SANATAN PRABHAT EXCLUSIVE : ಮಹಾರಾಷ್ಟ್ರದಲ್ಲಿ ಸರಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರ ಮುಚ್ಚಿಡಲು ಪ್ರಯತ್ನ

  • ಮಾಹಿತಿ ಹಕ್ಕನ್ನು ಹರಿದು ಹಾಕಲಾಗುತ್ತಿರುವುದು ಬಹಿರಂಗ

  • ನೂರಾರು ವಿಚಾರಣಾ ವರದಿಗಳನ್ನು ಹತ್ತಿಕ್ಕಿ ಭ್ರಷ್ಟಾಚಾರಕ್ಕೆ ಉತ್ತೇಜನ

ವರದಿಗಾರ – ಶ್ರೀ. ಪ್ರೀತಮ್ ನಾಚಣಕರ್, ಮುಂಬಯಿ

ಮುಂಬಯಿ – ಸರಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರ ಬಯಲಾಗಬಾರದು, ಎಂಬ ಉದ್ದೇಶದಿಂದ ರಾಜ್ಯದ ವಿವಿಧ ಸರಕಾರಿ ಇಲಾಖೆಗಳ ಅಧಿಕಾರಿಗಳು ‘ಮಾಹಿತಿ ಅಧಿಕಾರ ಅಧಿನಿಯಮ‘ ಹರಿದು ಮಾಹಿತಿ ಮರೆಮಾಚಲು ಪ್ರಯತ್ನಿಸುತ್ತಿರುವುದು ಬಹಿರಂಗವಾಗಿದೆ. ಸರಕಾರದ ವ್ಯವಹಾರಗಳಲ್ಲಿನ ಭ್ರಷ್ಟಾಚಾರದ ಪ್ರಕರಣಗಳ ತನಿಖೆಗಾಗಿ ಶಾಸಕಾಂಗದಲ್ಲಿ ಸಮಿತಿಗಳನ್ನು ಸ್ಥಾಪಿಸಲಾಗಿದೆ; ಆದರೆ, ಭ್ರಷ್ಟಾಚಾರ ಬಯಲಾಗದಿರಲು ತನಿಖಾ ವರದಿಗಳನ್ನು ಬಹಿರಂಗಪಡಿಸಿಲ್ಲ ಎಂಬ ಅಂಶವೂ ಬೆಳಕಿಗೆ ಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಸಮಿತಿ ನೇಮಿಸಿದರೂ ವರದಿ ಸಲ್ಲಿಸಿಲ್ಲ. ಈ ರೀತಿಯ ನೂರಾರು ಪ್ರಕರಣಗಳು ರಾಜ್ಯದಲ್ಲಿ ಬಾಕಿ ಉಳಿದಿವೆ.

ಸಂಪಾದಕೀಯ ನಿಲುವು

  • ಇದರಿಂದ ಆಡಳಿತದಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ, ಎಂಬುದು ಗಮನಕ್ಕೆ ಬರುತ್ತದೆ ! ಭ್ರಷ್ಟಾಚಾರ ಮಾಡುವುದು ಮತ್ತು ಅದನ್ನು ಮರೆಮಾಚುವುದು ಸರಕಾರಿ ಏಜೆನ್ಸಿಯ ಒಂದು ಕಾರ್ಯಪದ್ದತಿಯಂತೆ ಆಗಿದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದು ಬುರುಡೆ ಬಿಡುವವರೂ ಅದನ್ನು ಕೊನೆಗಾಣಿಸಲು ಸಾಧ್ಯವಾಗಿಲ್ಲ, ಇದುವೇ ವಾಸ್ತವಿಕ ಸ್ಥಿತಿ. ಇದಕ್ಕಾಗಿ ಈಗ ಹಿಂದೂ ರಾಷ್ಟ್ರವೇ ಬೇಕು !
  • ಇಂದು ಭ್ರಷ್ಟಾಚಾರ ಹತ್ತಿಕ್ಕುವವರು ನಾಳೆ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವವರನ್ನು ಜೈಲಿಗೆ ಹಾಕಿದರೆ ಆಶ್ಚರ್ಯವಾಗಬಾರದು ! ಇಂತಹ ಪ್ರಮೆಯ ಬಾರದಿರಲಿ ಎಂದು ಸಮಾಜಕ್ಕೆ ಈಗಲಾದರೂ ಸಾಧನೆ ಕಲಿಸಬೇಕು. ಸಾಧನೆ ಮಾಡುವುದರಿಂದ ವೃತ್ತಿ ಸಾತ್ವಿಕವಾಗಿ ಯಾರ ಮನಸ್ಸಿನಲ್ಲಿಯೂ ಭ್ರಷ್ಟಾಚಾರದ ಬಗ್ಗೆ ಯೋಚನೆ ಬರುವುದಿಲ್ಲ !