ಜಗತ್ತಿನ ಆಧುನಿಕರಣದೊಂದಿಗೆ ಉದ್ಭವಿಸಿರುವ ದೈಹಿಕ ಸಮಸ್ಯೆಗಳಿಗೆ ‘ವ್ಯಾಯಾಮ’ವು ಒಂದು ಪರಿಣಾಮಕಾರಿ ಉಪಾಯವಾಗಿದೆ. ಈಗಿನ ಅನೇಕ ಶಾರೀರಿಕ ಸಮಸ್ಯೆಗಳಿಗೆ ಔಷಧೋಪಚಾರಗಳೊಂದಿಗೆ ಅನೇಕ ಮಾರ್ಗಗಳನ್ನು ಆಯ್ಕೆ ಮಾಡಲಾಗುತ್ತದೆ; ಆದರೆ ವ್ಯಾಯಾಮದ ಹೊರತು ಈ ಎಲ್ಲ ಪರಿಹಾರೋಪಾಯಗಳು ಅಪೂರ್ಣವಾಗಿವೆ. ಈ ಲೇಖನದಿಂದ ನಾವು ವ್ಯಾಯಾಮದ ಆವಶ್ಯಕತೆ ಮತ್ತು ಮಹತ್ವವನ್ನು ತಿಳಿದುಕೊಳ್ಳಲಿದ್ದೇವೆ. ಹಾಗೆಯೇ ವ್ಯಾಯಾಮದ ಕುರಿತಾದ ಸಂದೇಹ ನಿವಾರಣೆ ಮಾಡಲಿದ್ದೇವೆ.
ಭಾಗ ೫
ನಿಯಮಿತ ವ್ಯಾಯಾಮ ಮಾಡಲು ಒಂದು ಅತ್ಯುತ್ತಮವಾದ ಸಮಯ ನಿರ್ಧರಿಸಿ !
ವ್ಯಾಯಾಮಕ್ಕಾಗಿ ಸಮಯವನ್ನು ತೆಗೆಯಲು ಯೋಚಿಸುವುದೆಂದರೆ, ನಾವು ವ್ಯಾಯಾಮಕ್ಕೆ ಕೊನೆಯ ಆದ್ಯತೆಯನ್ನು ನೀಡುತ್ತೇವೆ ಮತ್ತು ನಮ್ಮಿಂದ ವ್ಯಾಯಾಮ ಮಾಡುವುದು ಉಳಿದು ಹೋಗುತ್ತದೆ. ಸಮಯವನ್ನು ನಿರ್ಧರಿಸಿದ ನಂತರ ‘ಆ ಸಮಯದಲ್ಲಿ ಆ ಕೃತಿಯನ್ನು ಮಾಡಬೇಕು’ ಎಂದು ನೆನಪಾಗುತ್ತದೆ ಮತ್ತು ನಾವು ಪ್ರತಿದಿನ ಆ ಸಮಯದಲ್ಲಿ ಆ ಕೃತಿಯನ್ನು ಮಾಡಿದ ನಂತರ ನಮಗೆ ಆ ವಿಷಯದ ಅಭ್ಯಾಸವಾಗುತ್ತದೆ. ಕೆಲವು ಕಾರಣಗಳಿಂದ ನಡು-ನಡುವೆ ವ್ಯಾಯಾಮ ಮಾಡಲು ಒಂದು ದಿನ ತಪ್ಪಿದರೆ ಸರಿ. ಆದರೆ ವ್ಯಾಯಾಮವನ್ನು ಸಾಧ್ಯವಾದಷ್ಟು ಬೇಗ ಹಿಂದಿನಂತೆ ಪುನಃ ಆರಂಭಿಸುವುದು ಮುಖ್ಯವಾಗಿದೆ. ಆದ್ದರಿಂದ ನಿಯಮಿತ ವಾಗಿ ವ್ಯಾಯಾಮವನ್ನು ಮಾಡಲು ಒಂದು ಸಮಯವನ್ನು ನಿರ್ಧರಿಸಿರಿ ಮತ್ತು ‘ನಿರ್ಧರಿಸಿದ ಸಮಯದಲ್ಲಿ ಸ್ವಯಂಚಾಲಿತವಾಗಿ ವ್ಯಾಯಾಮ ಹೇಗೆ ಆಗುತ್ತದೆ ?’, ಇದನ್ನು ಅನುಭವಿಸಿ ಮತ್ತು ಅದರ ಆನಂದ ಪಡೆಯಿರಿ !
– ಕು. ವೈದೇಹಿ ಶಿಂದೆ, ಭೌತಿಕಚಿಕಿತ್ಸಕ (ಫಿಸಿಯೋಥೆರಪಿ) ಅಭ್ಯಾಸಕರು, ಫೋಂಡಾ, ಗೋವಾ. (೧೧.೮.೨೦೨೪)