ಸರ್ವೋಚ್ಚ ನ್ಯಾಯಾಲಯದಲ್ಲಿ ‘ಜಮೀಯತ್ ಉಲೇಮ-ಎ-ಹಿಂದ ಹಲಾಲ್ ಟ್ರಸ್ಟ್’ ನಿಂದ ಯುಕ್ತಿವಾದ
ನವದೆಹಲಿ – ಹಲಾಲ ಪ್ರಮಾಣ ಪತ್ರದ ಬಗ್ಗೆ ಕೇಂದ್ರ ಸರಕಾರ ಮತ್ತು ‘ಜಮೀಯತ್ ಉಲೇಮ-ಎ-ಹಿಂದ ಹಲಾಲ ಟ್ರಸ್ಟ್’ ಇವರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದೆ. ‘ಕಬ್ಬಿಣದ ಸಲಾಕೆ ಮತ್ತು ಸಿಮೆಂಟ್ ಇಂತಹ ಉತ್ಪಾದನೆಗಳಿಗೂ ನೀಡಲಾಗಿರುವ ಹಲಾಲ ಪ್ರಮಾಣ ಪತ್ರ ಅನ್ಯಾಯವೇ ಆಗಿದೆ’, ಕೇಂದ್ರ ಸರಕಾರದ ಈ ಯುಕ್ತಿವಾದಕ್ಕೆ ಟ್ರಸ್ಟ್ ನಿಂದ ವಿರೋಧಿಸಲಾಗಿದೆ. ‘ಹಲಾಲ ಪ್ರಮಾಣ ಪತ್ರ ಕೇವಲ ಆಹಾರ ಪದಾರ್ಥಗಳಿಗೆ ಅಷ್ಟೇ ಸೀಮಿತ ಅಲ್ಲದೆ, ಅದು ಒಂದು ದೊಡ್ಡ ಸಮುದಾಯದ ಧಾರ್ಮಿಕ ಶ್ರದ್ಧೆಯ ಮತ್ತು ಜೀವನ ಶೈಲಿಯ ಒಂದು ಭಾಗವಾಗಿದೆ. ಈ ಅಂಶ ಭಾರತೀಯ ಸಂವಿಧಾನದ ಕಲಂ ೨೫ ಮತ್ತು ೨೬ ರ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಪಟ್ಟದ್ದಾಗಿದೆ, ಎಂದು ಟ್ರಸ್ಟ್ ಹೇಳಿದೆ.
(ಹೀಗೆ ಇದ್ದರೆ, ಹಲಾಲ ಪ್ರಮಾಣೀತ ಆಹಾರ ಪದಾರ್ಥ ಇದು ಹಿಂದುಗಳ ಧಾರ್ಮಿಕ ಶ್ರದ್ಧೆಯ ಹನನ ಮಾಡುತ್ತಿದೆ, ಅದರ ಬಗ್ಗೆ ಏನು ? – ಸಂಪಾದಕರು) ಹಲಾಲ ಪ್ರಮಾಣ ಪತ್ರದೊಂದಿಗೆ ಸಂಬಂಧಿತ ಕೃತಿ ಇದು ಸಂವಿಧಾನಾತ್ಮಕ ಅಧಿಕಾರದ ವ್ಯಾಪ್ತಿಯಲ್ಲಿ ಬರುತ್ತದೆ.’ ಕಲಂ ೨೫ ನಾಗರಿಕರು ಅವರ ಧರ್ಮದ ಪಾಲನೆ ಮತ್ತು ಪ್ರಚಾರ ಮಾಡಲು ಅಧಿಕಾರ ನೀಡುತ್ತದೆ ಹಾಗೂ ಕಲಂ ೨೬ ಧಾರ್ಮಿಕ ವಿಷಯದ ವ್ಯವಸ್ಥಾಪನೆ ಮಾಡಲು ಸ್ವಾತಂತ್ರ್ಯ ನಿಶ್ಚಿತಗೊಳಿಸುತ್ತದೆ.
ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ ೨೪ ರಂದು ಆರಂಭವಾಗುವ ವಾರದಲ್ಲಿ ನಡೆಯುವುದು.
ಅನಾವಶ್ಯಕ ಉತ್ಪಾದನೆಗಳ ಮೇಲೆ ಹಲಾಲ ಪ್ರಮಾಣ ಪತ್ರ ಏಕೆ ?
ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ, ‘ಕಬ್ಬಿಣದ ಸಲಾಕೆ ಮತ್ತು ಸಿಮೆಂಟ್ ನಂತಹ ಉತ್ಪಾದನೆಗಳಿಗೆ ಹಲಾಲ ಪ್ರಮಾಣೀಕರಣದ ಯಾವುದೇ ಔಚಿತ್ಯವಿಲ್ಲ. ಈ ಪರಿಕಲ್ಪನೆಯ ಜೊತೆಗೆ ಜನರ ಯಾವುದೇ ಸಂಬಂಧ ಇಲ್ಲ, ಅವರು ಹಲಾಲ ಪ್ರಮಾಣದ ಉತ್ಪಾದನೆಗಾಗಿ ಇಷ್ಟೊಂದು ಹೆಚ್ಚಿನ ಬೆಲೆ ಏಕೆ ನೀಡಬೇಕು ? ಹಲಾಲ ಪ್ರಮಾಣದ ಪ್ರಕ್ರಿಯೆಯಲ್ಲಿ ಆರ್ಥಿಕ ಪಾರದರ್ಶಕತೆಯ ಬಗ್ಗೆ ಕೂಡ ಸರಕಾರವು ಪ್ರಶ್ನಿಸಿದೆ.
‘ಹಲಾಲ ಪ್ರಮಾಣ ಪತ್ರ ಕೇವಲ ಧಾರ್ಮಿಕ ಶ್ರದ್ಧೆಗೆ ಜೋಡಣೆ ಆಗಿಲ್ಲ, ಅದು ಅಂತರಾಷ್ಟ್ರೀಯ ವ್ಯಾಪಾರದ ಜೊತೆಗೆ ಕೂಡ ಜೋಡಣೆ ಆಗಿದೆ !’ (ಅಂತೆ)
ಟ್ರಸ್ಟ್ ಇದರ ಬಗ್ಗೆ, ಅವರು ಎಂದಿಗೂ ಕಬ್ಬಿಣದ ಸಲಾಕೆ ಅಥವಾ ಸಿಮೆಂಟ್ ಗೆ ಹಲಾಲ ಪ್ರಮಾಣ ಪತ್ರ ನೀಡಿಲ್ಲ. ಆಹಾರ ಮತ್ತು ಅದನ್ನು ತಯಾರಿಸುವುದಕ್ಕಾಗಿ ಬಳಸುವ ಘಟಕಗಳ ಆಯ್ಕೆ ಮಾಡುತ್ತದೆ, ಇದು ಪ್ರತಿಯೊಬ್ಬ ವ್ಯಕ್ತಿಯ ಸಂವಿಧಾನಾತ್ಮಕ ಅಧಿಕಾರವಾಗಿದೆ. ಯಾವುದಾದರೂ ವ್ಯಕ್ತಿ ಏನು ತಿನ್ನಬೇಕು ಅಥವಾ ಏನು ತಿನ್ನಬಾರದು, ಇದನ್ನು ನಿಶ್ಚಯಿಸುವ ಅಧಿಕಾರ ಸರಕಾರಕ್ಕೆ ಇಲ್ಲ. ಹಲಾಲ್ ಪ್ರಮಾಣ ಪತ್ರ ಕೇವಲ ಧಾರ್ಮಿಕ ಶ್ರದ್ಧೆಗಷ್ಟೇ ಜೋಡಣೆ ಆಗಿಲ್ಲ, ಅದು ಅಂತರಾಷ್ಟ್ರೀಯ ವ್ಯಾಪಾರ ಮತ್ತು ವಾಣಿಜ್ಯದ ಜೊತೆಗೂ ಸಂಬಂಧ ಹೊಂದಿದೆ. ಅನೇಕ ಇಸ್ಲಾಮಿ ದೇಶಗಳಲ್ಲಿ ಹಲಾಲ ಪ್ರಮಾಣಿತ ಉತ್ಪಾದನೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದ ಈ ಪ್ರಮಾಣ ಪತ್ರ ಜಾಗತೀಕರಣ ಮಟ್ಟದಲ್ಲಿ ವ್ಯಾಪಾರದ ಒಂದು ಭಾಗವಾಗಿದೆ. (ಇಸ್ಲಾಮಿ ದೇಶದಲ್ಲಿ ಹಲಾಲ ಪ್ರಮಾಣಿತ ಉತ್ಪಾದನೆಗಳು ಬೇಕಿದ್ದರೆ ಭಾರತೀಯರಿಗೆ ಯಾವುದೇ ಅಡಚಣೆ ಇಲ್ಲ; ಆದರೆ ಭಾರತದಲ್ಲಿ ಎಲ್ಲರಿಗಾಗಿ ಅದು ಏಕೆ ಅನಿವಾರ್ಯಗೊಳಿಸಲಾಗುತ್ತಿದೆ? – ಸಂಪಾದಕರು)
ಆರ್ಥಿಕ ಅನಿಯಮಿತತೆಯ ಆರೋಪ ತಳ್ಳಿ ಹಾಕಿದೆ
ಕೇಂದ್ರ ಸರಕಾರವು ಹಲಾಲ ಪ್ರಮಾಣ ಸಂಸ್ಥೆಗಳ ಮೇಲೆ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿ ಅದನ್ನು ಇತರ ಕಾರಣಗಳಿಗಾಗಿ ಬಳಸುತ್ತಿರುವ ಆರೋಪ ಮಾಡಿತ್ತು. ಅದರ ಬಗ್ಗೆ ಟ್ರಸ್ಟ್ ನಿಂದ, ಈ ಆರೋಪ ಸಂಪೂರ್ಣವಾಗಿ ನಿರಾಧಾರವಾಗಿದೆ. ನಮ್ಮ ಆರ್ಥಿಕ ದಾಖಲೆ ಪತ್ರಗಳು ಮೊದಲೇ ತೆರಿಗೆ ಇಲಾಖೆ ಮತ್ತು ಜಿ.ಎಸ್.ಟಿ .(ವಸ್ತು ಮತ್ತು ಸೇವಾ ತೆರಿಗೆ) ವಿಭಾಗದ ಬಳೆಳಿ ಇದೆ ಮತ್ತು ಸರಕಾರಕ್ಕೆ ಅದರ ಸಂಪೂರ್ಣ ಅರಿವು ಇದೆ, ಎಂದು ಹೇಳಿದೆ.
ಉತ್ತರಪ್ರದೇಶ ಸರಕಾರದ ಸುತ್ತೋಲೆಯಿಂದ ವಿವಾದ ನಿರ್ಮಾಣ
ಉತ್ತರ ಪ್ರದೇಶ ಸರಕಾರ ಹಲಾಲ ಪ್ರಮಾಣಿತ ಆಹಾರ ಉತ್ಪಾದನೆಯ ಉತ್ಪಾದನೆ, ಸಂಗ್ರಹ, ಮಾರಾಟ ಮತ್ತು ವಿತರಣೆ ಇದರ ಮೇಲೆ ನಿಷೇಧ ಹೇರುವ ಅಧಿಸೂಚನೆ ಪ್ರಸಾರ ಮಾಡಿದ ನಂತರ ವಿವಾದ ಆರಂಭವಾಗಿದೆ. ಆದರೂ ಈ ಆದೇಶದಲ್ಲಿ ಕೇವಲ ರಫ್ತಿಗಾಗಿ ಉತ್ಪಾದನೆ ಮಾಡಿರುವ ಉತ್ಪಾದನೆಗಳಿಗೆ ರಿಯಾಯಿತಿ ನೀಡಲಾಗಿದೆ.
ಸಂಪಾದಕೀಯ ನಿಲುವುಇದಕ್ಕೆ ಅನುಕೂಲಕ್ಕೆ ತಕ್ಕಂತೆ ಯಾವುದಾದರೂ ಧಾರ್ಮಿಕ ವಿಷಯದ ಅರ್ಥ ತಿಳಿಸಿ ಅದರ ಮೂಲಕ ತಮ್ಮ ಜೇಬುಗಳನ್ನು ತುಂಬಿಕೊಳ್ಳುವುದು, ಎಂದು ಹೇಳುತ್ತಾರೆ. ಸರ್ವೋಚ್ಚ ನ್ಯಾಯಾಲಯವು ಇಂತಹ ವಂಚಿಸುವ ಮತ್ತು ಸುಳ್ಳು ಯುತ್ತಿವಾದವನ್ನು ಲೆಕ್ಕಿಸದೆ ಭಾರತೀಯರಿಗೆ ಹಲಾಲ ಮುಕ್ತ ಉತ್ಪಾದನೆಗಳು ಲಭ್ಯವಾಗುವ ಹಾಗೆ ನಿರ್ಣಯ ನೀಡಬೇಕು, ಹೀಗೆ ಜನರ ಅಪೇಕ್ಷೆ ಆಗಿದೆ ! |