ಗ್ರಂಥಗಳ ಬರವಣಿಗೆಯ ಅದ್ವಿತೀಯ ಕಾರ್ಯವನ್ನುಮಾಡುವ ಏಕಮೇವ ಪರಾತ್ಪರ ಗುರು ಡಾ. ಜಯಂತ ಆಠವಲೆ !

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರ ೮೦ ನೇ ಜನ್ಮೋತ್ಸವದ ನಿಮಿತ್ತ …

ಪರಾತ್ಪರ ಗುರು ಡಾ. ಆಠವಲೆ

ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಚೈತನ್ಯಮಯ ಗ್ರಂಥಕಾರ್ಯದ ಸಂದರ್ಭದಲ್ಲಿನ ವಿವಿಧ ಅಂಗಗಳ ಮಾಹಿತಿಯನ್ನು ಕೊಡುವ ಈ ಲೇಖನಮಾಲೆೆಯನ್ನು ಅವರ ೮೦ ವರ್ಷದ ಜನ್ಮೋತ್ಸವದ ನಿಮಿತ್ತ ಪ್ರಕಟಿಸುತ್ತಿದ್ದೇವೆ. ಕಳೆದ ವಾರದ ಬರವಣಿಗೆಯಲ್ಲಿ ‘ಪರಾತ್ಪರ ಗುರು ಡಾಕ್ಟರ್ ಇವರಿಗೆ ಗ್ರಂಥಗಳ ಬಗ್ಗೆ ಇರುವ ಭಾವ’ ಮತ್ತು ‘ಗ್ರಂಥ ಸೇವೆಯ ವಿಷಯದಲ್ಲಿ ಕಂಡು ಬಂದ ಪರಾತ್ಪರ ಗುರು ಡಾಕ್ಟರರ ಗುಣಗಳ ದರ್ಶನ’ ಈ ಮುಂತಾದ ಅಂಶಗಳ ಬಗ್ಗೆ ಹೇಳಲಾಗಿದೆ. ಈ ವಾರ ಅದರ ಮುಂದಿನ ಭಾಗವನ್ನು ನೋಡೋಣ.

(ಪೂ.) ಶ್ರೀ. ಸಂದೀಪ ಆಳಶಿ,

ಸಂಕಲನಕಾರರು : (ಪೂ.) ಶ್ರೀ. ಸಂದೀಪ ಆಳಶಿ (ಸನಾತನ ಗ್ರಂಥಗಳ ಓರ್ವ ಸಂಕಲನಕಾರರು), ರಾಮನಾಥಿ, ಗೋವಾ.

೨ ಉ. ಗ್ರಂಥಗಳು ಚೈತನ್ಯಮಯವಾಗಲು ಮತ್ತು ಗ್ರಂಥಗಳ ಸೇವೆಯ ಮಾಧ್ಯಮದಿಂದ ಸಾಧಕರ ಸಾಧನೆಯಾಗಲು ಗ್ರಂಥಗಳ ಬಹಳಷ್ಟು ಸೇವೆಯನ್ನು ಸಾಧಕರಿಂದಲೇ ಮಾಡಿಸಿಕೊಳ್ಳುವುದು : ೧೯೯೫ರಲ್ಲಿ ‘ಪ.ಪೂ. ಭಕ್ತರಾಜ ಮಹಾರಾಜರ ಚರಿತ್ರೆ’ ಮತ್ತು ‘ಪ.ಪೂ. ಭಕ್ತರಾಜಮಹಾರಾಜರ ಶಿಕ್ಷಣ’ ಈ ಎರಡು ಗ್ರಂಥಗಳು ಪ್ರಸಿದ್ಧವಾದ ಮೇಲೆ ಪ.ಪೂ. ಬಾಬಾರವರು ಪರಾತ್ಪರ ಗುರು ಡಾಕ್ಟರರಿಗೆ, “ಗ್ರಂಥಗಳ ಕೆಲಸ ಹಣದಿಂದ ಆಗುವುದಿಲ್ಲ’’ ಎಂದು ಹೇಳಿದ್ದರು. ಸಾಧಕರು ಗ್ರಂಥಗಳ ಸೇವೆಯನ್ನು ಮಾಡುವುದರಿಂದ ಗ್ರಂಥಗಳು ಹೆಚ್ಚು ಚೈತನ್ಯಮಯವಾಗಲು ಸಹಾಯವಾಗುತ್ತದೆ, ಹಾಗೆಯೇ ಗ್ರಂಥಗಳ ಸೇವೆಯ ಮಾಧ್ಯಮದಿಂದ ಸಾಧಕರ ಸಾಧನೆಯೂ ಆಗುತ್ತದೆ. ಆದುದರಿಂದಲೇ ಪರಾತ್ಪರ ಗುರು ಡಾಕ್ಟರರು ಗ್ರಂಥಗಳ ಬರವಣಿಗೆಯ ಸೇವೆಯಿಂದ ಹಿಡಿದು ಗ್ರಂಥಗಳ ವಿತರಣೆಯ ಸೇವೆಯ ವರೆಗಿನ ಹೆಚ್ಚಿನ ಎಲ್ಲ ಸೇವೆಗಳಲ್ಲಿ ಹೆಚ್ಚಾಗಿ ಸಾಧಕರನ್ನೇ ಸಹಭಾಗಿಗಳನ್ನಾಗಿ ಮಾಡಿಕೊಂಡಿದ್ದಾರೆ. ಈ ದೃಷ್ಟಿಯಿಂದಲೇ ಅವರು ವರ್ಷ ೧೯೯೭ ರಲ್ಲಿ ಮಡಗಾವ, ಗೋವಾದಲ್ಲಿ ಸನಾತನ ಸಂಸ್ಥೆಯ ಮುದ್ರಣಾಲಯವನ್ನೂ ಸಹ ಆರಂಭಿಸಿದ್ದರು. ಕೆಲವು ಅಡಚಣೆಗಳಿಂದಾಗಿ ಅದನ್ನು ವರ್ಷ ೨೦೧೨ ರಲ್ಲಿ ಮುಚ್ಚಬೇಕಾಯಿತು. ಈಗ ಗ್ರಂಥಗಳ ಮುದ್ರಣವನ್ನು ಹೊರಗಿನಿಂದ ಮಾಡಿಸಿಕೊಳ್ಳಲಾಗುತ್ತದೆ.

೨ ಎ. ಸಂತರು, ತಂದೆ ಮತ್ತು ಇಬ್ಬರು ಹಿರಿಯ ಅಣ್ಣಂದಿರನ್ನೂ ಗ್ರಂಥ-ನಿರ್ಮಿತಿಯ ಸಮಷ್ಟಿ ಸೇವೆಯಲ್ಲಿ ಸಹಭಾಗಿಗಳನ್ನಾಗಿ ಮಾಡಿಕೊಳ್ಳುವುದು : ಪರಾತ್ಪರ ಗುರು ಡಾಕ್ಟರರು ಯಾವಾಗ ಪ.ಪೂ. ಬಾಬಾರವರ ದರ್ಶನಕ್ಕಾಗಿ ಇಂದೂರಿಗೆ ಹೋಗುತ್ತಿದ್ದರೋ, ಆಗ ಅವರು ಬಾಬಾರವರ ಉತ್ತರಾಧಿಕಾರಿಗಳಾದ ಪ.ಪೂ. ರಾಮಾನಂದ ಮಹಾರಾಜರಿಂದ ಪ.ಪೂ. ಬಾಬಾರ ಬಗೆಗಿನ ಗ್ರಂಥಗಳ ಬರವಣಿಗೆಯನ್ನು ಪರಿಶೀಲಿಸಿಕೊಳ್ಳುತ್ತಿದ್ದರು. ಪರಾತ್ಪರ ಗುರು ಡಾಕ್ಟರರ ತಂದೆ ಸದ್ಗುರು (ದಿ.) ಬಾಳಾಜಿ ಆಠವಲೆಯವರು ನಿವೃತ್ತ ಶಿಕ್ಷಕರಾಗಿದ್ದರು ಮತ್ತು ಅವರ ಅಧ್ಯಾತ್ಮದ ಬಗೆಗಿನ ಅಧ್ಯಯನವೂ ಬಹಳ  ಚೆನ್ನಾಗಿತ್ತು. ಪರಾತ್ಪರ ಗುರು ಡಾಕ್ಟರರು ಅವರಿಂದ ಅಧ್ಯಾತ್ಮದ ಬಗೆಗಿನ ಗ್ರಂಥಗಳ ಬರವಣಿಗೆಯನ್ನು ಪರಿಶೀಲಿಸಿಕೊಳ್ಳುತ್ತಿದ್ದರು. ಪರಾತ್ಪರ ಗುರು ಡಾಕ್ಟರರ ಹಿರಿಯ ಸಹೋದರರಾದ ಸದ್ಗುರು (ದಿ.) ಅಪ್ಪಾ ಕಾಕಾ ಇವರು ಸುಪ್ರಸಿದ್ಧ ಬಾಲರೋಗ ತಜ್ಞರಾಗಿದ್ದರು. ಅವರೂ ಸಹ ಅಧ್ಯಾತ್ಮದ ಅಧ್ಯಯನವನ್ನು ಮಾಡಿದ್ದರು. ಅವರಿಗೂ ಪರಾತ್ಪರ ಗುರು ಡಾಕ್ಟರರು ಅಧ್ಯಾತ್ಮದ ಬಗೆಗಿನ ಗ್ರಂಥಗಳನ್ನು ಪರಿಶೀಲಿಸಲು ಕೊಡುತ್ತಿದ್ದರು. ಪರಾತ್ಪರ ಗುರು ಡಾಕ್ಟರರರು ಪರಾತ್ಪರ ಗುರು (ದಿ.) ಪರಶರಾಮ ಪಾಂಡೆ ಮಹಾರಾಜ (ಸನಾತನ ಆಶ್ರಮ, ದೇವದ, ಪನವೇಲ) ಇವರಿಂದಲೂ ಗ್ರಂಥಸೇವೆಯನ್ನು ಮಾಡಿಸಿಕೊಂಡರು. ಇಂದಿಗೂ ಸಹ ಪರಾತ್ಪರ ಗುರು ಡಾಕ್ಟರರ ಎರಡನೇಯ ಹಿರಿಯ ಸಹೋದರರಾದ ತೀ. ಭಾವು ಕಾಕಾ (ಪೂ. ಅನಂತ ಆಠವಲೆ, ಗೋವಾ) ಇವರಿಂದ ಗ್ರಂಥಸೇವೆಯನ್ನು, ಅಂದರೆ ಸಮಷ್ಟಿ ಸೇವೆಯನ್ನು ಮಾಡಿಸಿಕೊಳ್ಳುತ್ತಿದ್ದಾರೆ.