ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಹಿಂದುತ್ವನಿಷ್ಠರಿಗೆ ಬಂದಿದ್ದ ವಿವಿಧ ಅನುಭೂತಿಗಳು ಮತ್ತು ಹಿಂದೂ ಜನಜಾಗೃತಿ ಸಮಿತಿಯ ಬಗ್ಗೆ ಅವರಿಗೆ ಇರುವ ಆತ್ಮೀಯ ಭಾವ !

ಜೂನ ೧೨ ರಿಂದ ೧೮, ೨೦೨೨ ರ ವರೆಗೆ ರಾಮನಾಥಿ (ಗೋವಾ)ದ ಶ್ರೀ ರಾಮನಾಥ ದೇವಸ್ಥಾನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹತ್ತನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ನೆರವೇರಿತು. ಈ ಅಧಿವೇಶನದ ಮುಕ್ತಾಯ ಸಮಾರಂಭದ ಭಾಗದಲ್ಲಿ ಹಿಂದುತ್ವನಿಷ್ಠರು ಅಧಿವೇಶನದ ಕಾಲದಲ್ಲಿ ಬಂದಂತಹ ಅನುಭೂತಿ, ಹಿಂದೂ ಜನಜಾಗೃತಿ ಸಮಿತಿಯ ವಿಷಯದಲ್ಲಿ ಅನಿಸಿದ ಆತ್ಮೀಯಭಾವ, ಹಾಗೂ ಸಾಧನೆ ಮಾಡುವಾಗ ಬಂದಂತಹ ವಿವಿಧ ಅನುಭೂತಿಗಳ ವಿಷಯದಲ್ಲಿ ಹೃದಯದ ಮನೋಗತವನ್ನು ವ್ಯಕ್ತಪಡಿಸಿದರು. ಅದರಲ್ಲಿ ಆಯ್ದ ಕೆಲವು ಅಂಶಗಳನ್ನು ಓದುಗರಿಗಾಗಿ ಇಲ್ಲಿ ನೀಡುತ್ತಿದ್ದೇವೆ.

೧. ಸನಾತನ ಆಶ್ರಮ, ಹಿಂದೂ ಅಧಿವೇಶನ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರ ಸ್ಥಾನದಲ್ಲಿ ದೇವತೆಗಳ ಅನುಭೂತಿ ಬಂದಿತು !

ಅ. ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಉಪಸ್ಥಿತರಿರುವುದು, ಇದು ನನ್ನ ಗೌರವವೆಂದು ತಿಳಿಯುತ್ತೇನೆ.

ಆ. ‘ಎಲ್ಲ ದೇವತೆಗಳು ಸ್ವರ್ಗದಿಂದ ಇಳಿದು ಸನಾತನದ ಆಶ್ರಮಕ್ಕೆ ಬಂದಿದ್ದಾರೆ’, ಎಂದು ನನಗೆ ಅನಿಸಿತು.

ಇ. ‘ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರ ರೂಪದಲ್ಲಿ ದೇವತೆಗಳೇ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವನ್ನು ಮಾಡುತ್ತಿದ್ದಾರೆ’, ಎಂದು ನಾನು ಅನುಭವಿಸಿದೆನು.

ಈ. ದೇಶದ ಮೂಲೆ ಮೂಲೆಯಿಂದ ದೇವಮಾನವರು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಈ ಅಧಿವೇಶನಕ್ಕೆ ಬಂದಿದ್ದಾರೆ. ಇಲ್ಲಿ ಉಪಸ್ಥಿತರಿರುವ ಧರ್ಮವೀರರಲ್ಲಿ ನನಗೆ ಶ್ರೀರಾಮ ಮತ್ತು ಶ್ರೀಕೃಷ್ಣರ ರೂಪ ಕಾಣಿಸುತ್ತಿದೆ. ಇದನ್ನು ನೋಡಿ ರಾಮರಾಜ್ಯದ ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯ ವಿಷಯದಲ್ಲಿ ನನಗೆ ಯಾವುದೇ ಸಂದೇಹವಿಲ್ಲ.

ಉ. ಅಧಿವೇಶನಕ್ಕೆ ಬಂದನಂತರ ಸಿಕ್ಕಿರುವ ಶಕ್ತಿಯು, ಹಿಂದೂ ರಾಷ್ಟ್ರದ ವಿಷಯದ ಜನಜಾಗೃತಿ ಮೂಡಿಸಲು ಉಪಯೋಗಿಸೋಣ. ಹಿಂದೂ ರಾಷ್ಟ್ರದ ವಿಷಯದ ಪ್ರೇರಣೆ ಹಿಂದೂಗಳಲ್ಲಿ ಜಾಗೃತಗೊಳಿಸೋಣ.

ಊ. ನಾವು ಜಯಪೂರದಲ್ಲಿ ೨೦೦ ಗ್ರಾಮಗಳಲ್ಲಿ ಜನಜಾಗೃತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವವರಿದ್ದೇವೆ. ನಾವು ಇನ್ನುಮುಂದೆ ಸಮಾಜದಲ್ಲಿ ಹಿಂದೂ ರಾಷ್ಟ್ರದ ವಿಚಾರವನ್ನು ಜಾಗೃತಗೊಳಿಸಲು ಪ್ರಾಮುಖ್ಯತೆಯನ್ನು ನೀಡುತ್ತೇವೆ.

ಎ. ಮುಂಬರುವ ವರ್ಷದಲ್ಲಿ ರಾಜಸ್ಥಾನದಲ್ಲಿ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಮಾರ್ಗದರ್ಶನದಡಿಯಲ್ಲಿ ನಾವು ಇಂತಹ ಅಧಿವೇಶನವನ್ನು ತೆಗೆದುಕೊಳ್ಳೋಣ.’

– ಶ್ರೀ. ಪ್ರಲ್ಹಾದ ಶರ್ಮಾ, ಸಚಿವ, ಮಾ ಭಗವತಿ ಗಾಯತ್ರಿ ಟ್ರಸ್ಟ(ಗಾಯತ್ರಿ ಪರಿವಾರ), ಜಯಪೂರ, ರಾಜಸ್ಥಾನ (೧೮.೬.೨೦೨೨)

೨. ರಾಜಸ್ಥಾನದ ಶ್ರೀ. ರಾಮರಾಯ ಶರ್ಮಾ ಇವರಿಗೆ ಪರಾತ್ಪರ ಗುರು ಡಾ. ಆಠವಲೆ, ಸನಾತನ ಆಶ್ರಮ ಮತ್ತು ಸನಾತನದ ಸಾಧಕರ ವಿಷಯದಲ್ಲಿ ಬಂದಂತಹ ಅನುಭೂತಿ !

ಶ್ರೀ. ರಾಮರಾಯ ಶರ್ಮಾ

ಅ. ‘ನಾನು ೪ ವರ್ಷಗಳ ಹಿಂದೆ ಸನಾತನ ಸಂಸ್ಥೆಯ ಸಂಪರ್ಕದಲ್ಲಿ ಬಂದೆನು. ನಾನು ಅಧಿವೇಶನದ ಸ್ಥಳಕ್ಕೆ ಬಂದ ಬಳಿಕ ಸಾಧಕರನ್ನು ಭೇಟಿಯಾದೆನು, ಆಗ ನನಗೆ ನನ್ನ ಸಂಬಂಧಿಕರನ್ನು ಭೇಟಿಯಾದಂತೆ ಅನಿಸಿತು.

ಆ. ರಾಮನಾಥಿಗೆ ಬಂದ ಬಳಿಕ ‘ನಾನು ನನ್ನ ಮನೆಗೆ ಬಂದಿದ್ದೇನೆ’, ಎಂದು ನನಗೆ ಅನಿಸಿತು. ‘ಸನಾತನದ ಆಶ್ರಮವೆಂದರೆ ನನ್ನ ಆತ್ಮದ ಮನೆಯಾಗಿದೆ’, ಎಂದು ನನಗೆ ಅನಿಸಿತು.

ಇ. ನಾನು ನಾಮಜಪಕ್ಕೆ ಕುಳಿತುಕೊಂಡಾಗಲೆಲ್ಲ, ನನಗೆ ಗುರುದೇವರ ಮುಖಾರವಿಂದ ಕಾಣಿಸುತ್ತದೆ.

ಈ. ‘ಹಿಂದೂ ರಾಷ್ಟ್ರ’ ಇದೇ ನನ್ನ ಜೀವನದ ಧ್ಯೇಯವಾಗಿದೆ. ಅದಕ್ಕಾಗಿ ನಾನು ತನು, ಮನ ಮತ್ತು ಧನವನ್ನು ಅರ್ಪಿಸಲು ಸಿದ್ಧನಿದ್ದೇನೆ.’

– ಶ್ರೀ. ರಾಮರಾಯ ಶರ್ಮಾ, ಸಮನ್ವಯಕರು, ಮಾ ಭಗವತಿ ಗಾಯತ್ರಿ ಟ್ರಸ್ಟ (ಗಾಯತ್ರಿ ಪರಿವಾರ), ಜಯಪೂರ, ರಾಜಸ್ಥಾನ (ಗಾಯತ್ರಿ ಪರಿವಾರ) (೧೮.೬.೨೦೨೨)

೩. ಆಸ್ಸಾಂ ರಾಜ್ಯದ ಹಿಂದುತ್ವನಿಷ್ಠ ಶ್ರೀ. ಬಿಸ್ವಜ್ಯೋತಿ ನಾಥ ಇವರಿಗೆ ಬಂದಂತಹ ವಿವಿಧ ಅನುಭೂತಿ !

ಶ್ರೀ. ಬಿಸ್ವಜ್ಯೋತಿ ನಾಥ

೩ ಅ. ಅಧಿವೇಶನದಲ್ಲಿ ಸಂತ ಮತ್ತು ಸಾಧಕರ ಉಪಸ್ಥಿತಿಯಲ್ಲಿ ಭಗವಂತನ ಅಸ್ತಿತ್ವದ ಅನುಭೂತಿಯುಂಟಾಗುವುದು : ‘ಭಗವಂತನ ಮೇಲೆ ನನಗೆ ಶ್ರದ್ಧೆಯಿದೆ; ಆದರೆ ಭಗವಂತನ ಅಸ್ತಿತ್ವದ ಪ್ರತ್ಯಕ್ಷ ಅನುಭವವಿರಲಿಲ್ಲ. ಎಂಟನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ನಾನು ಭಾಗವಹಿಸಿದ್ದೆನು. ಆಗ ಸಂತರು ಮತ್ತು ಸಾಧಕರ ಉಪಸ್ಥಿತಿಯಲ್ಲಿ ನನಗೆ ಭಗವಂತನ ಅಸ್ತಿತ್ವದ ಅನುಭೂತಿ ಬಂದಿತು.

೩ ಆ. ಸನಾತನದ ಮಾರ್ಗದರ್ಶನದಡಿಯಲ್ಲಿ ಶ್ರೀ ದತ್ತಗುರುಗಳ ನಾಮಜಪ ಮಾಡಿದ ಬಳಿಕ ಆರ್ಥಿಕ ಸ್ಥಿತಿ ಸುಧಾರಿಸಿರುವುದು : ನಮ್ಮ ಆರ್ಥಿಕ ಪರಿಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಆ ಸಮಯದಲ್ಲಿ ಸನಾತನದ ಸಾಧಕರು ಶ್ರೀ ದತ್ತಗುರುಗಳ ನಾಮಜಪವನ್ನು ಮಾಡಲು ತಿಳಿಸಿದರು. ನಾಮಜಪದಿಂದ ಸುಮಾರು ೨೦ ದಿನಗಳಲ್ಲಿಯೇ ನಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಿತು. ಇದರಿಂದ ನಾನು ನನ್ನ ಮಿತ್ರರಿಗೂ ನಾಮಜಪ ಮಾಡಲು ಹೇಳುತ್ತಿದ್ದೇನೆ.’

-ಶ್ರೀ. ಬಿಸ್ವಜ್ಯೋತಿ ನಾಥ, ಸೈನಿಕ, ಮಹಾಕಾಲ ಸೇವಾ, ಹೋಜಾಯಿ, ಆಸ್ಸಾಂ (೧೮.೬.೨೦೨೨)

೪. ಶೇ. ೬೧ ಆಧ್ಯಾತ್ಮಿಕ ಮಟ್ಟವನ್ನು ತಲುಪಿರುವ ಕೇರಳದ ಶ್ರೀ. ರಾಜೂ ಪಿ.ಟಿ. ಇವರಿಗೆ ಪರಾತ್ಪರ ಗುರು ಡಾ. ಆಠವಲೆಯವರ ವಿಷಯದಲ್ಲಿ ಬಂದಂತಹ ವಿವಿಧ ಅನುಭೂತಿ !

ಶ್ರೀ. ರಾಜೂ ಪಿ.ಟಿ.

೪ ಅ. ಊಟ ಮಾಡುವಾಗ ಪರಾತ್ಪರ ಗುರು ಡಾ. ಆಠವಲೆಯವರೊಂದಿಗೆ ಇರುವ ಇಚ್ಛೆಯಾದ ಬಳಿಕ ಕನಸಿನಲ್ಲಿ ಆ ದೃಶ್ಯ ಕಾಣಿಸುವುದು : ‘ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಊಟ ಮಾಡಲು ಒಂದೆಡೆ ಕುಳಿತುಕೊಂಡು ಹಿಂದುತ್ವನಿಷ್ಠರೊಂದಿಗೆ ಊಟ ಮಾಡುತ್ತಿರುವುದನ್ನು ನೋಡಿ ಬಹಳ ಆನಂದವಾಯಿತು. ಇಲ್ಲಿ ಎಲ್ಲ ಸಂತರೊಂದಿಗೆ ಭೋಜನ ಮಾಡುತ್ತಿರುವಾಗ ನನಗೆ ಗುರುದೇವರೂ (ಪರಾತ್ಪರ ಗುರು ಡಾ. ಆಠವಲೆ) ಇಲ್ಲಿರಬೇಕಾಗಿತ್ತು ಎಂದು ನನ್ನ ಇಚ್ಛೆ ಇತ್ತು. ಈ ವಿಚಾರ ಬಂದ ರಾತ್ರಿ ನನಗೆ ಕನಸಿನಲ್ಲಿ ‘ನನ್ನ ಕುಲದೇವಿಯ ದೇವಸ್ಥಾನದಲ್ಲಿ ಊಟ ಮಾಡುತ್ತಿರುವಾಗ ಗುರುದೇವರು ನನ್ನ ಪಕ್ಕದಲ್ಲಿ ಕುಳಿತಿದ್ದಾರೆ’, ಎಂದು ಕಾಣಿಸಿತು.

೪ ಆ. ಹಿಂದಿ ಭಾಷೆ ತಿಳಿಯದಿದ್ದರೂ ಪರಾತ್ಪರ ಗುರು ಡಾ. ಆಠವಲೆಯವರ ಹಿಂದಿ ಭಾಷೆಯ ಮಾರ್ಗದರ್ಶನ ಸಂಪೂರ್ಣವಾಗಿ ಅರ್ಥವಾಗುವುದು : ವರ್ಷ ೨೦೧೪ ರಲ್ಲಿ ಮೊದಲಬಾರಿ ನಾನು ಗುರುದೇವರ ದರ್ಶನವನ್ನು ಪಡೆದೆನು, ಆ ಸಮಯದಲ್ಲಿ ನನಗೆ ಹಿಂದೂ ಭಾಷೆ ಬಾರದಿದ್ದರೂ ಗುರುದೇವರ ಮಾರ್ಗದರ್ಶನ ನನಗೆ ಅರ್ಥವಾಗಿತ್ತು’.

– ಶ್ರೀ ರಾಜೂ ಪಿ.ಟಿ. ಹಿಂದುತ್ವನಿಷ್ಠ, ತ್ರಿಶೂರ, ಕೇರಳ (೧೮.೬.೨೦೨೨)

೫. ಹತ್ತನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಬಂದ ವಿವಿಧ ಅನುಭೂತಿಗಳು !

ಶ್ರೀ. ಬಾಳಕೃಷ್ಣ ಬಾಯಿತ

ಅ. ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನಕ್ಕೆ ಬಂದನಂತರ ಸಾಧನೆ, ಶ್ರವಣ ಸೇವೆ, ರಾಷ್ಟ್ರ-ಧರ್ಮ ಮತ್ತು ಪರಮಭಕ್ತಿಯ ಜ್ಞಾನವಾಯಿತು. ಭಾರತದಲ್ಲಿರುವ ಎಲ್ಲ ಸಂತರು ಇಲ್ಲಿಗೆ ಬರುತ್ತಿರುತ್ತಾರೆ. ಆದ್ದರಿಂದ ಇಲ್ಲಿ ಭಕ್ತರ ಸಂಗಮವಿದೆ.

ಆ. ಒಂದು ಅಪಘಾತದಲ್ಲಿ ಗಾಯವಾಗಿದ್ದರಿಂದ ನನ್ನ ಒಂದು ಕೈಯನ್ನು ಮೇಲೆ ಎತ್ತಲು ಬರುತ್ತಿರಲಿಲ್ಲ; ಆದರೆ ಇಲ್ಲಿಗೆ ಬಂದ ನಂತರ ನನ್ನ ಕೈ ಸಹಜವಾಗಿ ಮೇಲೆ ಎತ್ತಲು ಸಾಧ್ಯವಾಯಿತು.

ಇ. ನಾನು ಇಲ್ಲಿಗೆ ಬಂದ ಬಳಿಕ ವಕ್ತಾರರ ಸುತ್ತಲೂ ವಲಯ ಕಾಣಿಸುತ್ತಿತ್ತು.

ಈ. ಸನಾತನದ ಗ್ರಂಥಗಳಲ್ಲಿ ಹೇಳಿದಂತೆ ದಿನಚರ್ಯೆ ಪ್ರಾರಂಭಿಸಿದ ಬಳಿಕ ನನಗೆ ಆನಂದ ಸಿಕ್ಕಿತು.

ಉ. ನಾನು ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆನು. ಇದರಿಂದ ಈಶ್ವರನು ನನ್ನ ತಪ್ಪುಗಳ ಅರಿವು ತೋರಿಸಿಕೊಟ್ಟನು.’

– ಶ್ರೀ. ಬಾಳಕೃಷ್ಣ ಬಾಯಿತ, ಹಿಂದುತ್ವನಿಷ್ಠ, ರತ್ನಾಗಿರಿ (೧೮.೬.೨೦೨೨)

ನ್ಯಾಯವಾದಿ ನೀರಜ ತಿವಾರಿ

೬. ಅಧಿವೇಶನದ ಸ್ಥಳದಲ್ಲಿ ನಾಮಜಪ ಮಾಡಿದಾಗ ೫ ನಿಮಿಷಗಳಲ್ಲಿಯೇ ‘ತಲೆಯ ಮೇಲೆ ಯಾರೋ ಕೈಯಿಟ್ಟಿದ್ದಾರೆ’, ಎಂದು ಅನುಭೂತಿ ಬಂದಿತು ! : ‘ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕರಾದ ಪೂ. ನೀಲೇಶ ಸಿಂಗಬಾಳ ಇವರೊಂದಿಗೆ ಭೇಟಿಯಾದ ಬಳಿಕ ಅವರು ನನಗೆ ನಾಮಜಪ ಮಾಡಲು ಹೇಳಿದರು. ಪ್ರಾರಂಭದಲ್ಲಿ ನಾನು ನಾಮಜಪವನ್ನು ಮಾಡುತ್ತಿರಲಿಲ್ಲ. ಕೆಲಸದ ಒತ್ತಡದಲ್ಲಿ ಅವರು ಹೇಳಿದ ವಿಷಯಗಳ ಕಡೆಗೆ ನಿರ್ಲಕ್ಷ್ಯ ಮಾಡುತ್ತಿದ್ದೆನು. ಕೊರೊನಾದ ಮಹಾಮಾರಿಯ ಕಾಲದಲ್ಲಿ ನನಗೆ ನಾನೇನಾದರೂ ಮಾಡಬೇಕು ಎಂದು ಎನಿಸಿತು. ತದನಂತರ ನಾನು ಧರ್ಮಸೇವೆ ಮತ್ತು ನಾಮಜಪ ಮಾಡಲು ಪ್ರಾರಂಭಿಸಿದೆನು. ತದನಂತರ ಇಲ್ಲಿ ನನಗೆ ಸದ್ಗುರುಗಳ ದರ್ಶನವಾಯಿತು. ಅಧಿವೇಶನದ ಕಾಲಾವಧಿಯಲ್ಲಿ ನನಗೆ ರಾತ್ರಿ ನಿದ್ದೆ ಬರುತ್ತಿರಲಿಲ್ಲ. ಆ ಸಮಯದಲ್ಲಿ ನಾನು ನಾಮಜಪ ಮಾಡಿ ೫ ನಿಮಿಷದಲ್ಲಿಯೇ ‘ನನ್ನ ತಲೆಯ ಮೇಲೆ ಯಾರೋ ಕೈಯಿಟ್ಟಿದ್ದಾರೆ’ ಎನ್ನುವ ಅನುಭೂತಿ ಬಂದಿತು. ಇಂತಹ ಅನುಭವ ಬಂದಿರುವುದು ನನ್ನ ಸೌಭಾಗ್ಯವೇ ಆಗಿದೆ.’ – ನ್ಯಾಯವಾದಿ ನೀರಜ ತಿವಾರಿ, ಪ್ರತಾಪಗಡ, ಉತ್ತರಪ್ರದೇಶ. (೧೮.೬.೨೦೨೨)

ಆಧುನಿಕ ವೈದ್ಯ ನೀಲೇಶ ಲೋಣಕರ

೭. ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಂಪರ್ಕದಲ್ಲಿ ಬಂದ ಬಳಿಕ ನಾಮಜಪದ ಶಕ್ತಿಯನ್ನು ಅನುಭವಿಸಿದೆನು ! : ‘ಮೊದಲು ನಾನು ಧ್ಯಾನಮಾರ್ಗದಿಂದ ಸಾಧನೆಯನ್ನು ಮಾಡುತ್ತಿದ್ದೆನು. ಆ ಸಮಯದಲ್ಲಿ ನಾಮಜಪ ಹೇಗೆ ಮಾಡಬೇಕು, ಎಂದು ನನಗೆ ತಿಳಿದಿರಲಿಲ್ಲ. ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಂಪರ್ಕದಲ್ಲಿ ಬಂದ ಬಳಿಕ ನಾನು ದತ್ತನ ನಾಮಜಪವನ್ನು ಪ್ರಾರಂಭಿಸಿದೆನು. ನಾನು ಶಿವನ ೨ ಕೋಟಿ ೧೫ ಲಕ್ಷ ಜಪ ಮಾಡಿದೆನು. ಆ ಸಮಯದಲ್ಲಿ ನನಗೆ ಅನೇಕ ಅನುಭವಗಳು ಮತ್ತು ಅನುಭೂತಿ ಬಂದಿತು. ನಾಂಜಪದಲ್ಲಿ ಶಕ್ತಿಯಿರುತ್ತದೆ. ಇದರಿಂದ ಕೊರೊನಾ ಕಾಲದಲ್ಲಿ ನನಗೆ ಕೊರೊನಾ ಆಗಲಿಲ್ಲ. ಆಶ್ರಮದಲ್ಲಿ ಯಾವ ರೀತಿ ಭಾವವನ್ನು ಇಟ್ಟು ಸೇವೆಯನ್ನು ಮಾಡಲಾಗುತ್ತದೆಯೋ, ಅದೇ ರೀತಿ ನಾನು ಮನೆಯನ್ನು ಮಾಡಲು ಪ್ರಯತ್ನಿಸುತ್ತೇನೆ’. – ಆಧುನಿಕ ವೈದ್ಯ ನೀಲೇಶ ಲೋಣಕರ, ಸ್ವಾತಂತ್ರ್ಯವೀರ ಸಾವರಕರ ಯುವಾ ವಿಚಾರ ಮಂಚ, ಪುಣೆ (೧೮.೬.೨೦೨೨)