ತೀವ್ರ ಅನಾರೋಗ್ಯದಲ್ಲೂ ಕೊನೆಯ ಉಸಿರಿರುವ ವರೆಗೆ ಸಾಧನೆ ಮಾಡಿದ ಸನಾತನದ ಸಾಧಕಿಯರಾದ ದಿ. (ಸೌ.) ಪ್ರಮಿಲಾ ಕೇಸರಕರ ಮತ್ತು ದಿ. (ಸೌ.) ಶಾಲಿನಿ ಮರಾಠೆ ಸಂತ ಪದವಿಯಲ್ಲಿ ವಿರಾಜಮಾನ !

ಪೂ. (ದಿ.) ಸೌ. ಪ್ರಮಿಲಾ ರಾಮದಾಸ ಕೇಸರಕರ

ಪೂ. (ದಿ.) ಸೌ. ಶಾಲಿನಿ ಪ್ರಕಾಶ ಮರಾಠೆ

ರಾಮನಾಥಿ (ಗೋವಾ) – ಅರ್ಬುದರೋಗದಂತಹ ಅಸಹನೀಯ ರೋಗವನ್ನು ಧೈರ್ಯದಿಂದ ಎದುರಿಸುತ್ತಾ ಕೊನೆಯ ಉಸಿರಿರುವ ತನಕ ಸಾಧನೆ ಮಾಡುತ್ತಿದ್ದ ಸನಾತನದ ಸಾಧಕಿ ದಿ. (ಸೌ.) ಪ್ರಮಿಲಾ ರಾಮದಾಸ ಕೇಸರಕರ (ದೇಹತ್ಯಾಗ : ೧೮.೧೦.೨೦೨೧) ಇವರು ಸನಾತನದ ೧೨೧ ನೇ ಸಂತ ಪದವಿ ಮತ್ತು ದಿ. (ಸೌ.) ಶಾಲಿನಿ ಪ್ರಕಾಶ ಮರಾಠೆ (ದೇಹತ್ಯಾಗ : ೧೬.೭.೨೦೨೨) ಇವರು ಸನಾತನದ ೧೨೨ ನೇ ಸಂತ ಪದವಿಯಲ್ಲಿ ವಿರಾಜಮಾನರಾದ ಆನಂದ ವಾರ್ತೆಯನ್ನು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು ಒಂದು ಸಂದೇಶದ ಮೂಲಕ ನೀಡಿದರು. ಪೂ. (ದಿ.) ಸೌ. ಪ್ರಮಿಲಾ ರಾಮದಾಸ ಕೇಸರಕರ (ಮೃತ್ಯು ಸಮಯದಲ್ಲಿ ವಯಸ್ಸು ೬೬ ವರ್ಷ) ಮತ್ತು ಪೂ. (ದಿ.) ಸೌ. ಶಾಲಿನಿ ಪ್ರಕಾಶ ಮರಾಠೆ (ಮೃತ್ಯು ಸಮಯದಲ್ಲಿ ವಯಸ್ಸು ೭೪ ವರ್ಷ) ಇವರು ಸನಾತನದ ಮಾರ್ಗದರ್ಶನದಲ್ಲಿ ಸುದೀರ್ಘವಾಗಿ ಸಾಧನೆಯನ್ನು ಮಾಡಿದರು. ಮೃತ್ಯುವಿನ ಮೊದಲು ವೇದನಾದಾಯಕ ಶಾರೀರಿಕ ಸ್ಥಿತಿಯಲ್ಲಿಯೂ ಭಗವಂತನ ಭಕ್ತಿಯ ಆಧಾರದಲ್ಲಿ ಸ್ಥಿರವಾಗಿದ್ದರು, ಭಗವಂತನ ಅಸ್ತಿತ್ವ ಅನುಭವಿಸುತ್ತಾ ಭೇಟಿ ನೀಡುವ ಸಾಧಕರಿಗೂ ಆನಂದ ನೀಡುವುದು, ಇದು ಅವರ ವೈಶಿಷ್ಟ್ಯವಾಗಿತ್ತು.