Waqf Amendment Bill 2024 : ಕೇಂದ್ರ ಸರಕಾರದಿಂದ ‘ವಕ್ಫ್ ತಿದ್ದುಪಡಿ ಕಾಯ್ದೆ 2024’ ಕುರಿತು ತಮ್ಮ ಅಭಿಪ್ರಾಯವನ್ನು ನೀಡುವಂತೆ ನಾಗರಿಕರಲ್ಲಿ ಮನವಿ !

  • ಸೆಪ್ಟೆಂಬರ್ 10 ರವರೆಗೆ ಗಡುವು

  • ಹಿಂದೂ ಜನಜಾಗೃತಿ ಸಮಿತಿ ಮತ್ತು ಸನಾತನ ಪ್ರಭಾತ ಪತ್ರಿಕೆಯ ಮೂಲಕವೂ ಜನಜಾಗೃತಿ

ಮುಂಬಯಿ – ‘ವಕ್ಫ್ ಕಾಯಿದೆಯ ಭಯಾನಕತೆಯು ‘ಒಮ್ಮೆ ವಕ್ಫ್ ಶಾಶ್ವತವಾಗಿ ವಕ್ಫ್’ ಎಂಬ ವಾಕ್ಯದಿಂದ ಸ್ಪಷ್ಟವಾಗಿದೆ. ಹೈಕೋರ್ಟ್ ನ ನ್ಯಾಯಾಧೀಶರೊಬ್ಬರು ಇಂತಹ ಹೇಳಿಕೆ ನೀಡಿದ್ದರು. ಈ ಕಾನೂನನ್ನು ರದ್ದುಗೊಳಿಸಲು ಕೇಂದ್ರ ಸರಕಾರ ಕ್ರಮ ಕೈಗೊಂಡಿದೆ. ಇದಕ್ಕಾಗಿ ಜಂಟಿ ಸಂಸದೀಯ ಸಮಿತಿಯನ್ನು ರಚಿಸಲಾಗಿದ್ದು, ಈ ಕಾನೂನಿನ ಬಗ್ಗೆ ಜನರು ತಮ್ಮ ಅಭಿಪ್ರಾಯಗಳನ್ನು ಕಳುಹಿಸುವಂತೆ ಸರಕಾರ ಮನವಿ ಮಾಡಿದೆ. ಈ ನಿಟ್ಟಿನಲ್ಲಿ ಹಿಂದೂ ಜನಜಾಗೃತಿ ಸಮಿತಿಯೂ ಆನ್‌ಲೈನ್‌ನಲ್ಲಿ ಮನವಿ ಸಲ್ಲಿಸಿದ್ದು, ಇದುವರೆಗೆ ಒಂದುಕಾಲು ಲಕ್ಷ ಹಿಂದೂಗಳು ‘ವಕ್ಫ್ ಕಾಯ್ದೆ 1995’ ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ‘ಸನಾತನ ಪ್ರಭಾತ’ವೂ ಕೂಡ ಹಿಂದೂಗಳು ಆನ್‌ಲೈನ್ ಮೂಲಕ ತಮ್ಮ ಅಭಿಪ್ರಾಯಗಳನ್ನು ಸರಕಾರದ ಬಳಿ ವ್ಯಕ್ತಪಡಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಔರಂಗಜೇಬ್ ಅಥವಾ ನಿಜಾಮ ಯಾರ ಭೂಮಿಯನ್ನು ತಂದಿಲ್ಲ, ಅದು ಭಾರತದ ಭೂಮಿಯಾಗಿದೆ ! – ಹಿಂದೂ ಜನಜಾಗೃತಿ ಸಮಿತಿ

ಈ ನಿಟ್ಟಿನಲ್ಲಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ತಮ್ಮ ವಿಡಿಯೋವನ್ನು ಪ್ರಸಾರ ಮಾಡಿ ಅದರಲ್ಲಿ ವಕ್ಫ್ ಕಾಯ್ದೆ ಮೂಲಕ ನಡೆಯುತ್ತಿರುವ ‘ಲ್ಯಾಂಡ್ ಜಿಹಾದ್’ ತಡೆಯಲು ಕೇಂದ್ರ ಸರಕಾರ ‘ವಕ್ಫ್ ತಿದ್ದುಪಡಿ ಕಾಯ್ದೆ 2024’ ತಂದಿದೆ. ಈ ನಿಟ್ಟಿನಲ್ಲಿ ಸರಕಾರವು ಜಂಟಿ ಸಂಸದೀಯ ಸಮಿತಿಗೆ ಕರಡು ಕಾನೂನನ್ನು ಕಳುಹಿಸಿದೆ. ಕಾಯಿದೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಮಿತಿಯು ಭಾರತದ ಎಲ್ಲಾ ನಾಗರಿಕರಿಗೆ ಮನವಿ ಮಾಡಿದೆ. ವಕ್ಫ್ ಕಾಯಿದೆಯ ಮೂಲಕ ಹಿಂದೂಗಳು ತಮ್ಮ ಗ್ರಾಮಗಳು ಮತ್ತು ದೇವಸ್ಥಾನಗಳನ್ನು ಕೊಡಬಾರದಿದ್ದರೇ, ಅವರು ತಮ್ಮ ಅಭಿಪ್ರಾಯವನ್ನು ಸರಕಾರಕ್ಕೆ ಕಳುಹಿಸಬೇಕು. ತಮಿಳುನಾಡಿನ 1 ಸಾವಿರದ 400 ವರ್ಷಗಳಷ್ಟು ಹಳೆಯದಾದ ದೇವಸ್ಥಾನವನ್ನು, ಉಡುಪಿಯ ಜೈನ ಮಂದಿರವನ್ನು ವಕ್ಫ್ ಕಾಯ್ದೆಯಡಿ ಘೋಷಿಸಲು ಷಡ್ಯಂತ್ರ ನಡೆಯುತ್ತಿದೆ. ಈ ಎಲ್ಲ ಭೂಮಿಯನ್ನು ವಕ್ಫ್ ಬೋರ್ಡ್‌ ಜಿಲ್ಲಾಧಿಕಾರಿ ಮೂಲಕ ನೋಂದಣಿ ಮಾಡಲಾಗುತ್ತಿದೆ. ಇಂದು ವಕ್ಫ್ ಬೋರ್ಡ್‌ ಬಳಿ 8 ಲಕ್ಷ ಎಕರೆ ಭೂಮಿ ಇದ್ದರೂ ಮಸೀದಿ ನಿರ್ಮಿಸಲು ಸರಕಾರದಿಂದ ಭೂಮಿ ಬೇಕು. ಔರಂಗಜೇಬ್ ಅಥವಾ ನಿಜಾಮರು ತಮ್ಮೊಂದಿಗೆ ಯಾವುದೇ ಭೂಮಿಯನ್ನು ತಂದಿಲ್ಲ. ಈ ಭೂಮಿ ಭಾರತಕ್ಕೆ ಸೇರಿದ್ದು ಮತ್ತು ಭಾರತ ಸರಕಾರವು ಅದರ ಮೇಲೆ ಹಕ್ಕನ್ನು ಹೊಂದಿದೆ. ಇದರಿಂದಾಗಿ ವಕ್ಫ್ ಮಂಡಳಿಯ ಷಡ್ಯಂತ್ರವನ್ನು ವಿಫಲಗೊಳಿಸಲು ನಿಮ್ಮ ನಿಲುವನ್ನು ಜಗದಾಂಬಿಕಾ ಪಾಲ್ ಅವರ ಹೆಸರಿನಲ್ಲಿ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಿ !

ಸಂಪಾದಕೀಯ ನಿಲುವು

ಹಿಂದೂಗಳೇ, ವಕ್ಫ್ ಕಾಯಿದೆಯು ಲ್ಯಾಂಡ್ ಜಿಹಾದ್‌ನ ಸಾಂವಿಧಾನಿಕ ರೂಪವಾಗಿದ್ದು, ಈ ಮೂಲಕ ಹಿಂದೂಗಳ ಭೂಮಿಯನ್ನು ಕಬಳಿಸುವ ಷಡ್ಯಂತ್ರವನ್ನು ವಿಫಲಗೊಳಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಅಭಿಪ್ರಾಯಗಳನ್ನು ಕೇಳಿದ್ದು, ಹಿಂದೂಗಳು ‘ನನಗೇಕೆ ಉಸಾಪರಿ?’ ಎಂಬ ಧೋರಣೆ ತೊರೆದು ಧರ್ಮ ಕರ್ತವ್ಯ ನಿರ್ವಹಿಸುವುದು ಈಗ ಅನಿವಾರ್ಯವಾಗಿದೆ !

ವಕ್ಫ್ ಕಾಯಿದೆ ಕುರಿತು ನಿಮ್ಮ ನಿಲುವನ್ನು ಹೀಗೆ ಕಳುಹಿಸಿ !

‘ವಕ್ಫ್ ತಿದ್ದುಪಡಿ ಕಾಯ್ದೆ 2024’ ಕುರಿತು ತಮ್ಮ ಅಭಿಪ್ರಾಯಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ಕೇಂದ್ರ ಸರಕಾರ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಇದರಲ್ಲಿ, ನಾಗರಿಕರು ತಮ್ಮ ನಿಲುವಿನ ಎರಡು ಪ್ರತಿಗಳನ್ನು ಅಂಚೆ ಮೂಲಕ ಕಳುಹಿಸಬೇಕು.

ಪತ್ರ ಕಳುಹಿಸಬೇಕಾದ ವಿಳಾಸ :

ಶ್ರೀ. ಜಗದಾಂಬಿಕಾ ಪಾಲ್, ಜಂಟಿ ಕಾರ್ಯದರ್ಶಿ (ಜೆಎಂ), ಲೋಕಸಭೆ ಸೆಕ್ರೆಟರಿಯೇಟ್, 440, ಸಂಸತ್ ಭವನ, ನವದೆಹಲಿ – 110001
ಫ್ಯಾಕ್ಸ್ ಸಂಖ್ಯೆ : 011 – 2301 7709

ಲಿಖಿತ ಪತ್ರವನ್ನು ಕಳುಹಿಸಲು ಸಾಧ್ಯವಾಗದವರು ಇಮೇಲ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕು.
ಇಮೇಲ್ ಐಡಿ : [email protected]

ಸೂಚನೆ : ಅಂಚೆ ಮೂಲಕ ಬರುವ ಪ್ರತಿಕ್ರಿಯೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು.

ಹಿಂದೂ ಜನಜಾಗೃತಿ ಸಮಿತಿಯು ಈ ಕುರಿತು ಆನ್‌ಲೈನ್ ಅರ್ಜಿಯನ್ನು ಸಲ್ಲಿಸಿದೆ. ಈ ಅರ್ಜಿಯ ಕಡತವನ್ನು ಬಳಸಿಕೊಂಡು ಅನೇಕ ಹಿಂದೂಗಳು ಸರಕಾರಕ್ಕೆ ಪತ್ರಗಳನ್ನು ಕಳುಹಿಸುತ್ತಿದ್ದಾರೆ. ಅದರ ಮಾಹಿತಿಯನ್ನು ಪಡೆಯಲು ಮುಂದಿನ ಲಿಂಕ್‌ಗೆ ಹೋಗಿ !
https://www.hindujagruti.org/waqf-board-act