ವಾಯನಾಡುವಿನಲ್ಲಿನ ಭೂಕುಸಿತ; ಇದು ಮನುಷ್ಯನ ದುರಾಸೆಗೆ ನಿಸರ್ಗವು ನೀಡಿದ ತಿರುಗೇಟು ! – ಕೇರಳ ಉಚ್ಚ ನ್ಯಾಯಾಲಯ

ವಿಕಾಸದ ಹೆಸರಿನಲ್ಲಿ ನಿಸರ್ಗವು ನೀಡಿರುವ ಎಚ್ಚರಿಕೆಯನ್ನು ನಿರ್ಲಕ್ಷಿಸಿದಕ್ಕೆ ಪೆಟ್ಟು !

ವಾಯನಾಡು (ಕೇರಳ) – ಕಳೆದ ತಿಂಗಳಲ್ಲಿ ಕೇರಳದ ವಾಯನಾಡು ಜಿಲ್ಲೆಯಲ್ಲಿನ ನೆಪ್ಪಡಿ ಹತ್ತಿರದ ವಿವಿಧ ಗುಡ್ಡುಗಾಡ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ಅಪಾರ ಹಾನಿ ಉಂಟಾಗಿತ್ತು. ಈ ನೈಸರ್ಗಿಕ ಆಪತ್ತಿನಿಂದ ನೂರಾರು ಜನರು ಸಾವನ್ನಪ್ಪಿದ್ದರು. ಈಗ ಈ ಘಟನೆಯ ಕುರಿತು ಕೇರಳ ಉಚ್ಚ ನ್ಯಾಯಾಲಯವು ತೀವ್ರ ಟೀಕೆ ಮಾಡಿದೆ. ನ್ಯಾಯಾಲಯವು, ಭೂ ಕುಸಿತದಿಂದ ೨೦೦ ಕ್ಕು ಹೆಚ್ಚಿನ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡರು, ಈ ಘಟನೆ ಎಂದರೆ ಮನುಷ್ಯನ ಉದಾಸೀನತೆ ಮತ್ತು ದುರಾಸೆಗೆ ನಿಸರ್ಗ ನೀಡಿರುವ ತಿರುಗೇಟಿನ ಉದಾಹರಣೆ ಆಗಿದೆ ಎಂದು ಹೇಳಿದೆ.

೧. ಉಚ್ಚ ನ್ಯಾಯಾಲಯ ಈ ಅಂಶಗಳ ಬಗ್ಗೆ ಹೇಳುವಾಗ, ವಾಯನಾಡು ಇಲ್ಲಿನ ಘಟನೆಯ ಪೂರ್ವ ಸೂಚನೆ ಬಹಳ ಹಿಂದೆಯೇ ದೊರೆತಿತ್ತು; ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಅದರ ಕಡೆಗೆ ನಿರ್ಲಕ್ಷಿಸುವುದು ನಿಮಗೆ ಯೋಗ್ಯ ಅನಿಸಿತು. ೨೦೧೮ ಮತ್ತು ೨೦೧೯ ರಲ್ಲಿನ ನೈಸರ್ಗಿಕ ಆಪತ್ತು ಸುಮಾರು ೨ ವರ್ಷ ನಡೆದಿರುವ ಕೊರೊನಾ ಮಹಾಮಾರಿ ಮತ್ತು ಇತ್ತೀಚಿಗೆ ನಡೆದಿರುವ ಭೂಕುಸಿತದ ಘಟನೆಗಳು ನಮ್ಮ ನಮ್ಮ ತಪ್ಪುಗಳು ತೋರಿಸುತ್ತದೆ.

೨. ಖಂಡಪೀಠವು ಆಗಸ್ಟ್ ೨೩ ರಂದು ನೀಡಿರುವ ಆದೇಶದಲ್ಲಿ, ಕೇರಳ ರಾಜ್ಯದಲ್ಲಿ ಶಾಶ್ವತ ವಿಕಾಸದ ಬಗ್ಗೆ ಸರಕಾರ ಆತ್ಮನಿರೀಕ್ಷಣೆ ಮಾಡಿಕೊಳ್ಳಬೇಕು ಮತ್ತು ಈ ಸಂದರ್ಭದಲ್ಲಿ ಸರಕಾರಿ ನೀತಿಗಳ ಬಗ್ಗೆ ಪುನರ್ ಯೋಚನೆ ಮಾಡಲು ಅನಿವಾರ್ಯಗೊಳಿಸುವುದಕ್ಕಾಗಿ ನ್ಯಾಯಾಲಯವು ಈ ಪ್ರಕರಣದಲ್ಲಿ ಸ್ವತಃ ಗಮನ ಹರಿಸಿದೆ.

ಮೂರು ಹಂತದಲ್ಲಿ ಗುರಿ ಮುಟ್ಟುವುದು !

ನೈಸರ್ಗಿಕ ಸಾಧನ ಸಂಪತ್ತಿಯ ರಕ್ಷಣೆ, ಪರಿಸರ, ಕಾಡುಗಳು ಮತ್ತು ವನ್ಯಜೀವಿಗಳ ಸಂರಕ್ಷಣೆ, ನೈಸರ್ಗಿಕ ಆಪತ್ತಿನ ಮೇಲೆ ಉಪಾಯ, ವ್ಯವಸ್ಥಾಪನೆ ಮತ್ತು ಶಾಶ್ವತ ವಿಕಾಸ ಈ ಉದ್ದೇಶದ ಸಂದರ್ಭದಲ್ಲಿ ರಾಜ್ಯದ ನೀತಿಗಳ ವರದಿ ನ್ಯಾಯಾಲಯ ಪಡೆಯುವುದು, ಎಂದು ನ್ಯಾಯಾಲಯವು ಹೇಳಿದೆ. ಈ ಕಾರ್ಯ ಮೂರು ಹಂತಗಳಲ್ಲಿ ಮಾಡಲಾಗುವುದು. ಇದರ ಅಡಿಯಲ್ಲಿ ರಾಜ್ಯದಲ್ಲಿನ ಪರಿಸರದ ದೃಷ್ಟಿಯಿಂದ ಸಂವೇದನಶೀಲ ಕ್ಷೇತ್ರಗಳನ್ನು ಖಚಿತಪಡಿಸಲಾಗುವುದು ಮತ್ತು ಅದರ ನಂತರ ಅದರ ಜಿಲ್ಲೆಯ ಪ್ರಕಾರ ಕ್ರಮವಾರು ಪಟ್ಟಿ ತಯಾರಿಸಲಾಗುವುದು. ವಾಯನಾಡು ಜಿಲ್ಲೆಯಲ್ಲಿನ ರಕ್ಷಣಾ ಕಾರ್ಯ, ಪುನರ್ವಸತಿ ಮತ್ತು ಪುನರ್ನಿರ್ಮಾಣ ಇವುಗಳ ಪ್ರಯತ್ನದ ಕುರಿತು ನ್ಯಾಯಾಲಯ ಗಮನ ಇರಿಸುವುದು, ಹೀಗೂ ಕೂಡ ಖಂಡಪೀಠವು ಸ್ಪಷ್ಟಪಡಿಸಲಾಗಿದೆ.