ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿನ ‘ಸನಾತನ ಪ್ರಭಾತ’ದ ಕಚೇರಿಯ ಚೈತನ್ಯಮಯ ವಾಸ್ತುವಿನಲ್ಲಿ ಹಾಕಿರುವ ಮಾಹಿತಿ ಫಲಕದಲ್ಲಿರುವ ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರದಲ್ಲಿ ಆಗಿರುವ ಆಶ್ಚರ್ಯಕರ ಬದಲಾವಣೆ !

ಶ್ರೀ. ಭೂಷಣ ಕೆರಕರ

ಎಲ್ಲರಿಗೂ ಧರ್ಮಶಿಕ್ಷಣವನ್ನು ನೀಡಿ, ರಾಷ್ಟ್ರ ಮತ್ತು ಧರ್ಮಕ್ಕಾಗಿ ಕೃತಿಶೀಲರನ್ನಾಗಿಸುವುದು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಂಘಟಿಸುವುದು, ಇಂತಹ ಧ್ಯೇಯವನ್ನಿಟ್ಟು ‘ಸನಾತನ ಪ್ರಭಾತ’ವು ಕಳೆದ ೨೩ ವರ್ಷಗಳಿಂದ ಕಾರ್ಯವನ್ನು ಮಾಡುತ್ತಿದೆ. ಇಂತಹ ‘ಸನಾತನ ಪ್ರಭಾತ’ದ ನಿಯತಕಾಲಿಕೆಗಳ ಸೇವೆಯು ಪರಾತ್ಪರ ಗುರು ಡಾ. ಆಠವಲೆಯವರ ಸಹಿತ ಸದ್ಗುರುಗಳು ಮತ್ತು ಸಂತರು ವಾಸಿಸುತ್ತಿರುವ ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ಕಳೆದ ೧೫ ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ನಡೆಯುತ್ತಿದೆ. ಆಶ್ರಮದಲ್ಲಿನ ‘ಸನಾತನ ಪ್ರಭಾತ’ದ ಈ ಕಚೇರಿಯನ್ನು ೨೦೧೯ ರಲ್ಲಿ ನವೀಕರಣ ಮಾಡಲಾಯಿತು. ಇಲ್ಲಿ ಕೇವಲ ನವೀಕರಣವಷ್ಟೇ ಅಲ್ಲ, ಪರಾತ್ಪರ ಗುರು ಡಾ. ಆಠವಲೆಯವರ ಕೃಪಾಶೀರ್ವಾದದಿಂದ ಈ ಕಚೇರಿಯು ಚೈತನ್ಯಮಯ ಮತ್ತು ಪವಿತ್ರ ವಾಸ್ತುವಿನಲ್ಲಿ ರೂಪಾಂತರವಾಗಿದೆ. ಈ ವಾಸ್ತುವಿನಲ್ಲಿ ‘ಸನಾತನ ಪ್ರಭಾತ’ದ ವೈಶಿಷ್ಟ್ಯಗಳು ಮತ್ತು ಇತರ ಮಾಹಿತಿಗಳಿರುವ ಒಂದು ಫಲಕವನ್ನೂ ಹಾಕಲಾಗಿದೆ.

ಈ ಫಲಕದ ಮಧ್ಯಭಾಗದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರವಿದೆ. ವಿಶೇಷವೆಂದರೆ ಯಾವಾಗ ಆ ಫಲಕವನ್ನು ವಾಸ್ತುವಿನಲ್ಲಿ ಹಾಕಲಾಯಿತೋ, ಅದೇ ದಿನ ಈ ಛಾಯಾಚಿತ್ರದಲ್ಲಿ ಮುಂದಿನಂತೆ ವೈಶಿಷ್ಟ್ಯಪೂರ್ಣ ಬದಲಾವಣೆಗಳು ಕಂಡುಬಂದಿತು.

೧. ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರದಲ್ಲಿ ಸಜೀವತನದ ಅರಿವಾಗುವುದು ಆದುದರಿಂದ ಆ ಛಾಯಾಚಿತ್ರವನ್ನು ಯಾವ ಬದಿಯಿಂದ ನೋಡಿದರೂ, ಅವರು ನಮ್ಮ ಕಡೆಗೆ ನೋಡುತ್ತಿದ್ದಾರೆಂಬುದು ಗಮನಕ್ಕೆ ಬರುವುದು

ಈ ಫಲಕದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಬರವಣಿಗೆ ಮಾಡುವಾಗಿನ ಛಾಯಾಚಿತ್ರವಿದೆ. ಈ ಛಾಯಾಚಿತ್ರದ ಕಡೆಗೆ ಯಾವ ಬದಿಯಿಂದ (ಫಲಕದ ಎದುರಿನಿಂದ, ಎಡದಿಂದ ಮತ್ತು ಬಲದಿಂದ) ನೋಡಿದರೂ ‘ಪರಾತ್ಪರ ಗುರು ಡಾ. ಆಠವಲೆಯವರ ಸಂಪೂರ್ಣ ಶರೀರ, ಹಾಗೆಯೇ ಅವರ ಕೈಯಲ್ಲಿನ ಲೇಖನಿ ಮತ್ತು ಬರೆಯಲು ಕಾಗದವನ್ನು ಹಾಕಿಟ್ಟಿರುವ ಪ್ಯಾಡ್ ಇದೆಲ್ಲವೂ ಸಂಪೂರ್ಣವಾಗಿ ನಮ್ಮ ದಿಶೆಯಿಂದ ತಿರುಗುತ್ತಿದೆ, ಹಾಗೆಯೇ ಪರಾತ್ಪರ ಗುರುಗಳು ನಮ್ಮ ಕಡೆಗೆ ನೋಡುತ್ತಿದ್ದಾರೆ’, ಎಂದು ಅರಿವಾಗುತ್ತದೆ.

(ಛಾಯಾಚಿತ್ರದಲ್ಲಿನ ವಾಯುತತ್ತ್ವರೂಪಿ ಚೈತನ್ಯದ ಪ್ರಕ್ಷೇಪಣೆ ಹೆಚ್ಚಾದಂತೆ, ಛಾಯಾಚಿತ್ರವು ಹೆಚ್ಚು ಸಜೀವ ಎನಿಸುತ್ತದೆ. ಅದರಲ್ಲಿನ ತೇಜತತ್ತ್ವದ ಪ್ರಕ್ಷೇಪಣೆಯು ಹೆಚ್ಚಾದಂತೆ, ಅದು ಹೆಚ್ಚು ತೇಜಸ್ವಿಯಾಗಿ ಕಾಣಿಸುತ್ತದೆ; ಆದರೆ ವಾಯುತತ್ತ್ವದ ಆಧಾರದಿಂದ ಮಾತ್ರ ಅದು ಹೆಚ್ಚು ಸಜೀವವಾಗುತ್ತದೆ, ಅಂದರೆ ‘ಪ್ರತ್ಯಕ್ಷ ದಲ್ಲಿಯೂ ಅವರೇ ಅಲ್ಲಿದ್ದಾರೆ’, ಎಂಬಷ್ಟು ಅದು ಸಜೀವವಾಗುತ್ತದೆ.

– ಓರ್ವ ವಿದ್ವಾಂಸ (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ‘ಓರ್ವ ವಿದ್ವಾಂಸ ಎಂಬ ಹೆಸರಿನಿಂದಲೂ ಬರವಣಿಗೆ ಯನ್ನು ಮಾಡುತ್ತಾರೆ. (೩.೧.೨೦೧೨))

೨. ಪರಾತ್ಪರ ಗುರು ಡಾಕ್ಟರರು ಸ್ವತಃ ‘ಸನಾತನ ಪ್ರಭಾತ’ದ ಮಾಧ್ಯಮದಿಂದ ಸೂಕ್ಷ್ಮದಿಂದ ಎಲ್ಲ ಕಾರ್ಯವನ್ನು ಮಾಡುತ್ತಿರುವುದಾಗಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಹೇಳುವುದು

೨೦೧೯ ರಲ್ಲಿ ಈ ಛಾಯಾಚಿತ್ರವನ್ನು ನೋಡಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು, “ಫಲಕದಲ್ಲಿರುವ ಛಾಯಾಚಿತ್ರದಲ್ಲಿ ಪರಾತ್ಪರ ಗುರು ಡಾಕ್ಟರರ ಕೈಯಲ್ಲಿನ ಲೇಖನಿಯೂ ಅಲುಗಾಡುತ್ತಿದೆ ಎಂದು ಅರಿವಾಗುತ್ತದೆ. ಅಂದರೆ ಪರಾತ್ಪರ ಗುರುಗಳು ‘ಸನಾತನ ಪ್ರಭಾತ’ಕ್ಕಾಗಿ ಬರವಣಿಗೆಯನ್ನು ಮಾಡುತ್ತಿದ್ದಾರೆ ಮತ್ತು ಅವರೇ ‘ಸನಾತನ ಪ್ರಭಾತ’ದ ಮಾಧ್ಯಮದಿಂದ ಸೂಕ್ಷ್ಮದಿಂದ ಎಲ್ಲ ಕಾರ್ಯವನ್ನು ಮಾಡುತ್ತಿದ್ದಾರೆ” ಎಂದು ಹೇಳಿದರು. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳಕಾಕುರವರು ‘ಸನಾತನ ಪ್ರಭಾತ’ದ ವಾಸ್ತುವಿನಲ್ಲಿಯೂ ಶಾಂತಿಯ ಅನುಭೂತಿ ಬರುತ್ತಿದೆ ಎಂದು ಹೇಳಿದರು.

೩. ಪರಾತ್ಪರ ಗುರುದೇವರ ಕೃಪೆಯಿಂದ ‘ಸನಾತನ ಪ್ರಭಾತ’ದ ವಾಸ್ತುವಿನಲ್ಲಿ ಧ್ಯಾನಮಂದಿರದಷ್ಟೇ ಚೈತನ್ಯವು ನಿರ್ಮಾಣವಾಗುವುದು

ನವೀಕರಣದ ನಂತರ ‘ಸನಾತನ ಪ್ರಭಾತ’ದ ವಾಸ್ತುವಿನ ಬಗ್ಗೆ ಪರಾತ್ಪರ ಗುರುದೇವರು, “ಧ್ಯಾನಮಂದಿರದಲ್ಲಿ ಎಷ್ಟು ಚೈತನ್ಯವಿದೆಯೋ, ಅಷ್ಟೇ ಚೈತನ್ಯವು ‘ಸನಾತನ ಪ್ರಭಾತ’ದ ವಾಸ್ತುವಿನಲ್ಲಿಯೂ ನಿರ್ಮಾಣವಾಗಿದೆ” ಎಂದು ಹೇಳಿದರು. ನಿಜವಾಗಿಯೂ ವಾಸ್ತುವಿನಲ್ಲಿ ಇಂತಹ ಚೈತನ್ಯವು ನಿರ್ಮಾಣವಾಗುವುದು ಪರಾತ್ಪರ ಗುರುದೇವರ ಕೃಪೆಯೇ ಆಗಿದೆ.

ಈ ವಾಸ್ತುವಿನಲ್ಲಿ ‘ಸನಾತನ ಪ್ರಭಾತ’ದ ಸೇವೆಯನ್ನು ಮಾಡುವ ಸಾಧಕರಿಗೆ, ಹಾಗೆಯೇ ಆಶ್ರಮದಲ್ಲಿ ವಾಸಿಸುತ್ತಿರುವ ಮತ್ತು ಆಶ್ರಮದಲ್ಲಿ ಸ್ವಲ್ಪ ಕಾಲಾವಧಿಗಾಗಿ ಬರುವ ಸಂತರಿಗೆ ಮತ್ತು ಸಾಧಕರಿಗೆ ಈ ವಾಸ್ತುವಿನಲ್ಲಿ ಬಂದ ನಂತರ ಚೈತನ್ಯದ ಸ್ತರದಲ್ಲಿನ ಅನುಭೂತಿಗಳು ಬರುತ್ತಿವೆ.

‘ಪರಾತ್ಪರ ಗುರುದೇವಾ, ತಮ್ಮ ಕೃಪೆಯಿಂದಲೇ ನಮ್ಮೆಲ್ಲ ಸಾಧಕರಿಗೆ ಚೈತನ್ಯಮಯ ವಾಸ್ತುವಿನಲ್ಲಿ ‘ಸನಾತನ ಪ್ರಭಾತ’ದ ಸೇವೆಯನ್ನು ಮಾಡುವ ಮತ್ತು ಆ ಮಾಧ್ಯಮದಿಂದ ಶೀಘ್ರ ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳುವ ಅವಕಾಶ ಸಿಕ್ಕಿದೆ, ಇದಕ್ಕಾಗಿ ನಾವು ತಮ್ಮ ಚರಣಗಳಲ್ಲಿ ಅನಂತ ಕೋಟಿ ಕೃತಜ್ಞರಾಗಿದ್ದೇವೆ !’

‘ಹೇ ಗುರುದೇವಾ, ತಮ್ಮ ಕೃಪೆಯಿಂದ ಲಭಿಸಿದ ಚೈತನ್ಯಮಯ ವಾಸ್ತುವಿನಲ್ಲಿ ನಮ್ಮೆಲ್ಲ ಸಾಧಕರಿಂದ ‘ಸನಾತನ ಪ್ರಭಾತ’ದ ಸೇವೆಯು ಏಕಾಗ್ರತೆಯಿಂದ, ಪರಿಪೂರ್ಣ ಮತ್ತು ಭಾವಪೂರ್ಣ ರೀತಿಯಿಂದಾಗಲಿ ಮತ್ತು ಆ ಮಾಧ್ಯಮದಿಂದ ನಮ್ಮ ಆಧ್ಯಾತ್ಮಿಕ ಉನ್ನತಿಯು ಶೀಘ್ರಗತಿಯಿಂದಾಗಲಿ, ಹಾಗೆಯೇ ತಮ್ಮ ಕೃಪೆಯಿಂದ ವಾಸ್ತುವಿನಲ್ಲಿ ನಿರ್ಮಾಣವಾದ ಚೈತನ್ಯದಲ್ಲಿಯೂ ಹೆಚ್ಚಳವಾಗುತ್ತಿರಲಿ. ‘ಸನಾತನ ಪ್ರಭಾತ’ದ ಮಾಧ್ಯಮದಿಂದ ರಾಷ್ಟ್ರ ಮತ್ತು ಧರ್ಮ ಜಾಗೃತಿಯ ಕಾರ್ಯವು ವ್ಯಾಪಕವಾಗಿ ನಡೆದು ಆದಷ್ಟು ಬೇಗ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲಿ, ಇದೇ ತಮ್ಮ ಚರಣಗಳಲ್ಲಿ ಶರಣಾಗತಭಾವದಿಂದ ಪ್ರಾರ್ಥನೆ !’

– ಶ್ರೀ. ಭೂಷಣ ಕೆರಕರ (ಆಧ್ಯಾತ್ಮಿಕ ಮಟ್ಟ ಶೇ. ೬೭), ಸಹಸಂಪಾದಕರು, ‘ಸನಾತನ ಪ್ರಭಾತ’ ನಿಯತಕಾಲಿಕೆ ಸಮೂಹ (೧೧.೪.೨೦೨೨)