‘ಸಮಾಜಕ್ಕೆ ದೇವತೆಗಳ ಸಾತ್ತ್ವಿಕ ಮೂರ್ತಿಗಳ ಲಾಭವಾಗಬೇಕು’, ಎಂಬ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಇರುವ ತಳಮಳ !

ಸಚ್ಚಿದಾನಂದ ಪರಭ್ರಹ್ಮ ಡಾ. ಆಠವಲೆ

 

ಶ್ರೀ. ರಾಜೇಂದ್ರ ಸಾಂಭಾರೆ

‘ಸಾಧಕರಿಗೆ ಶ್ರೀ ಗಣೇಶ ಮೂರ್ತಿಯಿಂದ ಹೆಚ್ಚೆಚ್ಚು ಗಣೇಶತತ್ತ್ವವು ಸಿಗಬೇಕು’, ಎಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕ-ಕಲಾವಿದರಿಂದ ಮೊದಲು ಧೂಮ್ರವರ್ಣದ ಶ್ರೀ ಗಣಪತಿಯ ಮೂರ್ತಿಯನ್ನು ಸಿದ್ಧಪಡಿಸಿಕೊಂಡರು. ನಂತರ ಸಾಧಕ ಕಲಾವಿದರು ಶ್ರೀ ಗಣೇಶನ ಸಾತ್ತ್ವಿಕ ಮೂರ್ತಿಯನ್ನು ತಯಾರಿಸಿದರು. ‘ಸಾತ್ತ್ವಿಕ ಮೂರ್ತಿಯು ಹೇಗಿರಬೇಕು ?’, ಎಂದು ತಿಳಿಯಲು ಸನಾತನದ ಪ್ರತಿಯೊಂದು ಕೇಂದ್ರದಲ್ಲಿ ಮತ್ತು ಆಶ್ರಮಕ್ಕೆ ಧೂಮ್ರವರ್ಣದ ಶ್ರೀ ಗಣೇಶನ ಮೂರ್ತಿಯನ್ನು ಕಳುಹಿಸಿದರು, ಹಾಗೆಯೇ ಸನಾತನದ ಗ್ರಂಥ-ಪ್ರದರ್ಶನದಲ್ಲಿ ಎಲ್ಲರಿಗಾಗಿ ದರ್ಶನಕ್ಕಾಗಿ ಇಟ್ಟರು.  ಸಚ್ಚಿದಾನಂದ ಪರಬ್ರಹ್ಮದೇವರ ಈ ಹಿಂದಿನ ಉದ್ದೇಶವೆಂದರೆ, ಯಾರಿಗೆ ಇಂತಹ ತಯಾರಿಸಿದ ಸಾತ್ತ್ವಿಕ ಮೂರ್ತಿಗಳು ಬೇಕಿದ್ದರೆ, ಅವರು ಸಮಾಜದಲ್ಲಿನ ಮೂರ್ತಿಕಾರರಿಂದ ತಯಾರಿಸಿಕೊಳ್ಳಬಹುದು. ಅದಕ್ಕಾಗಿ ಸನಾತನ-ನಿರ್ಮಿತಿ ‘ಶ್ರೀ ಗಣಪತಿ’ ಈ ಗ್ರಂಥದಲ್ಲಿ ಸಾತ್ತ್ವಿಕ ಮೂರ್ತಿಯ ಛಾಯಾಚಿತ್ರಗಳು ಮತ್ತು ಅಳತೆಗಳನ್ನು ಕೊಡಲಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಒಮ್ಮೆ, “ಹಿಂದಿನ ಜನರು ಸಾತ್ತ್ವಿಕರಾಗಿದ್ದರು. ಅವರಿಗೆ ಈ ಮೂರ್ತಿಗಳ ಲಾಭವಾಗುತ್ತಿತ್ತು. ನಾವು ಶ್ರೀ ಗಣೇಶಮೂರ್ತಿಯಲ್ಲಿ ಹೆಚ್ಚೆಚ್ಚು ಗಣೇಶತತ್ತ್ವವು ಬರಲು ಪ್ರಯತ್ನಿಸುತ್ತಿದ್ದೇವೆ. ದೇವಸ್ಥಾನದಲ್ಲಿ ಇಂತಹ ಮೂರ್ತಿಗಳನ್ನು ಇಟ್ಟರೆ ಸಮಾಜದಲ್ಲಿನ ಜನರಿಗೆ ದೈವತ್ವದ ಲಾಭವಾಗಲಿದೆ. ಆ ದೃಷ್ಟಿಯಿಂದ ದುರ್ಗಾದೇವಿಯ ಮೂರ್ತಿ ತಯಾರಿಕೆಯು ಪ್ರಾರಂಭವಾಗಿದೆ.” ಎಂದು ಹೇಳಿದರು.

ನಮ್ಮೆಲ್ಲ ಸಾಧಕರ ಕ್ಷಮತೆ ಇಲ್ಲದಿರುವಾಗಲೂ ಗುರುದೇವರು ನಮ್ಮ ಸಿದ್ಧತೆಯನ್ನು ಮಾಡಿಸಿಕೊಳ್ಳುತ್ತಿದ್ದಾರೆ. ‘ಸಮಾಜಕ್ಕೆ ಈ ಜ್ಞಾನ ಬೇಕು’, ಎಂದು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಕೃಪೆಯಿಂದಲೇ ನನಗೆ ಇದನ್ನು ಬರೆಯಲು ಸಾಧ್ಯವಾಯಿತು’, ಇದಕ್ಕಾಗಿ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !’

– ಶ್ರೀ. ರಾಜೇಂದ್ರ ಸಾಂಭಾರೆ, ಸನಾತನ ಆಶ್ರಮ, ದೇವದ, ಪನವೇಲ. (೧೭.೯.೨೦೨೦)

ಶ್ರೀ ಗಣಪತಿಗೆ ದೂರ್ವೆಯನ್ನು ಅರ್ಪಿಸುವುದರ ಕಾರಣಗಳು

ಆಧ್ಯಾತ್ಮಿಕ ಕಾರಣ : ನಾವು ಪೂಜಿಸುವ ಮೂರ್ತಿಯಲ್ಲಿ ದೇವತ್ವವು ಹೆಚ್ಚಿಗೆ ಬಂದು ನಮಗೆ ಚೈತನ್ಯದ ಲಾಭವಾಗಬೇಕು ಎಂಬುದು ಪೂಜೆಯ ಒಂದು ಉದ್ದೇಶವಾಗಿರುತ್ತದೆ. ಆದುದರಿಂದ ಆಯಾಯ ದೇವತೆಗಳ ತತ್ತ್ವವನ್ನು ಹೆಚ್ಚೆಚ್ಚು ಆಕರ್ಷಿಸುವಂತಹ ವಸ್ತುಗಳನ್ನು ದೇವತೆಗಳಿಗೆ ಅರ್ಪಿಸುವುದು ಸೂಕ್ತವಾಗಿದೆ. ದೂರ್ವೆಯಲ್ಲಿ ಗಣೇಶತತ್ತ್ವವನ್ನು ಆಕರ್ಷಿಸುವ ಕ್ಷಮತೆಯು ಎಲ್ಲಕ್ಕಿಂತ ಹೆಚ್ಚಿಗೆ ಇರುವುದರಿಂದ ಗಣಪತಿಗೆ ದೂರ್ವೆಗಳನ್ನು ಅರ್ಪಿಸುತ್ತಾರೆ.