‘ನಾನು ಕಳೆದ ೪ ವರ್ಷಗಳಿಂದ ಸಾಧನೆಯಲ್ಲಿದ್ದೇನೆ. ನಾನು ಸಮಷ್ಟಿ ಸಾಧನೆಯನ್ನು ಮಾಡುತ್ತಿರುವಾಗ ನನಗೆ ಅರಿವಾದ ಅಂಶಗಳು ಮತ್ತು ಬಂದ ಅನುಭೂತಿಗಳನ್ನು ಇಲ್ಲಿ ಕೊಡುತ್ತಿದ್ದೇನೆ.
೧. ‘ಸಂತರ ಸಂಕಲ್ಪ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಕೃಪೆ’ಯಿಂದ ಆಧುನಿಕ ವೈದ್ಯರ ಸತ್ಸಂಗದಲ್ಲಿ ಹೆಚ್ಚು ಮಂದಿ ಉಪಸ್ಥಿತರಿರುವುದು
ನಾನು ‘ರೇಡಿಯೋಲಾಜಿಸ್ಟ್’ (ಕ್ಷ-ಕಿರಣ ತಜ್ಞ, (X-ray Specialist)ನಾಗಿದ್ದೇನೆ. ನಾನು ಸನಾತನದ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ (ಸನಾತನದ ೭೫ ನೇ ಸಂತರು, ವಯಸ್ಸು ೪೮) ಇವರ ಮಾರ್ಗದರ್ಶನದಂತೆ ಕರ್ನಾಟಕದಲ್ಲಿನ ಆಧುನಿಕ ವೈದ್ಯರ ಮತ್ತು ನ್ಯಾಯವಾದಿಗಳಿಗಾಗಿ ಸತ್ಸಂಗವನ್ನು ತೆಗೆದುಕೊಳ್ಳುವ ಸೇವೆಯನ್ನು ಮಾಡುತ್ತಿದ್ದೇನೆ. ಸದ್ಯ ೩ ಸತ್ಸಂಗಗಳು ನಡೆಯುತ್ತಿವೆ. ಎರಡು ವಾರಗಳ ಹಿಂದೆ ಒಂದು ಹೊಸ ಸತ್ಸಂಗವನ್ನು ಪ್ರಾರಂಭಿಸಲಾಯಿತು. ಈ ಸತ್ಸಂಗದಲ್ಲಿ ೮೦ ಜನ ಆಧುನಿಕ ವೈದ್ಯರು ಉಪಸ್ಥಿತರಿರುತ್ತಾರೆ. ಪ್ರಾರಂಭದಲ್ಲಿ ಆಧುನಿಕ ವೈದ್ಯರನ್ನು ಒಟ್ಟುಗೂಡಿಸಲು ನನಗೆ ತುಂಬಾ ಪ್ರಯತ್ನಿಸಬೇಕಾಗುತ್ತಿತ್ತು. ಈಗ ನಾನು ಅತ್ಯಲ್ಪ ಪ್ರಯತ್ನ ಮಾಡಿಯೂ ‘ಸಂತರ ಸಂಕಲ್ಪ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಕೃಪೆ’ಯಿಂದಾಗಿ ಸತ್ಸಂಗದಲ್ಲಿ ಹೆಚ್ಚು ಉಪಸ್ಥಿತಿ ಇರುತ್ತದೆ. ಈ ಕುರಿತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು, ”ನಮ್ಮಲ್ಲಿ ಭಾವ ಮತ್ತು ತಳಮಳವಿದ್ದರೆ ನಮಗೆ ಈಶ್ವರನ ಸಹಾಯ ಸಿಗುತ್ತದೆ. ನಿಮ್ಮಲ್ಲಿ ಅದು ಇರುವುದರಿಂದ ನಿಮಗೆ ಈ ರೀತಿ ಅನುಭೂತಿ ಬರುತ್ತಿದೆ’’ ಎಂದು ಹೇಳಿದರು.
೨. ಪೂ. ರಮಾನಂದಣ್ಣನವರ ಸತ್ಸಂಗ ಲಭಿಸಿದ ನಂತರ ‘ನನಗೆ ಸಾಧನೆ ಮಾಡಬೇಕು ಮತ್ತು ಸಾಧನೆಯಲ್ಲಿ ಪ್ರಗತಿ ಮಾಡಿಕೊಳ್ಳಬೇಕು, ಎಂಬ ಧ್ಯೇಯವು ನಿಶ್ಚಿತವಾಗುವುದು
ನನಗೆ ಪೂ. ರಮಾನಂದಣ್ಣನವರಿಂದ ಅನೇಕ ವಿಷಯಗಳು ಕಲಿಯಲು ಸಿಗುತ್ತವೆ. ನನಗೆ ಅವರ ಜೊತೆಯಲ್ಲಿ ಒಂದು ವರ್ಷದಲ್ಲಿ ೫ ಬಾರಿ ಪ್ರಚಾರಪ್ರವಾಸದಲ್ಲಿ ಹೋಗುವ ಅವಕಾಶ ಸಿಕ್ಕಿತು. ಅವರ ಜೊತೆಯಲ್ಲಿನ ಪ್ರತಿಯೊಂದು ಪ್ರವಾಸದ ನಂತರ ನನ್ನಲ್ಲಿ ಬದಲಾವಣೆ ಆಗುತ್ತಾ ಹೋಯಿತು. ನಾನು ಯಾವಾಗ ಮೊದಲಿನ ಬಾರಿ ಅವರ ಜೊತೆಗೆ ಪ್ರವಾಸಕ್ಕೆ ಹೋದೆನೋ, ಆ ಪ್ರವಾಸದಲ್ಲಿ ನನ್ನ ಅಂತರ್ಮುಖತೆ ಹೆಚ್ಚಾಯಿತು. ನನಗೆ, ‘ರಾಷ್ಟ್ರ ಮತ್ತು ಧರ್ಮದ ಸ್ಥಿತಿಯನ್ನು ಸುಧಾರಿಸಲು ನನ್ನಿಂದ ಏನೂ ಪ್ರಯತ್ನವಾಗುತ್ತಿಲ್ಲ’ ಎಂದೆನಿಸಿತು. ಆ ಸಮಯದಲ್ಲಿ ನಾನು ೩ ದಿನ ಪೂ. ರಮಾನಂದ ಅಣ್ಣನವರ ಜೊತೆಯಲ್ಲಿದ್ದೆನು. ಅವರ ಮಾರ್ಗದರ್ಶನ ಲಭಿಸಿದ ನಂತರ ‘ನಾನು ಸಾಧನೆ ಮಾಡಬೇಕು ಮತ್ತು ಸಾಧನೆಯಲ್ಲಿ ಪ್ರಗತಿ ಮಾಡಿಕೊಳ್ಳಬೇಕು, ಎಂಬ ನನ್ನ ಧ್ಯೇಯವು ನಿಶ್ಚಿತವಾಯಿತು.
೩. ನನ್ನಲ್ಲಿನ ‘ಪ್ರತಿಷ್ಠೆಯನ್ನು ಕಾಪಾಡುವುದು’ ಈ ಅಹಂಅನ್ನು ನಿವಾರಿಸಲು ಸಾಧ್ಯವಾಗುವುದು
ಈ ಮೊದಲು ನನಗೆ ‘ತಪ್ಪುಗಳನ್ನು ಹೇಳುವುದು’ ಮತ್ತು ‘ಕ್ಷಮಾಯಾಚನೆ ಮಾಡುವುದು’ ಇದಕ್ಕಾಗಿ ತುಂಬಾ ಸಂಘರ್ಷ ಮಾಡಬೇಕಾಗುತ್ತಿತ್ತು. ಈ ಹಿಂದಿನ ಪ್ರವಾಸದಲ್ಲಿ ನಾನು ೧೦ ದಿನಗಳ ವರೆಗೆ ಪೂ. ಅಣ್ಣನವರ ಜೊತೆಯಲ್ಲಿದ್ದೆನು. ಆ ಸಮಯದಲ್ಲಿ ನನ್ನಿಂದ ‘ಪ್ರತಿಷ್ಠೆಯನ್ನು ಕಾಪಾಡುವುದು’ ಈ ಅಹಂನ ದೋಷವನ್ನು ನಿವಾರಿಸಲು ಪ್ರಯತ್ನ ಆಯಿತು. ಆ ಪ್ರವಾಸದ ನಂತರ ಮಂಗಳೂರು ಸೇವಾಕೇಂದ್ರಕ್ಕೆ ಬಂದ ನಂತರ ನನಗೆ ಸಹಜವಾಗಿ ಕ್ಷಮಾಯಾಚನೆ ಮಾಡಲು ಸಾಧ್ಯವಾಯಿತು. ನನಗೆ ‘ಪ್ರತಿಷ್ಠೆಯನ್ನು ಕಾಪಾಡುವುದು’ ಈ ಅಹಂನ ದೋಷವನ್ನು ಉತ್ತಮ ರೀತಿಯಲ್ಲಿ ನಿವಾರಿಸಲು ಸಾಧ್ಯವಾಯಿತು. ನನ್ನಲ್ಲಿ ಇದು ತುಂಬಾ ದೊಡ್ಡ ಬದಲಾವಣೆಯಾಗಿದೆ. ಆ ಸಮಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ನನಗೆ ‘ಇನ್ನು ಮುಂದೆಯೂ ನಿಮಗೆ ಧರ್ಮಪ್ರಚಾರಕ ಸಂತರೊಂದಿಗೆ ಪ್ರವಾಸ ಮಾಡಲಿಕ್ಕಿದೆ’, ಎಂದು ಆಶೀರ್ವಾದವನ್ನು ನೀಡಿದರು.
೪. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಕೃಪೆಯನ್ನು ಅನುಭವಿಸುತ್ತಿರುವುದು
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಕೃಪೆಯಿಂದಾಗಿ ನನಗೆ ಪೂ. ರಮಾನಂದಣ್ಣನವರ ಮಾರ್ಗ ದರ್ಶನವು ಸತತವಾಗಿ ಲಭಿಸುತ್ತಿದೆ. ನನಗೆ ಪೂ. ರಮಾನಂದ ಅಣ್ಣನವರ ಮಾಧ್ಯಮದಿಂದ ಅವರ ಪ್ರೀತಿಯನ್ನು ಅನುಭವಿಸಲು ಸಾಧ್ಯವಾಗುತ್ತದೆ. ಪೂ. ರಮಾನಂದ ಅಣ್ಣನವರು ನನ್ನ ಮೇಲೆ ತೋರಿಸುತ್ತಿರುವ ಪ್ರೀತಿಯಿಂದ ನನಗೆ ಮಾಯೆಯಲ್ಲಿನ ವಿಷಯಗಳು ಅಷ್ಟೊಂದು ಮಹತ್ವವೆನಿಸುವುದಿಲ್ಲ. ನಾನು ಪೂ. ರಮಾನಂದಣ್ಣನವರ ಜೊತೆಯಲ್ಲಿದ್ದಾಗ ಎಲ್ಲವನ್ನೂ ಮರೆಯುತ್ತೇನೆ. ಅವರ ಸಾನಿಧ್ಯದಲ್ಲಿರುವಾಗ ನನ್ನ ಬುದ್ಧಿ ಕೆಲಸ ಮಾಡುವುದಿಲ್ಲ. ನನ್ನ ಮನಸ್ಸಿನಲ್ಲಿ ‘ಅವರ ಆಜ್ಞಾಪಾಲನೆ ಮಾಡುವುದು’, ಇದೇ ವಿಚಾರವಿರುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ನನಗೆ ‘ನೀವು ಆದಷ್ಟು ಬೇಗನೇ ಪೂ. ರಮಾನಂದ ಅಣ್ಣನವರಂತೆ ಆಗಬೇಕು’, ಎಂಬ ಆಶೀರ್ವಾದವನ್ನು ನೀಡಿದ್ದಾರೆ.’
– ಡಾ. ಪ್ರಣವ ಮಲ್ಯ, ಮಂಗಳೂರು (೨೬.೬.೨೦೨೪)