ಭಾರತವನ್ನು ‘ಹಿಂದುಳಿದ’ ಎಂದು ಕರೆಯುವುದಕ್ಕಿಂತ ಮೂರ್ಖತನದ ಸಂಗತಿ ಜಗತ್ತಿನಲ್ಲಿ ಬೇರೆ ಎಲ್ಲಾದರೂ ಕಾಣಬಹುದೇ ?
‘ಭಾರತವನ್ನು ಹೊರತುಪಡಿಸಿ ಇತರ ದೇಶಗಳ ಪೂರ್ವಜರು ಏನನ್ನೂ ಕಂಡು ಹಿಡಿದಿಲ್ಲ. ನಮ್ಮ ಪೂರ್ವಜ ಋಷಿಮುನಿಗಳು ಜನನದ ಮೊದಲು ಮತ್ತು ನಂತರದ ಜೀವನ, ಅನೇಕ ಯುಗಗಳು, ಸಪ್ತಲೋಕ ಮತ್ತು ಸಪ್ತಪಾತಾಳ ಇತ್ಯಾದಿ ಎಲ್ಲ ವಿಷಯಗಳ ಮಾಹಿತಿಯನ್ನು ಬರೆದಿಟ್ಟಿದ್ದಾರೆ. ಅಷ್ಟೇ ಅಲ್ಲದೇ, ಜನನ-ಮರಣದ ಚಕ್ರಗಳಿಂದ ಹೇಗೆ ಮುಕ್ತರಾಗಬೇಕು, ಈಶ್ವರಪ್ರಾಪ್ತಿಯನ್ನು ಹೇಗೆ ಮಾಡಬೇಕು ಎಂಬ ಎಲ್ಲ ವಿಷಯಗಳ ಜ್ಞಾನವನ್ನೂ ಬರೆದಿಟ್ಟಿದ್ದಾರೆ. ಭಾರತದಲ್ಲಿ ಇಂತಹ ಸ್ಥಿತಿ ಇರುವಾಗ ವಿದೇಶದಲ್ಲಿರುವ ಜನರು ಭಾರತವನ್ನು ‘ಹಿಂದುಳಿದ’ ಎಂದು ಕರೆಯುತ್ತಾರೆ. ಇದಕ್ಕಿಂತ ಹೆಚ್ಚು ಮೂರ್ಖತನವು ಜಗತ್ತಿನಲ್ಲಿ ಬೇರೆ ಎಲ್ಲಾದರೂ ಕಾಣಬಹುದೇ ? ಹಿಂದೂಗಳೇ, ಈ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಮನಸ್ಸಿನಲ್ಲಿರುವ ಕೀಳರಿಮೆಯನ್ನು ದೂರ ಮಾಡಿ !’
– (ಸಚ್ಚಿದಾನಂದ ಪರಬ್ರಹ್ಮ) ಡಾ. ಆಠವಲೆ
ಹಿಂದೂ ರಾಷ್ಟ್ರದಲ್ಲಿ ‘ನಮಗೆ ನಮ್ಮ ದೇವತೆಗಳು ಆದರ್ಶರಾಗಿರುತ್ತಾರೆ’, ಎಂದು ಕೇವಲ ಮಾತನಾಡುವವರಲ್ಲ, ಅವರ ಜೀವನಚರಿತ್ರೆಯನ್ನು ಕೃತಿಯಲ್ಲಿ ತರುವ ಆಡಳಿತಗಾರರು ಇರಲಿದ್ದಾರೆ !
‘ಇತ್ತೀಚಿನ ರಾಜಕಾರಣಿಗಳು ‘ನಾವು ಶ್ರೀರಾಮನನ್ನು ಆದರ್ಶವೆಂದು ನಂಬುತ್ತೇವೆ’, ‘ನಾವು ಶ್ರೀಕೃಷ್ಣನ ವಂಶಜರಾಗಿದ್ದೇವೆ’, ಎಂಬ ಆಶಯದ ಕೇವಲ ಹೇಳಿಕೆ ನೀಡುತ್ತಾರೆ; ಆದರೆ ಅವರು ಸ್ವತಃ ಕೃತಿಯನ್ನು ಅಂದರೆ ಸಾಧನೆಯನ್ನು ಮಾಡುವುದಿಲ್ಲ. ಹಿಂದೂ ರಾಷ್ಟ್ರದ ಆಡಳಿತಗಾರರು ಮಾತ್ರ ಸಾಧನೆಯನ್ನು ಮಾಡುವವರಾಗಿರುವರು ಮತ್ತು ಅವರು ಸಮಾಜದಿಂದಲೂ ಸಾಧನೆಯನ್ನು ಮಾಡಿಸಿಕೊಳ್ಳುವರು. ಆದುದರಿಂದ ರಾಜ ಮತ್ತು ಪ್ರಜೆ ಇವರ ಐಹಿಕ ಮತ್ತು ಪಾರಮಾರ್ಥಿಕ ಹೀಗೆ ಎರಡೂ ಸ್ತರಗಳಲ್ಲಿ ಉತ್ಕರ್ಷವನ್ನು ಸಾಧಿಸಲಾಗುವುದು.’
– (ಸಚ್ಚಿದಾನಂದ ಪರಬ್ರಹ್ಮ) ಡಾ. ಆಠವಲೆ