ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಮೃತವಚನಗಳು !

ಕಲಿಯುವ ಪ್ರಕ್ರಿಯೆ

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ

೧ ಅ. ಕಲಿಯುವುದರಿಂದ ಸರ್ವತೋಮುಖ ಅಭಿವೃದ್ಧಿಯಾಗಿ ಚಿರಂತನ ಆನಂದದ ಕಡೆಗೆ ಮಾರ್ಗಕ್ರಮಣವಾಗುವುದು :

‘ಕಲಿಯುವ ಪ್ರಕ್ರಿಯೆ, ಎಂದರೇನು ?’, ಎಂಬುದನ್ನು ಕಲಿಯಬೇಕು. ಏನು ಕಲಿಯುತ್ತಿರುತ್ತೇವೆಯೋ, ಅದರಲ್ಲಿ ನಮ್ಮ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಈ ಮೂರು ಸ್ತರಗಳಲ್ಲಿ ಸರ್ವತೋಮುಖ ವಿಕಾಸವಾಗಿ ನಮ್ಮ ಮಾರ್ಗಕ್ರಮಣವು ಚಿರಂತನ ಆನಂದದ ಕಡೆಗೆ ಆಗುವುದೇ ನಿಜವಾದ ಕಲಿಕೆಯಾಗಿದೆ.

೧ ಆ. ನಮ್ಮ ಮನಸ್ಸಿಗೆ ಬಂದುದನ್ನು ಕಲಿಯುವುದಕ್ಕಿಂತ ‘ನಮಗೆ ಏನು ಹೇಳಿದ್ದಾರೆ ಮತ್ತು ಯಾವ ಶಿಕ್ಷಣವು ನಮಗೆ ವರ್ತಮಾನಕಾಲದಲ್ಲಿ ಆವಶ್ಯಕವಿದೆಯೋ’, ಅದನ್ನು ಕಲಿಯುವುದು ನಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಒಳ್ಳೆಯದಾಗಿರುತ್ತದೆ.

೧ ಇ. ‘ತನ್ನ ಮನಸ್ಸಿನಂತೆ ವರ್ತಿಸುತ್ತಾ ತನಗೆ ಕಲಿಸುವವರಿಗೆ ಕಲಿಸಲು ಪ್ರಯತ್ನಿಸುವುದು’, ಇದು ಅಹಂನ ಲಕ್ಷಣವಾಗಿದೆ.

೧ ಈ. ಯಾವಾಗಲೂ ಕಲಿಯುವ ಸ್ಥಿತಿಯಲ್ಲಿದ್ದೇ ಕಲಿಯಬೇಕು. ಆ ಸಮಯದಲ್ಲಿ ಮನಸ್ಸಿನಲ್ಲಿ ಯಾವುದೇ ಪೂರ್ವಗ್ರಹವನ್ನು ಇಡಬಾರದು. ನಮ್ಮ ಕಲಿಯುವ ವೃತ್ತಿಯೂ ನಿರ್ಮಲವಿರಬೇಕು.

ಶಿಕ್ಷಕರ ಬಗ್ಗೆ ಭಾವವನ್ನಿಟ್ಟು ಗುರುಕುಲದ ನಿರ್ಮಿತಿಯನ್ನು ಮಾಡಿರಿ !

ಅ. ಕಲಿಸುವವರ ಗುಣಗಳ ಕಡೆಗೆ ಜಿಜ್ಞಾಸೆಯಿಂದ ಗಮನಿಸಬೇಕು, ಆಗ ಅವರ ಬಗ್ಗೆ ನಮ್ಮ ಮನಸ್ಸಿನಲ್ಲಿ ಭಾವವು ಉತ್ಪನ್ನವಾಗುತ್ತದೆ. ಶಿಕ್ಷಕರ ಬಗ್ಗೆಯೇ ಮನಸ್ಸಿನಲ್ಲಿ ವಿಕಲ್ಪವಿದ್ದರೆ, ಆ ಕಲಿಯುವ ಪ್ರಕ್ರಿಯೆಯಾಗದೇ, ಅದು ಪ್ರತಿಕ್ರಿಯೆ ನಿರ್ಮಿತಿಯದ್ದಾಗುತ್ತದೆ.

ಆ. ಪ್ರತಿಕ್ರಿಯೆಗಳಿಂದ ವಾತಾವರಣವು ಕಲುಷಿತವಾಗುತ್ತದೆ. ಶಿಕ್ಷಕರ ಬಗ್ಗೆ ಭಾವವನ್ನಿಟ್ಟರೆ, ಎಲ್ಲೆಡೆಗಳಲ್ಲಿ ಗುರುಕುಲವೇ ನಿರ್ಮಾಣವಾಗುತ್ತದೆ. ಇಂತಹ ಗುರುಕುಲದಿಂದ ನಿರ್ಮಾಣವಾಗುವ ಪೀಳಿಗೆಯು ರಾಷ್ಟ್ರವನ್ನು ಅನಾಯಾಸವಾಗಿ ನಿರ್ಮಿಸುತ್ತದೆ.

ಇ. ಈಗ ಅಂತರ್ಮನವೇ ಗುರುಕುಲವಾಗಿರುವಂತಹ ಅನೇಕ ಸಣ್ಣ-ಪುಟ್ಟ ಚೈತನ್ಯಶಾಲೆಗಳ ಅಗತ್ಯವಿದೆ. ಹೊರಗಿನಿಂದ ದೊಡ್ಡದೊಡ್ಡ ಕಟ್ಟಡಗಳನ್ನು ಕಟ್ಟುವ ಆವಶ್ಯಕತೆ ಇಲ್ಲ, ನಮ್ಮ ಮನಸ್ಸಿನಲ್ಲಿಯೇ ಗುರುಕುಲದಂತೆ ಕಟ್ಟಡವನ್ನು ಕಟ್ಟಿರಿ ಮತ್ತು ಆಗ ಅದರಿಂದ ಎಷ್ಟು ಉತ್ತಮ ಶಿಷ್ಯರು ಹೊರಗೆ ಬರುತ್ತಾರೆಂದು ನೋಡಿ !

ಸಹಸಾಧಕರನ್ನು ಪ್ರೀತಿಸಿ ಅವರಿಂದ ತಾಯಿಯಲ್ಲಿರುವಂತಹ ಮಮತೆಯಿಂದ ಕಲಿಯಬೇಕು !

ಸಾಧನೆಯಲ್ಲಿ ಸಹಸಾಧಕರೊಂದಿಗೆ ನಮ್ಮ ಆತ್ಮೀಯತೆ ಎಷ್ಟಿರಬೇಕೆಂದರೆ, ತಾಯಿಯು ಕಲಿಸುತ್ತಿರುವಾಗ ಅವಳಂತೆ ಮಮತೆಯಿಂದ ಪ್ರತಿಯೊಬ್ಬರೊಂದಿಗೆ ನಮಗೆ ಮಾತನಾಡಲು ಸಾಧ್ಯವಾಗಬೇಕು. ತಾಯಿಗೆ ‘ಈಗ ನಿನಗೆ ಸಮಯವಿದೆಯೇ ? ನಾನು ಈಗ ನಿನ್ನ ಜೊತೆಗೆ ಮಾತನಾಡಲೇ ?’, ಎಂದು ಯಾವತ್ತು ಯಾವುದೇ ಮಗುವೂ ಕೇಳುವುದಿಲ್ಲ. ಆ ಮಗು ಯಾವುದೇ ವಿಚಾರವನ್ನು ಮಾಡದೇ ಓಡುತ್ತ ಹೋಗಿ ನೇರವಾಗಿ ಅವಳನ್ನು ತಬ್ಬಿಕೊಳ್ಳುತ್ತದೆ, ಅವಳಿಗೆ ಅಂಟಿಕೊಳ್ಳುತ್ತದೆ ಮತ್ತು ಅವಳ ಮಾತಿನತ್ತ ಗಮನ ಹರಿಸದೇ, ಮೊದಲಿಗೆ ಅವಳಿಗೆ ತನ್ನ ಮನಸ್ಸಿನಲ್ಲಿನ ಎಲ್ಲ ವಿಷಯಗಳನ್ನು ಬೇಗಬೇಗ ಹೇಳಿ ಮುಗಿಸುತ್ತದೆ. ತಾಯಿಯು ಕೂಡ ಅಷ್ಟೇ ಪ್ರೀತಿಯಿಂದ ಅದನ್ನು ಕೇಳುತ್ತಾಳೆ ಮತ್ತು ‘ನನ್ನ ಮಗು ಎಷ್ಟು ಮುದ್ದಾಗಿ ಮಾತನಾಡುತ್ತದೆ !’, ಎಂದು ಹೇಳಿ ಆ ಮಗುವಿಗೆ ಒಂದು ಮುತ್ತು ಕೊಡದೇ ಇರುವುದಿಲ್ಲ. ಮಗುವಿಗೂ ಅಷ್ಟೇ ಬೇಕಾಗಿರುತ್ತದೆ. ತಾಯಿಯ ಸ್ಪರ್ಶದಲ್ಲಿನ ಪ್ರೀತಿಯು ಮಗುವಿಗೆ ಜೀವನದಲ್ಲಿ ಬಹಳಷ್ಟನ್ನು ನೀಡುತ್ತದೆ. ಭಾರವಾದ ಶಬ್ದಗಳ ಮಾತುಕತೆಗಿಂತ ಮಗುವಿಗೆ ತಾಯಿಯ ಮೇಲಿನ ನಂಬಿಕೆಯೇ ಅವನನ್ನು ಜೀವನದಲ್ಲಿ ದೊಡ್ಡವನನ್ನಾಗಿ ಮಾಡುತ್ತದೆ.

ಇಂತಹ ನಂಬಿಕೆಯನ್ನೇ ನಾವು ನಮ್ಮ ಸಹಸಾಧಕನಲ್ಲಿಟ್ಟು ಅವನಿಂದ ಆ ಸಮಯದಲ್ಲಿ ತಾಯಿಯು ಹೇಗೆ ಕಲಿಸುತ್ತಾಳೆಯೋ, ಆ ಸಮಯದಲ್ಲಿನ ಅವಳಂತಹ ಮಮತೆಯಿಂದ ಕಲಿಯಬೇಕು. ಈ ನಿರ್ಮಲವಾದ ಸಂಬಂಧದಿಂದಲೇ ಜ್ಞಾನದ ಅಸಂಖ್ಯ ಶಬ್ದಗಳು ಹೊರಗೆ ಬೀಳುತ್ತವೆ. ಈ ಶಬ್ದಗಳೇ ನಿಮ್ಮನ್ನು ಈಶ್ವರಪ್ರಾಪ್ತಿಯ ಮಾರ್ಗದ ಕಡೆಗೆ ಕರೆದೊಯ್ಯುತ್ತವೆ.’

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೪.೪.೨೦೨೦)

ಸನಾತನದ ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದಿಸಲು ಸಹಾಯ ಮಾಡಬೇಕಾಗಿ ವಿನಂತಿ !

ಅಧ್ಯಾತ್ಮದ ಜಿಜ್ಞಾಸುಗಳು, ವಿವಿಧ ಯೋಗಮಾರ್ಗಗಳಿಗನುಸಾರ ಸಾಧನೆ ಮಾಡುವ ಸಾಧಕರು ಮತ್ತು ಧರ್ಮಪ್ರೇಮಿಗಳಿಗೆ ಆಧ್ಯಾತ್ಮಿಕ ಪ್ರಗತಿಗಾಗಿ ಮಾರ್ಗದರ್ಶನವಾಗಬೇಕು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು ಎಂಬುದಕ್ಕಾಗಿ ಸನಾತನವು ಆಚಾರಧರ್ಮ, ಧಾರ್ಮಿಕ ಕೃತಿ, ದೇವತೆಗಳು, ಸಾಧನೆ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿಷಯಗಳ ಬಗ್ಗೆ ಗ್ರಂಥ ಮತ್ತು ಕಿರುಗ್ರಂಥಗಳನ್ನು ಪ್ರಕಾಶಿಸಿದೆ. ಈ ಜ್ಞಾನದಿಂದ ಕೇವಲ ಭಾರತ ಮಾತ್ರವಲ್ಲ ಜಗತ್ತಿನೆಲ್ಲೆಡೆಯ ಮಾನವರಿಗೆ ಲಾಭವಾಗುತ್ತಿದ್ದು ಅವರ ಜೀವನ ಉದ್ಧಾರವಾಗುತ್ತಿದೆ. ಗ್ರಂಥ ನಿರ್ಮಿತಿ ಪ್ರಕ್ರಿಯೆಯು ನಿರಂತರವಾಗಿ ನಡೆಯುತ್ತಿದ್ದು ಮೇ ೨೦೨೨ ರ ವರೆಗೆ ಸನಾತನದ ೩೫೪ ಗ್ರಂಥಗಳ ೧೭ ಭಾಷೆಗಳಲ್ಲಿ ೮೯ ಲಕ್ಷದ ೨೭ ಸಾವಿರ ಪ್ರತಿಗಳನ್ನು ಪ್ರಕಟಿಸಲಾಗಿದ್ದು, ಇನ್ನೂ ೮೦೦೦ ಗ್ರಂಥಗಳನ್ನು ಪ್ರಕಟಿಸುವಷ್ಟು ಜ್ಞಾನ ಸಂಗ್ರಹವಾಗಿದೆ. ಈ ಅಗಾಧ ಪ್ರಮಾಣದಲ್ಲಿ ಇರುವ ಗ್ರಂಥಸಂಪತ್ತನ್ನು ಮರಾಠಿಯಿಂದ ಕನ್ನಡ ಭಾಷೆಗೆ ಅನುವಾದಿಸುವ ಸೇವೆಯಲ್ಲಿ ಭಾಗಿಯಾಗುವುದೆಂದರೆ ಈ ಧರ್ಮಕಾರ್ಯದ ಸುವರ್ಣಾವಕಾಶವೇ ಆಗಿದೆ. ಅನುವಾದ ಮಾಡುವವರಿಗೆ ಮರಾಠಿ ಮತ್ತು ಕನ್ನಡ ಭಾಷೆಯ ಸಂಪೂರ್ಣ ಜ್ಞಾನವಿರಬೇಕು, ಗಣಕಯಂತ್ರದಲ್ಲಿ ಬೆರಳಚ್ಚು ಮಾಡುವುದು ಮತ್ತು ಅಂತರ್ಜಾಲದ ಮಾಹಿತಿಯಿರಬೇಕು. ಆಸಕ್ತಿಯಿರುವ ಧರ್ಮಾಭಿಮಾನಿಗಳು ಸಂಪರ್ಕಿಸಬೇಕಾಗಿ ವಿನಂತಿಸುತ್ತೇವೆ.

ಸಂಪರ್ಕ ಕ್ರ. : ೯೩೪೨೪೩೫೬೧೭

ವಿ-ಅಂಚೆ : [email protected]