿ ಜಗತ್ತಿಗೆ ಹೇಳಿದ್ದಾರೆ. ಅದನ್ನು ಮೋದಿ-ಟ್ರಂಪ್ ಇವರ ಭೇಟಿಯ ಸಂದರ್ಭದಲ್ಲಿ ಎಲ್ಲರೂ ಅನುಭವಿಸಿದರು. ಮೋದಿಯವರು ಟ್ರಂಪ್ ಇವರನ್ನು ಭೇಟಿಯಾಗಲು ‘ಓವಲ್ ಆಫೀಸ್’ಗೆ ಬರುವ ಸ್ವಲ್ಪ ಮೊದಲು ಟ್ರಂಪ್ ಇವರು ಇದಕ್ಕೆ ಸಂಬಂಧಿಸಿದ ಜಾಗತಿಕ ಒಪ್ಪಂದಕ್ಕೆ ಸಹಿ ಮಾಡಿದ್ದರು. ಇದರಿಂದ ಭಾರತದ ಮೇಲೆ ಒತ್ತಡ ಹೇರುವ ಪ್ರಯತ್ನವನ್ನೇ ಅಮೇರಿಕಾ ಮಾಡಿತು. ಮೋದಿಯವರ ದೂರದೃಷ್ಟಿಯ ಮಾದರಿಯನ್ನು ಟ್ರಂಪ್ ಮತ್ತು ಅಮೇರಿಕಾ ಚೆನ್ನಾಗಿ ತಿಳಿದಿರುವುದರಿಂದ ಟ್ರಂಪ್ ಹೀಗೆ ಮಾಡಿದರು ಎಂಬುದನ್ನು ಗಮನಿಸಬೇಕು. ವ್ಯಾಪಾರ ಒಪ್ಪಂದವನ್ನು ಸಮೋಪಚಾರದಿಂದ ಹಾಗೂ ಪರಸ್ಪರರ ಸಹಾಯದಿಂದ ನಿರ್ವಹಿಸಲು ಈ ಭೇಟಿಯಲ್ಲಿ ನಿರ್ಧರಿಸಲಾಯಿತು.
ಧೋರಣೆಯುಳ್ಳ ಭಾರತ !
೨೦೨೦ ರ ‘ದ ಇಂಡಿಯನ್ ವೆ : ಸ್ಟ್ರೆಟಜಿಸ್ ಫಾರ್ ಅನ್‌ಸರ್ಟನ್ ವರ್ಲ್ಡ್’ ಈ ಪುಸ್ತಕದಲ್ಲಿ ವಿದೇಶ ಸಚಿವ ಡಾ. ಎಸ್. ಜಯಶಂಕರ ಇವರು ಬರೆಯುತ್ತಾರೆ, ‘ಭಾರತಕ್ಕೆ ಏಕಕಾಲದಲ್ಲಿ ಅಮೇರಿಕಾದೊಂದಿಗೆ ಬಾಂಧವ್ಯ ನಿರ್ಮಾಣ ಮಾಡಲಿಕ್ಕಿದೆ, ಚೀನಾವನ್ನು ಹದ್ದುಬಸ್ತಿನಲ್ಲಿಡಲಿಕ್ಕಿದೆ, ಯುರೋಪ್ ನಲ್ಲಿ ಹೊಸ ಅವಕಾಶವನ್ನು ಕಂಡುಕೊಳ್ಳಲಿಕ್ಕಿದೆ, ರಷ್ಯಾವನ್ನು ಸಮಾಧಾನಪಡಿಸಲಿಕ್ಕಿದೆ, ಜಪಾನ್‌ನೊಂದಿಗೆ ಹೊಸ ಸಂಬಂಧವನ್ನು ಬೆಳೆಸಲಿಕ್ಕಿದೆ, ನೆರೆಯ ರಾಷ್ಟ್ರಗಳೊಂದಿಗೆ ಸಂಬಂಧವನ್ನಿಟ್ಟು ಕೊಂಡು ಸಮೀಪವಿರುವ ಇತರ ದೇಶಗಳೊಂದಿಗೆ ಕೈಜೋಡಿಸುತ್ತಾ, ಭಾರತಕ್ಕೆ ಸಹಾಯ ಮಾಡಬಹುದಾದ ದೇಶಗಳೊಂದಿಗೆ ಆತ್ಮೀಯತೆ ಬೆಳೆಸಲಿಕ್ಕಿದೆ. ಈ ನಿಲುವನ್ನು ಕೊರೋನಾದ ಕಾಲ, ರಷ್ಯಾ-ಯುಕ್ರೇನ್ ಯುದ್ಧ, ಅನಂತರ ಇಸ್ರೈಲ್-ಹಮಾಸ್ ಯುದ್ಧ ಈ ಅವಧಿಯಲ್ಲಿ ಜಗತ್ತು ಅನುಭವಿಸಿದ್ದು ಮಾತ್ರವಲ್ಲ, ಭಾರತದ ವಿದೇಶಾಂಗ ನಿಲುವನ್ನು ಪ್ರಶಂಸೆ ಮಾಡಿತ್ತು. ಸಪ್ಟೆಂಬರ ೨೦೨೩ ರಲ್ಲಿ ದೆಹಲಿಯಲ್ಲಿ ನಡೆದಿರುವ ‘ಜಿ-೨೦’ಯ ಶಿಖರ ಪರಿಷತ್ತಿನಲ್ಲಿ ಭಾರತದ ನ್ಯಾಯಸಮ್ಮತ ಆಗ್ರಹದಿಂದಾಗಿ ‘ಗ್ಲೋಬಲ್ ಸೌತ್’ನಲ್ಲಿನ ‘ಆಫ್ರಿಕನ್ ಯೂನಿಯನ್’ಗೆ ‘ಜಿ-೨೦’ಯ ಸದಸ್ಯತ್ವ ನೀಡಬೇಕಾಯಿತು. ಭಾರತದ ಎಲ್ಲರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿ ಎಷ್ಟು ಚಾಣಾಕ್ಷತೆ ಮೆರೆಯಿತೆಂದರೆ, ಜಾಗತಿಕ ನಾಯಕರನ್ನು ಹಾಗೂ ಪಶ್ಚಿಮದ ಪ್ರಸಾರಮಾಧ್ಯಮಗಳನ್ನೂ ಆಶ್ಚರ್ಯಪಡುವಂತೆ ಮಾಡಿತು. ಪ್ರತಿಯೊಂದು ದೇಶದೊಂದಿಗಿರುವ ಭಾರತದ ಪರಸ್ಪರ ಸಂಬಂಧದ ಮೇಲೆ ಇತರ ದೇಶಗಳಿಗೆ ಆ ದೇಶದೊಂದಿಗಿರುವ ಸಕಾರಾತ್ಮಕ ಅಥವಾ ನಕಾರಾತ್ಮಕ ಸಂಬಂಧದಿಂದ ಪ್ರಭಾವ ಬೀಳಲು ಬಿಡಲಿಲ್ಲ. ಈ ಎಲ್ಲ ಅವಧಿಯಲ್ಲಿ ಟ್ರಂಪ್ ಇವರು ಅಧಿಕಾರದಿಂದ ದೂರವಿದ್ದರೂ, ಅವರು ಮತ್ತು ಅವರ ‘ಥಿಂಕ್ ಟ್ಯಾಂಕ್’ಅನ್ನು ಎಲ್ಲರೂ ನೋಡುತ್ತಿದ್ದರು. ಆದ್ದರಿಂದ ಅವರು ಅಧಿಕಾರವನ್ನು ಕೈಗೆತ್ತಿಕೊಂಡ ತಕ್ಷಣ ಅಮೇರಿಕಾದ ನಿಲುವನ್ನು ಬದಲಾಯಿಸಲು ಆರಂಭಿಸಿದ ವೇಗದ ರೀತಿಯು ಜಗತ್ತಿನ ಕಣ್ಣು ಕುಕ್ಕುವಂತಿದೆ.
ಸ್ಥಿರವಾಗಿರುವ ಭಾರತದ ಸ್ಥಾನ !
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮೇರಿಕಾದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರಿಗೆ ಜಾಗತಿಕ ರಾಜಕೀಯ ಕ್ಷೇತ್ರದ ಯಾವ ಹೊಸ್ತಿಲಲ್ಲಿ ಭಾರತ ನಿಂತಿದೆಯೊ, ಆ ಸ್ಥಾನವನ್ನು ಸದ್ಯ ಬೇರೆ ಯಾವುದೇ ದೇಶ ಆಕ್ರಮಿಸಲು ಸಾಧ್ಯವಿಲ್ಲ ಎಂಬುದು ಚೆನ್ನಾಗಿ ತಿಳಿದಿದೆ. ಅಮೇರಿಕಾಕ್ಕೆ ತನ್ನ ಅತೀಮಹತ್ತ್ವಾಕಾಂಕ್ಷೆಯನ್ನು ಪೂರ್ಣಗೊಳಿಸಲು ಇಂದು ಭಾರತದ ಹೊರತು ಬೇರೆ ಪರ್ಯಾಯವಿಲ್ಲ. ಚೀನಾ ಮತ್ತು ರಷ್ಯಾ ಸದ್ಯ ಅಪ್ರಯತ್ನಿಸುತ್ತಿರುವ ಮೇರಿಕಾದ ೨ ಪ್ರಮುಖ ಶತ್ರುಗಳಾಗಿವೆ. ಅವು ಗಳಿಗೆ ಭಯಹುಟ್ಟಿಸಲು ಅಮೇರಿಕಾಗೆ ‘ಕೆಲವೇ ವರ್ಷಗಳಲ್ಲಿ ಮೂರನೇ ಅತೀ ದೊಡ್ಡ ಅರ್ಥವ್ಯವಸ್ಥೆ ಆಗಲು ಪ್ರಂತ್ನಿಸುತ್ತಿರುವ ಭಾರತ’ವನ್ನು ತನ್ನ ಜೊತೆಗಿಟ್ಟುಕೊಳ್ಳುವುದು ಆವಶ್ಯಕವೆನಿಸುತ್ತದೆ. ಚಾಣಾಕ್ಷತನವನ್ನು ತೋರಿಸುವುದರಲ್ಲಿ ಭಾರತ ಕಳೆದ ಕೆಲವು ವರ್ಷಗಳಿಂದ ಸತತ ವಿಜಯ ಪತಾಕೆ ಹಾರಿಸುತ್ತಾ ಬಂದಿದ್ದರೂ, ಜಗತ್ತಿನ ಎಲ್ಲಕ್ಕಿಂತ ಶಕ್ತಿಶಾಲಿ ಮನುಷ್ಯನ ಅತೀ ಮಹತ್ವಾಕಾಂಕ್ಷೆಯಿಂದ ಮಾತ್ರ ಮುಂಬರುವ ೪ ವರ್ಷಗಳಲ್ಲಿ ಭಾರತದ ಚಾಣಾಕ್ಷತನದ ಸತ್ತ್ವಪರೀಕ್ಷೆಯಾಗಲಿಕ್ಕಿದೆ.
ಅಮೇರಿಕಾದ ನಡವಳಿಕೆ !
‘ಮಲ್ಟಿಪೋಲಾರ್ ವರ್ಲ್ಡ್’ನಲ್ಲಿ, ಅಂದರೆ ಜಾಗತಿಕ ಶಕ್ತಿ ಒಂದೆರಡು ದೇಶಗಳಲ್ಲಿರದೇ ಪೃಥ್ವಿಯಲ್ಲಿ ಅನೇಕ ಸ್ಥಳಗಳಲ್ಲಿ ಅದು ವಿಭಜಿಸಲ್ಪಟ್ಟಿರುವಾಗ ಭಾರತವು ಎಲ್ಲ ದೇಶಗಳೊಂದಿಗೆ ಸ್ನೇಹ ಸಂಬಂಧವನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದೆ. ಅದರಲ್ಲಿ ಮೋದಿಯವರ ಅಮೇರಿಕಾ ಪ್ರವಾಸದಲ್ಲಿ ಮೋದಿಯವರನ್ನು ‘ಯು ಆರ್ ಗ್ರೇಟ್’ ಅಥವಾ ‘ಚರ್ಚೆ ಮಾಡುವುದರಲ್ಲಿ ಮೋದಿ ನನಗಿಂತ ತುಂಬಾ ಚತುರ’ ಎಂದು ಪ್ರಶಂಸೆ ಮಾಡುವ ಟ್ರಂಪ್ ಇವರು ಭಾರತವನ್ನು ತನ್ನ ಗುಂಪಿಗೆ ಎಳೆಯಲು ಪ್ರಯತ್ನಿಸಿದರು. ಅಮೇರಿಕಾ ಭಾರತದ ಜೊತೆಗಿನ ವ್ಯಾಪಾರದಲ್ಲಿನ ಕೊರತೆಯನ್ನು ತುಂಬಿಸಿಕೊಳ್ಳಲು ಭಾರತಕ್ಕೆ ತೈಲ ಹಾಗೂ ಅನಿಲವನ್ನು ಮಾರಾಟ ಮಾಡುವ ಹೊಸ ಒಪ್ಪಂದವನ್ನು ಮಾಡಿಕೊಂಡಿತು. ಇದರಿಂದ ಅಮೇರಿಕಾ ಶೀಘ್ರದಲ್ಲಿಯೇ ಭಾರತದ ತೈಲ ಮತ್ತು ಅನಿಲ ಪೂರೈಕೆದಾರರಲ್ಲಿ ಮೊದಲ ಕ್ರಮಾಂಕವನ್ನು ಗಳಿಸಲಿಕ್ಕಿದೆ. ಸದ್ಯ ಈ ಸ್ಥಾನದಲ್ಲಿ ರಷ್ಯಾ ಇದೆ. ಇದರಿಂದ ಅಮೇರಿಕಾ ರಷ್ಯಾಗೆ ನೇರವಾಗಿ ಸವಾಲೊಡ್ಡಿದೆ. ವಿದೇಶ ಸಚಿವ ಜಯಶಂಕರ ಇವರ ‘ವೈ ಇಂಡಿಯಾ ಮೆಟರ್ಸ್’ ಈ ೨೦೨೪ ರಲ್ಲಿ ಬರೆದಿರುವ ಪುಸ್ತಕಕ್ಕನುಸಾರ ಈ ಘಟನೆ ಭಾರತಕ್ಕೆ ರಷ್ಯಾದೊಂದಿಗಿರುವ ಸಂಬಂಧವನ್ನು ಪುನಃರ್ಸಂತುಲನಗೊಳಿಸಲು ಉತ್ತೇಜಿಸುವುದು. ಕೆಲವೇ ದಿನಗಳಲ್ಲಿ ಭಾರತದಿಂದ ಈ ವಿಷಯದಲ್ಲಿ ಚಟುವಟಿಕೆ ಆರಂಭವಾಗಬಹುದು, ಎಂಬುದು ಖಚಿತ.
ಮೋದಿಯವರ ಅಮೇರಿಕಾ ಪ್ರವಾಸ ಇನ್ನೊಂದು ವಿಷಯದಲ್ಲಿಯೂ ಸದ್ದು ಮಾಡಿತು. ಪ್ರಧಾನಮಂತ್ರಿ ಮೋದಿ ಈ ಬಾರಿ ಹೇಳಿದರು, ”೨೦೪೭ ರ ವರೆಗೆ ‘ವಿಕಸಿತ ಭಾರತ’ವನ್ನಾಗಿ ಮಾಡುವ ದಿಕ್ಕಿನಲ್ಲಿ ಭಾರತ ಪ್ರಯತ್ನಿಸುತ್ತಿದ್ದು ಟ್ರಂಪ್ ಇವರ ‘ಮೇಕ್ ಅಮೇರಿಕಾ ಗ್ರೇಟ್ ಎಗೈನ್’ (ಮಾಗಾ) ಗನುಸಾರ ಭಾರತ ‘ಮಿಗಾ’, ಅಂದರೆ ‘ಮೇಕ್ ಇಂಡಿಯಾ ಗ್ರೇಟ್ ಎಗೈನ್’ನ ದಿಕ್ಕಿನಲ್ಲಿ ಪ್ರಯಾಣ ಬೆಳೆಸುತ್ತಿದೆ. ಈ ಎರಡೂ ದೇಶಗಳು ‘ಮೆಗಾ’ (ವಿಶಾಲ) ಪಾಲುದಾರಿಕೆ ಮಾಡಿ ಪರಸ್ಪರ ಸಮೃದ್ಧಿಯ ಧ್ಯೇಯವನ್ನು ತಲಪಲು ಸಾಧ್ಯವಿದೆ !” ಇಂತಹ ಹೇಳಿಕೆ ನೀಡುವುದೆಂದರೆ ಇದು ಸಾಮಾನ್ಯ ವಿಷಯವಲ್ಲ. ಭಾರತ ಅದನ್ನು ಸಾಧಿಸುತ್ತದೆ ಎಂಬುದು ಕಳೆದ ಕೆಲವು ವರ್ಷಗಳಲ್ಲಿ ಅದು ಸಾಧ್ಯಗೊಳಿಸಿದ ಪ್ರಗತಿಯಿಂದ ಅರಿವಾಗುತ್ತದೆ. ಭಾರತ ಅದರ ನಿಲುವನ್ನು ಸ್ಪಷ್ಟಗೊಳಿಸಿ ನಿಜವಾಗಿಯೂ ಅಮೇರಿಕಾವನ್ನು ತನ್ನ ಗುಂಪಿನಲ್ಲಿ ಸೇರಿಸಿಕೊಂಡಿದೆಯೆ, ಎಂಬ ವಿಚಾರ ಮಾಡಬೇಕಾಗಿದೆ. ೨೦೩೦ ರ ವರೆಗೆ ಪರಸ್ಪರ ವ್ಯಾಪಾರ ಎರಡುಪಟ್ಟು ಮಾಡಿ ಅದನ್ನು ೫೦೦ ಅಬ್ಜ ಡಾಲರ್ (೪೩ ಲಕ್ಷ ಕೋಟಿ ರೂಪಾಯಿ) ಮಾಡುವ ಉಭಯ ದೇಶಗಳಲ್ಲಿನ ಒಪ್ಪಂದವು ಮೋದಿಯವರೇ ಜಗತ್ತಿನ ‘ಟ್ರಂಪ್’ ಕಾರ್ಡ್ ಆಗಿದ್ದಾರೆ, ಎಂಬುದನ್ನು ತೋರಿಸುತ್ತಿದೆ !
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !
ಟೆಕ್ಸಾಸ್ (ಅಮೆರಿಕ) ನಲ್ಲಿ ಭಾರತದ ರಾಷ್ಟ್ರಧ್ವಜ ಹರಿದ ಅಮೆರಿಕನ್ ಯುವಕ
ದೇಶದ ಅಭಿವೃದ್ಧಿಗೆ ಮೌಲ್ಯಾಧಾರಿತ ಪತ್ರಿಕೋದ್ಯಮ ಅತ್ಯಂತ ಪ್ರಮುಖವಾದುದು! – ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್