ನಿಮಗೆ ಎಲ್ಲಿ ಹಿಂದೂಗಳು ಮತ್ತು ಜ್ಯೂಗಳು ಕಾಣುತ್ತಾರೆ ಅಲ್ಲಿ ಅವರ ಹತ್ಯೆ ಮಾಡಿ ! – ಪ್ಯಾಲಿಸ್ಟೈನಿನ ಮುಸಲ್ಮಾನ ವಿದ್ವಾನ

ಮುಸಲ್ಮಾನ ವಿದ್ವಾನ ಡಾ. ಮಹಮ್ಮದ್ ಆಫೀಫ ಶಾಹಿದ್

ಜೆರುಸಲೆಮ್ – ಕುರಾನನಲ್ಲಿ ಇಸ್ಲಾಂನ ಪ್ರಸಾರ ಮಾಡಲು ಮುಸಲ್ಮಾನೇತರರನ್ನು ಕೊಲ್ಲಲು ಹೇಳಲಾಗಿದೆ. ಯಾರು ಶಸ್ತ್ರಾಸ್ತ್ರ ಹಿಡಿದು ಇಸ್ರೈಲ್‌ನ ಎಲ್ಲಾ ಜ್ಯೂ ಗಳನ್ನು ಕೊಲ್ಲುವರೋ, ಅವರೇ ಪ್ಯಾಲೇಸ್ಟೈನಿಗೆ ಸ್ವಾತಂತ್ರ್ಯ ದೊರಕಿಸಿ ಕೊಡುವರು. ಆದಷ್ಟು ಬೇಗನೆ ಮುಸಲ್ಮಾನರಲ್ಲಿ ಒಬ್ಬ ಖಲೀಫಾ ಹುಟ್ಟುವನು, ಅವನೇ ಸಂಪೂರ್ಣ ಜಗತ್ತನ್ನು ಆಳುವನು. ನಿಮಗೆ ಎಲ್ಲಿ ಅನೇಕ ದೇವರನ್ನು ಪೂಜಿಸುವವರು (ಅನೇಕ ದೇವತೆಗಳನ್ನು ಪೂಜಿಸುವವರು ಎಂದರೆ ಹಿಂದೂಗಳು) ಕಾಣುತ್ತಾರೆ, ಅಲ್ಲಿ ಅವರನ್ನು ಕೊಂದುಬಿಡಿ, ಎಂದು ಪ್ಯಾಲೆಸ್ಟೈನಿನ ವಿದ್ವಾನ ಡಾ. ಮಹಮ್ಮದ್ ಆಫೀಫ ಶಾಹಿದ್ ಇವರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಅವರ ಭಾಷಣದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗುತ್ತಿದೆ.
ಪ್ಯಾಲೆಸ್ಟೈನಿನಲ್ಲಿ ತುಲಕರ್ಮ ನಗರದ ಹತ್ತಿರ ಇರುವ ಬಿಲಾಲ ಬಿನ ರಬಾಹ ಮಸೀದಿಯಲ್ಲಿ ಆತ ಮುಸಲ್ಮಾನರಿಗೆ ಉದ್ದೇಶಿಸಿ ಮಾತನಾಡುವಾಗ ಈ ಹೇಳಿಕೆ ನೀಡಿದನು. ಡಾ. ಶಾಹಿದ್ ಅವರು ಈ ಸಮಯದಲ್ಲಿ ಮುಸಲ್ಮಾನ ಸೇನೆ ಸಿದ್ಧಪಡಿಸುವುದರ ಬಗ್ಗೆ ಕೂಡ ಹೇಳಿಕೆ ನೀಡಿದ್ದರು. ಈ ಮೊದಲು ಕೂಡ ಅವರು ಪ್ರಚೋದನಕಾರಿ ಹೇಳಿಕೆ ನೀಡಿರುವ ಅನೇಕ ವಿಡಿಯೋಗಳು ಪ್ರಸಾರಗೊಂಡಿದೆ.