ಹೃದಯ ಮತ್ತು ಶ್ವಾಸಾಂಗವ್ಯೂಹಕ್ಕೆ ಬಲ ನೀಡುವ ಆಯುರ್ವೇದದ ಕೆಲವು ಔಷಧಗಳು

೧. ಲಕ್ಷ್ಮೀವಿಲಾಸ ರಸ

ಇದು ಹೃದಯಕ್ಕೆ ಉತ್ತೇಜನವನ್ನು ನೀಡುವ ಔಷಧಿಯಾಗಿದೆ. ನಾಡಿಯ ಮಿಡಿತ ಕ್ಷೀಣವಾಗಿರುವಾಗ ಈ ಔಷಧಿಯನ್ನು ಸೇವಿಸಿದರೆ ಅದು ಮೊದಲಿನಂತಾಗಲು ಸಹಾಯವಾಗುತ್ತದೆ. ಇದನ್ನು ಸೇವಿಸುವುದರಿಂದ ರಕ್ತವಾಹಿನಿಗಳು ಹಿಗ್ಗುತ್ತವೆ ಮತ್ತು ಹೃದಯದ ಆಕುಂಚನ ಮತ್ತು ಪ್ರಸರಣದ ಕಾರ್ಯವು ಸರಿಯಾಗಿ ಆಗುತ್ತದೆ. ಈ ಔಷಧಿಯನ್ನು ವೈದ್ಯರ ಸಲಹೆಯಿಂದಲೇ ತೆಗೆದುಕೊಳ್ಳಬೇಕು. ತಾತ್ಕಾಲಿಕವಾಗಿ ಈ ಔಷಧವನ್ನು ತೆಗೆದುಕೊಳ್ಳುವುದಿದ್ದರೆ ಒಂದು ಮಾತ್ರೆಯನ್ನು ಪುಡಿಮಾಡಿ ಸ್ವಲ್ಪ ಜೇನುತುಪ್ಪದಲ್ಲಿ ಮಿಶ್ರಣ ಮಾಡಿ ಅದನ್ನು ಅಗಿದು ತಿನ್ನಬೇಕು. ಇತರ ಸಮಯದಲ್ಲಿ ೧೫ ದಿನಗಳಿಂದ ೧ ತಿಂಗಳ ವರೆಗೆ ಬೆಳಗ್ಗೆ ಮತ್ತು ಸಾಯಂಕಾಲ ಒಂದೊಂದು ಮಾತ್ರೆಯನ್ನು ಪುಡಿ ಮಾಡಿ ಮೇಲೆ ಹೇಳಿದಂತೆ ಜೇನುತುಪ್ಪದೊಂದಿಗೆ ಅಗಿದು ತಿನ್ನಬೇಕು.

ವೈದ್ಯ ಮೇಘರಾಜ ಪರಾಡಕರ

೧ ಅ. ಶ್ವಾಸಾಂಗವ್ಯೂಹ ಮತ್ತು ರಕ್ತಪರಿಚಲನಾವ್ಯೂಹ (ರಕ್ತಾಭಿಸರಣ ಸಂಸ್ಥೆ) ಇವುಗಳ ರೋಗಗಳು : ಶ್ವಾಸಾಂಗವ್ಯೂಹಕ್ಕೆ ಮತ್ತು ಹೃದಯಕ್ಕೆ ಬಲ ನೀಡಲು ಈ ಔಷಧಿಯು ಚೆನ್ನಾಗಿ ಉಪಯೋಗವಾಗುತ್ತದೆ. ವ್ಯಕ್ತಿಗೆ ಉಸಿರುಗಟ್ಟಿದಂತಾಗುವುದು, ಆಗಾಗ ಭಯಭೀತನಾಗುವುದು, ಹೃದಯಬಡಿತ ಹೆಚ್ಚಾಗುವುದು ಹೃದಯಕ್ಕೆ ಸಂಬಂಧಿಸಿದ ಈ ವಿಶಿಷ್ಟ ಲಕ್ಷಣಗಳಲ್ಲಿ ಈ ಔಷಧಿಯ ಉಪಯೋಗವಾಗುತ್ತದೆ.

೧ ಆ. ವಾಂತಿ ಮತ್ತು ಭೇದಿ : ವಾಂತಿ ಮತ್ತು ಭೇದಿಯಲ್ಲಿ ನಾಡಿಯ ಬಡಿತ ಕ್ಷೀಣವಾಗಿರುವಾಗ ಇದನ್ನು ಉಪಯೋಗಿಸಬಹುದು.

೧ ಇ. ವಿಷಮಶೀತ ಜ್ವರ (ಟೈಫಾಯಿಡ್) : ಕರುಳಿನಲ್ಲಿನ ವಿಷವನ್ನು ದೂರಗೊಳಿಸಲು ಮತ್ತು ಜ್ವರದಿಂದ ಬಂದ ಆಯಾಸವನ್ನು ದೂರಗೊಳಿಸಲು ಈ ಔಷಧಿ ಸಹಾಯ ಮಾಡುತ್ತದೆ.

೧ ಈ. ತಲೆನೋವು : ನಿರಂತರವಾಗಿ ತಲೆಯಲ್ಲಿ ಸಿಡಿತ ಬರುವುದು; ಹಣೆ, ಹುಬ್ಬುಗಳು, ಕುತ್ತಿಗೆ ಮತ್ತು ಬೆನ್ನಿನಲ್ಲಿ ಸೆಳೆತ ಬರುವುದು; ಶಾಖ ನೀಡಿದರೆ ಒಳ್ಳೆಯದೆನಿಸುವುದು ಮತ್ತು ತಂಪು ಗಾಳಿಯಿಂದ ವೇದನೆಗಳು ಹೆಚ್ಚಾಗುವುದು ಹೀಗೆ ವಿಶಿಷ್ಟ ಲಕ್ಷಣಗಳಿರುವ ತಲೆನೋವಿನಲ್ಲಿ ಈ ಔಷಧಿಯ ಉಪಯೋಗವಾಗುತ್ತದೆ.

೨. ಪ್ರಭಾಕರ ವಟಿ

ಇದು ಹೃದಯಕ್ಕೆ ಬಲನೀಡುವ ಔಷಧಿಯಾಗಿದೆ. ಇದು ‘ಎದೆಬಡಿತ ಹೆಚ್ಚಾಗುವುದು’, ಈ ಲಕ್ಷಣಕ್ಕೆ ಉಪಯೋಗವಾಗಿದೆ. ಹೃದಯದ ರೋಗಗಳಲ್ಲಿ ಹೃದಯದ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಇದು ಉಪಯೋಗವಾಗುತ್ತದೆ. ಕೊರೊನಾದಂತಹ ಅಂಟುರೋಗಗಳ ಜ್ವರದ ನಂತರ ಹೃದಯಕ್ಕೆ ಬರುವ ಆಯಾಸವು ಇದರ ಸೇವನೆಯಿಂದ ದೂರವಾಗುತ್ತದೆ. ೧೫ ದಿನಗಳಿಂದ ೧ ತಿಂಗಳು ಒಂದೊಂದು ಮಾತ್ರೆಯನ್ನು ದಿನದಲ್ಲಿ ಎರಡು ಸಲ ಜೇನು ತುಪ್ಪದೊಂದಿಗೆ ಅಗಿದು ತಿನ್ನಬೇಕು.

– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ ಗೋವಾ. (೧೫.೭.೨೦೨೨)

ಔಷಧಗಳನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು

ಔಷಧಗಳನ್ನು ತಮ್ಮ ಮನಸ್ಸಿಗನುಸಾರ ತೆಗೆದುಕೊಳ್ಳದೆ ವೈದ್ಯರ ಮರ್ಗದರ್ಶನಕ್ಕನುಸಾರವೇ ತೆಗೆದುಕೊಳ್ಳಬೇಕು; ಆದರೆ ಕೆಲವೊಮ್ಮೆ ತಕ್ಷಣ ವೈದ್ಯರಲ್ಲಿಗೆ ಹೋಗುವ ಸ್ಥಿತಿ ಇರುವುದಿಲ್ಲ ಅಥವಾ ಕೆಲವೊಮ್ಮೆ ವೈದ್ಯರ ಬಳಿ ಹೋಗುವ ಮೊದಲೆ ಕೂಡಲೇ ಔಷಧ ಬೇಕಾಗಿರುತ್ತದೆ. ಕೆಲವೊಮ್ಮೆ ಅಲ್ಪಸ್ವಲ್ಪ ಔಷಧ ಉಪಚಾರವನ್ನು ಮಾಡಿದ ನಂತರ ವೈದ್ಯರ ಬಳಿ ಹೋಗುವ ಅವಶ್ಯಕತೆಯೇ ಬೀಳುವುದಿಲ್ಲ. ಆದ್ದರಿಂದ ‘ಪ್ರಾಥಮಿಕ ಉಪಚಾರ ವೆಂದು ಇಲ್ಲಿ ಆಯುರ್ವೇದದಲ್ಲಿನ ಕೆಲವು ಔಷಧಗಳನ್ನು ಕೊಡಲಾಗಿದೆ. ಔಷಧಗಳನ್ನು ತೆಗೆದುಕೊಂಡು ಗುಣವಾಗದಿದ್ದರೆ ಇನ್ನು ಒಂದೆರಡು ದಿನ ನೋಡೋಣ ಎಂದು ಸಮಯವನ್ನು ವ್ಯರ್ಥ ಮಾಡದೆ ಸ್ಥಳೀಯ ವೈದ್ಯರನ್ನು ಭೇಟಿಯಾಗಬೇಕು.

ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ ಗೋವಾ. (೧೫.೭.೨೦೨೨)