ಗ್ರಂಥಗಳ ಬರವಣಿಗೆಯ ಅದ್ವಿತೀಯ ಕಾರ್ಯವನ್ನು ಮಾಡುವ ಏಕಮೇವ ಪರಾತ್ಪರ ಗುರು ಡಾ. ಜಯಂತ ಆಠವಲೆ !

ಪರಾತ್ಪರ ಗುರು ಡಾ. ಜಯಂತ ಆಠವಲೆ

ಒಮ್ಮೆ ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಒಂದು ಸತ್ಸಂಗದಲ್ಲಿ, ‘ಸಾಮಾನ್ಯ ಸಾಧಕರು ಜನರಿಗೆ ಅಧ್ಯಾತ್ಮದ ಬಗ್ಗೆ ಬುದ್ಧಿಯ ಸ್ತರದಲ್ಲಿ ಎಷ್ಟು ಮನದಟ್ಟು ಮಾಡಿದರೂ ಜನರ ಮೇಲೆ ಅದರ ಪರಿಣಾಮವಾಗಲು ಸಮಯ ತಗಲುತ್ತದೆ; ಆದರೆ ಸಂತರು ಒಂದು ವಾಕ್ಯವನ್ನು ಹೇಳಿದರೂ, ಅವರ ಮಾತಿನಲ್ಲಿನ ಚೈತನ್ಯದಿಂದ ಜನರ ಅಂತರ್ಮನಸ್ಸಿನ ಮೇಲೆ ಸಂಸ್ಕಾರವಾಗಿ ಅವರ ಮೇಲೆ ಬೇಗನೆ ಸಕಾರಾತ್ಮಕ ಪರಿಣಾಮವಾಗುತ್ತದೆ’ ಎಂದು ಹೇಳಿದ್ದರು. ಸನಾತನದ ಗ್ರಂಥಗಳಿಗೂ ಇದೇ ತತ್ತ್ವ ಅನ್ವಯಿಸುತ್ತದೆ; ಏಕೆಂದರೆ ಪರಾತ್ಪರ ಗುರು ಡಾ. ಆಠವಲೆಯವರಂತಹ ಅತ್ಯುಚ್ಚ ಕೋಟಿಯ ಸಂತರು ಸನಾತನದ ಗ್ರಂಥಗಳ ಸಂಕಲನವನ್ನು ಮಾಡುತ್ತಿರುವುದರಿಂದ, ಆ ಗ್ರಂಥಗಳು ಸಾಕ್ಷಾತ ಚೈತನ್ಯದ ಸ್ತ್ರೋತಗಳೇ ಆಗಿವೆ. ಪರಾತ್ಪರ ಗುರು ಡಾಕ್ಟರರ ಈ ಚೈತನ್ಯಮಯ ಗ್ರಂಥಕಾರ್ಯದ ಸಂದರ್ಭದಲ್ಲಿನ ವಿವಿಧ ಅಂಗಗಳ ಮಾಹಿತಿಯನ್ನು ಕೊಡುವ ಈ ಲೇಖನಮಾಲೆಯನ್ನು ಅವರ ೮೦ ವರ್ಷದ ಜನ್ಮೋತ್ಸವದ ನಿಮಿತ್ತ ಪ್ರಕಟಿಸುತ್ತಿದ್ದೇವೆ. ಈ ವಾರದ ಮೊದಲ ಬರವಣಿಗೆಯಲ್ಲಿ ‘ಪರಾತ್ಪರ ಗುರು ಡಾಕ್ಟರ್ ಇವರಿಗೆ ಗ್ರಂಥಗಳ ಬಗ್ಗೆ ಇರುವ ಭಾವ’ ಮತ್ತು ‘ಗ್ರಂಥಸೇವೆಯ ವಿಷಯದಲ್ಲಿ ಕಂಡು ಬಂದ ಪರಾತ್ಪರ ಗುರು ಡಾಕ್ಟರರ ಗುಣಗಳ ದರ್ಶನ’ ಈ ಮುಂತಾದ ಅಂಶಗಳ ಬಗ್ಗೆ ಹೇಳಲಾಗಿದೆ.

(ಪೂ.) ಶ್ರೀ. ಸಂದೀಪ ಆಳಶಿ,

ಸಂಕಲನಕಾರರು : (ಪೂ.) ಶ್ರೀ. ಸಂದೀಪ ಅಳಶಿ (ಸನಾತನ ಗ್ರಂಥಗಳ ಓರ್ವ ಸಂಕಲನಕಾರರು), ಸನಾತನ ಆಶ್ರಮ, ರಾಮನಾಥಿ, ಗೋವಾ.

೧.  ಗ್ರಂಥಗಳ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರಲ್ಲಿರುವ ಭಾವ

ಅ. ‘ಲೇಖಕ’ ನಲ್ಲ, ‘ಸಂಕಲಕ’ ! : ಡಾ. ಜಯಂತ ಆಠವಲೆಯವರ ಗುರುಗಳಾದ ಪ.ಪೂ. ಭಕ್ತರಾಜ ಮಹರಾಜರು (ಪ.ಪೂ. ಬಾಬಾ) ಅನೇಕ ಭಜನೆಗಳನ್ನು ಬರೆದರು; ಆದರೆ ಕೇವಲ ೨-೩ ಭಜನೆಗಳಲ್ಲಿ ಮಾತ್ರ ತಮ್ಮ ಹೆಸರನ್ನು ಹಾಕುವ ಅವಶ್ಯಕತೆ ಇತ್ತೆಂದು ತಮ್ಮ ಹೆಸರನ್ನು ಹಾಕಿದರು. ಸನಾತನ ಗ್ರಂಥಗಳ ನಿರ್ಮಿತಿ ಪ್ರಾರಂಭವಾದಾಗಿನಿಂದ ಪರಾತ್ಪರ ಗುರು ಡಾಕ್ಟರರು ಪ್ರತಿಯೊಂದು ಗ್ರಂಥದ ಮೇಲೆ ತಮ್ಮ ಹೆಸರನ್ನು ‘ಲೇಖಕ’ರು ಎಂದು ಹಾಕದೇ ‘ಸಂಕಲನಕಾರರು’ ಎಂದು ಹಾಕಿದ್ದಾರೆ. ‘ಗ್ರಂಥಗಳ ಬಗೆಗಿನ ಎಲ್ಲ ಜ್ಞಾನವನ್ನು ಗುರುಗಳೇ ಸೂಚಿಸುತ್ತಿರುವುದರಿಂದ ಗ್ರಂಥಗಳ ಕರ್ತೃತ್ವ ಮತ್ತು ಲೇಖಕತ್ವವನ್ನು ನಮ್ಮ ಕಡೆಗೆ ತೆಗೆದುಕೊಳ್ಳಲು ಬರುವುದಿಲ್ಲ’, ಹೀಗೆ ಪರಾತ್ಪರ ಗುರು ಡಾಕ್ಟರರ ಭಾವವಿರುವುದರಿಂದ ಅವರು ‘ಸಂಕಲನಕಾರ’ರು ಎಂದು ಹೆಸರು ಹಾಕುತ್ತಾರೆ.

ಆ. ಗ್ರಂಥ ಮುದ್ರಣವಾದ ನಂತರ ಪರಾತ್ಪರ ಗುರು ಡಾಕ್ಟರರು ಎಲ್ಲಕ್ಕಿಂತ ಮೊದಲು ಅದನ್ನು ಪ.ಪೂ. ಬಾಬಾರವರ ಛಾಯಾಚಿತ್ರದ ಮುಂದೆ ಇಡಲು ಹೇಳುತ್ತಾರೆ. ಅವರಲ್ಲಿ ‘ಪ.ಪೂ. ಬಾಬಾರವರ ಆಶೀರ್ವಾದದಿಂದಲೇ ಗ್ರಂಥ ಸಿದ್ಧವಾಯಿತು ಮತ್ತು ಅದು ಅವರ ಚರಣಗಳಲ್ಲಿಯೇ ಅರ್ಪಣೆಯಾಗಿದೆ’, ಎಂಬ ಭಾವವಿರುತ್ತದೆ.

ಇ. ಪ.ಪೂ. ಬಾಬಾ ಇರುವಾಗ ಪರಾತ್ಪರ ಗುರು ಡಾಕ್ಟರರು ಅವರ ದರ್ಶನಕ್ಕಾಗಿ ಹೋದಾಗ ಅವರ ಕೈಯಿಂದಲೇ ಪುಸ್ತಕದ ಪ್ರಕಾಶನವನ್ನು ಮಾಡಿಸುತ್ತಿದ್ದರು. ಇಂದು ಪ.ಪೂ. ಬಾಬಾ ಇಲ್ಲದಿದ್ದರೂ, ಪರಾತ್ಪರ ಗುರು ಡಾಕ್ಟರರು ಸನಾತನದ ಎಲ್ಲ ಗ್ರಂಥಗಳ ಪ್ರಕಾಶನವು ಆದಷ್ಟು ಸಂತರ ಕೈಯಿಂದಲೇ ಆಗಬೇಕೆಂಬ ಪ್ರಯತ್ನದಲ್ಲಿರುತ್ತಾರೆ. ‘ಸಂತರ ಸಾತ್ತ್ವಿಕ ಸ್ಪರ್ಶದಿಂದ ಗ್ರಂಥದಲ್ಲಿನ ಜ್ಞಾನ ಮತ್ತು ಚೈತನ್ಯ ವಾಚಕರ ಅಂತಃಕರಣದವರೆಗೆ ತಲುಪಿ ಅವರ ಸಾಧನೆಯ ಸೆಳೆತ ಹೆಚ್ಚಾಗುತ್ತದೆ’ ಎಂಬ ಭಾವ ಪರಾತ್ಪರ ಗುರು ಡಾಕ್ಟರರಲ್ಲಿದೆ. ರಜ-ತಮಪ್ರಧಾನ ರಾಜಕಾರಣಿಗಳು ಅಥವಾ ನಟ ನಟಿಯರ ಕೈಯಿಂದ ಇದುವರೆಗೆ ಒಂದೇ ಒಂದೂ ಪುಸ್ತಕದ ಪ್ರಕಾಶನವಾಗಿಲ್ಲ.

ಈ. ಈ ಹಿಂದೆ ಮುಂಬೈಯ ಶೀವ ಎಂಬಲ್ಲಿ ಪರಾತ್ಪರ ಗುರು ಡಾಕ್ಟರರ ನಿವಾಸ ಸ್ಥಾನವಿತ್ತು. ಹೌದು ಇದೇ ಸನಾತನ ಸಂಸ್ಥೆಯ ಮುಂಬೈಯಲ್ಲಿನ ಆರಂಭದ ಆಶ್ರಮ. ಎರಡು ಮನೆಗಳಲ್ಲಿನ ಒಂದು ಮನೆಯಲ್ಲಿ (ಫ್ಲ್ಯಾಟ್‌ನಲ್ಲಿ) ಪರಾತ್ಪರ ಗುರು ಡಾಕ್ಟರರ ಚಿಕಿತ್ಸಾಲಯವಿತ್ತು. ಇದರಲ್ಲಿನ ಒಂದು ಚಿಕ್ಕ ಕೋಣೆಯಲ್ಲಿ ಕುಳಿತು ಪರಾತ್ಪರ ಗುರು ಡಾಕ್ಟರರು ಗ್ರಂಥಗಳ ಬರವಣಿಗೆಯನ್ನು ಮಾಡುತ್ತಿದ್ದರು.

ಪರಾತ್ಪರ ಗುರು ಡಾಕ್ಟರರು ಶೀವ ಆಶ್ರಮದಲ್ಲಿರುವಾಗ ಗ್ರಂಥಗಳು ಮುದ್ರಣವಾಗಿ ಬಂದ ನಂತರ ಅವರು ತಮ್ಮ ಕೈಯಿಂದಲೇ ಅವುಗಳನ್ನು ರ‍್ಯಾಕನಲ್ಲಿ ಜೋಡಿಸಿಡುತ್ತಿದ್ದರು. ಪರಾತ್ಪರ ಗುರು ಡಾಕ್ಟರರು ಯಾವಾಗ ಅಧ್ಯಾತ್ಮ ಪ್ರಸಾರಕ್ಕೆಂದು ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದರೋ, ಆಗ ಅಲ್ಲಿಯೂ ಅವರು ಸಾಧಕರಿಗೆ ಗ್ರಂಥಗಳು ಸಿಗಬೇಕೆಂದು ಸ್ವತಃ ತಾವೇ ಮೇಜಿನ ಮೇಲೆ (ಟೇಬಲ್) ಗ್ರಂಥಪ್ರದರ್ಶನವನ್ನು ಹಾಕುತ್ತಿದ್ದರು.

೨. ಗ್ರಂಥ ಸೇವೆಯ ಸಂದರ್ಭದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ಕಂಡುಬಂದ ಗುಣಗಳು !

೨ ಅ. ಮಿತವ್ಯಯ

೨. ಅ ೧. ಡಾಟ್ ಮ್ಯಾಟ್ರಿಕ್ಸ್ ಪ್ರಿಂಟರ್ : ಶೀವ ಆಶ್ರಮದಲ್ಲಿ ಗಣಕೀಯ ಪ್ರತಿಗಳನ್ನು ತೆಗೆಯಲು ಒಂದೇ ಡಾಟ್ ಮ್ಯಾಟ್ರಿಕ್ಸ್ ಪ್ರಿಂಟರ್ ಇತ್ತು. ಅದರ ‘ರಿಬ್ಬನ್’ನನ್ನು ಪದೇ ಪದೇ ‘ರಿಫಿಲ್’ ಮಾಡಿ ಅನೇಕ ವರ್ಷ ಅದೇ ‘ಪ್ರಿಂಟರ’ನ್ನು ಬಳಸಿದರು. ಮುಂದೆ ಅದೇ ‘ರಿಬ್ಬನ್’ನ್ನು ಪುನಃ ಪುನಃ ಬಳಸಿದುದರಿಂದ ಗಣಕೀಯ ಪ್ರತಿಯ ಮೇಲಿನ ಅಕ್ಷರಗಳು ಸ್ವಲ್ಪ ಮಸುಕಾಗಿ ಕಾಣಿಸುತ್ತಿದ್ದವು. ನಂತರ ಲೇಖನಿಯಿಂದ (ಪೆನ್ನಿನಿಂದ) ಆ ಅಕ್ಷರಗಳನ್ನು ದಪ್ಪ ಮಾಡಿಕೊಳ್ಳಬೇಕಾಗುತ್ತಿತ್ತು. ‘ಹೊಸ ‘ರಿಬ್ಬನ್’ಗಳಿಗೆ ಹಣ ಖರ್ಚಾಗಬಾರದೆಂದು ಎಷ್ಟು ದಿನ ಹಳೆಯ ‘ರಿಬ್ಬನ್’ ನಡೆಯುತ್ತಿತ್ತೋ. ಅಷ್ಟು ದಿನ ಅದನ್ನೇ ಉಪಯೋಗಿಸುತ್ತಿದ್ದರು.’ ಹೀಗೆ ಪರಾತ್ಪರ ಗುರು ಡಾಕ್ಟರರ ಮಿತವ್ಯಯದ ದೃಷ್ಟಿಕೋನವಿತ್ತು.

೨ ಅ ೨. ಒಂದು ಮಗ್ಗಲು ಬರೆದ ಕಾಗದಗಳು : ಪರಾತ್ಪರ ಗುರು ಡಾಕ್ಟರರು ಗ್ರಂಥಗಳ ಅಂಶಗಳನ್ನು ಬರೆಯಲು ಇಂದಿಗೂ ಔಷಧಿಗಳ ಪೆಟ್ಟಿಗೆಗಳ ಒಳಗಿನ ಭಾಗ, ರಶೀದಿಗಳ ಹಿಂದಿನ ಭಾಗ, ರದ್ದಿ ಕಾಗದಗಳು ಈ ರೀತಿಯ ‘ಒಂದು ಬದಿ ಉಪಯೋಗಿಸಿದ ಕಾಗದಗಳನ್ನು ಉಪಯೋಗಿಸುತ್ತಾರೆ. ಶೀವ ಆಶ್ರಮದಲ್ಲಿರುವಾಗ ಮುಂಬೈಯಲ್ಲಿನ ಕೆಲವು ಸಾಧಕರು ಒಂದು ಬದಿ ಉಪಯೋಗಿಸಿದ ಕಾಗದಗಳನ್ನು ಪರಾತ್ಪರ ಗುರು ಡಾಕ್ಟರರಿಗೆ ಗ್ರಂಥಸೇವೆಗಾಗಿ ತಂದು ಕೊಡುತ್ತಿದ್ದರು.

೨ ಅ ೩. ಕಟ್-ಪೇಸ್ಟ್ : ಗ್ರಂಥಗಳನ್ನು ಮುದ್ರಣಕ್ಕಾಗಿ ಕೊಡುವಾಗ ಮೊದಲು ಗ್ರಂಥದ ‘ಬಟರ್ ಪೇಪರ’ಗಳನ್ನು ತೆಗೆಯಬೇಕಾಗುತ್ತಿತ್ತು. ನಂತರ ‘ಬಟರ್ ಪೇಪರ್’ನ ಪರಿಶೀಲನೆಯ ಸೇವೆ ಇರುತ್ತಿತ್ತು. ಆ ಸಮಯದಲ್ಲಿ ಕೆಲವು ಪುಟಗಳಲ್ಲಿ ಸುಧಾರಣೆ ಮಾಡುವುದು ಗಮನಕ್ಕೆ ಬಂದರೆ, ಆ ಎಲ್ಲ ಪುಟಗಳ ‘ಬಟರ್ ಪೇಪರ್’ಗಳನ್ನು ತೆಗೆಯಲು ಹೆಚ್ಚು ಹಣ ಖರ್ಚಾಗುತ್ತಿತ್ತು. ಅದನ್ನು ತಪ್ಪಿಸಲು ಪರಾತ್ಪರ ಗುರು ಡಾಕ್ಟರರು ಎಲ್ಲ ಪ್ರತಿಗಳ ಮೇಲಿನ ಇಂತಹ ತಪ್ಪಿದ ಶಬ್ದ, ಸಾಲು ಅಥವಾ ಪರಿಚ್ಛೇದಗಳ ಒಂದು ‘ಬಟರ್ ಪೇಪರ್’ ಪ್ರತಿಯನ್ನು ತೆಗೆದು, ನಂತರ ಅಷ್ಟೇ ಸುಧಾರಣೆಯನ್ನು ಮೂಲ ‘ಬಟರ ಪೇಪರ್’ನಲ್ಲಿ ‘ಕಟ್-ಪೇಸ್ಟ’ ಮಾಡುವ ಯುಕ್ತಿಯನ್ನು ಹುಡುಕಿದರು. ಈ ‘ಕಟ್-ಪೇಸ್ಟ್’ ಮಾಡುವ ಸೇವೆ ಬಹಳ ತೊಡಿಕಿನ ಮತ್ತು ಕಾಳಜಿಯಿಂದ ಮಾಡಬೇಕಾಗುತ್ತಿತ್ತು.

ಯಾವಾಗ ಪರಾತ್ಪರ ಗುರು ಡಾಕ್ಟರರಂತಹ ವಿಭೂತಿಯು ನಿಃಸ್ವಾರ್ಥ ಭಾವದಿಂದ ಒಂದೊಂದು ರೂಪಾಯಿಯನ್ನು ಉಳಿತಾಯ ಮಾಡಿ ಧರ್ಮಕಾರ್ಯಕ್ಕಾಗಿ ಧನಸಂಚಯವನ್ನು ಮಾಡುತ್ತದೆಯೋ, ಆಗ ಆ ಕಾರ್ಯವು ಆ ವಿಭೂತಿಯದ್ದಾಗಿರದೆ, ಈಶ್ವರನದ್ದೇ ಆಗಿರುತ್ತದೆ ಮತ್ತು ಈಶ್ವರನೇ ಆ ಕಾರ್ಯವನ್ನು ಮಾಡುತ್ತಾನೆ ! ಇಂದು ಸನಾತನ ಸಂಸ್ಥೆಯು ಇದನ್ನೇ ಅನುಭವಿಸುತ್ತಿದೆ.