೧. ಗಣಪತಿಯೆಂದರೆ ಹಿಂದೂ ಸಂಘಟನೆಯ ಮೂರ್ತಿ
‘ಗಣೇಶೋತ್ಸವವು ಮೊದಲಿನಿಂದಲೂ ಪ್ರವೃತ್ತಿಪರವಾಗಿದೆ. ಅದು ಸಾರ್ವಜನಿಕ ಸ್ವರೂಪದ್ದಾಗಿದೆ. ಮೂಲದಲ್ಲಿ ಅವನ ಅಧಿಷ್ಠಾತ್ರಿ ದೇವತೆಯೇ ರಾಷ್ಟ್ರೀಯವಾಗಿದೆ. ಗಣಗಳ ಪತಿ ಯಾರಾಗಿದ್ದಾರೆಯೋ ಅವನೇ ಗಣಪತಿ. ಈ ದೇವತೆಯೆಂದರೆ ವೈಯಕ್ತಿಕ ಮೂರ್ತಿಯಾಗಿರದೇ, ಅದು ಗಣಶಕ್ತಿಯ ರಾಷ್ಟ್ರೀಯ ಜೀವನದ, ಹಿಂದೂ ಸಂಘಟನೆಯ ಮೂರ್ತಿಯಾಗಿದೆ.
೨. ರಾಷ್ಟ್ರೀಯ ಮಹೋತ್ಸವ
ಅದ್ದೂರಿಯಾಗಿ ಸಾವಿರಾರು ನರನಾರಿಯರ ರಾಷ್ಟ್ರೀಯ ಜಯಘೋμÀದಲ್ಲಿ ಮೆರವಣಿಗೆಯಲ್ಲಿ ಸಾಗಿರುವ ಆ ಗಣರಾಜನ ಸವಾರಿ. ಈ ಮಹೋತ್ಸವದ ಎಲ್ಲ ವಿಧಿವಿಧಾನ, ಪರಂಪರೆ ಮತ್ತು ಪ್ರಕ್ರಿಯೆ ಸಾರ್ವಜನಿಕ, ಪ್ರವೃತ್ತಿಪರ ಮತ್ತು ರಾಷ್ಟ್ರೀಯವಾಗಿದೆ.
೩. ಗಣೇಶನ ವೇದಗೀತೆ
ಗಣಪನನ್ನು ನಾವು ಭಾವದೊಂದಿಗೆ ಪೂಜಿಸಿ ‘ಗಣಾನಾ ತ್ವಾಂ ಗಣಪತಿಗುಂ ಹವಾಮಹೆ’ ಎಂಬ ರಾಷ್ಟ್ರಗೀತೆಯನ್ನು ಈ ವೇದಗೀತೆಯನ್ನು ಕೋಟಿ ಕೋಟಿ ಕಂಠನಿನಾದದಲ್ಲಿ ಹಾಡುತ್ತೇವೆ.
– ಸ್ವಾತಂತ್ರ್ಯವೀರ ಸಾವರಕರ (ಕಿರ್ಲೋಸ್ಕರ, ಸಪ್ಟೆಂಬರ ೧೯೩೫)