ಸಹೋದರ ಬಿದಿಗೆ ನಿಮಿತ್ತ ಸಹೋದರಿಗೆ ಚಿರಂತನ ಜ್ಞಾನಾಮೃತವಾಗಿರುವ ಸನಾತನ ಸಂಸ್ಥೆಯ ಗ್ರಂಥಗಳನ್ನು ನೀಡಿ ಹಾಗೆಯೇ ರಾಷ್ಟ್ರ-ಧರ್ಮದ ಬಗ್ಗೆ ಅಭಿಮಾನ ಹೆಚ್ಚಿಸುವ ‘ಸನಾತನ ಪ್ರಭಾತ’ದ ವಾಚಕರನ್ನಾಗಿ ಮಾಡಿ ಅಮೂಲ್ಯ ಉಡುಗೊರೆ ನೀಡಿ !

ಸಹೋದರ ಬಿದಿಗೆಯ ನಿಮಿತ್ತ ಎಲ್ಲೆಡೆ ಹಿಂದೂ ಬಾಂಧವರಿಗೆ ಕರೆ !

೧. ಸಹೋದರ ಬಿದಿಗೆ ಮತ್ತು ಆ ನಿಮಿತ್ತದಿಂದ ಕೊಡಲಾಗುವ ಉಡುಗೊರೆ !

ಕಾರ್ತಿಕ ಶುಕ್ಲ ದ್ವಿತೀಯಾ, ಅಂದರೆ ಸಹೋದರ ಬಿದಿಗೆ ಅಥವಾ ಯಮದ್ವಿತೀಯಾ ! ಈ ವರ್ಷ ೩.೧೧.೨೦೨೪ ರಂದು ಸಹೋದರ ಬಿದಿಗೆ ಇದೆ. ಹಿಂದೂ ಸಂಸ್ಕೃತಿಗನುಸಾರ ಈ ದಿನಕ್ಕೆ ಮಹತ್ವವಿದೆ. ಈ ದಿನ ಸಹೋದರನು ಸಹೋದರಿಯ ಕಡೆಗೆ ಭೋಜನ ಮಾಡಲು ಹೋಗುತ್ತಾನೆ. ‘ಸಹೋದರನು ತನ್ನ ರಕ್ಷಣೆ ಮಾಡಬೇಕು’, ಎಂದು ಅವಳು ಸಹೋದರನಿಗೆ ಆರತಿ ಬೆಳಗುತ್ತಾಳೆ ಮತ್ತು ಸಹೋದರನು ಸಹೋದರಿಗೆ ಉಡುಗೊರೆ ಕೊಡುತ್ತಾನೆ. ಈ ನಿಮಿತ್ತದಿಂದ ಸಹೋದರಿಗೆ ವಿವಿಧ ರೀತಿಯಲ್ಲಿ ಉಡುಗೊರೆಯನ್ನು ಕೊಡುವ ಪದ್ಧತಿ ಇದೆ. ಅನೇಕ ಬಾರಿ ಸಹೋದರರು ಸಹೋದರಿಯರಿಗೆ ಹೊಸ ವಸ್ತ್ರಗಳು, ಅಲಂಕಾರದ ವಸ್ತುಗಳು ಮುಂತಾದವುಗಳನ್ನು ಉಡುಗೊರೆ ಎಂದು ಕೊಡುತ್ತಾರೆ, ಕೆಲವರು ಹಣವನ್ನೂ ಕೊಡುತ್ತಾರೆ.

೨. ಸದ್ಯದ ಕಾಲಕ್ಕನುಸಾರ ಶ್ರೇಷ್ಠವಾದ ಉಡುಗೊರೆ !

ಸಹೋದರ ಬಿದಿಗೆಯಂದು ತನ್ನ ಸಹೋದರಿಗೆ ಮೇಲಿನ ಅಶಾಶ್ವತ ಉಡುಗೊರೆಯನ್ನು ಕೊಡುವುದಕ್ಕಿಂತ ಚಿರಂತನ ಜ್ಞಾನದ ಪ್ರಸಾರ ಮಾಡುವ ಸನಾತನದ ಗ್ರಂಥಸಂಪತ್ತಿನ ಗ್ರಂಥಗಳನ್ನು ಉಡುಗೊರೆಯೆಂದು ಕೊಡಬಹುದು. ಅದೇ ರೀತಿ ಅವಳಿಗೆ ‘ಸನಾತನ ಪ್ರಭಾತ’ದ ನಿಯತಕಾಲಿಕೆಯ ವಾಚಕರನ್ನಾಗಿ ಮಾಡಬಹುದು. ಸದ್ಯದ ಕಾಲಕ್ಕನುಸಾರ ಈ ಉಡುಗೊರೆಯನ್ನು ಕೊಡುವುದು ಹೆಚ್ಚು ಉಪಯುಕ್ತವಾಗಿದೆ.

೩. ಸಹಜ ಸುಲಭವಾದ ಭಾಷೆಯಲ್ಲಿ ಧರ್ಮಶಾಸ್ತ್ರವನ್ನು ಹೇಳಿ ಧರ್ಮದ ಬಗ್ಗೆ ಶ್ರದ್ಧೆಯನ್ನು ಹೆಚ್ಚಿಸುವ ಸನಾತನದ ಗ್ರಂಥಗಳು !

ಸನಾತನ ಸಂಸ್ಥೆಯು ಆಗಸ್ಟ್ ೨೦೨೪ ರ ವರೆಗೆ ಅಧ್ಯಾತ್ಮ, ಸಾಧನೆ, ದೇವತೆಗಳ ಉಪಾಸನೆ, ಆಚಾರಧರ್ಮ, ಬಾಲಸಂಸ್ಕಾರ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿಷಯಗಳ ೩೬೬ ಗ್ರಂಥಗಳು ಮತ್ತು ಕಿರುಗ್ರಂಥಗಳ ಮರಾಠಿ, ಹಿಂದಿ, ಆಂಗ್ಲ, ಗುಜರಾತಿ, ಕನ್ನಡ, ತಮಿಳು, ತೆಲಗು, ಮಲ್ಯಾಳಮ್, ಬಂಗಾಲಿ, ಒಡಿಯಾ, ಆಸಾಮಿ, ಪಂಜಾಬಿ ಮತ್ತು ನೇಪಾಳ ಈ ಭಾಷೆಗಳಲ್ಲಿ ೯೪ ಲಕ್ಷಗಳಿಗಿಂತಲೂ ಹೆಚ್ಚು ಪ್ರತಿಗಳನ್ನು ಪ್ರಕಾಶನ ಮಾಡಿದೆ. ಈ ಗ್ರಂಥಗಳು ೧೩ ಭಾಷೆಗಳಲ್ಲಿ ಲಭ್ಯವಿದ್ದು ಅವುಗಳು ವಾಚಕರಿಗೆ ‘ಕಾಲಕ್ಕನುಸಾರ ಆವಶ್ಯಕವಾಗಿರುವ ಸಾಧನೆ ಯಾವುದು ? ದೇವತೆಗಳ ಉಪಾಸನೆಯನ್ನು ಹೇಗೆ ಮಾಡಬೇಕು ? ಧಾರ್ಮಿಕ ಉತ್ಸವವನ್ನು ಹೇಗೆ ಆಚರಿಸಬೇಕು ?’ ಮುಂತಾದ ವಿಷಯಗಳ ಅಮೂಲ್ಯ ಜ್ಞಾನವನ್ನು ಸಹಜಸುಲಭ ಭಾಷೆಯಲ್ಲಿ ಕೊಡುತ್ತಾರೆ. ಇದರಿಂದ ಯಾರಿಗೆ ಉಡುಗೊರೆಯನ್ನು ಕೊಡುತ್ತೇವೆಯೋ, ಅವರಲ್ಲಿ ಧರ್ಮದ ಬಗ್ಗೆ ಶ್ರದ್ಧೆ ಹೆಚ್ಚಾಗುತ್ತದೆ.

೪. ಸಾಧನೆಯ ಮಹತ್ವವನ್ನು ಬಿಂಬಿಸುವ ಮತ್ತು ಪ್ರತಿಕೂಲ ಪ್ರಸಂಗಗಳನ್ನು ಎದುರಿಸಲು ಸ್ತ್ರೀಯರಲ್ಲಿ ಮನೋಧೈರ್ಯವನ್ನು ಮೂಡಿಸುವ ಸನಾತನ ಪ್ರಭಾತ !

ಪ್ರಸ್ತುತ ಸಾಮಾಜಿಕ ಸ್ಥಿತಿಯು ಹದಗೆಟ್ಟಿರುವುದರಿಂದ ಸ್ತ್ರೀಯರಿಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ. ಆದ್ದರಿಂದ ಅವರಿಗೆ ಈ ಸಮಸ್ಯೆಯ ಬಗ್ಗೆ ಅರಿವು ಮೂಡಿಸಿ ಜಾಗೃತಗೊಳಿಸುವುದು, ಇಂದಿನ ಅಗತ್ಯವಾಗಿದೆ. ‘ಸನಾತನ ಪ್ರಭಾತ’ವು ಸಮಾಜಕ್ಕೆ ಉಪಯೋಗವಾಗಿರುವ ಈ ಕಾರ್ಯವನ್ನು ನಿರಂತರ ಮಾಡುತ್ತಿದೆ. ಸ್ವರಕ್ಷಣೆಗಾಗಿ ಉದ್ಯುಕ್ತಗೊಳಿಸುವ ಹಾಗೆಯೇ ‘ಸಾಧನೆಯ ಆಧಾರದಿಂದ ಪ್ರತಿಕೂಲ ಪರಿಸ್ಥಿತಿಗಳನ್ನು ಹೇಗೆ ಎದುರಿಸಬೇಕು ?’ ಎಂಬುದರ ಬಗ್ಗೆ ಉಪಯುಕ್ತ ಮಾಹಿತಿಯನ್ನು ನೀಡುವ ಲೇಖನಗಳನ್ನು ಈ ನಿಯತಕಾಲಿಕೆಗಳಲ್ಲಿ ನಿಯಮಿತವಾಗಿ ಪ್ರಸಿದ್ಧಗೊಳಿಸಲಾಗುತ್ತದೆ. ಆದ್ದರಿಂದ ಕಠಿಣ ಪ್ರಸಂಗಗಳನ್ನು ಎದುರಿಸುವ ಮನೋಧೈರ್ಯ ಮಹಿಳೆಯರಲ್ಲಿ ನಿರ್ಮಾಣವಾಗತೊಡಗುತ್ತದೆ.

ಭಗಿನಿಯರ ಮನಸ್ಸಿನಲ್ಲಿ ಸಾಧನೆಯ ಮಹತ್ವವನ್ನು ಬಿಂಬಿಸಿ ಅವಳಿಗೆ ಜೀವನದಲ್ಲಿ ಆಮೂಲಾಗ್ರ ಬದಲಾವಣೆಯನ್ನು ಮಾಡುವ ‘ಸನಾತನ ಪ್ರಭಾತ’ದ ವಾಚಕರನ್ನಾಗಿ ಮಾಡುವುದು ಮತ್ತು ಅದರಲ್ಲಿನ ಅಮೂಲ್ಯ ಮಾಹಿತಿಗಳನ್ನು ಓದಲು ಉದ್ಯುಕ್ತಗೊಳಿಸುವುದು, ಇದಕ್ಕಿಂತ ಇತರ ಶ್ರೇಷ್ಠವಾದ ಉಡುಗೊರೆ ಯಾವುದಿರಬಹುದು ?

ಸಹೋದರಿಗೆ ಕೊಡಲು ಸನಾತನದ ಗ್ರಂಥಗಳು ಮತ್ತು ಕಿರುಗ್ರಂಥಗಳು ಬೇಕಿದ್ದರೆ ಅವುಗಳ ಬೇಡಿಕೆಗಳನ್ನು ಸ್ಥಳೀಯ ವಿತರಕರ ಬಳಿ ನೀಡಬಹುದು. ಅವಳಿಗೆ ‘ಸನಾತನ ಪ್ರಭಾತ’ದ ವಾಚಕರನ್ನಾಗಿ ಮಾಡಲು www.SanatanPrabhat.org/subscribe/ ಈ ಲಿಂಕ್‌ನ್ನು ನೋಡಬೇಕು ಅಥವಾ ಸ್ಥಳೀಯ ಸಾಧಕರನ್ನು ಸಂಪರ್ಕಿಸಬೇಕು. (೨೪.೯.೨೦೨೪)