ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

ವಿಜ್ಞಾನವಾದಿ ಮನುಷ್ಯನಿಗೆ ಸಂತರ ಸಂತತ್ವವನ್ನು ಮನವರಿಕೆ ಮಾಡಿಕೊಡಲು ವೈಜ್ಞಾನಿಕ ಉಪಕರಣಗಳೇ ಸಹಾಯ ಮಾಡುತ್ತವೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಮನುಷ್ಯನ ಶ್ರದ್ಧೆ ಕಡಿಮೆಯಾಗಿ ಅವನು ಬುದ್ಧಿವಾದಿಯಾಗುತ್ತಿದ್ದಾನೆ. ಆದುದರಿಂದ ಸೂಕ್ಷ್ಮದ ವಿಷಯಗಳನ್ನು ತಿಳಿದುಕೊಳ್ಳುವ ಅವನ ಕ್ಷಮತೆಯು ಕಡಿಮೆಯಾಗಿದೆ. ಅಲ್ಲದೇ ಅವನಿಗೆ ಮನಸ್ಸು ಮತ್ತು ಬುದ್ಧಿಗೆ ಮೀರಿದ ಅಧ್ಯಾತ್ಮದ ಮೇಲಿನ ವಿಶ್ವಾಸವೂ ಉಳಿದಿಲ್ಲ. ಅವನು ಕೇವಲ ವಿಜ್ಞಾನದ ಮೇಲೆ ವಿಶ್ವಾಸವನ್ನಿಡುತ್ತಾನೆ. ಆದ್ದರಿಂದ ಒಬ್ಬಾತನು ಸಾಧನೆ ಮಾಡಿ ‘ಸಂತ’ ಪದವಿಗೆ ತಲುಪಿದರೂ ಇತರರು ‘ಅವರು ‘ಸಂತರು’ ಎಂದು ಹೇಳಲು ಅದರ ಮಾನದಂಡವೇನು?’, ಎಂದು ಕೇಳುತ್ತಾರೆ. ಆದ್ದರಿಂದ, ‘ಅವರು ಸಂತರು’, ಎಂದು ಈಗ ‘ಸನಾತನ ಸಂಸ್ಥೆ’ ಮತ್ತು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ಗಳು ‘ಎಲೆಕ್ಟ್ರೋಸೊಮ್ಯಾಟೋಗ್ರಾಫಿಕ್ ಸ್ಕ್ಯಾನಿಂಗ್’, ‘ಯುನಿವರ್ಸಲ್ ಔರಾ ಸ್ಕ್ಯಾನರ್ (UAS)’, ‘ಪಾಲಿಕಾಂಟ್ರಾಸ್ಟ್ ಇಂಟರ್‌ಫರೆನ್ಸ್ ಫೋಟೋಗ್ರಾಫಿ (ಪಿಪ್)’, ‘ಥರ್ಮಲ್ ಇಮೇಜಿಂಗ್’, ‘ಗ್ಯಾಸ್ ಡಿಸ್ಚಾರ್ಜ್ ವಿಜುವಲೈಸೇಶನ್’ (GDV), ಇತ್ಯಾದಿ ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಸಾಬೀತು ಪಡಿಸುತ್ತಿವೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ