ಪಿತೃಪಕ್ಷದಲ್ಲಿ ಶ್ರಾದ್ಧವಿಧಿ ಮಾಡಿದ ನಂತರ ಮಾಡಿದ ನಿರೀಕ್ಷಣೆಯಲ್ಲಿ ಪಿತೃಗಳಿಗೆ ಅರ್ಪಿಸಿದ ಪಿಂಡಗಳಲ್ಲಿ ತುಂಬಾ ಸಕಾರಾತ್ಮಕ ಬದಲಾವಣೆಯಾಗುವುದು

#Datta Datta, #ShriDatta ShriDatta #mahalaya mahalaya, #pitrupaksha pitrupaksha, #shraddha shraddha, #ShraddhaRituals Shraddha rituals, #Shraddhavidhi Shraddha vidhi

ಶ್ರಾದ್ಧವಿಧಿಗಳ ವಿಷಯದಲ್ಲಿ ಅದ್ವಿತೀಯ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

`ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು `ಯುನಿವರ್ಸಲ್ ಔರಾ ಸ್ಕ್ಯಾನರ್ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷೆ

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

`ಶ್ರಾದ್ಧವೆಂದರೆ ಇಂದಿನ ವಿಜ್ಞಾನಯುಗದ ಯುವಪೀಳಿಗೆಯ ಮನಸ್ಸಿನಲ್ಲಿ `ಅಶಾಸ್ತ್ರೀಯ ಹಾಗೂ ಅವಾಸ್ತವಿಕ ಕರ್ಮಕಾಂಡದ ಆಡಂಬರ’, ಎಂದು ಆ ವಿಷಯದಲ್ಲಿ ತಪ್ಪು ಕಲ್ಪನೆ ಸಿದ್ಧವಾಗುತ್ತದೆ. ಪೂಜೆ, ಶ್ರಾದ್ಧಪಕ್ಷ ಇತ್ಯಾದಿಗಳಲ್ಲಿ ವಿಶ್ವಾಸವಿಡದ ಅಥವಾ `ಸಮಾಜಕಾರ್ಯವೇ ಶ್ರೇಷ್ಠವಾಗಿದೆ’, ಎಂದು ತಿಳಿಯುವ, `ಪಿತೃಗಳಿಗೆ ಶ್ರಾದ್ಧವನ್ನು ಮಾಡದೆ ಬಡವರಿಗೆ ಅನ್ನದಾನ ಮಾಡುವೆವು ಅಥವಾ ಶಾಲೆಗಳಿಗೆ ಸಹಾಯ ಮಾಡುವೆವು’, ಎಂದು ಹೇಳುತ್ತಾರೆ ! ಹೇಗೆ ಮಾತಾ-ಪಿತಾ ಹಾಗೂ ಸಮೀಪದವರು ಜೀವಂತವಿರುವಾಗ ಅವರ ಸೇವೆಶುಶ್ರುಷೆಗಳನ್ನು ಧರ್ಮಪಾಲನೆ ಎಂದು ಮಾಡುತ್ತೇವೆಯೋ ಅದೇ ರೀತಿ ಅವರ ಮೃತ್ಯುವಿನ ನಂತರವೂ ಅವರ ಬಗ್ಗೆ ನಮಗೆ ಏನಾದರೂ ಕರ್ತವ್ಯ ಇರುತ್ತದೆ, ಎಂದು ಭಾರತೀಯ ಸಂಸ್ಕೃತಿಯು ಹೇಳುತ್ತದೆ. ಈ ಕರ್ತವ್ಯಪೂರ್ತಿಯ ಹಾಗೂ ಆ ಮೂಲಕ ಪಿತೃಋಣವನ್ನು ತೀರಿಸುವ ಸದವಕಾಶ ಶ್ರಾದ್ಧಕರ್ಮದಿಂದ ಸಿಗುತ್ತದೆ. `ಪಿತೃಪಕ್ಷದಲ್ಲಿ ಪಿತೃಗಳಿಗಾಗಿ ಶ್ರಾದ್ಧ ಮಾಡುವುದರಿಂದ ಶ್ರಾದ್ಧವಿಧಿಯಲ್ಲಿನ ಪಿಂಡದ ಮೇಲೆ ಯಾವ ಪರಿಣಾಮವಾಗುತ್ತದೆ ?’, ಎಂಬುದು ವಿಜ್ಞಾನದ ಮೂಲಕ ಅಭ್ಯಾಸ ಮಾಡಲು ೨೭.೯.೨೦೧೮ ರಂದು ಗೋವಾದ ರಾಮನಾಥಿಯ ಸನಾತನ ಆಶ್ರಮದಲ್ಲಿ `ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಒಂದು ಪರೀಕ್ಷಣೆ ಮಾಡಲಾಯಿತು. ಈ ಪರೀಕ್ಷಣೆಗೆ `ಯುನಿರ್ವಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣವನ್ನು ಉಪಯೋಗಿಸಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆಯನ್ನು ಮುಂದೆ ಕೊಡಲಾಗಿದೆ.

ಆಧುನಿಕ ವೈದ್ಯೆ (ಸೌ.) ನಂದಿನಿ ಸಾಮಂತ

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ

ಈ ಪರೀಕ್ಷಣೆಯಲ್ಲಿ ಶ್ರಾದ್ಧವಿಧಿಯ ಮೊದಲು ಮತ್ತು ಮಾಡಿದ ನಂತರ ಈ ವಿಧಿಯ ಘಟಕವಾಗಿರುವ ಪಿಂಡಗಳನ್ನು (ಟಿಪ್ಪಣಿ) `ಯು.ಎ.ಎಸ್.’ ಉಪಕರಣದ ಮೂಲಕ ನಿರೀಕ್ಷಣೆ ಮಾಡಲಾಯಿತು. ಈ ನಿರೀಕ್ಷಣೆಗಳ ತುಲಾನಾತ್ಮಕ ಅಭ್ಯಾಸ ಮಾಡಲಾಯಿತು.

ಟಿಪ್ಪಣಿ – ಪಿಂಡವೆಂದರೇನು ? : ಅನ್ನದಲ್ಲಿ ಎಳ್ಳಿನ ನೀರು, ವಡೆ ಮತ್ತು ಪಾಯಸವನ್ನು ಹಾಕಬೇಕು. ಆಮೇಲೆ ಅನ್ನವನ್ನು ಕಲಸಿ ನಿಂಬೆಹಣ್ಣಿನ ಗಾತ್ರದ, ಒಡೆಯದಂತೆ ಗಟ್ಟಿಯಾಗಿರುವ ಪಿಂಡವನ್ನು ತಯಾರಿಸಬೇಕು. ಪಿತೃತ್ರಯಿಗಳಿಗೆ ಸ್ವಲ್ಪ ದೊಡ್ಡ ಪಿಂಡಗಳನ್ನು ಮಾಡುವ ಪದ್ಧತಿಯಿದೆ. ಅದು ಕೃತಜ್ಞತೆಗಾಗಿ ಇದೆ. (ಆಧಾರ : ಸನಾತನದ ಗ್ರಂಥ `ಶ್ರಾದ್ಧದ ಮಹತ್ವ ಮತ್ತು ಶಾಸ್ತ್ರೀಯ ವಿವೇಚನೆ’)

೧ ಅ. ಪಿಂಡದಲ್ಲಿ ನಕಾರಾತ್ಮಕ ಊರ್ಜೆ ಕಂಡುಬರಲಿಲ್ಲ : ಪಿಂಡಗಳಲ್ಲಿ ಶ್ರಾದ್ಧವಿಧಿ ಮಾಡುವ ಮೊದಲು ಮತ್ತು ಮಾಡಿದ ನಂತರವೂ `ಇನ್ಫಾçರೆಡ್’ ಮತ್ತು `ಅಲ್ಟ್ರಾವೈಲೆಟ್’ ಈ ನಕಾರಾತ್ಮಕ ಊರ್ಜೆಯು ಕಂಡುಬರಲಿಲ್ಲ.

೧ ಆ. ಶ್ರಾದ್ಧವಿಧಿಯ ಮೊದಲು ಕೂಡ ತುಂಬಾ ಪ್ರಮಾಣದಲ್ಲಿರುವ ಪಿಂಡದಲ್ಲಿನ ಸಕಾರಾತ್ಮಕ ಊರ್ಜೆಯು ಶ್ರಾದ್ಧವಿಧಿಯ ನಂತರ ಇನ್ನೂ ಹೆಚ್ಚಾಗುವುದು : ಶ್ರಾದ್ಧವಿಧಿಯನ್ನು ಆರಂಭಿಸುವ ಮೊದಲು ಕೂಡ ಪಿಂಡಗಳಲ್ಲಿ ಸಕಾರಾತ್ಮಕ ಊರ್ಜೆ ಇತ್ತು ಮತ್ತು ಅದರ ಪ್ರಭಾ ವಲಯ ೧.೭೦ ಮೀಟರ್ ಇತ್ತು. ಶ್ರಾದ್ಧವಿಧಿಯ ನಂತರ ಪಿಂಡ ಗಳಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ೨ ಮೀಟರ್ ಆಯಿತು. ಅಂದರೆ ಅದರಲ್ಲಿ ೦.೩೦ ಮೀಟರ್ ಹೆಚ್ಚಳವಾಯಿತು.

೨. ಪರೀಕ್ಷಣೆಯ ನಿರೀಕ್ಷಣೆಗಳ ಆಧ್ಯಾತ್ಮಿಕ ವಿಶ್ಲೇಷಣೆ

೨ ಅ. ಶ್ರಾದ್ಧವಿಧಿಯಲ್ಲಿ ಪಿಂಡದಾನಕ್ಕೆ (ಪಿಂಡಪೂಜೆಗೆ) ಇರುವ ಮಹತ್ವ : `ಶ್ರಾದ್ಧವಿಧಿಯಲ್ಲಿ ಪಿಂಡದಾನಕ್ಕೆ (ಪಿಂಡಪೂಜೆಗೆ) ಬಹಳ ಮಹತ್ವವಿದೆ. ಪಿಂಡವನ್ನು ಅನ್ನದಿಂದ ಮಾಡಲಾಗುತ್ತದೆ. ಅಕ್ಕಿಯನ್ನು ಅನ್ನ ಮಾಡಿದಾಗ, ಅದರಲ್ಲಿನ ರಜೋಗುಣ ಹೆಚ್ಚಾಗುತ್ತದೆ. ಈ ರಜೋಗುಣಿ ಪಿಂಡದಿAದ ವಾತಾವರಣಕಕ್ಷೆಯಲ್ಲಿ ಮೃತಾತ್ಮದ ಲಿಂಗದೇಹಕ್ಕೆ ಪ್ರವೇಶಿಸಲು ಸುಲಭವಾಗುವುದರಿಂದ ಮಂತ್ರೋಚ್ಚಾರದಿಂದ ಕೂಡಿರುವ ವಾಯುಮಂಡಲದಿಂದ ಅದಕ್ಕೆ ಲಾಭವಾಗಿ ಸೂಕ್ಷ್ಮಬಲ ಪ್ರಾಪ್ತಿಯಾಗುವುದರಿಂದ ಮುಂದಿನ ಮಾರ್ಗಕ್ರಮಣ ಮಾಡುವುದು ಸುಲಭವಾಗುತ್ತದೆ.’ (ಆಧಾರ : ಸನಾತನದ  ಗ್ರಂಥ `ಶ್ರಾದ್ಧಕೃತಿಗಳ ಹಿಂದಿನ ಅಧ್ಯಾತ್ಮ ಶಾಸ್ತ್ರ’)

೨ ಆ. ಶ್ರಾದ್ಧವಿಧಿಯಿಂದಾಗಿ ಪಿತೃಗಳ ಲಿಂಗದೇಹದ ಸುತ್ತಲೂ ರಕ್ಷಾಕವಚ ನಿರ್ಮಾಣವಾಗಿ ಅದಕ್ಕೆ ಮುಂದಿನ ಗತಿ ದೊರೆಯಲು ಸಹಾಯ  ವಾಗುವುದು : `ಶ್ರಾದ್ಧದ ಮಂತ್ರಗಳಿಂದ ನಿರ್ಮಾಣವಾಗುವ ಲಹರಿ, ಬ್ರಾಹ್ಮಣರ ಆಶೀರ್ವಾದ, ಸಂಬಂಧಿಕರ ಸದಿಚ್ಛೆ ಹಾಗೂ ಪಿಂಡದಾನದಂತಹ ಕರ್ಮಕಾಂಡದ ವಿಧಿಯಿಂದ ಅಲೌಕಿಕ ಪರಿಣಾಮವಾಗುತ್ತದೆ. ಇದರಿಂದ ಪಿತೃಗಳ ಲಿಂಗದೇಹದ ಸುತ್ತ ರಕ್ಷಾ ಕವಚವು ನಿರ್ಮಾಣವಾಗಿ, ಅದಕ್ಕೆ ಮುಂದಿನ ಗತಿ ದೊರೆಯಲು ಸಹಾಯವಾಗುತ್ತದೆ. ನರಕ, ಭುವಲೋಕ, ಪಿತೃಲೋಕ ಮತ್ತು ಸ್ವರ್ಗ ಇವುಗಳಲ್ಲಿ ಈ ವಿಧಿಗಳ ಲಾಭವಾಗುತ್ತದೆ.

೨ ಇ. ಪಿತೃಪಕ್ಷದಲ್ಲಿ ಪಿತೃಗಳ ಮಹಾಲಯ ಶ್ರಾದ್ಧ ಮಾಡಿದಾಗ ಅವರು ಸಂತುಷ್ಟರಾಗಿ ವರ್ಷವಿಡೀ ತೃಪ್ತರಾಗಿರುತ್ತಾರೆ ಹಾಗೂ ಅವರ ಕುಟುಂಬದವರಿಗೆ ಆಶೀರ್ವಾದ ಲಭಿಸುತ್ತದೆ.’ (ಆಧಾರ : ಸನಾತನದ ಗ್ರಂಥ `ಶ್ರಾದ್ಧದ ಮಹತ್ವ ಹಾಗೂ ಶಾಸ್ತ್ರೀಯ ವಿವೇಚನೆ’)

೨ ಈ. ಶ್ರಾದ್ಧವಿಧಿ ಮಾಡಿದ ನಂತರ ಪಿತೃಗಳ ಆಶೀರ್ವಾದ ಲಭಿಸುವುದರಿಂದ ಪಿಂಡಗಳಲ್ಲಿನ ಸಕಾರಾತ್ಮಕ ಊರ್ಜೆಯು ಹೆಚ್ಚಾಗುವುದು : ವಿಷಯ `೨ ಅ’ ದಿಂದ `೨ ಇ’ ಇದರಿಂದ ಶ್ರಾದ್ಧ ವಿಧಿ ಮತ್ತು ಪಿಂಡದಾನದ (ಪಿಂಡಪೂಜೆಯ) ಮಹತ್ವ ಅರಿವಾಗುತ್ತದೆ. ಶ್ರಾದ್ಧವಿಧಿ ಮಾಡಿದ ನಂತರ ಪಿಂಡಗಳ ನಿರೀಕ್ಷಣೆಯಿಂದ ಪಿಂಡಗಳ ಸಕಾರಾತ್ಮಕ ಊರ್ಜೆಯ ಪ್ರಭಾವಲಯ ಹೆಚ್ಚಾಗಿರುವುದು ಕಂಡುಬಂತು. ಇದರ ಅರ್ಥ ಶ್ರಾದ್ಧವಿಧಿಯಿಂದಾಗಿ ಪಿಂಡ ಸಕಾರಾತ್ಮಕ ಊರ್ಜೆಯಿಂದ ಭರ್ತಿಗೊಂಡಿತು. ಶ್ರಾದ್ಧವಿಧಿಯ ಮೊದಲಿನ ನಿರೀಕ್ಷಣೆ ಮಧ್ಯಾಹ್ನ ೩.೫೦ ಕ್ಕೆ ಮಾಡಲಾಗಿತ್ತು, ಅದರ ನಂತರ ರಾತ್ರಿ ೮.೧೫ ಕ್ಕೆ ಮಾಡಲಾಗಿತ್ತು. ಈ ನಾಲ್ಕುವರೆ ಗಂಟೆಯ ಅವಧಿಯಲ್ಲಿ ಪಿಂಡ ಹಳಸಿತ್ತು. ಪಿಂಡಗಳನ್ನು  ಅನ್ನದಿಂದ ಮಾಡಲಾಗುತ್ತದೆ. ತಾಜಾ ಅನ್ನವು ಸಾತ್ತ್ವಿಕವಾಗಿರುತ್ತದೆ. ಅನ್ನವು ಹಳಸಿದಂತೆಯೆ, ಅದರ ಸಾತ್ತ್ವಿಕತೆಯು ಕಡಿಮೆಯಾಗುತ್ತಾ ಹೋಗುತ್ತದೆ. ಆದ್ದರಿಂದ ನಾಲ್ಕುವರೆ ಗಂಟೆಯ ಸಮಯ ಕಳೆದ ನಂತರ ಪಿಂಡಗಳಲ್ಲಿನ ಸಕಾರಾತ್ಮಕ ಊರ್ಜೆಯು ಕಡಿಮೆಯಾಗುವುದು ಸಹಜವಾಗಿತ್ತು; ಆದರೆ ಹಾಗಾಗದೆ ಅವುಗಳಲ್ಲಿನ ಸಕಾರಾತ್ಮಕ ಊರ್ಜೆಯು ಹೆಚ್ಚಾಗುವುದು, ಇದು ಶ್ರಾದ್ಧವಿಧಿಯಿಂದ ಪಿಂಡದ ಮೇಲೆ ಸಕಾರಾತ್ಮಕ ಪರಿಣಾಮವಾಗಿರುವುದನ್ನು ಸ್ಪಷ್ಟಪಡಿಸುತ್ತದೆ. ಪಿಂಡದ ಮೇಲಾದ ಈ ಸಕಾರಾತ್ಮಕ ಪರಿಣಾಮವು ಶ್ರಾದ್ಧವಿಧಿಯಿಂದ ಪಿತೃಗಳ ಆಶೀರ್ವಾದ ಲಭಿಸಿರುವುದರಿಂದ ಆಯಿತು, ಎಂಬುದು ಅರಿವಾಗುತ್ತದೆ.

೨ ಉ. ಶ್ರಾದ್ಧವಿಧಿ ಪರಿಣಾಮಕಾರಿ ಆಗಲು ಇತರ ಘಟಕಗಳು

೧. ಶ್ರಾದ್ಧವನ್ನು ಸನಾತನದ ಆಶ್ರಮದ ಸಾತ್ತ್ವಿಕ ವಾತಾವರಣದಲ್ಲಿ ಮಾಡಲಾಯಿತು.

೨. ಶ್ರಾದ್ಧವಿಧಿಯನ್ನು ಮಾಡುವ ಪುರೋಹಿತ ಶ್ರೀ. ದಾಮೋದರ ವಝೆಗುರೂಜಿ ಸಾಧನೆ ಮಾಡುತ್ತಿದ್ದು, ಅವರ ಆಧ್ಯಾತ್ಮಿಕ ಮಟ್ಟ ಶೇ. ೬೧ ರಷ್ಟಿದೆ.

೩. ಶ್ರಾದ್ಧದ ಯಜಮಾನ ಶ್ರೀ. ಆದಿತ್ಯ ಕಾಸಕರ್ ಇವರು ಸನಾತನದ ಪೂರ್ಣವೇಳೆ ಸಾಧಕರಾಗಿದ್ದಾರೆ. ಅವರಿಂದ ಶ್ರಾದ್ಧ ವಿಧಿಯು ಭಾವಪೂರ್ಣವಾಯಿತು.

ಈ ಮೇಲಿನ ಎಲ್ಲ ವಿಷಯಗಳಿಂದ ಶ್ರಾದ್ಧವಿಧಿಯ ನಂತರ ಪಿಂಡಗಳ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ಹೆಚ್ಚಳವಾಗಿರುವುದು ಕಂಡುಬಂತು. ಈ ವೈಜ್ಞಾನಿಕ ಪ್ರಯೋಗದಿಂದ ಶ್ರಾದ್ಧವಿಧಿಯು ನಿರರ್ಥಕವಾಗಿರದೆ ಅದರ ಹಿಂದೆ ಅಧ್ಯಾತ್ಮಶಾಸ್ತ್ರೀವಿದೆ, ಎಂಬುದು ಸಿದ್ಧವಾಗುತ್ತದೆ.’ – ಆಧುನಿಕ ವೈದ್ಯೆ (ಸೌ.) ನಂದಿನಿ ಸಾಮಂತ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨.೧೦.೨೦೧೮)

ವಿ-ಅಂಚೆ : [email protected]

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.