ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಅಮೂಲ್ಯ ವಿಚಾರಧನ !

‘ಒಬ್ಬ ಸಾಧಕನು ನಿಧನನಾದನು. ಓರ್ವ ಸಂತರು ಆ ಸಾಧಕನ ವಿಷಯದಲ್ಲಿ ಮುಂದಿನಂತೆ ಹೇಳಿದರು, ”ಮೃತಪಟ್ಟ ಸಾಧಕನು ಎರಡು ವರ್ಷಗಳಲ್ಲಿ ಸಾಧನೆ ಮಾಡಲು ಪುನಃ ಜನಿಸುವನು.’ ಆಶ್ಚರ್ಯವೆಂದರೆ, ‘ಮೃತ್ಯುವಾಗಿ ಪುನಃ ಜನ್ಮ ಪಡೆದಿರುವ ಆ ಸಾಧಕನು ೭-೮ ವರ್ಷಗಳ ಅವಧಿಯಲ್ಲಿ ಅದೇ ಸಂತರ ಕನಸಿನಲ್ಲಿ ಬಂದಿದ್ದನು. ಆಗ ಕೂಡ ಆ ಸಾಧಕ ಸೇವೆಯನ್ನೇ ಮಾಡುತ್ತಿದ್ದನು’, ಎನ್ನುವ ಒಂದು ಪ್ರಸಂಗವನ್ನು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ನನಗೆ ಹೇಳಿದರು. ಈ ಪ್ರಸಂಗವನ್ನು ಕೇಳಿ ಜಿಜ್ಞಾಸೆಯಿಂದ ನಾನು ಅವರಿಗೆ ಪ್ರಶ್ನಿಸಿದೆ, ”ಸಾಧಕರು ಪುನಃ ಪುನಃ ಏಕೆ ಜನ್ಮ ಪಡೆಯಬೇಕಾಗುತ್ತದೆ ?” – ಓರ್ವ ಸಾಧಕ
೧. ಸಾಧಕನು ಮೃತಪಟ್ಟರೆ ಈಶ್ವರ ಅವನಿಗೆ ಪುನಃ ಸಾಧನೆ ಮಾಡುವ ಅವಕಾಶ ಸಿಗಬೇಕೆಂದು ಒಳ್ಳೆಯ ಮನೆತನದಲ್ಲಿ ಜನ್ಮ ನೀಡುತ್ತಾನೆ; ಆದರೆ ಜೀವವು ಸಾಧನೆ ಮಾಡದಿದ್ದರೆ, ಅದಕ್ಕೆ ಮನುಷ್ಯಜನ್ಮ ಪಡೆಯಲು ಬಹಳಷ್ಟು ವರ್ಷ ತಗಲಬಹುದು
ಅದಕ್ಕೆ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರು ಮುಂದಿನಂತೆ ಹೇಳಿದರು, ”ಮರಣ ಹೊಂದಿದ ಜೀವವು ಹಿಂದಿನ ಜನ್ಮದಲ್ಲಿ ಸಾಧನೆ ಮಾಡಿದ್ದರೆ, ಈಶ್ವರನು ಅದಕ್ಕೆ ಮತ್ತೊಮ್ಮೆ ಸಾಧನೆ ಮಾಡಲು ಅವಕಾಶ ಸಿಗಬೇಕೆಂದು ಒಳ್ಳೆಯ ಮನೆತನದಲ್ಲಿ ಜನ್ಮ ನೀಡುತ್ತಾನೆ. ಇದು ಅದರ ಮೇಲಿರುವ ಈಶ್ವರನ ಕೃಪೆಯೆ ಆಗಿರುತ್ತದೆ. ‘ಈ ಮನೆತನದಲ್ಲಿ ಅವನ ಸಾಧನೆಗೆ ಪೂರಕವಾಗುವಂತಹ ಸೌಲಭ್ಯಗಳನ್ನು ಈಶ್ವರನೇ ಒದಗಿಸಿರುತ್ತಾನೆ. ಇದು ಆ ಜೀವದ ಕಳೆದ ಜನ್ಮದ ಸಾಧನೆಯ ಪುಣ್ಯವಾಗಿರುತ್ತದೆ; ಆದರೆ ಜೀವ ಸಾಧನೆ ಮಾಡಿರದಿದ್ದರೆ, ಅದಕ್ಕೆ ಮನುಷ್ಯಜನ್ಮ ಪಡೆಯಲು ಬಹಳಷ್ಟು ವರ್ಷಗಳ ಅವಧಿ ಬೇಕಾಗಬಹುದು. ಈ ನಡುವೆ ಅವನು ಕ್ರಿಮಿ-ಕೀಟ, ಇರುವೆ, ಹಿಂಸ್ರಪ್ರಾಣಿ, ಪಶು-ಪಕ್ಷಿ ಇಂತಹ ಅನೇಕ ಯೋನಿಗಳಲ್ಲಿ ಸುತ್ತಾಡುತ್ತಾನೆ. ಅನಂತ ಬಾರಿ ಮರಣ ಹೊಂದುತ್ತಾನೆ. ಅನಂತ ಭೋಗಗಳನ್ನು ಭೋಗಿಸುತ್ತಾನೆ; ಆದರೆ ಸಾಧನೆ ಮಾಡುವ ಜೀವ ಮಾತ್ರ ಹಾಗಿರುವುದಿಲ್ಲ. ಈಶ್ವರ ಅವನಿಗೆ ‘ಬೋನಸ್’ ಎಂದು ತಕ್ಷಣ ಮನುಷ್ಯಜನ್ಮ ನೀಡುತ್ತಾನೆ; ಏಕೆಂದರೆ, ಇನ್ನಿತರ ಯೋನಿಗಳ ತುಲನೆಯಲ್ಲಿ ಮನುಷ್ಯಜನ್ಮದಲ್ಲಿ ತಕ್ಷಣ ಸಾಧನೆ ಮಾಡಲು ಸಾಧ್ಯವಾಗಿ ಜನನ-ಮರಣದ ಚಕ್ರದಿಂದ ಮುಕ್ತನಾಗಲು ಸಾಧ್ಯವಾಗುತ್ತದೆ.
೨. ಪೂರ್ವಜನ್ಮದಲ್ಲಿ ಮನಸ್ಸು ಮತ್ತು ಬುದ್ಧಿಯ ಮೇಲೆ ಆಗಿರುವ ಸೂಕ್ಷ್ಮ ಸಂಸ್ಕಾರಕ್ಕನುಸಾರ ಅವನಿಗೆ ಮರಣದ ನಂತರ ಮುಂದಿನ ಗತಿ ಸಿಗುತ್ತದೆ
ಮೃತಪಟ್ಟ ಜೀವದ ಚಿತ್ತದಲ್ಲಿ ಅದರ ಪೂರ್ವಜನ್ಮಕರ್ಮದ ಸಂಸ್ಕಾರವಿರುತ್ತದೆ. ಈ ಸಂಸ್ಕಾರದಲ್ಲಿ ಪೂರ್ವಜನ್ಮದ ದೋಷ ಹಾಗೂ ಅಹಂನ ಸಂಸ್ಕಾರವೂ ಇರುತ್ತದೆ. ಮರಣದ ನಂತರದ ಯೋನಿಗಳಲ್ಲಿ ತಿರುಗುವಾಗ ಅವನ ಅನೇಕ ಜನ್ಮಗಳು ಕಳೆಯುತ್ತವೆ. ಪೂರ್ವಜನ್ಮದ ಬುದ್ಧಿ, ಸ್ವಭಾವದೋಷ ಹಾಗೂ ಅಹಂನ ಸಂಸ್ಕಾರಗಳಿಂದ ಮಲಿನವಾಗಿರುವ ಮನಸ್ಸಿನ ಹೊದಿಕೆಯನ್ನು ಹಾಗೆಯೆ ಆತ್ಮದ ಮೇಲೆ ಹೊದ್ದುಕೊಂಡು ಪುನಃ ಪುನಃ ಸಾಮಾನ್ಯ ವ್ಯಕ್ತಿಯ ಜನ್ಮವಾಗುತ್ತದೆ. ಜೀವ ಮನುಷ್ಯಯೋನಿಯಲ್ಲಿ ಪುನಃ ಜನ್ಮ ಪಡೆಯುತ್ತದೆ. ಆಗ ಪೂರ್ವಜನ್ಮದಲ್ಲಿ ಅವನು ಪಡೆದಿರುವ ವಿದ್ಯಾಭ್ಯಾಸ, ಸಂಪಾದಿಸಿದ ಧನ-ಸಂಪತ್ತು, ಇವೆಲ್ಲವನ್ನೂ ಜೊತೆಗಿಟ್ಟುಕೊಂಡು ಪುನಃ ಜನ್ಮ ಪಡೆಯುವುದಿಲ್ಲ, ಪೂರ್ವಜನ್ಮದಲ್ಲಿ ಅವನ ಮನಸ್ಸು ಮತ್ತು ಬುದ್ಧಿಯ ಮೇಲೆ ಆಗಿರುವ ಸೂಕ್ಷ್ಮ ಸಂಸ್ಕಾರದ ಜೊತೆಗೆ ಅವನ ಪುನರ್ಜನ್ಮವಾಗುತ್ತದೆ ಅಥವಾ ಅವನಿಗೆ ಮರಣದ ನಂತರ ಮುಂದಿನ ಗತಿ ಸಿಗುತ್ತದೆ. ಮನುಷ್ಯ ಆಯಾ ಜನ್ಮದಲ್ಲಿ ಅವನ ಕರ್ಮದ ಫಲವನ್ನು ಅನುಭವಿಸುತ್ತಾನೆ.
೩. ಜೀವಮಾನವಿಡೀ ಸಾಧನೆ ಮಾಡುವುದರ ಮಹತ್ವ
ಇದರಿಂದ ‘ಕೇವಲ ಪುನರ್ಜನ್ಮವಾದರೆ ಸಾಲದು, ‘ಪೂರ್ವಜನ್ಮದಲ್ಲಿ ಮಾಡಿದ ಸಾಧನೆಯ ಸಂಸ್ಕಾರಗಳೊಂದಿಗೆ ಜನ್ಮ ಪಡೆಯುವುದು’ ಮಹತ್ವದ್ದಾಗಿದೆ.’ ‘ಅದಕ್ಕಾಗಿ ಈ ಜನ್ಮದಲ್ಲಿಯೆ ಸಾಧನೆ ಮಾಡಿ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡುವುದು ಅನಿವಾರ್ಯವಾಗಿದೆ. ಜೀವಮಾನವಿಡೀ ಸಾಧನೆ ಮಾಡಿದರೆ ಮಾತ್ರ ಅಂತಿಮ ಕಾಲದಲ್ಲಿ ದೇವರ ಹೆಸರು ನೆನಪಾಗುತ್ತದೆ. ಅಂತಿಮ ಸಮಯ ಬಂದಾಗ ಗುರುಗಳು ಕೂಡ ಸೂಕ್ಷ್ಮದಲ್ಲಿ ಸಾಧಕನ ಸಮೀಪವಿರುತ್ತಾರೆ. ಗುರುಗಳ ಉಪಸ್ಥಿತಿಯಿಂದಾಗಿ ಸಾಧಕನನ್ನು ಒಯ್ಯಲು ಯಮದೂತರು ಬರುವುದಿಲ್ಲ, ದೇವದೂತರು ಬರುತ್ತಾರೆ. ದೇವದೂತರ ಸ್ಪರ್ಶದಿಂದ ಆ ಜೀವಕ್ಕೆ ಮರಣದ ನಂತರ ದೈವೀ ವೇಗ ಪ್ರಾಪ್ತಿಯಾಗುತ್ತದೆ. ದೈವೀ ವೇಗದಿಂದ ಆ ಜೀವ ದಾರಿಯಲ್ಲಿ ಎಲ್ಲಿಯೂ ಸಿಲುಕದೆ ಜೀವದ ಸಾಧನೆಯ ಪುಣ್ಯಕ್ಕನುಸಾರ ನೇರವಾಗಿ ಮಹರ್ಲೋಕ, ಜನಲೋಕ ಅಥವಾ ತಪಲೋಕಕ್ಕೂ ಹೋಗಬಹುದು; ಅಂದರೆ ‘ಈ ಪೃಥ್ವಿಯಲ್ಲಿಯೇ ಸಾಧನೆ ಮಾಡಿ ಪುನಃ ನಮಗೆ ಈ ಭೂಲೋಕದಲ್ಲಿ ಜನ್ಮ ಬೇಡ’, ಎನ್ನುವ ಹಾಗಾಗಬೇಕು.’
– ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ.