ಶ್ರೀ. ಯೋಗೇಶ ಸೋವನಿ ಅವರ ಮನೋಗತ೧೯೯೭ ರಿಂದ ೨೦೦೦ ರ ವರೆಗೆ ನಾನು ಉಸ್ತಾದ ಅಲ್ಲಾರಖಾಂ (ಉಸ್ತಾದ ಜಾಕೀರ ಹುಸೇನ ಅವರ ತಂದೆ) ಅವರಿಂದ ತಬಲಾ ಕಲಿಯುತ್ತಿದ್ದೆ. ನಂತರ ೨೦೦೦ ನೇ ಇಸವಿಯಿಂದ ಉಸ್ತಾದ ಜಾಕಿರ ಹುಸೇನ ರಿಂದ ಕಲಿಯುವ ಅಮೂಲ್ಯ ಅವಕಾಶ ಲಭಿಸಿತು ಮತ್ತು ಅವರ ಒಡನಾಟದಲ್ಲಿ ನನ್ನ ತಬಲಾವಾದನದ ಪ್ರವಾಸ ಆರಂಭವಾಯಿತು. ಈ ಕಾಲಾವಧಿಯಲ್ಲಿ ನನಗೆ ಉಸ್ತಾದ ಜಾಕೀರ ಹುಸೇನ ಅವರನ್ನು ಹತ್ತಿರದಿಂದ ಅನುಭವಿಸುವ ಅವಕಾಶ ಸಿಕ್ಕಿತು. ಉಸ್ತಾದ ಜಾಕಿರ ಭಾಯಿ ಅವರ ಸಾನ್ನಿಧ್ಯದಲ್ಲಿ ಮತ್ತು ಮಾರ್ಗದರ್ಶನದಲ್ಲಿ ನಾನು ಕಲಿತ ಅಂಶಗಳನ್ನು ಈ ಲೇಖನದ ಮೂಲಕ ಕೃತಜ್ಞತೆಯಿಂದ ಅವರ ಚರಣಗಳಿಗೆ ಅರ್ಪಿಸುತ್ತೇನೆ. |
೧. ಉಸ್ತಾದ ಜಾಕಿರ ಹುಸೇನ ಅವರ ಒಡನಾಟ ಮತ್ತು ಅವರಿಂದ ಲಭಿಸಿದ ಅಮೂಲ್ಯ ಮಾರ್ಗದರ್ಶನ
೧ ಅ. ಗಣಪತಿಯ ಕೃಪೆಯಿಂದ ತಬಲಾ ಗುರುವಾಗಿ ಲಭಿಸಿದ ಉಸ್ತಾದ ಜಾಕಿರ ಹುಸೇನ : ‘ಸಾಂಗ್ಲಿ ಸಂಸ್ಥಾನದ ರಾಣಿ ಸರಕಾರ ಪದ್ಮಿನಿರಾಜೆ ಪಟವರ್ಧನ ಅವರ ಗಣಪತಿ ದೇವಸ್ಥಾನದ ಕಾರ್ಯ ಕ್ರಮದಲ್ಲಿ ನನ್ನ ತಂದೆ (ಶ್ರೀಪಾದ ಸೋವನಿ) ಹಾಡುವಾಗ ನಾನು ತಬಲಾಕ್ಕೆ ಜೊತೆ ನೀಡಲು ಹೋಗುತ್ತಿದ್ದೆನು. ಒಂದು ದಿನ ರಾಣಿ ಸರಕಾರ ಪದ್ಮಿನಿ ರಾಜೇ ಪಟವರ್ಧನ್ ಅವರು ಕಾರ್ಯಕ್ರಮದ ಸಮಯದಲ್ಲಿ ಗಣಪತಿ ದೇವಸ್ಥಾನದ ಗೇಟಿನಲ್ಲಿ ನನ್ನನ್ನು, ‘ನಿಮಗೆ ಜಾಕೀರ ಹುಸೇನ ಅವರ ಭೇಟಿಯಾಗಿದೆಯೇ ?’ ಎಂದು ಕೇಳಿದರು. ಆಗ ನಾನು ಅವರಿಗೆ ‘ಇಲ್ಲ’ ಎಂದು ಹೇಳಿದೆನು. ಆದರೆ ತದನಂತರ ‘ಒಂದು ತಿಂಗಳೊಳಗೆ, ಅಂದರೆ ಅಕ್ಟೋಬರ್ ೧೯೯೩ ರಲ್ಲಿ, ಚಿಂಚವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಸ್ತಾದ ಜಾಕಿರ ಹುಸೇನ ಅವರ ಹಿಂದೆ ಕುಳಿತು ತಾನಪುರಾ ನುಡಿಸಲು ನನಗೆ ಅವಕಾಶ ಸಿಕ್ಕಿತು. ‘ಇದು ನನ್ನ ಮೇಲಾದ ಗಣಪತಿ ದೇವರ ಕೃಪೆ’, ಎಂದು ನಾನು ಭಾವಿಸುತ್ತೇನೆ.
ಈ ಕಾರ್ಯಕ್ರಮದಲ್ಲಿ ಉಸ್ತಾದ ಜಾಕಿರ ಹುಸೇನ ಅವರ ತಬಲಾ ವಾದನವನ್ನು ಹತ್ತಿರದಿಂದ ಕೇಳುವ ಅವಕಾಶ ನನಗೆ ಸಿಕ್ಕಿತು ಮತ್ತು ಆ ಸಮಯದಲ್ಲಿ ನಾನು ನನ್ನ ನ್ಯೂನತೆಗಳನ್ನು ಅರಿತುಕೊಂಡೆ ಮತ್ತು ‘ನಾನು ಇನ್ನೂ ಬಹಳ ಪ್ರಯತ್ನಿಸ ಬೇಕು’, ಎನ್ನುವ ಅರಿವಾಯಿತು.
೧ ಆ. ಉಸ್ತಾದ ಜಾಕಿರ ಹುಸೇನ ಅವರು ಅಭ್ಯಾಸ (ರಿಯಾಜ) ಮಾಡುವ ಮಹತ್ವವನ್ನು ಮನಸ್ಸಿನಲ್ಲಿ ಬಿಂಬಿಸುವುದು : ನಾನು ಉಸ್ತಾದ ಜಾಕಿರ ಹುಸೇನ ಅವರ ಮನೆಗೆ ಹೋದಾಗಲೆಲ್ಲ, ಅವರ ಮೊದಲ ಪ್ರಶ್ನೆಯೆಂದರೆ, ‘ಕೈಸೆ ಹೋ ಯೋಗಿ (ಅವರು ನನ್ನನ್ನು ಯೋಗೇಶ ಬದಲಿಗೆ ಯೋಗಿ ಎಂದು ಕರೆಯುತ್ತಿದ್ದರು) ?’ ಮತ್ತು ಎರಡನೇಯ ಪ್ರಶ್ನೆಯೆಂದರೆ ‘ರಿಯಾಜ್ ಕೈಸೇ ಚಲ್ ರಹಾ ಹೈ ?’ ‘ರಿಯಾಜ ಕಿತನೆ ಘಂಟೆ ಹೋತಾ ಹೈ ?’ ಇದು ನನ್ನ ಮನಸ್ಸಿನಲ್ಲಿ ತಬಲಾವಾದನದ ಅಭ್ಯಾಸ (ರಿಯಾಜ) ಮಾಡುವ ಮಹತ್ವವನ್ನು ಬಿಂಬಿಸಿತು.
೧ ಇ. ಉಸ್ತಾದ ಜಾಕಿರ ಹುಸೇನ ಮತ್ತು ಪಂ. ಶಿವಕುಮಾರ ಶರ್ಮಾ ಅವರಿಂದ ಈಶ್ವರನ ಆರಾಧನೆಯ ಮಹತ್ವ ಗಮನಕ್ಕೆ ಬರುವುದು : ಉಸ್ತಾದ ಜಾಕಿರ ಹುಸೇನ ಕಾರ್ಯಕ್ರಮದ ಸಮಯದಲ್ಲಿ ತಬಲಾ ವಾದನದ ಮುನ್ನ ಕಣ್ಣು ಮುಚ್ಚಿ ಬಾಯಿಯಿಂದ ಏನೋ ಗುಣಗುಣಿಸುತ್ತಿದ್ದರು. (ಅವರು ಈಶ್ವರನಲ್ಲಿ ಪ್ರಾರ್ಥಿಸುತ್ತಿದ್ದರು.) ಪಂ. ಶಿವಕುಮಾರ ಶರ್ಮಾ ಕೂಡ ಸಿತಾರ ನುಡಿಸುವಾಗ ಒಂದು ಕೈಯಿಂದ ತಂತಿಯನ್ನು ಮೀಟುತ್ತಿದ್ದರು, ಇನ್ನೊಂದು ಕೈಯಿಂದ ಕೊರಳಲ್ಲಿದ್ದ ಗಣಪತಿಯ ‘ಲಾಕೆಟ್’ ಅನ್ನು ಮುಟ್ಟಿ ಕಣ್ಣು ಮುಚ್ಚಿಕೊಂಡು ಮನಸ್ಸಿನಲ್ಲೇ ಪ್ರಾರ್ಥಿಸುತ್ತಿದ್ದರು. ಈ ಮಹಾನ ಕಲಾಕಾರ ಗುರುಗಳಿಂದ ನನಗೆ ಈಶ್ವರನ ಪೂಜೆಯ ಮಹತ್ವ ಗಮನಕ್ಕೆ ಬಂದಿತು. ಇದರಿಂದ ನನಗೂ ಸ್ಫೂರ್ತಿ ದೊರಕಿತು.
೨. ಉಸ್ತಾದ ಜಾಕಿರ ಹುಸೇನರ ಬಗ್ಗೆ ಗಮನಕ್ಕೆ ಬಂದ ಗುಣವೈಶಿಷ್ಟ್ಯಗಳು
೨ ಅ. ಉಸ್ತಾದ ಜಾಕಿರ ಹುಸೇನ ಅವರು ದೇವತೆಗಳಿಗೆ ನಮಸ್ಕರಿಸಿಯೇ ತಮ್ಮ ವಿದ್ಯಾರ್ಥಿಗಳಿಗೆ ತಬಲಾ ಬಾರಿಸಲು ಕಲಿಸುವುದು : ಉಸ್ತಾದ ಜಾಕಿರ ಹುಸೇನ ಅವರ ತರಗತಿಯ ಒಂದು ಬದಿಯಲ್ಲಿ ಗಣಪತಿ ಮತ್ತು ಇನ್ನೊಂದು ಬದಿಯಲ್ಲಿ ಸರಸ್ವತಿ ದೇವಿಯ ಮೂರ್ತಿಗಳಿದ್ದವು. ಕಲಿಕಾವರ್ಗವನ್ನು ಪ್ರಾರಂಭಿಸುವ ಮೊದಲು, ಎಲ್ಲಾ ಶಿಷ್ಯರು ಈ ದೇವತೆಗಳಿಗೆ ಮತ್ತು ನಂತರ ಗುರುಗಳಿಗೆ ನಮಸ್ಕರಿಸಿದ ನಂತರ ತಬಲಾವನ್ನು ನುಡಿಸುತ್ತಿದ್ದರು. ಉಸ್ತಾದ ಜಾಕಿರ ಹುಸೇನ ಅವರು ವಿದ್ಯಾರ್ಥಿಗಳಿಗೆ ‘ಕಲಾರಾಧನೆಯಲ್ಲಿ ದೇವತೆಯ ಅಧಿಷ್ಠಾನ ಮುಖ್ಯವಾಗಿರುತ್ತದೆ’ ಎಂದು ಕಲಿಸಿದರು.
೨ ಆ. ನಮ್ರತೆ
೧. ಉಸ್ತಾದ ಜಾಕಿರ ಹುಸೇನ ಅವರ ಕಾರ್ಯಕ್ರಮದ ಸಮಯದಲ್ಲಿ ವೃದ್ಧರು ಮತ್ತು ಪ್ರತಿಭಾವಂತ ಕಲಾವಿದರು ಸಭಿಕರಾಗಿ ಉಪಸ್ಥಿತರಿದ್ದರೆ, ಜಾಕೀರಭಾಯಿ ಅವರು ಮೊದಲು ವೇದಿಕೆಗೆ ಹೋಗಿ ತಬಲಾಕ್ಕೆ ವಂದನೆ ಸಲ್ಲಿಸುತ್ತಿದ್ದರು ಮತ್ತು ನಂತರ ವೇದಿಕೆಯಿಂದ ಕೆಳಗಿಳಿದು ಕಲಾವಿದರ ಪಾದಗಳನ್ನು ಮುಟ್ಟಿ ನಮಸ್ಕರಿಸುತ್ತಿದ್ದರು. ಅದರ ನಂತರ ಜಾಕಿರಭಾಯಿ ತಬಲಾ ವಾದನ ಪ್ರಾರಂಭಿಸುತ್ತಿದ್ದರು. ಜಾಕಿರಭಾಯಿ ಹೆಸರಾಂತ ಕಲಾವಿದ ರಾಗಿದ್ದರೂ ಅವರು ಇತರ ಕಲಾವಿದರನ್ನು ಗೌರವಿಸುತ್ತಿದ್ದರು.
೨. ೨೦೨೪ ರ ಗುರುಪೂರ್ಣಿಮೆಯ ದಿನದಂದು ಉಸ್ತಾದ ಜಾಕಿರ ಹುಸೇನ ಅವರು ತಮ್ಮ ಶಿಷ್ಯರಿಂದ ತಮ್ಮ ಪೂಜೆಯನ್ನು ಮಾಡಿಸಿಕೊಳ್ಳದೇ ಅವರು ಸ್ವತಃ ತಬಲಾ ವಾದನದ ಜ್ಞಾನಿ ತಾಲಯೋಗಿ ಪಂ. ಸುರೇಶ ತಳವಾಲ್ಕರ ಮತ್ತು ಪಂ. ಅನಿಂದೋ ಚಟರ್ಜಿ ಅವರನ್ನು ಸನ್ಮಾನಿಸಿದರು.
೨ ಇ. ಪ್ರೇಮಭಾವ : ಉಸ್ತಾದ ಜಾಕಿರ ಹುಸೇನ ಅವರಲ್ಲಿರುವ ಪ್ರೇಮಭಾವವನ್ನು ನಾವು ಅನೇಕ ಸಂದರ್ಭಗಳಲ್ಲಿ ಅನುಭವಿಸುತ್ತಿದ್ದೆವು. ಅವರು ನಮ್ಮಲ್ಲಿ ಪ್ರತಿಯೊಬ್ಬರನ್ನು ಪ್ರೀತಿಯಿಂದ ವಿಚಾರಿಸುತ್ತಿದ್ದರು. ಹಲವು ಸಲ ನಮಗೆ ಸಹಾಯವನ್ನೂ ಮಾಡಿದರು.
೨ ಈ. ಸಾಧಕತ್ವ : ಸಾಧನೆಯನ್ನು ಮಾಡುವ ಸಾಧಕನಲ್ಲಿ ಯಾವ ಗುಣಗಳು ಇರಬೇಕಾಗಿದ್ದವೋ, ಅವೆಲ್ಲವನ್ನೂ ನಾವು ಉಸ್ತಾದ ಜಾಕೀರ ಹುಸೇನ ಅವರಲ್ಲಿ ಅನುಭವಿಸುತ್ತಿದ್ದೆವು. ಅವರ ನಡತೆಯಿಂದ ನಮಗೆ ಸಾಧಕತ್ವ ಗಮನಕ್ಕೆ ಬರುತ್ತಿತ್ತು.
೨ ಉ. ಉಸ್ತಾದ ಜಾಕಿರ ಹುಸೇನ ಅವರು ‘ತಬಲಾ ವಾದನದ ಅಭ್ಯಾಸವನ್ನು ಹೇಗೆ ಮಾಡಬೇಕು ?’ ಎಂದು ಕಲಿಸಿದ್ದರಿಂದ ಇತರ ಕಲಾವಿದರ ತಬಲಾ ವಾದನವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದು : ಒಮ್ಮೆ ಜಾಕಿರಭಾಯಿಯವರು ತರಗತಿಯಲ್ಲಿ ನಮಗೆ ‘ಕಲಾವಿದರ ವಾದನವನ್ನು ಹೇಗೆ ಕೇಳುವುದು ? ನಾವು ಆ ಕಲಾವಿದರಲ್ಲಿರುವ ಒಳ್ಳೆಯ ವಿಷಯಗಳನ್ನು ಹೇಗೆ ನಮ್ಮಲ್ಲಿ ಅಳವಡಿಸಿಕೊಳ್ಳಬೇಕು ? ಅದಕ್ಕಾಗಿ (ರಿಯಾಜ್) ಅಭ್ಯಾಸ ಮಾಡುವುದು ಹೇಗೆ ?’ ಈ ವಿಷಯದ ಬಗ್ಗೆ ೨ ಗಂಟೆಗಳ ಕಾಲ ತಿಳಿಸಿ ಹೇಳಿದರು. ಅದರಿಂದಾಗಿ ನನಗೆ ೨೦೦೦ ನೇ ಇಸವಿಯ ನಂತರ ಇತರ ತಬಲಾ ವಾದಕರ ತಬಲಾ ವಾದನವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು ಮತ್ತು ಇತರ ಕಲಾವಿದರ ತಬಲಾ ವಾದನವನ್ನು ಕೇಳಲು ಪ್ರಾರಂಭಿಸಿದೆನು.
೨ ಊ. ಉಸ್ತಾದ ಜಾಕಿರ ಹುಸೇನ ಇವರು ತಮ್ಮನ್ನು ಗುರು ಎಂದು ಪರಿಗಣಿಸದೆ ಶಿಷ್ಯಭಾವದಲ್ಲಿದ್ದು ವಿದ್ಯಾದಾನ ಮಾಡುವುದು : ಜಾಕಿರಭಾಯಿ ಎಂದಿಗೂ ತಮ್ಮನ್ನು ಗುರು ಎಂದು ಪರಿಗಣಿಸಲಿಲ್ಲ. ಅವರು ನಮಗೆ ಕಲಿಸುವ ತರಗತಿಯಲ್ಲಿ ಹೇಳಿದರು, ‘ಗುರು ಕ್ಯಾ ಹೋತಾ ಹೈ ? ರಿಯಾಜ್ ಕೊ ಹೀ ಗುರು ಮಾನೋ. ರಿಯಾಜ್ ಕರೋ, ವಹೀ ಸಬ್ ಕುಚ್ ಕರೇಗಾ’ ಅವರು ಎಂದಿಗೂ ತಮ್ಮನ್ನು ‘ಗುರು’ ಎಂದು ಸಂಬೋಧಿಸಿಕೊಳ್ಳಲಿಲ್ಲ. ಯಾವಾಗಲೂ ಶಿಷ್ಯರಿರಾಗಿ ಉಳಿದರು ಮತ್ತು ವಿದ್ಯಾದಾನ ಮಾಡುತ್ತಲೇ ಇದ್ದರು.
೨ ಎ. ಉಸ್ತಾದ ಜಾಕಿರ ಹುಸೇನ ಅವರಿಗೆ ಹೊಗಳಿಕೆ ಇಷ್ಟವಾಗುತ್ತಿರಲಿಲ್ಲ.
೨ ಏ. ಉಸ್ತಾದ ಜಾಕಿರ ಹುಸೇನ ಅವರು ಮಾಡಿದ ಈಶ್ವರನ ಆರಾಧನೆ : ನಾವು ಜಾಕಿರಭಾಯಿಯವರು ಗಣಪತಿ, ಸರಸ್ವತಿ ದೇವಿ ಮತ್ತು ವಿಠ್ಠಲನ ಮೂರ್ತಿಗಳ ಮುಂದೆ ನಮಸ್ಕರಿಸುತ್ತಿರುವುದನ್ನು ನೋಡಿದ್ದೇವೆ. ಅವರು ತರಗತಿಯ ಸಮಯದಲ್ಲಿ ಅಬ್ಬಾಜಿ (ಉಸ್ತಾದ ಅಲ್ಲಾರಖಾಂ) ಅವರ ಛಾಯಾಚಿತ್ರದ ಮುಂದೆ ಕುಳಿತು ‘ಸರಸ್ವತಿ ವಂದನಾ…’ ಮತ್ತು ‘ವಕ್ರತುಂಡ ಮಹಾಕಾಯಾ…’ ಅಥವಾ ‘ಗುರುರ್ಬ್ರಹ್ಮ ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರಃ…’ ಶ್ಲೋಕಗಳನ್ನು ಹೇಳುತ್ತಿದ್ದರು.
೨ ಓ. ಉಸ್ತಾದ ಜಾಕಿರ ಹುಸೇನ ಅವರ ಇತರ ವೈಶಿಷ್ಟ್ಯಗಳು
೧. ಜಾಕಿರಭಾಯಿ ಎಂದರೆ ಜ್ಞಾನತೇಜದ ಮನಮೋಹಕ ವ್ಯಕ್ತಿತ್ವ
೨. ತಬಲಾ ಮತ್ತು ಡಗ್ಗಾದ ಸಮತೋಲಿತ ಸುಮಧುರ ವಾದನವೆಂದರೆ ಜಾಕಿರಭಾಯಿ !
೩. ತಬಲಾ ವಾದ್ಯಕ್ಕೆ ಅತ್ಯುನ್ನತ ಸ್ಥಾನ ನೀಡಿದ ಜಾಕಿರಭಾಯಿ !
ಇಂದು ಜಾಕಿರಭಾಯಿ ಎಲ್ಲರನ್ನೂ ಅಗಲಿದರು. ಡಿಸೆಂಬರ್ ೧೫ ರಂದು ಅವರ ನಿಧನದಿಂದ ಕಲಾ ಕ್ಷೇತ್ರಕ್ಕೆ ಬಹಳ ನಷ್ಟವಾಗಿದೆ. ಜಾಕಿರಭಾಯಿ ತಿಳಿದೋ ತಿಳಿಯದೆಯೋ ಅನೇಕ ವಿಷಯಗಳ ಸಂಸ್ಕಾರಗಳನ್ನು ನಮ್ಮ ಮೇಲೆ ಮಾಡಿದರು. ಅವರು ಕಲಿಸಿರುವ ಮತ್ತು ಮಾಡಿರುವ ಸಂಸ್ಕಾರದ ಬಲದಿಂದ ಮುನ್ನಡೆಯುವುದು ಆವಶ್ಯಕವಾಗಿದೆ. ಅದಕ್ಕಾಗಿ ನನಗೆ ‘ಅವರ ಆಶೀರ್ವಾದ ಲಭಿಸಲಿ’, ಎಂದು ಪರಮೇಶ್ವರನ ಚರಣಗಳಲ್ಲಿ ಪಾರ್ಥನೆ.
– ಶ್ರೀ. ಯೋಗೇಶ ಸೋವನಿ, ಸಂಗೀತ ಅಲಂಕಾರ (ತಬಲಾ), ಡೊಂಬಿವಲಿ, ಜಿಲ್ಲೆ ಠಾಣೆ. (೨೦.೧೨.೨೦೨೪)
ಡೊಂಬಿವಿಲಿ, ಜಿಲ್ಲಾ ಠಾಣೆಯ ತಬಲಾ ವಾದಕ ಶ್ರೀ. ಯೋಗೇಶ ಸೋವನಿಯವರ ಪರಿಚಯ !ಶ್ರೀ. ಯೋಗೇಶ ಸೋವನಿ ತಬಲಾ ವಾದಕರು. ಇವರು ಮೂಲತಃ ಸಾಂಗ್ಲಿಯವರಾಗಿದ್ದು ಪ್ರಸ್ತುತ ಡೊಂಬಿವಿಲಿಯಲ್ಲಿ ನೆಲೆಸಿದ್ದಾರೆ. ಅವರು ತಬಲಾ ವಾದನದ ಶಿಕ್ಷಣವನ್ನು ಪ್ರಾರಂಭದಲ್ಲಿ ಸಾಂಗ್ಲಿಯ ಶ್ರೀ. ರಮೇಶ ಗೋಖಲೆ ಮತ್ತು ಶ್ರೀ. ನಿಶಿಕಾಂತ ಬಡೋದೆಕರ ಅವರಿಂದ ಪಡೆದರು. ಕಾಲಾನಂತರದಲ್ಲಿ, ಅವರು ಉಸ್ತಾದ ಅಲ್ಲಾರಖಾಂ, ಉಸ್ತಾದ ಜಾಕೀರ ಹುಸೇನ, ಪಖವಾಜ್ ಮಾಸ್ಟರ ಪಂ. ಭವಾನಿ ಶಂಕರ ಮತ್ತು ಪಂ. ಸುಧೀರ ಮಾಯಿಣಕರ ಅವರಲ್ಲಿ ಮುಂದಿನ ಶಿಕ್ಷಣವನ್ನು ಪಡೆದರು. ಅವರು ತಬಲಾವಾದನದಲ್ಲಿ ‘ಅಲಂಕಾರ’ ಪದವಿಯನ್ನು ಪಡೆದಿದ್ದಾರೆ. |
ಆದರ್ಶ ಗುರು-ಶಿಷ್ಯ -ಗುರು ಉಸ್ತಾದ ಜಾಕಿರ ಹುಸೇನ ಮತ್ತು ಶಿಷ್ಯ ಶ್ರೀ. ಯೋಗೇಶ ಸೋವನಿ !ಶ್ರೀ. ಯೋಗೇಶ ಸೋವನಿ ಅವರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಪರವಾಗಿ ನಡೆಯುವ ಸಂಶೋಧನಾ ಕಾರ್ಯದಲ್ಲಿ ನಿಯಮಿತವಾಗಿ ಭಾಗ ವಹಿಸುತ್ತಾರೆ. ‘ಗುರು ಉಸ್ತಾದ ಜಾಕೀರ ಹುಸೇನ ಅವರ ಬಗ್ಗೆ ಶ್ರೀ. ಸೋವನಿ ನಿರಂತರ ಶಿಷ್ಯಭಾವದಲ್ಲಿರುವುದರಿಂದ ಅವರು ಉಸ್ತಾದ ಜಾಕೀರ ಹುಸೇನ ಅವರಿಂದ ಕಲಿಯುವ ಸ್ಥಿತಿಯಲ್ಲಿರುತ್ತಿದ್ದರು. ಆದುದರಿಂದಲೇ ಅವರು ‘ಗುರುವಿನಿಂದ ಕಲಿತದ್ದನ್ನು ತಮ್ಮ ಅಂತರಂಗದಲ್ಲಿ ಬಿಂಬಿಸಿಕೊಂಡಿದ್ದಾರೆ’ ಎಂಬುದು ಅವರ ಬರಹದಿಂದ ಗಮನಕ್ಕೆ ಬರುತ್ತದೆ. ಅವರು ಬರೆದೈಇ ಅಂಶಗಳು ಸಂಗೀತ ಸಾಧನೆ ಮಾಡುವವರಿಗೆ ಮಾರ್ಗದರ್ಶಕವಾಗುವುದು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಮಹಾನ ತಬಲಾ ವಾದಕ ಉಸ್ತಾದ ಜಾಕಿರ ಹುಸೇನ ಅವರ ಚರಣಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ! – ಸುಶ್ರೀ (ಕು.) ತೇಜಲ ಪಾತ್ರಿಕರ (ಸಂಗೀತ ವಿಶಾರದ, ಆಧ್ಯಾತ್ಮಿಕ ಮಟ್ಟ ಶೇ. ೬೦), ಸಂಗೀತ ಸಂಯೋಜಕರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಫೋಂಡಾ, ಗೋವಾ. (೨೦.೧೨.೨೦೨೪) |