೧. ಸಾಧಕಿಯ ಕಣ್ಣಿಗೆ ಆಗಲಿರುವ ತೊಂದರೆಯ ಬಗ್ಗೆ ಮೊದಲೇ ಅರಿವಾಗಿ ಅವಳಿಗೆ ಆಧ್ಯಾತ್ಮಿಕ ಸ್ತರದ ಉಪಾಯ ಮಾಡಲು ಹೇಳುವುದು !
೧ ಅ. ಸಾಧಕಿಗೆ ತೊಂದರೆಯಾಗದಿರುವಾಗಲೂ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಅವಳಿಗೆ ‘ಕಣ್ಣುಗಳಿಗೆ ತೊಂದರೆ ಆಗುತ್ತಿದೆಯೇ ?’, ಎಂದು ಕೇಳುವುದು : ‘ಒಂದು ಬಾರಿ ನಾನು ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಬಳಿ ಹೋಗಿದ್ದೆನು. ಆಗ ಅವರು ನನಗೆ ಎದುರಿಗೆ ನಿಂತುಕೊಳ್ಳಲು ಹೇಳಿ ನನ್ನನ್ನು ನೋಡಿದರು ಮತ್ತು ”ನಿನಗೆ ಏನಾದರೂ ತೊಂದರೆ ಆಗುತ್ತಿದೆಯೇ ?”, ಎಂದು ಕೇಳಿದರು. ಆ ಸಮಯದಲ್ಲಿ ನನಗೆ ತೊಂದರೆಯ ಅರಿವಾಗದ ಕಾರಣ ನಾನು ಅವರಿಗೆ ‘ಇಲ್ಲ’ ಎಂದು ಹೇಳಿದೆನು. ಅನಂತರ ಅವರು ನನಗೆ ‘ನಿನ್ನ ಕಣ್ಣುಗಳಿಗೆ ಏನಾದರೂ ತೊಂದರೆಯಾಗುತ್ತಿದೆಯೇ ?’, ಎಂದು ಕೇಳಿದರು. ಅದಕ್ಕೆ ನಾನು ಅವರಿಗೆ ‘ಇಲ್ಲ’, ಎಂದು ಹೇಳಿದೆನು.
೧ ಆ. ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರು ಹೇಳಿದಂತೆ ಸಾಧಕಿಯು ಸದ್ಗುರು ಡಾ. ಗಾಡಗೀಳ ಇವರಿಗೆ ನಾಮಜಪಾದಿ ಉಪಾಯಗಳನ್ನು ಕೇಳಿ ಅವುಗಳನ್ನು ಮಾಡುವುದು : ಒಂದು ವಾರದ ನಂತರ ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರು ಓರ್ವ ಸಾಧಕಿಯ ಬಳಿ ನನಗೆ ‘ಸದ್ಗುರು ಡಾ. ಮುಕುಲ ಗಾಡಗೀಳಕಾಕಾ ಇವರಿಗೆ ನಾಮಜಪಾದಿ ಉಪಾಯಗಳನ್ನು ಕೇಳು ಮತ್ತು ಅವರು ಹೇಳಿದ ರೀತಿಯಲ್ಲಿ ಉಪಾಯ ಮಾಡು’, ಎಂಬ ಸಂದೇಶವನ್ನು ಕಳುಹಿಸಿದರು. ಅದಕ್ಕನುಸಾರ ನಾನು ಸದ್ಗುರು ಗಾಡಗೀಳಕಾಕಾ ಇವರು ಹೇಳಿದಂತೆ ೨ ವಾರ ನಾಮಜಪಾದಿ ಉಪಾಯಗಳನ್ನು ಮಾಡಿದೆನು. ಅನಂತರ ನಾನು ಸದ್ಗುರು ಕಾಕಾ ಇವರಿಗೆ, ”ನಾನು ಇನ್ನೂ ಉಪಾಯಗಳನ್ನು ಮಾಡುವ ಆವಶ್ಯಕತೆ ಇದೆಯೇ ?”, ಎಂದು ಕೇಳಿದೆನು. ಆಗ ಸದ್ಗುರು ಕಾಕಾ ಇವರು ನನಗೆ ‘ಈಗ ಉಪಾಯಗಳ ಆವಶ್ಯಕತೆ ಇಲ್ಲ’, ಎಂದು ಹೇಳಿದರು.
೧ ಇ. ಮರದ ಮಂಚದ ಅಂಚು ತಗಲಿ ಕಣ್ಣಿನ ಹತ್ತಿರ ಗಾಯವಾಗುವುದು ಮತ್ತು ‘ದೇವರ ಕೃಪೆಯಿಂದ ಕಣ್ಣು ರಕ್ಷಿಸಲ್ಪಡುವುದು’, ಇದು ಗಮನಕ್ಕೆ ಬಂದು ಕೃತಜ್ಞತೆ ವ್ಯಕ್ತವಾಗುವುದು : ಮರುದಿನ ರಾತ್ರಿ ೧೦.೩೦ ಗಂಟೆಗೆ ನಾನು ಮತ್ತು ನನ್ನ ಸಹೋದರಿ ಸೌ. ಶ್ರದ್ಧಾ ಅಕ್ಕನವರು (ಸೌ. ಶ್ರದ್ಧಾ ನಿಂಬಾಳಕರ) ಕೋಣೆಯಲ್ಲಿ ಕೆಲವು ಸಾಮಾನುಗಳನ್ನು ತೆಗೆಯುತ್ತಿದ್ದೆವು. ಆ ಸಮಯದಲ್ಲಿ ನನ್ನ ಕೂದಲುಗಳಿಗೆ ಹಾಕುವ ‘ಬೊ’ ಕೆಳಗೆ ಬಿದ್ದಿರುವುದು ಕಾಣಿಸಿತು. ಅದನ್ನು ಎತ್ತಿಕೊಳ್ಳಲು ನಾನು ಕೆಳಗೆ ಬಗ್ಗಿದೆನು. ಆ ಸಮಯದಲ್ಲಿ ಮರದ ಮಂಚದ ಅಂಚು ನನ್ನ ಎಡಗಣ್ಣಿಗೆ ಜೋರಾಗಿ ತಗಲಿತು. ‘ಆ ಅಂಚು ಕಣ್ಣಿನಲ್ಲಿಯೇ ಪ್ರವೇಶಿಸಿದೆ’, ಎಂಬ ರೀತಿಯಲ್ಲಿ ನನಗೆ ವೇದನೆಯಾಗುತ್ತಿತ್ತು. ಸ್ವಲ್ಪ ಸಮಯದ ನಂತರ ನಾನು ಕಣ್ಣಿನ ಮೇಲಿನ ಕೈಯನ್ನು ಪಕ್ಕಕ್ಕೆ ಸರಿಸಿ ನೋಡಿದೆ. ಆಗ ಕಣ್ಣಿನ ತುದಿಗೆ ಕಣ್ಣಿನಿಂದ ೨ ಮಿ.ಮೀ. ಅಂತರದಲ್ಲಿ ನನಗೆ ಗಾಯವಾಗಿತ್ತು. ಆ ಸ್ಥಳದಲ್ಲಿ ಸುಮಾರು ೬ ಮಿ.ಮೀ. ನಷ್ಟು ಚರ್ಮ ಹರಿದು ರಕ್ತದ ಧಾರೆ ಕೆಳಗೆ ಗದ್ದದವರೆಗೆ ಬಂದಿತ್ತು. ಆ ಸಮಯದಲ್ಲಿ ನನ್ನ ಮನಸ್ಸಿನಲ್ಲಿ, ‘ನನ್ನ ಕಣ್ಣಿಗೆ ತಾಗಬಹುದಿತ್ತು; ಆದರೆ ದೇವರ ಕೃಪೆಯಿಂದ ಕಣ್ಣಿನ ತುದಿಗೆ ತಾಗಿ ನನ್ನ ಕಣ್ಣು ರಕ್ಷಿಸಲ್ಪಟ್ಟಿತು’, ಎಂಬ ವಿಚಾರ ಬಂದಿತು. ಆಗ ನಾನು ದೇವರ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಿದೆನು.
೧. ಈ. ‘ಸಾಧಕಿಯ ಕಣ್ಣುಗಳಿಗೆ ಏನಾದರೂ ತೊಂದರೆಯಾಗಲಿದೆ’, ಎಂದು ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರಿಗೆ ಮೊದಲೇ ಅರಿವಾದುದರಿಂದ ಅವರು ಸಾಧಕಿಗೆ ಮೊದಲೇ ಉಪಾಯ ಮಾಡಲು ಹೇಳುವುದು’ : ಸದ್ಗುರು ರಾಜೇಂದ್ರ ಶಿಂದೆ ಇವರಿಗೆ ಈ ಬಗ್ಗೆ ಹೇಳಿದಾಗ ಅವರು ನನಗೆ ‘ಕಣ್ಣುಗಳ ಮೇಲೆ ಬಹಳ ತೊಂದರೆದಾಯಕ ಆವರಣ ಬಂದಿದೆ’, ಎಂದು ಹೇಳಿ ನಾಮ ಜಪಾದಿ ಉಪಾಯಗಳನ್ನು ಮಾಡಲು ಹೇಳಿದರು. ನಾಮ ಜಪಾದಿ ಉಪಾಯಗಳನ್ನು ಮಾಡುವಾಗ, ‘ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರು ನನಗೆ ‘ಕಣ್ಣುಗಳಿಗೆ ಏನಾದರೂ ತೊಂದರೆ ಆಗುತ್ತಿದೆಯೇ ?’, ಎಂದು ಕೇಳಿದ್ದರು, ಹಾಗೆಯೇ ನಾಮಜಪಾದಿ ಉಪಾಯಗಳನ್ನೂ ಮಾಡಲು ಹೇಳಿದ್ದರು. ಅದರಿಂದ ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರಿಗೆ ‘ನನ್ನ ಕಣ್ಣುಗಳಿಗೆ ತೊಂದರೆ ಯಾಗಲಿದೆ’, ಎಂದು ಮೊದಲೇ ಗೊತ್ತಿದ್ದುದರಿಂದ ಅವರು ‘ನನಗೆ ಹೆಚ್ಚು ತೊಂದರೆಯಾಗಬಾರದು’, ಎಂಬುದಕ್ಕಾಗಿ ಮೊದಲಿನಿಂದಲೇ ನಾಮಜಪಾದಿ ಉಪಾಯ ಗಳನ್ನು ಮಾಡಲು ಹೇಳಿದ್ದರು’, ಎಂದು ನನ್ನ ಗಮನಕ್ಕೆ ಬಂದಿತು. ಮರುದಿನ ಮಧ್ಯಾಹ್ನದ ವರೆಗೆ ನನ್ನ ಕಣ್ಣಿನ ಹತ್ತಿರದ ಗಾಯ ಗುಣಮುಖವಾಗುತ್ತಿರುವುದು ಕಾಣಿಸಿತು. ಸಾಮಾನ್ಯವಾಗಿ ಗಾಯ ಗುಣಮುಖವಾಗಲು ೩-೪ ದಿನಗಳು ಬೇಕಾಗುತ್ತವೆ; ಆದರೆ ಒಂದು ದಿನದಲ್ಲಿಯೇ ಗಾಯವು ಗುಣಮುಖವಾಗಿತ್ತು.
೨. ಸಾಧಕಿಯು ಆಯಾಸವಾಗಿದೆ ಎಂದು ಮನಸ್ಸಿನಲ್ಲಿ ಹೇಳಿದರೂ ಅದು ಶ್ರೀಸತ್ಶಕ್ತಿ (ಸೌ.) ಸಿಂಗಬಾಳರ ವರೆಗೆ ತಲುಪುವುದು
‘೧.೫.೨೦೨೦ ರಂದು ನನಗೆ ಬಹಳ ಆಯಾಸವಾಗಿತ್ತು ಮತ್ತು ನನ್ನ ಕಾಲುಗಳು ಬಹಳ ನೋಯುತ್ತಿದ್ದವು. ಆದುದರಿಂದ ನನಗೆ ಒಂದು ತುರ್ತು ಸೇವೆಯನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದುದರಿಂದ ನಾನು ಮನಸ್ಸಿನಲ್ಲಿಯೇ ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರಿಗೆ ಈ ಬಗ್ಗೆ ಹೇಳಿದೆನು. ಅನಂತರ ಸ್ವಲ್ಪ ಸಮಯದಲ್ಲಿಯೇ ಓರ್ವ ಸಾಧಕಿ ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರು ಕಳುಹಿಸಿದ ಉಪಾಯದ ನೀರನ್ನು (ಟಿಪ್ಪಣಿ ೧) ತೆಗೆದು ಕೊಂಡು ನನ್ನ ಬಳಿಗೆ ಬಂದಳು. ಆಗ ‘ನಮ್ಮ ಮನಸ್ಸಿನ ವಿಚಾರ ಗುರುಗಳಿಗೆ ಗೊತ್ತಾಗುತ್ತದೆ ಮತ್ತು ಆ ವಿಚಾರ ಅವರವರೆಗೆ ತಲುಪುತ್ತದೆ, ಹಾಗೆಯೇ ಅದರ ಅನುಭೂತಿಯನ್ನೂ ಗುರುಗಳು ನೀಡುತ್ತಿರುತ್ತಾರೆ’, ಎಂದು ನನ್ನ ಗಮನಕ್ಕೆ ಬಂದಿತು. ಆ ಸಮಯದಲ್ಲಿ ನನ್ನ ಭಾವಜಾಗೃತಿಯಾಗಿ ನನ್ನ ಕಣ್ಣುಗಳಿಂದ ಭಾವಾಶ್ರುಗಳು ಹರಿಯತೊಡಗಿದವು. ಅನಂತರ ನಾನು ಕೂಡಲೇ ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರು ಕಳುಹಿಸಿದ ನೀರಿನಿಂದ ಆಧ್ಯಾತ್ಮಿಕ ಉಪಾಯವನ್ನು ಮಾಡಿದೆನು ಮತ್ತು ನನಗೆ ಒಳ್ಳೆಯದೆನಿಸಿತು. ಈ ಅನುಭೂತಿಯಿಂದ ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರ ಸೂಕ್ಷ್ಮವನ್ನು ತಿಳಿಯಬಲ್ಲ ಕ್ಷಮತೆ ಮತ್ತು ಗುರುಗಳ ಸರ್ವಜ್ಞತೆ’, ಇವುಗಳ ಅನುಭೂತಿಯನ್ನು ದೇವರು ನನಗೆ ನೀಡಿದನು.
ಟಿಪ್ಪಣಿ ೧ – ಉಪಾಯಗಳ ನೀರು : ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರ ಸ್ಪರ್ಶದಿಂದ ಆ ನೀರು ಚೈತನ್ಯಮಯವಾಗಿರುತ್ತದೆ. ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರು ಈ ನೀರನ್ನು ಉಪಾಯಕ್ಕಾಗಿ ಬಳಸಿದರೆ ಅವರ ಆಧ್ಯಾತ್ಮಿಕ ತೊಂದರೆ ಕಡಿಮೆಯಾಗುತ್ತದೆ, ಆದುದರಿಂದ ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರು ಸಾಧಕರಿಗೆ ಈ ನೀರನ್ನು ಸ್ವಲ್ಪ ಕಳುಹಿಸುತ್ತಾರೆ. ಸಾಧಕರು ಉಪಾಯಗಳಿಗಾಗಿ ನೀಡಿದ ಈ ನೀರಿನಲ್ಲಿ ಬಿಸಿ ನೀರು ಹಾಕುತ್ತಾರೆ ಮತ್ತು ಅದರಲ್ಲಿ ತಮ್ಮ ಕಾಲುಗಳನ್ನು ಮುಳುಗಿಸಿ, ಕುಳಿತುಕೊಂಡು ೨೦ ನಿಮಿಷಗಳ ಕಾಲ ನಾಮಜಪವನ್ನು ಮಾಡುತ್ತಾರೆ.
‘‘ದೇವರು ಸದ್ಗುರುಗಳ ಮಾಧ್ಯಮದಿಂದ ನನಗೆ ಸಹಾಯ ಮಾಡಲು ತತ್ಪರರಿದ್ದಾರೆ. ದೇವರೇ. ನನ್ನ ಶ್ರದ್ಧೆ ಮತ್ತು ಭಾವವನ್ನು ಹೆಚ್ಚಿಸಿ ಅಪೇಕ್ಷಿತ ಪ್ರಯತ್ನ ಮಾಡಿಸಿಕೋ !’
ವ್ಯಕ್ತಿಯು ಸಾಧನೆಯನ್ನು ಪ್ರಾರಂಭಿಸಿದ ನಂತರ ಅವನಲ್ಲಿನ ಚೈತನ್ಯವು ಹೆಚ್ಚಾಗುತ್ತದೆ, ಆಧ್ಯಾತ್ಮಿಕ ಮಟ್ಟ ಹೆಚ್ಚಾಗುವುದು, ಇತ್ಯಾದಿಗಳ ಜೊತೆಗೆ ಆ ವ್ಯಕ್ತಿಯ ಸೂಕ್ಷ್ಮವನ್ನು ತಿಳಿದು ಕೊಳ್ಳುವ ಕ್ಷಮತೆಯೂ ಹೆಚ್ಚಾಗುತ್ತದೆ. ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರು ಸಾಧನೆಯಲ್ಲಿ ವಿಹಂಗಮಮಾರ್ಗದಿಂದ ಪ್ರಗತಿ ಮಾಡಿಕೊಳ್ಳುತ್ತಿರುವಾಗ ಅವರಲ್ಲಿ ಸೂಕ್ಷ್ಮವನ್ನು ತಿಳಿದುಕೊಳ್ಳುವ ಕ್ಷಮತೆಯೂ ಉತ್ಪನ್ನವಾಯಿತು. ಅನುಭೂತಿ ಗಳ ಮಾಧ್ಯಮದಿಂದ ಸಾಧಕರು ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರಲ್ಲಿನ ಸೂಕ್ಷ್ಮವನ್ನು ತಿಳಿಯಬಲ್ಲ, ಕ್ಷಮತೆಯ ಅನುಭೂತಿಯನ್ನು ಪಡೆಯುತ್ತಿರುತ್ತಾರೆ. ಈ ಹಿಂದೆ ಸಾಧಕರಿಗೆ ಈ ರೀತಿಯ ಅನುಭೂತಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಪ್ರಾರ್ಥನೆ ಮಾಡಿದ ನಂತರ ಅಥವಾ ಅವರಿಗೆ ಆತ್ಮನಿವೇದನೆ ಮಾಡಿದ ನಂತರ ಬರುತ್ತಿತ್ತು.
– ಕು. ಮೇಘಾ ಚವ್ಹಾಣ, ಸನಾತನ ಆಶ್ರಮ, ರಾಮನಾಥಿ, ಗೋವಾ (೨೩.೫.೨೦೨೦)