ಸಾಧಕರಿಗೆ ಆಧ್ಯಾತ್ಮಿಕ ಸ್ತರದ ಉಪಾಯ ಹುಡುಕಿ ಕೊಡುವಾಗ ಇತ್ತೀಚೆಗೆ (ಜುಲೈ ೨೦೨೪ ರಲ್ಲಿ) ಹೆಚ್ಚಿನವರಿಗೆ ನ್ಯಾಸ ಮಾಡುವ ಮುಖ್ಯ ಸ್ಥಾನ ‘ಸಹಸ್ರಾರ’ ಸಿಗುವುದು ಮತ್ತು ಇಲ್ಲಿಯವರೆಗೆ ನ್ಯಾಸ ಮಾಡುವ ಮುಖ್ಯ ಸ್ಥಾನದಲ್ಲಿ ಆಗುತ್ತಾ ಹೋಗಿರುವ ಬದಲಾವಣೆಗಳು

(ಸದ್ಗುರು) ಡಾ. ಮುಕುಲ ಗಾಡಗೀಳ

ಸದ್ಯ ಆಪತ್ಕಾಲ ನಡೆದಿದೆ ಮತ್ತು ಅದರ ತೀವ್ರತೆ ಹೆಚ್ಚಾಗುತ್ತಾ ಹೋಗುತ್ತಿದೆ. ಆದುದರಿಂದ ಕೆಟ್ಟ ಶಕ್ತಿಗಳ ಆಕ್ರಮಣಗಳ ತೀವ್ರತೆಯೂ ಹೆಚ್ಚಾಗುತ್ತಿದೆ. ಸನಾತನ ಸಂಸ್ಥೆಯ ಸಾಧಕರು ಪ್ರತಿದಿನ ಇದನ್ನು ಅನುಭವಿಸುತ್ತಿದ್ದಾರೆ. ೨೦೨೪ ರಲ್ಲಿ ಸಾಧಕರಿಗೆ ತಮ್ಮ ಶಾರೀರಿಕ ತೊಂದರೆಗಳು ಬಹಳಷ್ಟು ಹೆಚ್ಚಾಗಿರುವುದು ಗಮನಕ್ಕೆ ಬರುತ್ತಿದೆ. ಅದರ ಕಾರಣ ಮುಖ್ಯವಾಗಿ ಕೆಟ್ಟ ಶಕ್ತಿಗಳು. ‘ಆಪತ್ಕಾಲದ ತೀವ್ರತೆ ಹೆಚ್ಚಾದಂತೆ ಸಾಧಕರಿಗೆ ನಾಮಜಪಾದಿ ಉಪಾಯವನ್ನು ಹುಡುಕಿ ಕೊಡುವಾಗ ನ್ಯಾಸ ಮಾಡುವ ಮುಖ್ಯ ಸ್ಥಾನದಲ್ಲಿ ಹೇಗೆ ಬದಲಾವಣೆಯಾಯಿತು ?’, ಎಂಬುದರ ಅಧ್ಯಯನವನ್ನು ನನಗೆ ಮಾಡಲು ಸಾಧ್ಯವಾಯಿತು. ಅದನ್ನು ಇಲ್ಲಿ ಕೊಡಲಾಗಿದೆ.

೧. ಸೂಕ್ಷ್ಮ ಘಟನೆಗಳು ತಿಳಿಯಲು ಆಜ್ಞಾಚಕ್ರವು ಮಹತ್ವದ್ದಾಗಿರುವುದರಿಂದ ಕೆಟ್ಟ ಶಕ್ತಿಗಳು ಮುಖ್ಯವಾಗಿ ಸಾಧಕರ ಆಜ್ಞಾಚಕ್ರದ ಮೇಲೆ ದಾಳಿ ಮಾಡುವುದು

೨೦೧೨ ರಿಂದ ಸಾಧಕರಿಗೆ ನಾಮಜಪಾದಿ ಉಪಾಯಗಳನ್ನು ಹುಡುಕಿ ಕೊಡುವಾಗ, ನ್ಯಾಸದ ಸ್ಥಾನವು ಕೇವಲ ಆಜ್ಞಾಚಕ್ರ ಸಿಗುತ್ತಿತ್ತು ಅಥವಾ ಆಜ್ಞಾಚಕ್ರ ಮತ್ತು ಅದರ ಜೊತೆಗೆ ಇನ್ನೊಂದು ಚಕ್ರ ಸಿಗುತ್ತಿತ್ತು. ಸಾಧಕರು ಸಾಧನೆ ಮಾಡುತ್ತಾರೆ, ಅಂದರೆ ಅಧ್ಯಾತ್ಮದ ಅಧ್ಯಯನ ಮಾಡುತ್ತಾರೆ ಮತ್ತು ಅಧ್ಯಾತ್ಮವನ್ನು ಕೃತಿಯಲ್ಲಿ ತರುತ್ತಾರೆ. ಅಧ್ಯಾತ್ಮವು ಸೂಕ್ಷ್ಮ ಘಟನಾವಳಿಗೆ ಸಂಬಂಧಿಸಿದೆ. ಅವುಗಳನ್ನು ತಿಳಿದುಕೊಳ್ಳಲು ಆಜ್ಞಾಚಕ್ರವು ಮಹತ್ವದ್ದಾಗಿದೆ. ಆದುದರಿಂದ ಕೆಟ್ಟ ಶಕ್ತಿಗಳು ಮುಖ್ಯವಾಗಿ ಸಾಧಕರ ಆಜ್ಞಾಚಕ್ರದ ಮೇಲೆ ದಾಳಿ ಮಾಡುತ್ತವೆ.

ಸಾಧಕರಿಗೆ ನಾಮಜಪಾದಿ ಉಪಾಯವನ್ನು ಹುಡುಕಿ ಕೊಡುವಾಗ ಸದ್ಗುರು ಡಾ. ಮುಕುಲ ಗಾಡಗೀಳ

೨. ನಾವು ಕಣ್ಣುಗಳ ಮೂಲಕ ಇಡೀ ಜಗತ್ತನ್ನು ನೋಡುತ್ತಿರುವುದರಿಂದ, ಅವುಗಳ ಮೂಲಕ ಒಳ್ಳೆಯ ಅಥವಾ ಕೆಟ್ಟ ಶಕ್ತಿಗಳು ಸಹಜವಾಗಿ ಶರೀರದಲ್ಲಿ ಸೇರಿಕೊಳ್ಳುತ್ತವೆ; ಅಂದರೆ ಆಜ್ಞಾಚಕ್ರದ ಬದಲು ಕಣ್ಣುಗಳ ಮೇಲೆ ಉಪಾಯ ಮಾಡುವುದು ಹೆಚ್ಚು ಮಹತ್ವದ್ದಾಗಿದೆ ಎಂದು ೨೦೨೨ ರಲ್ಲಿ ಗಮನಕ್ಕೆ ಬರುವುದು

೨೦೨೨ ರಲ್ಲಿ, ಆಜ್ಞಾಚಕ್ರದ ಮೇಲೆ ಉಪಾಯ ಮಾಡುವುದಕ್ಕಿಂತ ಕಣ್ಣುಗಳ ಮೇಲೆ ಉಪಾಯ ಮಾಡುವುದು ಹೆಚ್ಚು ಮಹತ್ವದ್ದಾಗಿದೆ; ಏಕೆಂದರೆ ನಾವು ಕಣ್ಣುಗಳ ಮೂಲಕ ಇಡೀ ಜಗತ್ತನ್ನು ನೋಡುತ್ತಿರುವುದರಿಂದ ಅವುಗಳ ಮೂಲಕ ಒಳ್ಳೆಯ ಅಥವಾ ಕೆಟ್ಟ ಶಕ್ತಿಗಳು ಸಹಜವಾಗಿ ನಮ್ಮ ಶರೀರದಲ್ಲಿ ಸೇರಿಕೊಳ್ಳುತ್ತವೆ’ ಎಂಬುದು ನನ್ನ ಗಮನಕ್ಕೆ ಬಂದಿತು. ಕಣ್ಣುಗಳು ತೇಜತತ್ತ್ವಕ್ಕೆ ಸಂಬಂಧಿಸಿವೆ. ಅದೇ ರೀತಿ, ಆಧ್ಯಾತ್ಮಿಕ ಉಪಾಯ ಮಾಡುವಾಗ ಕುಂಡಲಿನಿಚಕ್ರಗಳಲ್ಲಿನ ತೊಂದರೆದಾಯಕ ಶಕ್ತಿಯನ್ನು ದೂರ ಮಾಡಿದರೂ ಕಣ್ಣುಗಳಲ್ಲಿ ತೊಂದರೆದಾಯಕ ಶಕ್ತಿಯು ಉಳಿದಿರುತ್ತದೆ. ಆದುದರಿಂದ ಕೊನೆಗೆ ಕಣ್ಣುಗಳ ಮೇಲೆ ಉಪಾಯ ಮಾಡಿದರೆ, ಶರೀರದಲ್ಲಿನ ತೊಂದರೆದಾಯಕ ಶಕ್ತಿ ಸಂಪೂರ್ಣ ದೂರವಾಗುತ್ತದೆ’, ಎಂದೂ ಗಮನಕ್ಕೆ ಬಂದಿತು.

೩. ಮಾರ್ಚ್ ೨೦೨೩ ರಿಂದ ಉಪಾಯಗಳ ಮುಖ್ಯ ಸ್ಥಾನ ‘ತಲೆಯ ಎಡ ಬದಿ’ ಬರುವುದು; ಏಕೆಂದರೆ ಕೆಟ್ಟ ಶಕ್ತಿಗಳು ಸಾಧಕರ ಕೃತಿಗಳ ಮೇಲೆ ನಿಯಂತ್ರಣ ಪಡೆಯಲು ಅವರ ಮೆದುಳಿನ ಮೇಲೆ ದಾಳಿ ಮಾಡಲು ಆರಂಭಿಸುವುದು

ಮಾರ್ಚ್ ೨೦೨೩ ರಿಂದ ಉಪಾಯ ಹುಡುಕುವಾಗ, ಉಪಾಯಗಳ ಮುಖ್ಯ ಸ್ಥಾನ ‘ಆಜ್ಞಾಚಕ್ರ’ ಅಥವಾ ‘ಕಣ್ಣುಗಳು’ ಅಲ್ಲ ‘ತಲೆಯ ಎಡಬದಿ’ ಆಗಿದೆ ಮತ್ತು ಉಪಾಯ ಮಾಡಿದರೆ ಅದು ಹೆಚ್ಚು ಪರಿಣಾಮಕಾರಿಯಾಗುತ್ತಿದೆ ಎಂದು ಗಮನಕ್ಕೆ ಬಂದಿತು. ತಲೆಯ ಭಾಗ ಮೆದುಳಿಗೆ ಸಂಬಂಧಿಸಿರುತ್ತದೆ. ಮೆದುಳು ನಮ್ಮ ಕೃತಿಗಳನ್ನು ನಿಯಂತ್ರಿಸುತ್ತದೆ. ಆದುದರಿಂದ ಕೆಟ್ಟ ಶಕ್ತಿಗಳು ಸಾಧಕರ ಮೆದುಳಿನ ಮೇಲೆ ಹಲ್ಲೆ ಮಾಡಿ ಅವರ ಕೃತಿಗಳ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತವೆ. ಹಾಗೆಯೇ ಕಳೆದ ೨ ದಶಕಗಳಿಂದ ಕೆಟ್ಟ ಶಕ್ತಿಗಳು ಸಾಧಕರ ಮೇಲೆ ವಿಶೇಷವಾಗಿ ಸೂಕ್ಷ್ಮದಿಂದ ಆಕ್ರಮಣ ಮಾಡುತ್ತಿದ್ದವು; ಆದರೆ ಈಗ ಸಾಧಕರ ಸಾಧನೆ ಹೆಚ್ಚಾದುದರಿಂದ ಅವು ಸೋಲುತ್ತಿವೆ. ಅವುಗಳ ಶಕ್ತಿ ಕಡಿಮೆಯಾಗುತ್ತಿರುವುದರಿಂದ ಅವು ಈಗ ಸಾಧಕರಿಗೆ ಶಾರೀರಿಕ ತೊಂದರೆ ನೀಡುತ್ತವೆ. ಇದರ ಒಂದು ಉದಾಹರಣೆ ಎಂದರೆ ಕೆಟ್ಟ ಶಕ್ತಿಗಳು ಸಾಧಕರ ಕೃತಿಗಳ ಮೇಲೆ ನಿಯಂತ್ರಣ ಪಡೆಯಲು ಅವರ ಮೆದುಳಿನ ಮೇಲೆ ದಾಳಿ ಮಾಡುವುದು.

೩ ಅ. ಶಾರೀರಿಕ ತೊಂದರೆಗಳಿಗೆ ಉಪಾಯ ಮಾಡಲು ‘ತಲೆಯ ಬಲಬದಿ’ ಈ ಸ್ಥಾನದ ಮೇಲೆ ಮತ್ತು ಆಧ್ಯಾತ್ಮಿಕ ತೊಂದರೆಗಳಿಗೆ ಉಪಾಯ ಮಾಡಲು ‘ತಲೆಯ ಎಡ ಬದಿ’ ಈ ಸ್ಥಾನದ ಮೇಲೆ ಉಪಾಯ ಮಾಡುವುದು ಆವಶ್ಯಕವಾಗಿದೆ ಎಂದು ಗಮನಕ್ಕೆ ಬರುವುದು : ಮುಂದೆ, ‘ತೊಂದರೆಯ ಕಾರಣ ಶಾರೀರಿಕವಾಗಿದ್ದರೆ, ಉಪಾಯಗಳ ಮುಖ್ಯ ಸ್ಥಾನ ‘ತಲೆಯ ಬಲ ಬದಿ’ ಬರುತ್ತದೆ’, ಉದಾ. ಶೀತ ಅಥವಾ ಕೆಮ್ಮು ಆಗಿದ್ದರೆ, ‘ವಿಶುದ್ಧಚಕ್ರ’ದ ಮೇಲೆ ಉಪಾಯ ಮಾಡುವುದರೊಂದಿಗೆ ‘ತಲೆಯ ಬಲ ಬದಿ’ಗೆ ಉಪಾಯ ಮಾಡುವುದೂ ಆವಶ್ಯಕವಾಗಿರುತ್ತದೆ. ಹಾಗೆಯೇ ಶೀತ ಅಥವಾ ಕೆಮ್ಮು ಯಾವ ಆಧ್ಯಾತ್ಮಿಕ ಕಾರಣಗಳಿಂದ ಆಗಿದೆ, ಅದಕ್ಕೆ ಉಪಾಯ ಮಾಡಲು ‘ತಲೆಯ ಎಡ ಬದಿ’ ಇದು ಮುಖ್ಯ ಸ್ಥಾನ ಮತ್ತು ‘ಮಣಿಪುರಚಕ್ರ’ ಇವುಗಳ ಮೇಲೆ ಉಪಾಯ ಮಾಡಬೇಕಾಗುತ್ತದೆ’, ಎಂದೂ ಗಮನಕ್ಕೆ ಬಂದಿತು.

೪. ಮೇ ೨೦೨೪ ರಿಂದ ಆಧ್ಯಾತ್ಮಿಕ ತೊಂದರೆಗಳಿಗೆ ಉಪಾಯ ಹುಡುಕುವಾಗ ‘ತಲೆಯ ಎಡಬದಿ’, ಇದು ಮುಖ್ಯ ಸ್ಥಾನವಾಗಿ ಸಿಗದೇ ‘ಸಹಸ್ರಾರ’, ಸಿಗತೊಡಗುವುದು, ಹಾಗೆಯೇ ಶಾರೀರಿಕ ತೊಂದರೆಗಳಿಗೆ ‘ಸಹಸ್ರಾರ’, ಈ ಮುಖ್ಯ ಸ್ಥಾನ ಸಿಗುವುದು ಮತ್ತು ಅದರಿಂದ ಆಪತ್ಕಾಲದ ಭೀಕರತೆ ಗಮನಕ್ಕೆ ಬರುವುದು

ತಲೆಯ ಮೇಲೆ ಮಧ್ಯಭಾಗದಲ್ಲಿರುವ ಮನುಷ್ಯನ ‘ಸಹಸ್ರಾರ’ವು ಆಧ್ಯಾತ್ಮಿಕ ದೃಷ್ಟಿಯಿಂದ ಬಹಳ ಮಹತ್ವದ ಸ್ಥಾನವಾಗಿದೆ. ಸಹಸ್ರಾರದ ಮೇಲೆ ಆಧ್ಯಾತ್ಮಿಕ ಉಪಾಯ ಮಾಡಿದರೆ, ಎಲ್ಲ ಚಕ್ರಗಳ ಮೇಲೆ ಉಪಾಯವಾಗುತ್ತದೆ; ಏಕೆಂದರೆ ಮೂಲಾಧಾರಚಕ್ರದಿಂದ ಸಹಸ್ರಾರದ ವರೆಗೆ ಬಂದ ಸುಷುಮ್ನಾನಾಡಿಯ ಮೂಲಕ ಎಲ್ಲ ಚಕ್ರಗಳಿಗೆ ಉಪಾಯಗಳ ಊರ್ಜೆ ಸಿಗುತ್ತದೆ. ಯಾರಾದರೂ ಮರಣೋನ್ಮುಖ ಸ್ಥಿತಿಯಲ್ಲಿದ್ದರೆ, ಸಹಸ್ರಾರದ ಮೇಲೆ ಉಪಾಯ ಮಾಡಿದರೆ ಲಾಭವಾಗುತ್ತದೆ; ಏಕೆಂದರೆ ಸಹಸ್ರಾರದಲ್ಲಿ ಸೂರ್ಯನಾಡಿ ಮತ್ತು ಚಂದ್ರನಾಡಿ ಬಂದುದರಿಂದ ಅವುಗಳ ಬಾಯಿ ತೆರೆದಿರುತ್ತದೆ. ಈ ಎರಡೂ ನಾಡಿಗಳ ಮೂಲಕ ಉಪಾಯಗಳ ಶಕ್ತಿ ಶರೀರದಾದ್ಯಂತ ತಲುಪಿ ತಕ್ಷಣ ಲಾಭವಾಗುತ್ತದೆ.

ಮೇ ೨೦೨೪ ರಿಂದ ಸಾಧಕರ ಆಧ್ಯಾತ್ಮಿಕ ತೊಂದರೆಗಳಿಗೆ ಉಪಾಯವನ್ನು ಹುಡುಕುವಾಗ ಹೆಚ್ಚಿನ ಬಾರಿ ನನಗೆ ‘ತಲೆಯ ಎಡ ಬದಿ’, ಇದು ಮುಖ್ಯ ಸ್ಥಾನವಾಗಿ ಸಿಗದೇ ‘ಸಹಸ್ರಾರ’, ಈ ಸ್ಥಾನವು ಸಿಗತೊಡಗಿತು. ಇದರಿಂದ ‘ಆಪತ್ಕಾಲದ ತೀವ್ರತೆ ಇನ್ನಷ್ಟು ಹೆಚ್ಚಾಗಿದೆ ಮತ್ತು ಕೆಟ್ಟ ಶಕ್ತಿಗಳು ಇನ್ನೂ ತೀವ್ರವಾಗಿ ದಾಳಿ ಮಾಡುತ್ತಿವೆ’, ಎಂದು ಗಮನಕ್ಕೆ ಬಂತು. ‘ಇಲ್ಲಿಯವರೆಗೆ ೬ ನೇ ಪಾತಾಳದ ಕೆಟ್ಟ ಶಕ್ತಿಗಳು ದಾಳಿ ಮಾಡುತ್ತಿದ್ದವು; ಆದರೆ ಈಗ ಆಗುತ್ತಿರುವ ದಾಳಿಗಳಲ್ಲಿ ಶೇ. ೩೦ ರಷ್ಟು ಆಕ್ರಮಣಗಳು ೭ ನೇ (ಕೊನೆಯ) ಪಾತಾಳದ ಕೆಟ್ಟ ಶಕ್ತಿಗಳು ಮಾಡತೊಡಗಿವೆ’, ಎಂದೂ ಗಮನಕ್ಕೆ ಬಂದಿತು. ಇದರಿಂದ ಆಪತ್ಕಾಲದ ಭೀಕರತೆ ಗಮನಕ್ಕೆ ಬರುತ್ತದೆ. ಶಾರೀರಿಕ ತೊಂದರೆಗಳಿಗೆ ಉಪಾಯ ಹುಡುಕುವಾಗಲೂ ಈಗ ‘ತಲೆಯ ಎಡ ಬದಿ’, ಇದು ಮುಖ್ಯ ಸ್ಥಾನವಾಗಿ ಸಿಗದೇ ‘ಸಹಸ್ರಾರ’, ಇದು ಮುಖ್ಯ ಸ್ಥಾನವಾಗಿ ಸಿಗುತ್ತದೆ.

೫. ಸಾಧಕರಿಗೆ ಆಗುವ ಸಾಮಾನ್ಯ ತೊಂದರೆಗಳಿಗೆ ಉಪಾಯವನ್ನು ಹುಡುಕಿದಾಗ ಹೆಚ್ಚಿನ ಬಾರಿ ‘ಸಹಸ್ರಾರ’ ಇದು ಮುಖ್ಯ ಸ್ಥಾನವೆಂದು ಮತ್ತು ‘ಮಣಿಪುರ ಚಕ್ರ’ ಇದು ಎರಡನೇ ಸ್ಥಾನವೆಂದು ಸಿಗುವುದು

ಸದ್ಯ (ಜುಲೈ ೨೦೨೪ ರಲ್ಲಿ) ಸಾಧಕರಿಗೆ ಸಾಮಾನ್ಯ ತೊಂದರೆಗಳು ಆಗುತ್ತಿರುವಾಗ, ಅವರಿಗೆ ಉಪಾಯ ಹುಡುಕಿದಾಗ ಹೆಚ್ಚುತ್ತಿರುವ ಆಪತ್ಕಾಲಕ್ಕೆ ಅನುಸರಿಸಿ ಮುಖ್ಯ ಸ್ಥಾನವು ಹೆಚ್ಚಿನ ಬಾರಿ ‘ಸಹಸ್ರಾರ’ ಸಿಗುತ್ತದೆ, ಹಾಗೆಯೇ ಎರಡನೇ ಸ್ಥಾನ ‘ಮಣಿಪುರಚಕ್ರ’ ಸಿಗುತ್ತದೆ. ‘ಹೊಟ್ಟೆ’ಯು ‘ಮಣಿಪುರಚಕ್ರ’ಕ್ಕೆ ಸಂಬಂಧಿಸಿದ ಅವಯವವಾಗಿದೆ. ಹೊಟ್ಟೆಯ ಟೊಳ್ಳಿನಲ್ಲಿ ತೊಂದರೆದಾಯಕ ಶಕ್ತಿಯನ್ನು ಶೇಖರಿಸಿಡಲು ಕೆಟ್ಟ ಶಕ್ತಿಗಳಿಗೆ ಸುಲಭವಾಗುತ್ತದೆ; ಆದುದರಿಂದ ಅವು ಅಲ್ಲಿ ಪ್ರಾಮುಖ್ಯತೆಯಿಂದ ದಾಳಿ ಮಾಡುತ್ತವೆ. ಈ ದಾಳಿಯನ್ನು ದೂರ ಮಾಡಲು ಮಣಿಪುರಚಕ್ರದ ಮೇಲೆ ಉಪಾಯ ಮಾಡಬೇಕಾಗುತ್ತದೆ.

ನನ್ನಿಂದ ಆಧ್ಯಾತ್ಮಿಕ ಉಪಾಯಗಳ ಸಂದರ್ಭದಲ್ಲಿನ ಈ ಸಂಶೋಧನೆ ಗುರುಕೃಪೆಯಿಂದಲೇ ಸಂಭವಿಸಿತು. ಇದಕ್ಕಾಗಿ ನಾನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಲ್ಲಿ ಕೋಟಿಕೋಟಿ ಕೃತಜ್ಞನಾಗಿದ್ದೇನೆ.’

– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿಎಚ್‌.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೩.೭.೨೦೨೪) 

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.