ಸಾಧಕರು ಭಾವಜಾಗೃತಿಯ ಪ್ರಯೋಗ ಮಾಡುವಾಗ ಪಂಚಜ್ಞಾನೇಂದ್ರಿಯಗಳಿಂದ ಅನುಭೂತಿಗಳನ್ನು ಪಡೆಯಲು ಪ್ರಯತ್ನಿಸಬೇಕು !
ಶ್ರೀ. ಶಶಾಂಕ ಜೋಶಿ : ನಾನು ಪ್ರತಿದಿನ ಭಾವಜಾಗೃತಿಗಾಗಿ ನಾನು ನಿಮ್ಮ ಮಾನಸ ಪಾದಪೂಜೆ ಮತ್ತು ಕೆಲವೊಮ್ಮೆ ‘ನಾನು ನಿಮಗೆ ಮರ್ದನ ಮಾಡುತ್ತೇನೆ. ನಾನು ನಿಮ್ಮ ಮಾನಸ ಪಾದಪೂಜೆಯ ನಿಮ್ಮ ಚರಣ ತೀರ್ಥವನ್ನು ಸೇವಿಸಿದಾಗ ಮತ್ತು ನಿಮಗೆ ಸೂಕ್ಷ್ಮದಿಂದ ಮರ್ದನವನ್ನು ಮಾಡುತ್ತಿರುವಾಗ ನನ್ನ ಕೈಗೆ ಹತ್ತಿದ ಎಣ್ಣೆಯನ್ನು ನನ್ನ ಮೈಗೆ ಹಚ್ಚಿದಾಗ ನನಗೆ ಸಮಾಧಾನವಾಗುತ್ತದೆ. ಇದರಿಂದ ನಾನು ಸ್ಥೂಲದಲ್ಲಿ ಸಿಲುಕಿಕೊಂಡಿದ್ದೇನೆ ಎಂದಾಗುತ್ತದೆಯೇ ?
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಇದಕ್ಕೆ ಸ್ಥೂಲದಿಂದ ಸಿಲುಕುವುದು, ಎಂದು ಹೇಳುವುದಿಲ್ಲ. ನೀವು ಪರಿಪೂರ್ಣ ಭಾವಜಾಗೃತಿಯ ಪ್ರಯೋಗವನ್ನು ಮಾಡುತ್ತಿದ್ದೀರಿ. ನೀವು ಪಂಚ ಜ್ಞಾನೇಂದ್ರಿಯಗಳಿಂದ ಅನುಭೂತಿಯನ್ನು ಪಡೆಯುತ್ತಿದ್ದೀರಿ.