ಪರಾತ್ಪರ ಗುರು ಡಾಕ್ಟರ ಆಠವಲೆಯವರ ೮೦ ನೇ ಜನ್ಮೋತ್ಸವದ ನಿಮಿತ್ತ ಪೂ. (ಸೌ.) ಸಂಗೀತಾ ಜಾಧವ ಇವರು ಸಾಧಕರಿಗೆ ಮಾಡಿದ ಮಾರ್ಗದರ್ಶನ ಮತ್ತು ಮಾರ್ಗದರ್ಶನವನ್ನು ಮಾಡುವಾಗ ಅವರಿಗೆ ಬಂದ ಅನುಭೂತಿಗಳು !

ಪರಾತ್ಪರ ಗುರು ಡಾ. ಆಠವಲೆ

೭.೪.೨೦೨೨ ರಂದು ಪೂ. (ಸೌ.) ಸಂಗೀತಾ ಜಾಧವ ಇವರಿಂದ ಮುಂಬೈ, ಠಾಣೆ, ರಾಯಗಡ ಮತ್ತು ಗುಜರಾತನ ಸಾಧಕರಿಗೆ ವಿಷ್ಣುಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವ ಸಮಾರಂಭದ ನಿಮಿತ್ತ ಅಮೂಲ್ಯ ಮಾರ್ಗದರ್ಶನ ಲಭಿಸಿತು. ಸಾಧಕರಿಗೆ ಮಾಡಿದ ಮಾರ್ಗದರ್ಶನದಲ್ಲಿನ ಅಂಶಗಳನ್ನು ಇಲ್ಲಿ ನೀಡುತ್ತಿದ್ದೇವೆ.

ಪೂ. (ಸೌ.) ಸಂಗೀತಾ ಜಾಧವ ಸಾಧಕರಿಗೆ ಮಾಡಿದ ಅಮೂಲ್ಯ ಮಾರ್ಗದರ್ಶನ !

ಪೂ. (ಸೌ.) ಸಂಗೀತಾ ಜಾಧವ

೧ ಅ. ‘ಸಾಧಕರೇ, ಸಾಕ್ಷಾತ್ ಭಗವಾನ ಶ್ರೀ ವಿಷ್ಣುವಿನ ಅವತಾರವಾಗಿರುವ ಪರಾತ್ಪರ ಗುರು ಡಾಕ್ಟರ ಆಠವಲೆಯವರು ಸಾಧಕರನ್ನು ಇದೇ ಜನ್ಮದಲ್ಲಿ ಜನ್ಮ-ಮರಣದ ಚಕ್ರಗಳಿಂದ ಮುಕ್ತಗೊಳಿಸುವರಿದ್ದಾರೆ’, ಎಂಬುದನ್ನು ಗಮನದಲ್ಲಿಡಿ ! : ‘ಮಹರ್ಷಿಗಳು ಹೇಳಿದಂತೆ ನಾರಾಯಣಸ್ವರೂಪ ನಮ್ಮ ಗುರುದೇವರು ಸಂಪೂರ್ಣ ಜಗತ್ತಿನ ಪಾಲನಕರ್ತರಾಗಿದ್ದಾರೆ. ಅವರು ಕೇವಲ ಸಂಕಲ್ಪದಿಂದ ಸೃಷ್ಟಿಯಲ್ಲಿ ಬದಲಾವಣೆಯನ್ನು ಮಾಡಬಹುದು. ನಮ್ಮ ಪ್ರಾರಬ್ಧದ ಬೆಟ್ಟ, ಪೂರ್ವಜರ ಮತ್ತು ಕೆಟ್ಟ ಶಕ್ತಿಗಳ ತೊಂದರೆ, ಸಾಧಕರ ಸ್ವಭಾವದೋಷ ಮತ್ತು ಅಹಂ ಇವುಗಳಿಂದ ಎಷ್ಟೇ ಅಡೆತಡೆಗಳು ಬಂದರೂ ವಿಷ್ಣುಸ್ವರೂಪ ಶ್ರೀ ಗುರುಗಳು ಎಷ್ಟೊಂದು ಸಾಮರ್ಥ್ಯಶಾಲಿಯಾಗಿದ್ದಾರೆ ಅಂದರೆ, ಅವರು ಇವೆಲ್ಲವನ್ನು ಈ ಒಂದೇ ಜನ್ಮದಲ್ಲಿಯೇ ಸಹಜವಾಗಿ ಮುಗಿಸಬಹುದು.’ ನಾವೆಲ್ಲರೂ, ‘ನನ್ನ ಶ್ರೀ ಗುರುಗಳು ಸಾಕ್ಷಾತ್ ಭಗವಾನ ಶ್ರೀವಿಷ್ಣುವಿನ ಅವತಾರವಾಗಿದ್ದು ಅವರು ನನಗೆ ಇದೇ ಜನ್ಮದಲ್ಲಿ ಜನ್ಮ-ಮರಣದ ಚಕ್ರಗಳಿಂದ ಮುಕ್ತಗೊಳಿಸುವರಿದ್ದಾರೆ’, ಎಂಬ ದೃಢ ಶ್ರದ್ಧೆಯನ್ನಿಡೋಣ.’

(‘ಮಹರ್ಷಿಗಳು ‘ಪರಾತ್ಪರ ಗುರು ಡಾ. ಆಠವಲೆಯವರು ಶ್ರೀ ವಿಷ್ಣುವಿನ ಅಂಶಾವತಾರವಾಗಿದ್ದಾರೆ’, ಎಂದು ನಾಡಿಪಟ್ಟಿಯಲ್ಲಿ ಹೇಳಿದ್ದಾರೆ.’ – ಸಂಕಲನಕಾರರು)

೧ ಆ. ದೇಹಧಾರಿ ಶ್ರೀ ಗುರುಗಳ ಜನ್ಮೋತ್ಸವವನ್ನು ಆಚರಿಸುತ್ತಿರುವಾಗ ಅವರ ತತ್ತ್ವವು ದೊಡ್ಡ ಪ್ರಮಾಣದಲ್ಲಿ ಕಾರ್ಯನಿರತವಾಗುವುದು; ಆದುದರಿಂದ ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವದ ನಿಮಿತ್ತ ನಡೆಯುತ್ತಿರುವ ‘ಹಿಂದೂಸಂಘಟನೆ’ಯ ಉಪಕ್ರಮದಲ್ಲಿ ಸಮರ್ಪಿತ ಸೇವೆಯನ್ನು ಮಾಡಿ ಗುರುತತ್ತ್ವದ ಲಾಭವನ್ನು ಮಾಡಿಕೊಳ್ಳಬೇಕು ! :

ಪ್ರಸ್ತುತ ಪ್ರತಿಕೂಲ ಕಾಲವಿದ್ದರೂ, ಸಾಧನೆಯ ದೃಷ್ಟಿಯಿಂದ ಅದು ಸಂಧಿಕಾಲವೇ (ಅನುಕೂಲವೇ) ಆಗಿದೆ; ಏಕೆಂದರೆ ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ಜನ್ಮೋತ್ಸವ ನಿಮಿತ್ತ ಆಯೋಜಿಸಲಾದ ‘ಹಿಂದೂಸಂಘಟನೆ’ಯ ಉಪಕ್ರಮದಲ್ಲಿ ಸಮರ್ಪಿತವಾಗಿ ಸೇವೆಯನ್ನು ಮಾಡಿದರೆ ನಮ್ಮೆಲ್ಲರ ಸಾಧನೆಯು ಮತ್ತೊಮ್ಮೆ ಹೊಸದಾಗಿ ಪ್ರಾರಂಭವಾಗುವುದು. ಆದುದರಿಂದ ನಮ್ಮ ಹಳೆಯ ಸಂಸ್ಕಾರಗಳು, ಸ್ವಭಾವದೋಷ ಮತ್ತು ಅಹಂ ಇವುಗಳ ತೀವ್ರತೆಯು ಕಡಿಮೆಯಾಗುವುದು. ಶ್ರೀ ಗುರುಗಳ (ಪರಾತ್ಪರ ಗುರು ಡಾ. ಆಠವಲೆಯವರ) ಜನ್ಮೋತ್ಸವದ ಮಾಧ್ಯಮದಿಂದ ಭಗವಂತನು ನಮ್ಮನ್ನು ಜನ್ಮ-ಮರಣದ ಚಕ್ರಗಳಿಂದ ಮುಕ್ತಗೊಳಿಸಲು ಸಾಧನೆಯ ಮಹಾಪರ್ವವನ್ನು ನೀಡುವ ‘ಹಿಂದೂ ಸಂಘಟನೆ’ಯ ಉಪಕ್ರಮಗಳನ್ನು ಕೊಡುತ್ತಿದ್ದಾನೆ. ನಾನು ಒಂದು ಗ್ರಂಥದಲ್ಲಿ, ‘ದೇಹಧಾರಿ ಶ್ರೀ ಗುರುಗಳ ಜನ್ಮೋತ್ಸವವನ್ನು ಆಚರಿಸುತ್ತಿರುವಾಗ ಅವರ ತತ್ತ್ವವು ಬಹಳಷ್ಟು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ.’ ಎಂದು ಓದಿದ್ದೆನು. ನಮಗೂ ಇಂತಹ ವಿಷ್ಣುಸ್ವರೂಪ ದೇಹಧಾರಿ ಶ್ರೀ ಗುರುಗಳ ಜನ್ಮೋತ್ಸವವನ್ನು ಆಚರಿಸುವ ಅವಕಾಶವು ಸಿಗುತ್ತಿದೆ. ನಾವು ಗುರುಕೃಪೆ, ಗುರುತತ್ತ್ವ ಮತ್ತು ಚೈತನ್ಯದ ಲಾಭವನ್ನು ಮಾಡಿಕೊಳ್ಳೋಣ.

೧ ಇ. ಯಾರು ಗುರುಕಾರ್ಯವನ್ನು ಮಾಡಲು ತಳಮಳದಿಂದ ಪ್ರಯತ್ನಿಸುತ್ತಾರೆಯೋ, ಅವರಿಗೆ ಅನೇಕ ದೇವತೆಗಳ ಆಶೀರ್ವಾದ ಲಭಿಸಿ ಅವರಿಗೆ ಸಾಧನೆಯ ಮುಂದಿನ ಹಂತದಲ್ಲಿ ಹೋಗಲು ಸಹಾಯವಾಗುವುದು : ಬ್ರಹ್ಮಾಂಡದಲ್ಲಿನ ಎಲ್ಲ ದೇವತೆಗಳು, ಋಷಿಮುನಿಗಳು, ಸಂತರು ಮತ್ತು ದಿವ್ಯಾತ್ಮಗಳು ‘ಹಿಂದೂಸಂಘಟನೆ’ಯ ಉಪಕ್ರಮಗಳ ಮಾಧ್ಯಮದಿಂದ ಆಚರಿಸಲಾಗುವ ಈ ವಿಷ್ಣುಸ್ವರೂಪ ಗುರುದೇವರ ಜನ್ಮೋತ್ಸವದ ಸಮಾರಂಭವನ್ನು ಅನುಭವಿಸಲು ಬರುತ್ತಾರೆ. ಯಾವ ಜೀವವು ಇದರಲ್ಲಿ ಪಾಲ್ಗೊಳ್ಳುತ್ತದೆಯೋ, ಅದಕ್ಕೆ ಅವರು ದೊಡ್ಡ ಪ್ರಮಾಣದಲ್ಲಿ ಶಕ್ತಿಯನ್ನು ನೀಡುತ್ತಾರೆ. ಯಾರು ಗುರು ಕಾರ್ಯಕ್ಕಾಗಿ ತಳಮಳದಿಂದ ಪ್ರಯತ್ನಿಸುತ್ತಾರೆಯೋ, ಅವರಿಗೆ ಅನೇಕ ದೇವತೆಗಳ ಆಶೀರ್ವಾದ ಸಿಗುತ್ತವೆ. ‘ನಮಗೆ ಶ್ರೀ ಗುರುಗಳ ಕೃಪೆಯನ್ನು ಸಂಪಾದಿಸಬೇಕಾಗಿದೆ ಮತ್ತು ಶ್ರೀ ಗುರುಗಳು ನಮ್ಮ ಮೇಲೆ ಪ್ರಸನ್ನರಾಗಬೇಕು’, ಅದಕ್ಕಾಗಿ ಅವರು ಸಾಧಕರಿಂದ ದೊಡ್ಡ ಪ್ರಮಾಣದಲ್ಲಿ ಸೇವೆಯನ್ನು ಮಾಡಿಸಿಕೊಳ್ಳುತ್ತಾರೆ. ಅವರು ನಮಗೆ ಸಾಧನೆಯ ಮುಂದಿನ ಹಂತಕ್ಕೆ ಹೋಗಲು ಶಕ್ತಿಯನ್ನು ನೀಡುತ್ತಾರೆ. ಅವರು ನಮ್ಮ ಸುತ್ತಲೂ ಸಂರಕ್ಷಕ ಕವಚವನ್ನು ನಿರ್ಮಾಣ ಮಾಡುತ್ತಾರೆ; ಏಕೆಂದರೆ ‘ಈ ಜೀವವು ಭಗವಾನ ಶ್ರೀವಿಷ್ಣುವಿನ ಜನ್ಮೋತ್ಸವದ ಕಾರ್ಯದಲ್ಲಿ ಪಾಲ್ಗೊಂಡಿದೆ’, ಎಂದು ಅವರಿಗೆ ಅತ್ಯಂತ ಆನಂದವಾಗಿರುತ್ತದೆ.

೧ ಈ. ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವ ಸಮಾರಂಭವು ಕೇವಲ ಸಾಧನೆಯಲ್ಲಿ ಮುಂದೆ ಹೋಗಲು ಆತುರ ಪಡುವ ಜೀವಗಳ ಉದ್ಧಾರವನ್ನು ಮಾಡುವುದಕ್ಕಾಗಿಯೇ ಆಚರಿಸಲಾಗುವುದು : ನಮ್ಮ ಶ್ರೀ ಗುರುಗಳು ತಮಗಾಗಿ ಎಂದಿಗೂ ಜನ್ಮೋತ್ಸವವನ್ನು ಆಚರಿಸುವುದಿಲ್ಲ. ಅವರು ಮಹರ್ಷಿಗಳ ಆಜ್ಞೆಗನುಸಾರ ತಮ್ಮ ಜನ್ಮೋತ್ಸವವನ್ನು ಆಚರಿಸುತ್ತಾರೆ. ಆ ನಿಮಿತ್ತವಾಗಿ ಅವರು ‘ಹಿಂದೂ ರಾಷ್ಟ್ರ’ದ ಸ್ಥಾಪನೆಗಾಗಿ ಸಮಾಜದಲ್ಲಿನ ಹಿಂದೂಗಳ ಸಂಘಟನೆಯನ್ನು ಮಾಡುವುದು ಮತ್ತು ನಮ್ಮಂತಹ ಭಾರವಾದ ಜೀವಗಳ ಉದ್ಧಾರವನ್ನು ಮಾಡುವುದು, ಇವುಗಳಿಗಾಗಿ ನಮಗೆ ಸಾಧನೆ ಮತ್ತು ಸೇವೆಯ ವಿವಿಧ ಅವಕಾಶವನ್ನು ಮಾಡಿಕೊಡುತ್ತಾರೆ. ಆದುದರಿಂದ ದೇವತೆಗಳು ಮತ್ತು ಋಷಿಮುನಿಗಳು ನಮ್ಮ ಸಹಾಯಕ್ಕೆ ಬರುತ್ತಾರೆ. ಅವರ ಆಶೀರ್ವಾದದಿಂದ ನಾವು ಸಾಧನೆಯ ಮುಂದಿನ ಹಂತಕ್ಕೆ ಹೋಗಬಹುದು.

೧ ಉ. ಪರಾತ್ಪರ ಗುರು ಡಾ. ಆಠವಲೆಯವರಿಗೆ ‘ಹಿಂದೂಸಂಘಟನೆ’ಯ ಉಪಕ್ರಮದಲ್ಲಿ ತಳಮಳದಿಂದ ಪಾಲ್ಗೊಂಡು ಸೇವೆಯನ್ನು ಮಾಡುತ್ತಿರುವ ಸಾಧಕರ ಬಗ್ಗೆ ತುಂಬಾ ಪ್ರಶಂಸೆ ಇರುವುದು : ‘ನಾವು ನಮ್ಮ ಶ್ರೀ ಗುರುಗಳ ಜನ್ಮೋತ್ಸವವನ್ನು ಆಚರಿಸುತ್ತೇವೆ’, ಎಂದು ಹೇಳುವ ನಮ್ಮ ಯೋಗ್ಯತೆಯೇ ನಮಗಿಲ್ಲ. ಯಾವುದೇ ೨-೩ ವರ್ಷಗಳ ಚಿಕ್ಕ ಮಗು ತನ್ನ ತಂದೆ-ತಾಯಿಗಳ ಅನುಕರಣೆ ಮಾಡಲು ಪ್ರಯತ್ನಿಸುತ್ತದೆ. ಆ ಮಗುವಿನಿಂದ ಆ ಕೃತಿಯು ಸರಿಯಾಗಿ ಆಗುವುದಿಲ್ಲ. ಆ ಮಗು ಬೀಳುತ್ತದೆ; ಆದರೆ ಪುನಃ ಎದ್ದು ಯೋಗ್ಯ ಕೃತಿಯನ್ನು ಮಾಡಲು ಶ್ರಮಪಡುತ್ತದೆ. ಆ ಮಗು ಶ್ರಮಪಡುವುದನ್ನು ನೋಡಿ ಅದರ ತಾಯಿ-ತಂದೆಗಳಿಗೆ ಅದರ ಪ್ರಶಂಸೆ ಎನಿಸುತ್ತದೆ. ಅದೇ ರೀತಿ ನಮ್ಮ ಕೃಪಾಳು ಗುರುದೇವರಿಗೂ ನಾವು ಈ ಜನ್ಮೋತ್ಸವದ ನಿಮಿತ್ತ ‘ಹಿಂದೂಸಂಘಟನೆ’ಯ ಉಪಕ್ರಮದಲ್ಲಿ ತಳಮಳದಿಂದ ಪಾಲ್ಗೊಂಡು ಮಾಡುತ್ತಿರುವ ನಮ್ಮ ಶ್ರಮವನ್ನು ನೋಡಿ ತುಂಬಾ ಪ್ರಶಂಸೆ ಎನಿಸುತ್ತದೆ.

೧ ಊ. ಜನ್ಮೋತ್ಸವದ ನಿಮಿತ್ತ ‘ಹಿಂದೂ ಸಂಘಟನೆ’ಯ ಉಪಕ್ರಮಗಳಲ್ಲಿ ಧ್ಯೇಯವನ್ನಿಟ್ಟು ಮತ್ತು ದೇಹಬುದ್ಧಿಯನ್ನು ಮರೆತು ಸೇವೆಯನ್ನು ಮಾಡಬೇಕು ಮತ್ತು ಭಗವಂತನ ಕೃಪೆಯನ್ನು ಸಂಪಾದಿಸಬೇಕು ! : ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ದೃಷ್ಟಿಯಿಂದ ಮಹತ್ವಪೂರ್ಣವಾಗಿರುವ ಶ್ರೀಗುರುಗಳ ಜನ್ಮೋತ್ಸವಕ್ಕೆ ಸೂಕ್ಷ್ಮದಿಂದ ಅನಂತಪಟ್ಟು ಸಹಾಯ ಸಿಗುವುದಿದೆ. ಜನ್ಮೋತ್ಸವದ ನಿಮಿತ್ತ ಆಯೋಜಿಸಲಾದ ‘ಹಿಂದೂ ಸಂಘಟನೆ’ಯ ಉಪಕ್ರಮಕ್ಕಾಗಿ ನಾವು ನಮ್ಮ ವಾಚಕರ, ಹಿತಚಿಂತಕರ, ಜಾಹೀರಾತುದಾರರ, ಧರ್ಮಪ್ರೇಮಿ ಹಾಗೆಯೇ ದೇವರು, ದೇಶ ಮತ್ತು ಧರ್ಮಗಳ ಕುರಿತು ಆಸಕ್ತಿ ಇರುವ ಸಮಾಜದಲ್ಲಿನ ಪ್ರತಿಯೊಂದು ಘಟಕದವರೆಗೆ ತಲುಪಿಸಲು ಅತ್ಯಂತ ತಳಮಳದಿಂದ ಪ್ರಯತ್ನಿಸೋಣ. ನಾವು ನಮ್ಮ ದೇಹಬುದ್ಧಿಯನ್ನು ಮರೆತು ನಮ್ಮನ್ನು ಈ ಸೇವೆಯಲ್ಲಿ ಅರ್ಪಿಸಬೇಕು. ಕೊನೆಗೆ ನಮ್ಮ ಈ ತಳಮಳ ಮತ್ತು ಶ್ರಮಪಡುವುದನ್ನು ನೋಡಿ ಭಗವಂತನೇ ಸಮಾಜದಲ್ಲಿನ ಸಾಧನೆ ಮಾಡುವವರಿಗೆ ಮತ್ತು ನಿಜವಾದ ಹಿಂದುತ್ವನಿಷ್ಠರಿಗೆ ಈ ‘ಹಿಂದೂ ರಾಷ್ಟ್ರ’ದ ಕಾರ್ಯದಲ್ಲಿ ಸೇರಿಸಿಕೊಳ್ಳುವನು. ನಾವೆಲ್ಲರೂ, ಈ ಸೇವೆಯಿಂದ ನಮ್ಮ ಸಾಧನೆಯ ಇಂತಹದೊಂದು ಸ್ತರವನ್ನು ತಲುಪಬೇಕಾಗಿದೆ, ಅಂದರೆ ‘ಭಗವಂತನು ನಮ್ಮನ್ನು ಹತ್ತಿರ ಕರೆದುಕೊಳ್ಳಲೇಬೇಕು’, ಎಂಬ ಧ್ಯೇಯವನ್ನಿಡೋಣ. ನಾವೆಲ್ಲರೂ ಇದನ್ನು ಸಾಧಿಸಬಹುದು; ಆದರೆ ಆ ದೃಷ್ಟಿಯಿಂದ ನಮ್ಮ ಪರಿಶ್ರಮವು ತುಂಬಾ ಮಹತ್ವದ್ದಾಗಿದೆ.

ಪೂ. (ಸೌ.) ಸಂಗೀತಾ ಜಾಧವ, ಠಾಣೆ (೭.೪.೨೦೨೨)

ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ-ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ, ಉದಾ. ಅಸುರರು, ರಾಕ್ಷಸರು, ಪಿಶಾಚಿ, ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.