ಕಾಬುಲನೊಳಗೆ ನುಗ್ಗಿ ಡ್ರೋನ್ ಬಳಸಿ ಕ್ಷಿಪಣಿ ಮೂಲಕ ಅಮೇರಿಕಾ ಕಾರ್ಯಾಚರಣೆ !
ಕಾಬುಲ (ಅಫ್ಘಾನಿಸ್ತಾನ)– ಇಲ್ಲಿಯ ಶೇರಪುರ ಪ್ರದೇಶದಲ್ಲಿ ಡ್ರೋನ್ ಬಳಸಿ ಹಾರಿಸಲಾಗಿರುವ 2 ಕ್ಷಿಪಣಿಗಳ ಮೂಲಕ ಜಿಹಾದಿ ಭಯೋತ್ಪಾದಕ ಸಂಘಟನೆ ಅಲ್-ಕೈದಾದ ಮುಖಂಡ ಅಯ್ಮಾನ ಅಲ್-ಜವಾಹಿರಿಯ ಹತ್ಯೆ ಮಾಡಲಾಗಿದೆ. ಜುಲೈ 31 ರಂದು ಮಧ್ಯಾಹ್ನ ಈ ಕಾರ್ಯಾಚರಣೆ ನಡೆಸಲಾಗಿದೆಯೆಂದು ಅಮೇರಿಕಾ ರಾಷ್ಟ್ರಾಧ್ಯಕ್ಷ ಜೊ ಬೈಡನ್ ಇವರ ತಿಳಿಸಿದರು. ಜವಾಹಿರಿ ಇಲ್ಲಿ ತನ್ನ ನಿವಾಸದ ಉಪ್ಪರಿಗೆ ಮೇಲೆ ಬಂದಾಗ ಅವನ ಮೇಲೆ ‘ಹೆಲ್‌ಫೈರ್ ಆರ್9ಎಕ್ಸ್’ ಎಂಬ 2 ಕ್ಷಿಪಣಿಗಳನ್ನು ಬಿಡಲಾಯಿತು. ಇವು ವಿಶೇಷ ಪ್ರಕಾರದ ಕ್ಷಿಪಣಿಯಾಗಿದ್ದು ಇವು ಸ್ಫೋಟಗೊಳ್ಳುವುದಿಲ್ಲ, ಇದರಿಂದ ಚಾಕುವಿನಂತಹ ಬ್ಲೇಡ್ ಹೊರಗೆ ಬರುತ್ತವೆ ಮತ್ತು ಅದರ ಮೂಲಕ ಗುರಿಯನ್ನು ಭೇದಿಸುತ್ತವೆ. ಹಾಗೆಯೇ ಇದರಿಂದ ಗುರಿ ಬಿಟ್ಟು ಸುತ್ತಮುತ್ತಲು ಸಾವು ನೋವು ಕಾಣಿಸುವುದಿಲ್ಲ ಎನ್ನಲಾಗಿದೆ. ಅಮೇರಿಕಾದ ಈ ಕಾರ್ಯಾಚರಣೆಗೆ ತಾಲಿಬಾನ ಆಕ್ರೋಶಗೊಂಡಿದ್ದು, ಅದು ‘ದೋಹಾ ಒಪ್ಪಂದ’ದ ಉಲ್ಲಂಘನೆಯಾಗಿದೆಯೆಂದು ಹೇಳಿದೆ.
Ayman al-Zawahri, who took over Al Qaeda after the death of Osama bin Laden, was killed in the U.S. drone strike. Zawahri was the No. 2 in Al Qaeda on Sept. 11, and American officials considered him a central plotter of the attacks.
Follow live updates: https://t.co/xrZO8TujRC
— The New York Times (@nytimes) August 1, 2022
೧. ಅಲ್ ಕೈದಾ ಮುಖಂಡ ಒಸಾಮಾ ಬಿನ್ ಲಾಡೆನ ಇವನನ್ನು ಅಮೇರಿಕಾ 2011 ರಲ್ಲಿ ಪಾಕಿಸ್ತಾನದೊಳಗೆ ನುಗ್ಗಿ ಹತ್ಯೆ ಮಾಡಿದ ಬಳಿಕ ಜವಾಹಿರಿ ಅಲ್-ಕೈದಾದ ಮುಖ್ಯಸ್ಥನಾಗಿದ್ದನು. ಈಗ ಅವನನ್ನು ಹತ್ಯೆ ಮಾಡಿದ ಬಳಿಕ ಅಲ್-ಅದೇಲ ಅಲ್ ಕೈದಾ ಮುಖಂಡನಾಗಬಹುದು ಎಂದು ಹೇಳಲಾಗುತ್ತಿದೆ.
೨. ನ್ಯೂಯಾರ್ಕ ಟೈಮ್ಸ ಸುದ್ದಿಗನುಸಾರ ಈ ಕಾರ್ಯಾಚರಣೆ ಅಮೇರಿಕಾದ ಗೂಢಚಾರ ಸಂಸ್ಥೆ ಸಿ.ಐ.ಎ.ಯ ವಿಶೇಷ ದಳ ನಡೆಸಿದೆ. ಅಗಸ್ಟ 2021ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜವಾಹಿರಿ ಕಾಬುಲನಲ್ಲಿ ವಾಸಿಸುತ್ತಿದ್ದನು.
೩. ಅಲ್- ಜವಾಹಿರಿ ಹತ್ಯೆಯ ಬಳಿಕ ಅಮೇರಿಕಾ ರಾಷ್ಟ್ರಾಧ್ಯಕ್ಷ ಜೋ ಬೈಡನ್ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ, ನಾವು ಜವಾಹಿರಿಯನ್ನು ಹುಡುಕಿ ಹತ್ಯೆ ಮಾಡಿದ್ದೇವೆ. ನಾವು ಅಫ್ಘಾನಿಸ್ತಾನದ ಭಯೋತ್ಪಾದಕರ ಮೇಲೆ ಆಕ್ರಮಣ ಮುಂದುವರಿಸಲಿದ್ದೇವೆ ಎಂದು ಹೇಳಿದರು.
ಅಲ್- ಜವಾಹಿರಿಯನ್ನು ಹೇಗೆ ಹತ್ಯೆ ಮಾಡಲಾಯಿತು?
31 ಜುಲೈ ಮಧ್ಯಾಹ್ನ ಅಲ್ ಜವಾಹಿರಿ ಮನೆಯ ಉಪ್ಪರಿಗೆಯ ಮೇಲೆ ಬಂದಿದ್ದನು. ‘ಅವನು ಪ್ರತಿದಿನ ಇಲ್ಲಿ ಬರುತ್ತಾನೆ ಮತ್ತು ಸ್ವಲ್ಪ ಸಮಯ ನಿಲ್ಲುತ್ತಾನೆ’, ಎಂದು ಅಮೇರಿಕಾದ ಗುಪ್ತಚರ ಇಲಾಖೆಯ ಗಮನಕ್ಕೆ ಬಂದಿತ್ತು. ಅಲ್- ಜವಾಹಿರಿ ಉಪ್ಪರಿಗೆಯ ಮೇಲೆ ನಿಂತಿದ್ದಾಗ ದ್ರೋನ್ ಮೂಲಕ 2 ಹೆಲ್‌ಫೈರ್ ಆರ್9ಎಕ್ಸ್ ಕ್ರಿಪಣಿಗಳನ್ನು ಬಿಡಲಾಯಿತು. ಮನೆಯಲ್ಲಿ ಜವಾಹಿರಿಯ ಕುಟುಂಬ ಕೂಡ ಇತ್ತು; ಆದರೆ ಅವರಿಗೆ ಯಾವುದೇ ರೀತಿಯ ಹಾನಿ ಆಗಲಿಲ್ಲ. ವಿಶೇಷವೆಂದರೆ ಅಮೇರಿಕಾ ಅಫ್ಘಾನಿಸ್ತಾನದಿಂದ ಹೊರಬಿದ್ದಿದ್ದರೂ, ಕಾಬೂಲನಲ್ಲಿ ನುಗ್ಗಿ ಈ ಕಾರ್ಯಾಚರಣೆ ನಡೆಸಿತು. ಶೇರಪುರ ಪ್ರದೇಶದಲ್ಲಿ ಈ ಹಿಂದೆ ಅಮೇರಿಕಾದ ಸೇನಾ ನೆಲೆಯಿತ್ತು, ಆದರೆ ಈ ಕಾರ್ಯಾಚರಣೆಯ ಸಮಯದಲ್ಲಿ ಅಮೇರಿಕಾದ ಸೈನಿಕರು ಯಾರೂ ಅಲ್ಲಿ ಉಪಸ್ಥಿತರಿರಲಿಲ್ಲ.
‘ವರ್ಲ್ಡ ಟ್ರೇಡ ಸೆಂಟರ’ ಮೇಲಿನ ಆಕ್ರಮಣದ ಆರೋಪ ಹೊತ್ತಿದ್ದ ಅಲ್-ಜವಾಹಿರಿ
ಸಪ್ಟೆಂಬರ 11 , 2001 ರಂದು ಅಮೇರಿಕಾದ ನ್ಯೂಯಾರ್ಕ ನಗರದ ‘ವರ್ಲ್ಡ ಟ್ರೇಡ ಸೆಂಟರ’ ಮೇಲೆ ನಡೆಸಲಾದ ಆಕ್ರಮಣದಲ್ಲಿ ಅಮೇರಿಕಾ ಒಸಾಮಾ ಬಿನ್ ಲಾಡೆನ್, ಅಲ್-ಜವಾಹಿರಿ ಮತ್ತು ಅಲ್ ಕಾಯದಾದ ಎಲ್ಲ ಭಯೋತ್ಪಾದಕರನ್ನು ಆರೋಪಿಗಳನ್ನಾಗಿ ಮಾಡಿತ್ತು. ಜವಾಹಿರಿಯನ್ನು ಹತ್ಯೆ ಮಾಡಲು ಅಮೇರಿಕಾ ಈ ಹಿಂದೆಯೂ ಅನೇಕ ಬಾರಿ ಪ್ರಯತ್ನಿಸಿತ್ತು. 2001 ರಲ್ಲಿ ಜವಾಹಿರಿ ಅಫಘಾನಿಸ್ತಾನದ ತೋರಾ ಬೋರಾದಲ್ಲಿ ಅಡಗಿರುವ ಮಾಹಿತಿ ಸಿಕ್ಕಿತ್ತು. ಆದರೆ ಆಕ್ರಮಣವಾಗುವ ಮೊದಲೇ ಅವನು ಓಡಿ ಹೋಗಿದ್ದ. ಆ ಆಕ್ರಮಣದಲ್ಲಿ ಅವನ ಪತ್ನಿ ಮತ್ತು ಮಕ್ಕಳು ಮರಣ ಹೊಂದಿದ್ದರು. 2006 ರಲ್ಲಿ ಅಮೇರಿಕಾದ ಗೂಢಚಾರ ಸಂಸ್ಥೆಯು ಜವಾಹಿರಿಯನ್ನು ಹತ್ಯೆ ಮಾಡಲು ಪುನಃ ಸಂಚು ರೂಪಿಸಿತ್ತು. ಆ ಸಮಯದಲ್ಲಿ ಅವನು ಪಾಕಿಸ್ತಾನದ ದಮಡೊಲಾದಲ್ಲಿ ಅಡಗಿರುವ ಮಾಹಿತಿ ಸಿಕ್ಕಿತ್ತು. ಆದರೆ ಕ್ಷಿಪಣಿಯ ಮೂಲಕ ಆಕ್ರಮಣವಾಗುವ ಮೊದಲೇ ಜವಾಹಿರಿ ಅಲ್ಲಿಂದ ತಪ್ಪಿಸಿಕೊಂಡಿದ್ದನು.
ಭಾರತದ ಹಿಜಾಬ ಪ್ರಕರಣದ ಸಂದರ್ಭದಲ್ಲಿ ಬೆದರಿಕೆ ನೀಡಿದ್ದ ಜವಾಹಿರಿ.
ಅಲ್-ಜವಾಹಿರಿ ಈ ವರ್ಷ ಎಪ್ರಿಲ್ ನಲ್ಲಿ 9 ನಿಮಿಷಗಳ ವೀಡಿಯೋ ಪ್ರಸಾರ ಮಾಡಿದ್ದ. ಈ ವೀಡಿಯೋದಲ್ಲಿ ಅವನು ಹಾಲೆಂಡ, ಫ್ರಾನ್ಸ ಮತ್ತು ಇಜಿಪ್ತ ಇವು ಮುಸ್ಲಿಂ ವಿರೋಧಿ ದೇಶಗಳಾಗಿವೆಯೆಂದು ಹೇಳಿದ್ದ. ಇದರೊಂದಿಗೆ ಭಾರತದ ಹಿಜಾಬ ವಿವಾದದ ಮೇಲೆಯೂ ಹೇಳಿಕೆ ನೀಡಿದ್ದನು.
ಜೂನ ತಿಂಗಳಲ್ಲಿ ಅಲ್ ಕೈದಾ ವೀಡಿಯೋ ಪ್ರಸಾರ ಮಾಡಿ ಭಾರತದಲ್ಲಿ ಆಕ್ರಮಣ ಮಾಡುವುದಾಗಿ ಬೆದರಿಕೆ ನೀಡಿತ್ತು.
ನೂಪುರ ಶರ್ಮಾ ಪ್ರಕರಣದ ಬಗ್ಗೆ ಅಲ್- ಕೈದಾ ಜೂನ 7 ರಂದು ಒಂದು ವೀಡಿಯೋ ಪ್ರಸಾರ ಮಾಡಿತ್ತು. ಅಲ್ ಕೈದಾ ಬಾಂಬ್ ಸ್ಫೋಟ ಮಾಡಿ ಹಿಂದೂಗಳನ್ನು ಹತ್ಯೆ ಮಾಡಿ ಮಹಮ್ಮದ ಪೈಗಂಬರರ ತಥಾಕಥಿತ ಅಪಮಾನದ ಸೇಡು ತೀರಿಸಿಕೊಳ್ಳುವ ಬಗ್ಗೆ ಎಚ್ಚರಿಕೆ ನೀಡಿತ್ತು. ಉತ್ತರಪ್ರದೇಶ, ದೆಹಲಿ ಮತ್ತು ಗುಜರಾತ ರಾಜ್ಯಗಳಲ್ಲದೇ ಮುಂಬಯಿಯಲ್ಲಿ ಆಕ್ರಮಣ ನಡೆಸುವ ಬೆದರಿಕೆ ಹಾಕಿತ್ತು.
ಸಂಪಾದಕೀಯ ನಿಲುವು‘ಅಮೇರಿಕಾ ತನ್ನ ಶತ್ರುವಿನ ವಿರುದ್ಧು ಬೇರೆ ದೇಶಗಳಲ್ಲಿ ನುಗ್ಗಿ ಈ ರೀತಿಯ ಕಾರ್ಯಾಚರಣೆಯನ್ನು ಸತತವಾಗಿ ಮಾಡುತ್ತಿರುತ್ತದೆ, ಹಾಗಿರುವಾಗ ಭಾರತವೇಕೆ ಹಾಗೆ ಮಾಡುವುದಿಲ್ಲ?’, ಎನ್ನುವ ಪ್ರಶ್ನೆ ಪ್ರತಿಯೊಬ್ಬ ಭಾರತೀಯರ ಮನಸ್ಸಿನಲ್ಲಿ ಮೂಡಿದೆ. |