ನಮಗೆ ‘ನಕಲಿ’ ಮುಸಲ್ಮಾನರನ್ನು ಹೆಚ್ಚಿಸುವುದಿದೆ ! – ತಸ್ಲಿಮ ನಸ್ರೀನ್

ನವದೆಹಲಿ – ‘ಸತ್ಯ ಏನು ಎಂದರೆ, ‘ನಿಜವಾದ ಮುಸಲ್ಮನರು’ ಪವಿತ್ರ ಗ್ರಂಥದ ಧಾರ್ಮಿಕ ದೃಷ್ಟಿಯಿಂದ ನಿಖರವಾಗಿ ಪಾಲನೆ ಮಾಡುತ್ತಾರೆ. ಅವರು ಇಸ್ಲಾಂಅನ್ನು ಟೀಕಿಸುವವರ ಮೇಲೆ ದಾಳಿ ಮಾಡುತ್ತಾರೆ. ‘ನಕಲಿ’ ಮುಸಲ್ಮಾನರು ಮಾತ್ರ ಮಾನವತೆಯ ಮೇಲೆ ವಿಶ್ವಾಸವಿಡುತ್ತಾರೆ. ಹಾಗೂ ಅವರು ಹಿಂಸಾಚಾರವನ್ನು ವಿರೋಧಿಸುತ್ತಾರೆ. ನಮಗೆ ನಕಲಿ ಮುಸಲ್ಮಾನರನ್ನು ಹೆಚ್ಚಿಸಬೇಕಿದೆ’, ಎಂದು ಸಧ್ಯ ಭಾರತದಲ್ಲಿ ವಾಸಿಸುವ ಮತ್ತು ಮೂಲ ಬಾಂಗ್ಲಾದೇಶದ ಲೇಖಕಿ ತಸ್ಲಿಮ ನಸ್ರೀನ್ ಇವರು ಟ್ವೀಟ್ ಮಾಡಿದ್ದಾರೆ.