೧. ಅಣೆಕಟ್ಟುಗಳಿಂದ ನಿರ್ಮಾಣವಾದ ಅಪಾಯ
ನದಿಯು ಸಮುದ್ರಕ್ಕೆ ಸೇರುವಾಗ ಅದರ ನೀರು ವ್ಯರ್ಥ ವಾಗುತ್ತದೆ, ಎಂದು ಹೇಳುತ್ತ ದೇಶದಾದ್ಯಂತ ಅಣೆಕಟ್ಟುಗಳನ್ನು ಕಟ್ಟಲಾಯಿತು. ಅಣೆಕಟ್ಟುಗಳು ಸಾಕಾಗುವುದಿಲ್ಲವೆಂದು ಈಗ ನದಿ ಗಳನ್ನು ಜೋಡಣೆ ಯೋಜನೆಯ ದುರಾಸೆ ಮಾಡಲಾಗುತ್ತಿದೆ; ಆದರೆ ‘ಅಣೆಕಟ್ಟು ಎಂದರೆ ನದಿಯ ಮರಣ’, ಎಂಬುದು ಜನರಿಗೆ ಇನ್ನೂ ತಿಳಿಯುತ್ತಿಲ್ಲ, ಇದು ದುರ್ದೈವವೇ ಆಗಿದೆ. ಜಾಗತಿಕ ತಾಪಮಾನ ಹೆಚ್ಚಳದಿಂದ ಅತಿವೃಷ್ಟಿಯ ಘಟನೆಗಳು ಎಲ್ಲೆಡೆ ಉದ್ಭವಿಸುತ್ತಿವೆ. ಇಂತಹದರಲ್ಲಿ ಅಣೆಕಟ್ಟುಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ಬಿದ್ದರೆ ಏನೆಲ್ಲ ಹಾಹಾಕಾರವಾಗಬಹುದು ಎಂಬುದನ್ನು ಎಲ್ಲೆಡೆ ನೋಡಿದ್ದೇವೆ. ಇಂತಹ ಸಮಯದಲ್ಲಿ ಆಣೆಕಟ್ಟಿನಲ್ಲಿ ಹೆಚ್ಚುವರಿ ನೀರನ್ನು ಸಂಗ್ರಹಿಡಲು ಆಗುವುದಿಲ್ಲ ಮತ್ತು ಅನಿವಾರ್ಯವಾಗಿ ಅದನ್ನು ಹೊರಗೆ ಬಿಡಬೇಕಾಗುತ್ತದೆ.
ಜಾಗತಿಕ ತಾಪಮಾನ ಹೆಚ್ಚಳವಾಗುತ್ತಿರುವ ಸಂದರ್ಭದಲ್ಲಿ ಜಗತ್ತಿನಾದ್ಯಂತ ಅಣೆಕಟ್ಟುಗಳ ಅಪಾಯವನ್ನು ಗಮನದಲ್ಲಿಟ್ಟು ಎಲ್ಲಿ ಅಣೆಕಟ್ಟುಗಳನ್ನು ಕಟ್ಟಲು ಪ್ರಾರಂಭವಾಯಿತೋ, ಆ ಯುರೋಪ ನಲ್ಲಿಯೇ ನದಿಗಳನ್ನು ಅಣೆಕಟ್ಟುಮುಕ್ತಗೊಳಿಸುವ ಅಭಿಯಾನ ನಡೆಯುತ್ತಿದೆ. ಎಲ್ಲ ವಿನಾಶದ ನಂತರ ಯುರೋಪಿಯನ್ ಜನರಿಗೆ ಸುಬುದ್ಧಿ ಬಂದಿತು. ಆದುದರಿಂದ ಹೀಗೆ ಘಟಿಸುತ್ತಿದೆ.
೨. ಪ್ರವಾಹಕ್ಕಾಗಿ ‘ವೇಗವರ್ಧಕ’ವಾಗಿರುವ ಅಣೆಕಟ್ಟುಗಳು
ಪ್ರವಾಹದಲ್ಲಿ ಅಣೆಕಟ್ಟುಗಳು ‘ವೇಗವರ್ಧಕ’ವೆಂದು ಕೆಲಸ ಮಾಡುತ್ತವೆ, ಎಂಬುದನ್ನು ಗುರುತಿಸಿ ಯುರೋಪಿನಲ್ಲಿ ಅಣೆಕಟ್ಟು ಗಳನ್ನು ಒಡೆದು ಅಣೆಕಟ್ಟು ಪರಿಸರದಲ್ಲಿನ ಅರಣ್ಯ ಮತ್ತು ನೈಸರ್ಗಿಕ ಪರಿಸರ ವ್ಯವಸ್ಥೆಗಳನ್ನು ಮರುಸ್ಥಾಪಿಸಲಾಗುತ್ತಿದೆ. ಇದು ಅತ್ಯಂತ ಮಹತ್ವದ್ದಾಗಿದೆ; ಏಕೆಂದರೆ ಯಾವಾಗ ನದಿ ಹರಿಯುತ್ತಿರುತ್ತದೆಯೋ, ಆಗ ಅದು ಬೆಟ್ಟದಲ್ಲಿನ ಫಲವತ್ತಾದ ಮಣ್ಣನ್ನು ಹರಿದು ತಂದು ಭೂಮಿಯನ್ನು ಸಿದ್ಧಪಡಿಸುತ್ತದೆ. ಇಂತಹ ಭೂಮಿಯ ಮೇಲೆ ಅತ್ಯುತ್ತಮ ಕೃಷಿಯಾಗುತ್ತದೆ, ಅರಣ್ಯ ಬೆಳೆಯುತ್ತದೆ. ಅತಿವೃಷ್ಟಿಯಾದರೂ, ಅರಣ್ಯಗಳು ‘ಸ್ಪಂಜಿನಂತೆ’ ಈ ನೀರನ್ನು ಹೀರಿಕೊಳ್ಳುತ್ತವೆ.
ಸ್ವರ್ಗದಿಂದ ಪೃಥ್ವಿಯ ಮೇಲೆ ಬಂದಾಗ ಗಂಗೆಯ ಪ್ರಚಂಡ ಪ್ರವಾಹದಿಂದ ವಿನಾಶವಾಗಬಾರದೆಂದು ಶಂಕರನು ತನ್ನ ಜಟೆಯಲ್ಲಿ ಅವಳನ್ನು ಧಾರಣೆ ಮಾಡಿದನು. ಪರ್ವತಗಳಲ್ಲಿನ ಅರಣ್ಯ ಗಳೂ ಶಂಕರನ ಜಟೆಯಂತೆ ಕಾರ್ಯವನ್ನು ಮಾಡುತ್ತವೆ; ಆದುದರಿಂದ ಬಹುಶಃ ಪರ್ವತಸಾಲುಗಳಿಗೆ ‘ಗಿರಿರಾಜ’ ಎನ್ನುತ್ತಾರೆ.
೩. ಜೀವಗಳಿಗೆ ಸಂಜೀವನಿಯಂತೆ ಕಾರ್ಯಾಚರಿಸುವ ನದಿಗಳು !
ನದಿಯು ಅರಣ್ಯವನ್ನು ಹೆಚ್ಚಿಸುತ್ತದೆ ಮತ್ತು ಅರಣ್ಯವು ನದಿಗೆ ಭೂಮಿಯನ್ನು ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಆದುದರಿಂದ ಅಂತರ್ಜಲದ ಮಟ್ಟದಲ್ಲಿ ಹೆಚ್ಚಳವಾಗುತ್ತದೆ, ಹಾಗೆಯೇ ಎಷ್ಟೊಂದು ಸಜೀವಗಳ ಸರಪಳಿಯು ನದಿಯ ಪ್ರವಾಹದಿಂದ ನಡೆದಿರುತ್ತದೆ. ಮಹಾರಾಷ್ಟ್ರದ ಪಾಲಘರ ಜಿಲ್ಲೆಯಲ್ಲಿ ಸೂರ್ಯಾ ನದಿಗೆ ಅಣೆಕಟ್ಟು ಇರಲಿಲ್ಲ, ಆಗ ಮಳೆಗಾಲದಲ್ಲಿ ಸಿಗಡಿಗಳು ಸಂತಾನೋತ್ಪತ್ತಿಗಾಗಿ ನದಿಯಿಂದ ಹಿನ್ನೀರು ಪ್ರದೇಶಕ್ಕೆ ಹೋಗುತ್ತಿದ್ದವು ಮತ್ತು ಅಲ್ಲಿ ಅಸಂಖ್ಯಾತ ಮರಿಗಳನ್ನು ಸಾಕಲಾಗುತ್ತಿತ್ತು. ಆ ಸಮಯದಲ್ಲಿ ಸಂಪೂರ್ಣ ಜಿಲ್ಲೆಗಳಿಂದ ಈ ಬೀಜಗಳನ್ನು ತೆಗೆದುಕೊಂಡು ಅವುಗಳು ಮಹಾರಾಷ್ಟ್ರದಲ್ಲೆಲ್ಲ ಸಿಗಡಿ ಯೋಜನೆಗಳಿಗೆ ಮಾರಾಟವಾಗುತ್ತಿದ್ದವು. ಮುಂದೆ ಸೂರ್ಯಾ ನದಿಯ ಮೇಲೆ ಅಣೆಕಟ್ಟು ಕಟ್ಟಲಾಯಿತು. ಆದುದರಿಂದ ನದಿಯಿಂದ ಸಿಗಡಿಗಳು ಹಿನ್ನೀರಿಗೆ ಹೋಗುವುದು ನಿಂತಿತು. ಪರಿಣಾಮ ಇಂದು ಪಾಲಘರ ಜಿಲ್ಲೆಯಲ್ಲಿ ಸಿಹಿ ನೀರಿನಲ್ಲಿ ಸಿಗಡಿಯ ಬೀಜಗಳೇ ಇಲ್ಲವಾಗಿದೆ. ಇದೇ ರೀತಿಯ ಪರಿಸ್ಥಿತಿಯು ಅನೇಕ ಸಮುದ್ರ ಜೀವಿಗಳಿಗೆ ಸಂಭವಿಸುತ್ತಿದೆ.
೪. ನದಿಯ ಮೇಲಿನ ಅಣೆಕಟ್ಟು ಎಂದರೆ ನೂರಾರು ಪ್ರಜಾತಿಗಳ ಮರಣ
ನದಿಯು ಸಮುದ್ರಕ್ಕೆ ಸೇರುತ್ತದೆ, ಆಗ ಅದರ ನೀರು ಎಂದಿಗೂ ವ್ಯರ್ಥವಾಗುವುದಿಲ್ಲ, ಆದರೆ ಅದು ಯಾವಾಗ ಸಮುದ್ರಕ್ಕೆ ಸೇರುತ್ತದೆಯೋ, ಆಗ ಅದರ ನೀರು ಸಮುದ್ರ ಜೀವಿ ಗಳಿಗೆ ಅಮೃತದಂತೆ ಕೆಲಸ ಮಾಡುತ್ತದೆ. ನದಿಯು ನೂರಾರು ಕಿಲೋಮೀಟರ್ ಹರಿದು ತಂದಿರುವ ಮಣ್ಣು ಹಿನ್ನೀರಿನ ಸ್ಥಳಕ್ಕೆ ಬಂದು ಸಮುದ್ರಕ್ಕೆ ಸೇರುತ್ತದೆ, ಆದುದರಿಂದ ಕರಾವಳಿ ಪ್ರದೇಶಗಳಲ್ಲಿ ಸಮುದ್ರ ಸಸ್ಯಗಳ (ನದಿಯ ಪ್ರವಾಹದ ಗತಿ ಯೊಂದಿಗೆ ಹರಿದು ಬರುವ ವನಸ್ಪತಿಗಳು ಮತ್ತು ಪ್ರಾಣಿಗಳ ಸಮೂಹ) ಬೆಳವಣಿಗೆಯಾಗುತ್ತದೆ. ಈ ಸಮುದ್ರದ ಸಸ್ಯಗಳು ಎಷ್ಟೋ ಮೀನುಗಳ ಮರಿಗಳಿಗಾಗಿ ಮುಖ್ಯ ಆಹಾರವೆಂದು ಕೆಲಸ ಮಾಡುತ್ತವೆ. ಇದಕ್ಕಾಗಿ ಆಳವಾದ ಸಮುದ್ರದಲ್ಲಿರುವ ಮೀನುಗಳೂ ಅವುಗಳ ಮರಿಗಳಿಗೆ ಜನ್ಮ ನೀಡಲು ಆಳವಾದ ಸಮುದ್ರದಿಂದ ಕರಾವಳಿ ಪ್ರದೇಶಕ್ಕೆ ಪ್ರಯಾಣಿಸುತ್ತವೆ. ಅದೇ ರೀತಿ ಎಷ್ಟೋ ಸಮುದ್ರ ಜೀವಗಳು ಉದಾ : ಹೆಣ್ಣು ಏಡಿಯು ಲಕ್ಷಗಟ್ಟಲೆ ಮೊಟ್ಟೆಗಳನ್ನು ಇಡಲು ಕರಾವಳಿ ಪ್ರದೇಶದಿಂದ ಆಳವಾದ ಸಮುದ್ರದ ೧೦೦ ಕಿ.ಮೀ.ನಷ್ಟು ಶುದ್ಧ ಉಪ್ಪುನೀರಿನ ಸ್ಥಳಕ್ಕೆ ಹೋಗುತ್ತವೆ. ನಂತರ ಅವುಗಳ ಮರಿಗಳು ಒಟ್ಟು ೫ ಹಂತಗಳ ಮೂಲಕ ಸಾಗುತ್ತವೆ. ಕೊನೆಯ ಹಂತದಲ್ಲಿದ್ದಾಗ ನದಿಯು ಹಿನ್ನೀರಾಗುವ ಕಡಿಮೆ ಉಪ್ಪಿರುವ ಕಡೆ ಹೋಗುತ್ತವೆ. ಅಲ್ಲಿ ಕೊನೆಯ ಪೊರೆಯನ್ನು ಕಳಚಿ ಅವು ಮೂಲ ಏಡಿಯ ರೂಪದಲ್ಲಿ ಬರುತ್ತವೆ. ಈ ರೀತಿಯಲ್ಲಿ ನದಿಯು ತನ್ನ ಮೂಲದಿಂದ ಸಮುದ್ರದೊಂದಿಗೆ ಸಂಗಮದವರೆಗೆ ಸಾಗುವಾಗ ಜೀವನವನ್ನು ನೀಡುತ್ತದೆ. ಅದರ ಮೇಲೆ ಕಟ್ಟಿದ ಅಣೆಕಟ್ಟು ಎಂದರೆ ಅದರ ಮೇಲೆ ಅವಲಂಬಿಸಿರುವ ನೂರಾರು ಪ್ರಜಾತಿಗಳ ಮರಣವಾಗಿರುತ್ತದೆ.
೫. ಪಾಶ್ಚಾತ್ಯರ ಅಂಧಾನುಕರಣೆಯಿಂದ ನಿರ್ಮಿಸಲಾದ ಅಣೆಕಟ್ಟುಗಳಿಂದ ಉಂಟಾಗುವ ಹಾನಿ
ನದಿಯ ನೀರು ಸಮುದ್ರದಲ್ಲಿ ಎಂದಿಗೂ ವ್ಯರ್ಥವಾಗುವುದಿಲ್ಲ. ನಾವು ಕೆಲಸಕ್ಕೆ ಬಾರದ್ದನ್ನು ಮಾಡುವುದಕ್ಕಾಗಿ ‘ಅದು ವ್ಯರ್ಥವಾಗುತ್ತದೆ’, ಎಂದು ನಮ್ಮ ಅನುಕೂಲವಾಗುವಂತೆ ಪ್ರಚಾರ ಮಾಡುತ್ತೇವೆ. ಜಾಗತಿಕ ತಾಪಮಾನವು ಹೆಚ್ಚಳವಾಗುತ್ತಿರುವಾಗ ನಾವು ನದಿಗಳೊಂದಿಗೆ ಬಹಳ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದೇವೆ. ಅವುಗಳ ಅಸ್ತಿತ್ವವನ್ನು ಉಳಿಸುವ ಜವುಳುಭೂಮಿ, ಜಾಗ, ಸರೋವರ, ಬುಗ್ಗೆಗಳನ್ನು ಬತ್ತಿಸುತ್ತಿದ್ದೇವೆ. ಜವುಳು ಪ್ರದೇಶಗಳ ರಕ್ಷಣೆಯನ್ನು ಮಾಡಬೇಕು. ಆ ಸ್ಥಳವನ್ನು ಮಣ್ಣಿನಿಂದ ತುಂಬಲಾಗುತ್ತಿದೆ ಮತ್ತು ಅದರ ಮೇಲೆ ದೊಡ್ಡ ವಸತಿ ಸಂಕೀರ್ಣಗಳನ್ನು ನಿರ್ಮಿಸಲಾಗುತ್ತಿದೆ. ಇಷ್ಟು ಸಾಲದು; ಎಂದು ನದಿಗೆ ಬೇಕಾಗಿರುವ ‘ಆರ್‌ಝಡ್’ (ರೆಗ್ಯುಲೇಶನ್ ಝೋನ್) (ನಿಯಂತ್ರಣ ವಲಯ)ವನ್ನು ತೆಗೆದು, ಅಂದರೆ ನದಿಯ ಎರಡೂ ಬದಿಯನ್ನು ‘ಬಫರ್ ಝೋನ್’ ತೆಗೆದು ಅಲ್ಲಿ ಯೋಜನೆಯ ಮೂಲಕ ನದಿ ಹರಿಯುವುದನ್ನು ತಡೆದು ಅಲ್ಲಿ ಬೃಹತ್ ವಸತಿ ಸಂಕೀರ್ಣಗಳನ್ನು ನಿರ್ಮಿಸಲಾಗಿದೆ. ಇದರಿಂದ ‘ರಿವರ್ ವ್ಯೂ’ (ನದಿಯ ದೃಶ್ಯ) ಎಂಬ ವಸತಿ ಸಮುಚ್ಚಯಗಳು ಅತಿವೃಷ್ಟಿಯಿಂದ ‘ಇನ್ ಸೈಡ್ ರಿವರ್’ ಆಗುತ್ತಿವೆ. ಈಗಲಾದರೂ ಜಾಣರಾಗುವ ಆವಶ್ಯಕತೆಯಿದೆ. ಈಗ ಅದೇ ಪಾಶ್ಚಿಮಾತ್ಯರ ಯೋಗ್ಯ ಅನುಕರಣೆ ಯನ್ನು ಅನುಕರಿಸಿ ನದಿಗಳನ್ನು ಹರಿಯಲು ಬಿಡಬೇಕು.
‘ಐ.ಐ.ಟಿ.’ಯ ಡಾ. ಜಿ.ಡಿ. ಅಗ್ರವಾಲ ಇವರು ಗಂಗಾ ನದಿಯ ಮೇಲೆ ಅಣೆಕಟ್ಟು ಬೇಡವೆಂದು ಅನ್ನತ್ಯಾಗವನ್ನು ಮಾಡಿ ದೇಹ ತ್ಯಜಿಸಿದರು. ಅವರ ಬಲಿದಾನವು ವ್ಯರ್ಥವಾಗಬಾರದು. ನದಿಯು ಜೀವದಾನ ನೀಡುತ್ತದೆ; ಮಾತ್ರ ಅದರ ಮೇಲೆ ಅನ್ಯಾಯ ಮಾಡಿದರೆ, ಅದು ಜೀವನವನ್ನೂ ಮುಗಿಸುತ್ತದೆ. ಇದರಲ್ಲಿ ನದಿಗೆ ದೋಷ ಕೊಡದೇ ನಮ್ಮಲ್ಲಿಯೇ ದೋಷವಿದೆ, ಎಂಬುದನ್ನು ಗಮನದಲ್ಲಿಟ್ಟು ಈಗಲಾದರೂ ಜಾಣರಾಗೋಣ.
ಲೇಖಕರು : ಪ್ರಾಧ್ಯಾಪಕ ಭೂಷಣ ಭೊಯೀರ, ಸಹ ಪ್ರಾಧ್ಯಾಪಕ, ಪ್ರಾಣಿಶಾಸ್ತ್ರ ವಿಭಾಗ, ಸೊನೊಪಂತ ದಾಂಡೇಕರ ಮಹಾವಿದ್ಯಾಲಯ, ಪಾಲಘರ.