ಹೆಚ್ಚುತ್ತಿರುವ ಹಿಂದೂಗಳ ಹತ್ಯೆ !

ರಾಜಸ್ಥಾನದ ಉದಯಪುರದಲ್ಲಿ ಮತಾಂಧ ಮುಸಲ್ಮಾನರು ದರ್ಜಿ (ಟೈಲರ್) ಕೆಲಸವನ್ನು ಮಾಡುವ ಕನ್ಹೈಯಾಲಾಲ ತೇಲಿ ಈ ೪೦ ವರ್ಷದ ಹಿಂದೂ ವ್ಯಕ್ತಿಯನ್ನು ಐಸಿಸ್ ಪದ್ಧತಿಯಲ್ಲಿ ಶಿರಚ್ಛೇದ ಮಾಡಿದ ಘಟನೆಯಿಂದ ಎಲ್ಲೆಡೆ ಆಕ್ರೋಶ ತಾರಕಕ್ಕೇರಿದೆ. ವಾಸ್ತವದಲ್ಲಿ ಯಾವುದೇ ಧರ್ಮದವರು ಇತರ ಧರ್ಮದ ಅಥವಾ ಶ್ರದ್ಧಾಸ್ಥಾನಗಳ ಅವಮಾನ ಮಾಡಬಾರದು. ಮಾಡಿದರೆ, ಅವರ ಮೇಲೆ ಕಾನೂನುಬದ್ಧ ಕಾರ್ಯಚರಣೆಯಾಗಬೇಕು; ಆದರೆ ಮೂಲ ಅಡಚಣೆ ಇಲ್ಲಿದೆ. ಹಿಂದೂಗಳ ದೇವತೆಗಳನ್ನು ಅವಮಾನಿಸಿದಾಗ ಅವಮಾನಿಸಿದ ವ್ಯಕ್ತಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿರುತ್ತದೆ ಮತ್ತು ಈ ಅಪಮಾನವನ್ನು ಕಾನೂನುಮಾರ್ಗದಿಂದ ವಿರೋಧಿಸುವವರು ಹಿಂದೂ ತಾಲಿಬಾನಿಯಾಗಿರುತ್ತಾರೆ. ಅದೇ ಮುಸಲ್ಮಾನರ ಶ್ರದ್ಧಾಸ್ಥಾನಗಳ ಅವಮಾನವಾದಾಗ ಅದು ಅಕ್ಷಮ್ಯ ಅಪರಾಧವಾಗುತ್ತದೆ ಮತ್ತು ಹಿಂದೂವಿನ ಹತ್ಯೆ ಮಾಡಿ ಸೇಡು ತೀರಿಸಲಾಗುತ್ತದೆ ಎಂಬುದು ಈಗಿನ ಚಿತ್ರಣವಾಗಿದೆ.

‘ರುಂಡದಿಂದ ಮುಂಡ ಬೇರೆ’ ಘೋಷಣೆ ಸತ್ಯವಾಯಿತು !

ಕನ್ಹೈಯಾಲಾಲ ಇವರ ಹತ್ಯೆ ಮಾಡಿದ ರೀತಿ ನೋಡಿದರೆ ಉಗ್ರ ಸಂಘಟನೆ ಐಸಿಸ್ ಭಾರತದೊಳಗೆ ಪ್ರವೇಶಿಸಿರುವುದು ಕಂಡು ಬರುತ್ತದೆ. ನೂಪುರ ಶರ್ಮಾ ಪ್ರಕರಣದಲ್ಲಿ ನಿಜವಾಗಿಯೂ ಇಂತಹ ಶಿರಚ್ಛೇದ ಮಾಡುವ ಬಗ್ಗೆ ಒಂದು ರೀತಿಯ ಕಲ್ಪನೆಯನ್ನು ಕೆಲವು ದಿನಗಳ ಹಿಂದೆ ಕೊಲೆಗಾರರ ಧರ್ಮಬಾಂಧವರು ನೀಡಿದ್ದರು ಎನ್ನಬಹುದು. ಅವರು ‘ರುಂಡವನ್ನು ಮುಂಡದಿಂದ ಬೇರೆ’ (ಸರ ತನ ಸೆ ಜುದಾ) ಎಂಬ ಪ್ರಚೋದನಾಕಾರಿ ಘೋಷಣೆ ನೀಡಿದ್ದರು; ಆದರೆ ಆ ಬಗ್ಗೆ ತತ್ಪರತೆಯಿಂದ ಯಾವುದೇ ನಿರ್ದಿಷ್ಟ ಕ್ರಮವನ್ನು ತೆಗೆದುಕೊಳ್ಳದ ಕಾರಣ ಈ ಘೋಷಣೆ ಕನ್ಹೈಯಾಲಾಲರ ಶಿರಚ್ಛೇದದಿಂದ ಸತ್ಯವಾಯಿತು.

ರಾಹುಲ ಗಾಂಧಿ, ಅರವಿಂದ ಕೆಜರಿವಾಲ ಮುಂತಾದವರೂ ಈ ಹತ್ಯೆಯನ್ನು ಮೌಖಿಕವಾಗಿ ಖಂಡಿಸಿ ಅಪರಾಧಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುವ ಔಪಚಾರಿಕತೆಯನ್ನು ಪೂರ್ಣಗೊಳಿಸಿದರು. ಆದರೂ ಹಿಂದೂಗಳನ್ನು ಆರೋಪಿಗಳೆಂದು ಹೇಳಲಾದ ಎರಡು ಭಿನ್ನ ಘಟನೆಗಳಲ್ಲಿ ಗಾಂಧಿ ಮತ್ತು ಕೇಜರಿವಾಲರು ಖಂಡಿಸುವಾಗ ಉದ್ದೇಶಪೂರ್ವಕವಾಗಿ ‘ಹಿಂದೂ’ ಎಂದು ಉಲ್ಲೇಖಿಸಿ ಖಂಡಿಸಿದ್ದರು. ೨೨ ಮಾರ್ಚ್ ೨೦೧೯ ರಂದು ಮಾಡಿದ ಒಂದು ಟ್ವಿಟ್‌ನಲ್ಲಿ ಕೇಜರಿವಾಲ ಇವರು ‘ಭಗವದ್ಗೀತೆ, ರಾಮಾಯಣ, ಹನುಮಾನ ಚಾಲಿಸಾ’ ಇಂತಹ ಗ್ರಂಥಗಳಲ್ಲಿ ಮುಸಲ್ಮಾನರನ್ನು ಕೊಲ್ಲಿರಿ ಎಂದು ಬರೆದಿದೆಯೇ ? ಈ ಜನರು (ಹಂತಕರು) ಹಿಂದೂಗಳಲ್ಲ, ಅವರು ಹಿಂದೂವಿನ ವೇಷದಲ್ಲಿನ ಗುಂಡಾಗಳಾಗಿದ್ದಾರೆ… ಎಂಬ ಅರ್ಥದಲ್ಲಿ ಉಲ್ಲೇಖಿಸಿದ್ದರು. ಇದರೊಂದಿಗೆ ರಾಹುಲ ಗಾಂಧಿಯವರು ೨೮ ಅಕ್ಟೋಬರ್ ೨೦೨೧ ರಂದು ಮಾಡಿದ ಟ್ವಿಟ್‌ನಲ್ಲಿ ‘ತ್ರಿಪುರಾದಲ್ಲಿ ಮುಸಲ್ಮಾನ ಬಾಂಧವರೊಂದಿಗೆ ಕ್ರೂರತನದಿಂದ ವರ್ತಿಸಲಾಗುತ್ತಿದೆ. ಹಿಂದೂಗಳ ಹೆಸರಿನಲ್ಲಿ ದ್ವೇಷ ಮತ್ತು ಹಿಂಸೆಯನ್ನು ಮಾಡುವವರು ಹಿಂದೂಗಳಲ್ಲ, ಢೋಂಗಿಯಾಗಿದ್ದಾರೆ ಎಂದು ಬರೆಯಲಾಗಿತ್ತು. ಈಗ ಕನ್ಹೈಯಾಲಾಲ ಪ್ರಕರಣದಲ್ಲಿ ಮಾತ್ರ ಮುಸಲ್ಮಾನ, ಇಸ್ಲಾಮ್, ಗೂಂಡಾ ಇತ್ಯಾದಿ ಶಬ್ದಗಳ ಬಗ್ಗೆ ಅವರು ಎಲ್ಲಿಯೂ ಉಲ್ಲೇಖಿಸಿಲ್ಲ, ಎಂಬುದನ್ನು ಹಿಂದೂಗಳು ಗಮನಿಸಬೇಕು. ಇತರ ಅನೇಕ ರಾಜಕಾರಣಿಗಳೊಂದಿಗೆ ಪ್ರಸಾರಮಾಧ್ಯಮಗಳೂ ‘ಶಾಂತಿ ಕಾಪಾಡಿ’, ಎಂದು ಕರೆ ನೀಡಿವೆ; ಅಂದರೆ ಹಿಂದೂಗಳೇನೋ ಅಶಾಂತಿಯನ್ನು ಹಬ್ಬಿಸುತ್ತಿದ್ದಾರೆ ಎಂಬಂತೆ ವರ್ತಿಸಲಾಗುತ್ತಿದೆ. ಸಂಕ್ಷಿಪ್ತದಲ್ಲಿ ಈ ಹಿಂದೂಬಹುಸಂಖ್ಯಾತ ದೇಶದಲ್ಲಿ ಮುಸಲ್ಮಾನರು ಹಿಂದೂಗಳ ಹತ್ಯೆಯನ್ನು ಮಾಡುವುದು, ಹಿಂದೂಗಳ ಹುಡುಗಿಯರನ್ನು ಅಪಹರಿಸುವುದು, ಹಿಂದೂಗಳ ಭೂಮಿಯನ್ನು ಕಬಳಿಸುವುದು, ಹೀಗೆ ಮನಸ್ಸಿಗೆ ಬಂದಂತೆ ಅವರು ಮಾಡುತ್ತಿದ್ದರು ಮತ್ತು ಹಿಂದೂಗಳು ಮಾತ್ರ ಇದೆಲ್ಲವನ್ನು ಶಾಂತವಾಗಿ ಸಹಿಸುತ್ತಿದ್ದರು, ಇಂತಹ ಢೋಂಗಿ ಮತ್ತು ಒಮ್ಮುಖದ ಧರ್ಮನಿರಪೇಕ್ಷತಾವಾದವನ್ನು ಹಿಂದೂಗಳ ಮೇಲೆ ಹೇರಲಾಗುತ್ತಿದೆ. ಧರ್ಮದ ಹೆಸರಿನಲ್ಲಿ ಕನ್ಹೈಯಾಲಾಲರನ್ನಷ್ಟೇ ಅಲ್ಲ, ಆದರೆ ಅನೇಕ ಹಿಂದುತ್ವನಿಷ್ಠರ ಹತ್ಯೆಯನ್ನು ಮಾಡಲಾಗಿದೆ. ಆದುದರಿಂದ ಇಂತಹ ಜಿಹಾದಿಗಳ ಹಿಂಸಕ ಪ್ರತಿಕ್ರಿಯೆಗಳ ಬಗ್ಗೆ ಯಾರೂ ಏನಾದರೂ ಮಾತನಾಡಲಿದ್ದಾರೆಯೇ ? ಆದುದರಿಂದ ಇದರಲ್ಲಿ ಕೇಂದ್ರ ಸರಕಾರವು ಹಸ್ತಕ್ಷೇಪ ಮಾಡಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಲು ಪ್ರಯತ್ನಿಸಬೇಕು. ಹೀಗಾದರೆ ಮಾತ್ರ ಮತಾಂಧರಲ್ಲಿ ಭಯ ಹುಟ್ಟಿಸಬಹುದು.