‘ಮುಂದೆ ಜನರ ಮನೆಮನೆಗಳಲ್ಲಿನ ದೇವರ ಕೋಣೆಯಲ್ಲಿ ನಿನ್ನ ಪ್ರತಿಮೆ (ಛಾಯಾಚಿತ್ರ) ಇರುವುದು’, ಎಂದು ಪ.ಪೂ. ಭಕ್ತರಾಜ ಮಹಾರಾಜರು (ಪ.ಪೂ. ಬಾಬಾ) ಪರಾತ್ಪರ ಗುರು ಡಾಕ್ಟರರಿಗೆ ಹೇಳಿದ್ದರು. ಚೆನ್ನೈಯಲ್ಲಿ ನಡೆದ ಒಂದು ನಾಡಿಪಟ್ಟಿವಾಚನದಲ್ಲಿ ಮಹರ್ಷಿಗಳು ಕೂಡ ಇದನ್ನೇ ಹೇಳಿದರು, ‘ಮುಂದೆ ನಾವು ಈ ಅವತಾರದ ರಹಸ್ಯವನ್ನು ತೆರೆದಿಡುವೆವು. ಮುಂಬರುವ ಕಾಲದಲ್ಲಿ ಅನೇಕ ಭಕ್ತರ ಮೂಲಕ ಅವರ ಪೂಜೆಯಾಗುವುದು. ಈ ಪರಮ ಗುರೂಜಿಯವರ ಚರಣಗಳನ್ನು ಬಿಡಬೇಡಿರಿ. ಯಾವಾಗಲೂ ಅವರ ಕೃಪಾದೃಷ್ಟಿಯಲ್ಲಿರಿ. ಇದರ ಹೊರತು ಜೀವನದಲ್ಲಿ ಬೇರೆ ಏನೂ ಮಾಡುವುದರ ಆವಶ್ಯಕತೆಯಿಲ್ಲ’. ಪ.ಪೂ. ಬಾಬಾರವರ ಆಶೀರ್ವಾದ ಮತ್ತು ಮಹರ್ಷಿಗಳು ಹೇಳಿದ ಈ ವಾಣಿಯು ಈಗ ಸತ್ಯವಾಗುತ್ತಿದೆ. (೧೯೯೩ ರಲ್ಲಿ ಪ.ಪೂ. ಭಕ್ತರಾಜ ಮಹಾರಾಜರು ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಓರ್ವ ಶಿಷ್ಯೆ ಕು. ಸೀಮಾ ಗರುಡ ಇವರಿಗೆ, “ಜನರು ಇವನನ್ನು (ಡಾಕ್ಟರರನ್ನು) ಪೂಜಿಸುವರು !” ಎಂದು ಹೇಳಿದ್ದರು – ಸಂಕಲನಕಾರರು) |
ಪರಾತ್ಪರ ಗುರು ಡಾಕ್ಟರರು ಯಾರು ಮತ್ತು ಏನಾಗಿದ್ದಾರೆ ? ಎಂಬುದು ಗೊತ್ತಿಲ್ಲದವರೂ ಈಗ ‘ನಮಗೆ ಪರಾತ್ಪರ ಗುರು ಡಾಕ್ಟರರ ಛಾಯಾಚಿತ್ರವನ್ನು ಕೊಡಿ’, ಎಂದು ಕೇಳುತ್ತಿದ್ದಾರೆ
ಸನಾತನದ ಸಾಧಕರ ದೇವರಕೋಣೆಯಲ್ಲಿ ಪರಾತ್ಪರ ಗುರು ಡಾಕ್ಟರರ ಛಾಯಾಚಿತ್ರ ಇರುತ್ತದೆ. ಅವರೊಂದಿಗೆ ಈಗ ಅನೇಕ ಹಿಂದುತ್ವ ನಿಷ್ಠರೂ ಅವರ ಛಾಯಾಚಿತ್ರವನ್ನು ಕಿಸೆ ಮತ್ತು ತಮ್ಮ ಬ್ಯಾಗ್‌ನಲ್ಲಿಡಲು ಕೇಳಿ ಪಡೆಯುತ್ತಿದ್ದಾರೆ. ಯಾರಿಗೆ ಪರಾತ್ಪರ ಗುರು ಡಾಕ್ಟರ್‌ರು ಯಾರು ಎಂಬುದು ಗೊತ್ತಿಲ್ಲವೋ, ಅಂತಹವರಿಗೆ ಅವರ ಛಾಯಾಚಿತ್ರವನ್ನು ತೋರಿಸಿದಾಗ ‘ನಮಗೂ ಇಂತಹ ಒಂದು ಛಾಯಾಚಿತ್ರ ಕೊಡಿ’, ಎಂದು ಕೇಳುತ್ತಿದ್ದಾರೆ. ನಾವು ಪ್ರವಾಸ ಮಾಡುವಾಗ ಇಂತಹ ಅನುಭೂತಿ ಅನೇಕ ಬಾರಿ ಬಂದಿದೆ.
ಸಂಕಲನ : ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ
ನವೆಂಬರ್ ೨೦೧೭ ರಲ್ಲಿ ಸನಾತನದ ಗ್ರಂಥದ ಮುಖಪುಟದಲ್ಲಿ ಇರುವ ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರವನ್ನು ನೋಡಿ ಹಿರಿಯ ಸಮರ್ಥಭಕ್ತ ಪೂ. ಸುನೀಲಜಿ ಚಿಂಚೋಲಕರ ಇವರು ಭಾವಾವಸ್ಥೆಗೆ ಹೋದರು. ‘ದೇವ ಮಸ್ತಕೀ ಧರಾವಾ, ಅವಘಾ ಹಲಕಲ್ಲೋಳ ಕರಾವಾ | ಮುಲುಖ ಬಡವಾವಾ ಕೀ ಬುಡವಾವಾ, ಧರ್ಮಸಂಸ್ಥಾಪನಾ ಕಾರಣೆ ||’ ಹೀಗೆ ಮರಾಠಿ ಶ್ಲೋಕ ಹೇಳುತ್ತಾ ಪೂ. ಚಿಂಚೋಲಕರರು ಆ ಗ್ರಂಥವನ್ನು ತಲೆಯ ಮೇಲೆ ಹಿಡಿದರು. ಶಿಷ್ಯನು ದೂರದಲ್ಲಿದ್ದರೂ (ಮತ್ತು ತಪ್ಪಿದರೆ) ಗುರುಗಳ ಇತರ ಮೂಲಕ ಅವನಿಗೆ ಜ್ಞಾನ ನೀಡುತ್ತಾರೆ. ಪ್ರತ್ಯಕ್ಷ ಅಲ್ಲಿ ಹೋಗಿ ಜ್ಞಾನ ನೀಡಲು ಶಕ್ತಿಯನ್ನು ವ್ಯಯ ಮಾಡುವುದಿಲ್ಲ ಗುರುಕೃಪೆಯಾದ ನಂತರ ಗುರುಗಳ ಸಾನ್ನಿಧ್ಯದಲ್ಲಿರುವ ಆವಶ್ಯಕತೆ ಇರುವುದಿಲ್ಲ ಏಕೆಂದರೆ ಸರ್ವವ್ಯಾಪಿ ಗುರುಗಳು ಸದಾ ಶಿಷ್ಯನ ಬಳಿ ಇರುತ್ತಾರೆ. |
ಅನೇಕ ಸಂತರೂ ಕೂಡ ತಮ್ಮ ದೇವರ ಕೋಣೆಯಲ್ಲಿ ಪರಾತ್ಪರ ಗುರು ಡಾಕ್ಟರರ ಛಾಯಾಚಿತ್ರವನ್ನು ಪೂಜೆಗಾಗಿ ಇಟ್ಟಿದ್ದಾರೆ
ಪುಣೆಯ ಒಂದು ನಾಡಿಪಟ್ಟಿಕೇಂದ್ರದಲ್ಲಿಯೂ ಪರಾತ್ಪರ ಗುರು ಡಾಕ್ಟರರ ಛಾಯಾಚಿತ್ರವಿದೆ ಮತ್ತು ಅಲ್ಲಿನ ನಾಡಿವಾಚಕ ಶ್ರೀ. ಮುದಲಿಯಾರ ಇವರು ಪ್ರತಿದಿನ ಪರಾತ್ಪರ ಗುರು ಡಾಕ್ಟರರಿಗೆ ಪ್ರಾರ್ಥನೆ ಮಾಡುತ್ತಾರೆ ಶ್ರೀ. ಮುದಲಿಯಾರ ಇವರು ಪರಾತ್ಪರ ಗುರು ಡಾಕ್ಟರರ ಚಿತ್ರವನ್ನು ಅಗಸ್ತೀ ಮಹರ್ಷಿಗಳ ಚಿತ್ರದ ಜೊತೆಗೆ ತಮ್ಮ ದೇವರ ಕೋಣೆಯಲ್ಲಿಟ್ಟಿದ್ದಾರೆ. ಅವರು, ‘ನಾನು ಪ್ರತಿದಿನ ಗುರುಗಳಿಗೆ, ಅಂದರೆ ಪರಾತ್ಪರ ಗುರು ಡಾಕ್ಟರರಿಗೂ ಪ್ರಾರ್ಥನೆ ಮಾಡುತ್ತೇನೆ ಮತ್ತು ನನ್ನ ಅಡಚಣೆಗಳ ಬಗ್ಗೆ ಅವರಿಗೆ ಆತ್ಮನಿವೇದನೆ ಮಾಡುತ್ತೇನೆ’ ಎಂದು ಹೇಳಿದರು.
‘ಪರಾತ್ಪರ ಗುರು ಡಾಕ್ಟರರು ಪ್ರತ್ಯಕ್ಷ ಶ್ರೀರಾಮರೇ ಆಗಿದ್ದಾರೆ’, ಎನ್ನುವ ಭಾವವನ್ನಿಟ್ಟು ಪ.ಪೂ. ದಾಸ ಮಹಾರಾಜರು ತಮ್ಮ ದೇವರಕೋಣೆಯಲ್ಲಿ ಪರಾತ್ಪರ ಗುರು ಡಾಕ್ಟರರ ಛಾಯಾಚಿತ್ರವನ್ನಿಟ್ಟಿದ್ದಾರೆ
ಮಹಾರಾಷ್ಟ್ರದ ಬಾಂದಾ ಎಂಬ ಊರಿನ ಸಂತರಾದ ಪ.ಪೂ. ದಾಸ ಮಹಾರಾಜರ ದೇವರಕೋಣೆಯಲ್ಲಿ ತಮ್ಮ ಗುರುಗಳಾದ ಪ.ಪೂ. ಶ್ರೀಧರಸ್ವಾಮಿಯವರ ಛಾಯಾಚಿತ್ರದ ಸಮೀಪ ಪರಾತ್ಪರ ಗುರು ಡಾಕ್ಟರರ ಚಿತ್ರವಿದೆ. ‘ಪರಾತ್ಪರ ಗುರು ಡಾಕ್ಟರರು ಪ್ರತ್ಯಕ್ಷ ಶ್ರೀರಾಮರೇ ಆಗಿದ್ದಾರೆ ಮತ್ತು ಅವರ ಅವತಾರೀ ಲೀಲೆಯಿಂದಲೇ ಪೃಥ್ವಿಯ ಮೇಲೆ ರಾಮರಾಜ್ಯ ಬರಲಿಕ್ಕಿದೆ’, ಎಂಬ ಶ್ರದ್ಧೆ ಅವರಲ್ಲಿದೆ.
ಮಹಾರಾಷ್ಟ್ರದ ಸೋಲ್ಲಾಪುರ ಜಿಲ್ಲೆಯ ಬಾರ್ಶಿಯ ಅಶ್ವಮೇಧಯಾಜಿ ಪ.ಪೂ. ನಾನಾ (ನಾರಾಯಣ) ಕಾಳೆಗುರೂಜಿಯವರು ಪರಾತ್ಪರ ಗುರು ಡಾಕ್ಟರರ ಛಾಯಾಚಿತ್ರವನ್ನು ಮುಂದಿಟ್ಟು ಯಜ್ಞವನ್ನು ಆರಂಭಿಸುತ್ತಾರೆ
ಅಶ್ವಮೇಧಯಾಜಿ ಪ.ಪೂ. ನಾನಾ (ನಾರಾಯಣ) ಕಾಳೆ ಗುರೂಜಿಯವರು ಯಜ್ಞವನ್ನು ಮಾಡುವಾಗ ಪರಾತ್ಪರ ಗುರು ಡಾಕ್ಟರರ ಛಾಯಾಚಿತ್ರವನ್ನು ಮುಂದಿಟ್ಟುಕೊಂಡೇ ಯಜ್ಞಕ್ಕೆ ಕುಳಿತುಕೊಳ್ಳುತ್ತಿದ್ದರು. ಅವರು, ‘ಪರಾತ್ಪರ ಗುರು ಡಾಕ್ಟರರ ಹೊರತು ಏನೂ ಆಗಲು ಸಾಧ್ಯವಿಲ್ಲ. ನಮಗೆ ಅವರ ಆಧಾರವೆನಿಸುತ್ತದೆ. ಪ್ರತಿಯೊಂದು ವಿಷಯವನ್ನು ಅವರಿಗೆ ನಿವೇದನೆ ಮಾಡಿದರೆ ಅದು ತಕ್ಷಣ ಈಡೇರುತ್ತದೆ. ಪ್ರತಿಯೊಂದು ವಿಷಯವನ್ನೂ ನಾವು ದೇವರಿಗೆ ಹೇಳುತ್ತೇವೆಯಲ್ಲ, ಇದು ಕೂಡ ಹಾಗೆಯೇ ಆಗಿದೆ’ ಎನ್ನುತ್ತಾರೆ.
ಮೇಲಿನ ಎಲ್ಲ ಉದಾಹರಣೆಗಳಿಂದ ಅರಿವಾಗುವ ಅಂಶವೆಂದರೆ, ವಜ್ರವನ್ನು ಎಷ್ಟೇ ಅಡಗಿಸಿಟ್ಟರೂ ಅದರ ಪ್ರಕಾಶವು ಅಡಗುವುದಿಲ್ಲ ಅಥವಾ ಕಡಿಮೆಯಾಗುವುದಿಲ್ಲ. ಚೈತನ್ಯದ ಆಸಕ್ತಿಯಿಂದ ಪ್ರವಾಸ ಮಾಡುವವರಿಗೆ ಪರಾತ್ಪರ ಗುರು ಡಾಕ್ಟರರ ಛಾಯಾಚಿತ್ರವನ್ನು ನೋಡಿ ಮೊದಲ ದೃಷ್ಟಿಯಲ್ಲಿಯೇ ‘ಇವರಲ್ಲಿ ಏನೋ ಭಿನ್ನತೆ ಇದೆ’, ಎಂದು ಅರಿವಾಗುತ್ತದೆ ಮತ್ತು ಅವರು ಒಂದು ಅನಾಮಿಕ (ಹೆಸರಿಲ್ಲದ) ಆಕರ್ಷಣಾ ಶಕ್ತಿಯಿಂದ ಅದರ ಕಡೆಗೆ ಸೆಳೆಯಲ್ಪಡುತ್ತಾರೆ. ನಿಜವಾಗಿಯೂ ಅವತಾರಿ ಕಾರ್ಯವನ್ನು ಮಾಡುವ ದೇಹದ ಚೈತನ್ಯವನ್ನು ಅಡಗಿಸಿಡಲು ಬರುವುದಿಲ್ಲ. ಸಮಯ ಬಂದಾಗ ಅದು ಜನಸಾಮಾನ್ಯರಿಗೂ ತನ್ನ ಪ್ರಭಾವವನ್ನು ತೋರಿಸುತ್ತದೆ. ಈಗ ನಾವು ಜನಸಾಮಾನ್ಯರ ಮೇಲಿನ ಆ ಚೈತನ್ಯದ ಚಮತ್ಕಾರವನ್ನು ಅನುಭವಿಸಬಹುದು.
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಬೆಂಗಳೂರು