ಸ್ವಾಮಿ ವರದಾನಂದ ಭಾರತಿಯವರ ತೇಜಸ್ವೀ ವಿಚಾರಧನ !

ಭಾದ್ರಪದ ಶುಕ್ಲ ಚತುರ್ದಶಿ (ಸಪ್ಟೆಂಬರ್ ೯)ಯಂದು ಸ್ವಾಮಿ ವರದಾನಂದ ಭಾರತಿ ಇವರ ಜಯಂತಿ ಇರುವುದರ ನಿಮಿತ್ತ …

ಸ್ವಾಮಿ ವರದಾನಂದ ಭಾರತಿಯವರ ಪೂರ್ವಾಶ್ರಮದ ಹೆಸರು ಶ್ರೀ. ಅನಂತ ದಾಮೋದರ ಆಠವಲೆ ಎಂದಿತ್ತು. ರಾಷ್ಟ್ರ, ಧರ್ಮ, ಅಧ್ಯಾತ್ಮ, ಬುದ್ಧಿಪ್ರಾಮಾಣ್ಯವಾದ ಇತ್ಯಾದಿ ವಿಷಯಗಳಲ್ಲಿ ಅವರು ಅನೇಕ ಲೇಖನಗಳನ್ನು ಬರೆದಿದ್ದಾರೆ. ಸಪ್ಟೆಂಬರ್ ೯ ರಂದು ಇರುವ ಅವರ ಜಯಂತಿಯಿದೆ. ಆ ನಿಮಿತ್ತದಲ್ಲಿ ರಾಷ್ಟ್ರ, ಧರ್ಮ ಮತ್ತು ಅಧ್ಯಾತ್ಮಕ್ಕೆ ಸಂಬಂಧಿಸಿದ ಅವರ ತೇಜಸ್ವೀ ವಿಚಾರಗಳನ್ನು ಇಲ್ಲಿ ಕೊಡುತ್ತಿದ್ದೇವೆ.

ಸ್ವಾಮಿ ವರದಾನಂದ ಭಾರತಿ

ಧರ್ಮ ಮತ್ತು ಸಂಸ್ಕೃತಿ ಒಂದೆ !

`ಸಂಸ್ಕೃತಿ ಈ ಪದವನ್ನು ಮೂಲತಃ ನಾವೇ ನಿರ್ಮಾಣ ಮಾಡಿದ್ದೇವೆ. `ಸಿವಿಲೈಸೇಶನ್’ (ನಾಗರಿಕರಣ) ಮತ್ತು ಮುಖ್ಯವಾಗಿ `ಕಲ್ಚರ್’ (ರೀತಿನೀತಿ) ಇದಕ್ಕಾಗಿ ನಾವು ಅದನ್ನು ಉಪ ಯೋಗಿಸುತ್ತೇವೆ. ನಮ್ಮ ಹಳೆಯ ವಾಙ್ಮಯದಲ್ಲಿ ಈ ಅರ್ಥದ `ಸಂಸ್ಕೃತ’ ಶಬ್ದವಿಲ್ಲ. ಪಾಶ್ಚಾತ್ಯರ ಸಂಪರ್ಕದ ಮೊದಲು `ಧರ್ಮ’ ಈ ಶಬ್ದದಿಂದಲೇ ನಮ್ಮ ಎಲ್ಲ ಕೆಲಸ ಪೂರ್ಣಗೊಳ್ಳುತ್ತಿತ್ತು. ನಮ್ಮ ಧರ್ಮಕಲ್ಪನೆಯಲ್ಲಿ ತತ್ತ್ವಜ್ಞಾನ, ವಿಚಾರ, ನೀತಿ ಮತ್ತು ಆಚಾರ ಇವೆಲ್ಲವೂ ಸಮಾವೇಶವಿತ್ತು; ಆದ್ದರಿಂದ ವಾಸ್ತವದಲ್ಲಿ ಸಂಸ್ಕೃತಿ ಮತ್ತು ಧರ್ಮ ಇವೆರಡೂ ಒಂದೇ ಆಗಿವೆ.

ಇಂದಿನ ವಿಜ್ಞಾನವೆಂದರೆ, ತಾಮಸಿಕ ತಪಶ್ಚರ್ಯ !

ವಿಧ್ವಂಸಕ್ಕಾಗಿ ವಿಜ್ಞಾನವೆಂದರೆ ರಾಕ್ಷಸಿ ತಪಶ್ಚರ್ಯವಾಗಿದೆ. ಘೋರ ತಪಶ್ಚರ್ಯಗಳ ಬಲದಿಂದ ರಾಕ್ಷಸರು ಉನ್ಮತ್ತರಾದರು ಹಾಗೂ ಜಗತ್ತನ್ನು ಪೀಡಿಸಲು ಆರಂಭಿಸಿದರು. ಇಂದಿನ ವಿಜ್ಞಾನವು ರಾಕ್ಷಸರ ಕೈಗೆ ಹೋಗಿರುವುದರಿಂದ ಜಗತ್ತಿನ ವಿನಾಶಕ್ಕೆ ಪ್ರವೃತ್ತವಾಗಿದೆ. ಜಗತ್ತಿನ ಕಲ್ಯಾಣಕ್ಕಾಗಿ ವಿಜ್ಞಾನವಿದ್ದರೆ ಅದು ಸಾತ್ತ್ವಿಕ ತಪಶ್ಚರ್ಯವಾಗಿದೆ. ವಿಲಾಸಕ್ಕಾಗಿ ಅಥವಾ ಉಪ ಭೋಗಕ್ಕಾಗಿ ಇದ್ದರೆ, ರಾಜಸ ತಪಶ್ಚರ್ಯವಾಗಿದೆ, ವಿಧ್ವಂಸಕ್ಕಾಗಿ ಇದ್ದರೆ ತಾಮಸ ತಪಶ್ಚರ್ಯವಾಗಿದೆ.

ಅಸಮಾನತೆಯು ನಿಸರ್ಗಸಿದ್ಧವಾಗಿದೆ !

ಸೃಷ್ಟಿಯ ನಿರ್ಮಾಣವು ಈಶ್ವರನ ಆಟವಾಗಿದೆ ಹಾಗೂ ಆಟದಲ್ಲಿ ಅಸಮಾನತೆ ಇಲ್ಲದೆ ಅದು ಆಟವಾಗಲು ಸಾಧ್ಯವೇ ಇಲ್ಲ. ನಾವು ನಿರ್ಮಿಸಿದ ಆಟವನ್ನು ನೋಡಿ, ಅದರಲ್ಲಿಯಾದರೂ ಸಮಾನತೆ ಇದೆಯೇ ? ಎಲ್ಲ ಇಸ್ಪೀಟಿನ ಎಲೆಗಳ ಬೆಲೆ ಸಮಾನವಾಗಿರುತ್ತದೆಯೇ ? ಕೆಲವು ಪಂದ್ಯದಲ್ಲಿ ಎಕ್ಕದ ಬೆಲೆ ಅತೀ ಹೆಚ್ಚು, ಕೆಲವು ಪಂದ್ಯದಲ್ಲಿ ರಾಜನ ಬೆಲೆ ಹೆಚ್ಚು, ಕೆಲವೊಂದರಲ್ಲಿ ಗುಲಾಮನ ಬೆಲೆ ಅತೀ ಹೆಚ್ಚು ಇರುತ್ತದೆ. ಎಲೆಗಳ ಆಕಾರ, ಬಣ್ಣ ಎಲ್ಲವೂ ಅಸಮಾನವಾಗಿರುತ್ತದೆ, ಆದ್ದರಿಂದಲೇ ಆಟವೆನಿಸುತ್ತದೆ. ಎಲ್ಲ ಎಲೆಗಳನ್ನು ಸಮಾನಗೊಳಿಸಿದರೆ ಆಟವಾಗುವುದಿಲ್ಲ. ಈಗ ಚದುರಂಗದಾಟದ ಪಂದ್ಯ ನೋಡಿ ! ಅದರಲ್ಲಿ ರಾಜನಿದ್ದಾನೆ, ಪೇದೆಗಳಿದ್ದಾರೆ, ಒಂಟೆ ಇದೆ, ಕುದುರೆ ಇದೆ. ಪ್ರತಿಯೊಂದರ ಚಲನೆ ಬೇರೆಯೆ. ಕೆಲವರು ಎರಡುವರೆ ಮನೆಗಳನ್ನು ದಾಟುತ್ತಾರೆ, ಕೆಲವರು ಹಿಂದಕ್ಕೆ ಬರುತ್ತಾರೆ. ಅಲ್ಲಿ ಸಮಾನತೆ ಇದೆಯೇ ?

ಎಲ್ಲರ ಪಾಲಿಗೆ ಸಮಾನವಾದ ಎಲೆಗಳು ಬರುತ್ತವೆಯೇ ? ಆಟದಲ್ಲಿ ಎಲ್ಲರೂ ವಿಜಯಿಯಾಗುತ್ತಾರೆಯೇ ? ಯಾರು ಕೌಶಲ್ಯದಿಂದ ಆಡುತ್ತಾನೆಯೋ, ಅವನಿಗೆ ಕೆಟ್ಟ ಎಲೆಗಳು ಬಂದರೂ ಅವನು ಜಯಿಸುತ್ತಾನೆ. ಅದೇ ರೀತಿ ಈಶ್ವರನ ಸೃಷ್ಟಿಯದ್ದಾಗಿದೆ. ಇದು ಈಶ್ವರನ ಆಟವಾಗಿದೆ. ಇಲ್ಲಿ ಒಬ್ಬ ರಾಜ, ಒಬ್ಬ ಪೇದೆ, ಒಬ್ಬಳು ರಾಣಿ ಹಾಗೂ ಒಬ್ಬ ಗುಲಾಮ ಹೀಗೆ ವೈವಿಧ್ಯವಿರುತ್ತದೆ. ಮಾನವ ಜೀವನದ ಪಾಲಿಗೆ ಒಳ್ಳೆಯ ಎಲೆಗಳು ಬಾರದಿದ್ದರೂ, ಯಾರು ಕೌಶಲ್ಯದಿಂದ ಆಡುವನೋ, ಅವನು ಗೆಲ್ಲುವನು. ಆಗ ಸಾಮ್ಯ, ಸಮಾನತೆ, ಇದಕ್ಕೆ ಅರ್ಥವಿರುವುದಿಲ್ಲ. ಸೃಷ್ಟಿಯು ವೈವಿಧ್ಯಮಯವಾಗಿದೆ, ಎಂಬುದನ್ನು ತಿಳಿದುಕೊಂಡು ಹೇಗೆ ವರ್ತಿಸಬೇಕೆಂದು ಪ್ರತಿಯೊಬ್ಬರೂ ನಿರ್ಧರಿಸಬೇಕು.

ಭಾರತದ ನಾಚಿಕೆಕೇಡು ಪ್ರಜಾಪ್ರಭುತ್ವ !

ನಿನ್ನೆಯ ವರೆಗೆ ವಿಪಕ್ಷದಲ್ಲಿ ಪ್ರಚಾರಕ ಆಗಿದ್ದವನು, ಅಧಿಕಾರ ದಲ್ಲಿರುವ ಪಕ್ಷಕ್ಕೆ ನಿರಂತರ ಬೈಯ್ಯುತ್ತಿದ್ದವನು ಇಂದು `ಕ್ಯಾಬಿನೆಟ್ ಮಿನಿಸ್ಟರ್’ ಆಗುತ್ತಾನೆ. ಪಕ್ಷದಲ್ಲಿ ತೆಗೆದುಕೊಳ್ಳುವವರೂ ನಾಚಿಕೆ ಯಿಲ್ಲದವರು ಹಾಗೂ ಹೋಗುವವರೂ ನಾಚಿಕೆಯಿಲ್ಲದವರು ! ಎರಡೂ ಪಕ್ಷದಲ್ಲಿ ನಾಚಿಕೆ ಎನ್ನುವ ವಸ್ತುವೆ ಇಲ್ಲ. ಇಂತಹ ಅನೇಕ ಉದಾಹರಣೆಗಳನ್ನು ಕೊಡಬಹುದು.

ಮಸ್ತಕದಲ್ಲಿ ಮತ್ತು ಹೃದಯದಲ್ಲಿ ಈಶ್ವರ !

ಈಶ್ವರನ ಸ್ಥಾನ ಹೃದಯದಲ್ಲಿ ಮತ್ತು ಮಸ್ತಕದಲ್ಲಿ ಈ ಎರಡೂ ಸ್ಥಳದಲ್ಲಿ ಇದೆ. ಮಸ್ತಕದಲ್ಲಿನ ಪರಮೇಶ್ವರನಲ್ಲಿಗೆ ಯೋಗ ಮತ್ತು ಜ್ಞಾನ ಮಾರ್ಗದಿಂದ ತಲುಪಬಹುದು, ಹೃದಯದಲ್ಲಿನ ಈಶ್ವರನು ಕರ್ಮ ಮತ್ತು ಭಕ್ತಿಯಿಂದ ಸಿಗುತ್ತಾನೆ; ಆದರೆ ಯೋಗ ಮತ್ತು ಜ್ಞಾನ ಮಾರ್ಗವು ಬಹಳ ಕಠಿಣ ! ಅದರ ತುಲನೆಯಲ್ಲಿ ಭಕ್ತಿ ಸುಲಭ ! ಆದರೂ ಭಕ್ತಿ ಬಹಳ ಸುಲಭವಲ್ಲ. ತುಕಾರಾಮ ಮಹಾರಾಜರು ಭಕ್ತಿಗೆ `ನೇಣುಗಂಬದ ಮೇಲಿನ ಚಪಾತಿ’ ಎಂದು ಹೇಳುತ್ತಾರೆ. ಭಕ್ತಿಗೆ ಉತ್ಕಟ ಭಾವ ಬೇಕಾಗುತ್ತದೆ. ಉತ್ಕಟ ಭಾವವು ಈಶ್ವರನ ದೂರವಾಣಿ ಕ್ರಮಾಂಕವಾಗಿದೆ; `ವೇವ್ ಲೆಂಥ್’ ಆಗಿದೆ. ಅದು ಹೊಂದಿಕೆಯಾದಾಗ ಸಾಕ್ಷಾತ್ಕಾರವಾಗುತ್ತದೆ !

ಸಂದರ್ಭ : ಸಾಪ್ತಾಹಿಕ `ಪಂಢರೀ ಪ್ರಹಾರ’ (ಎಪ್ರಿಲ್ ೧೯೯೧) ಮತ್ತು `ಹಿಂದೂ ಧರ್ಮ ಸಮಜೂನ್ ಘ್ಯಾ !’ ಈ ಗ್ರಂಥ