ಗೋವಾದ ರಾಮನಾಥಿಯ ಸನಾತನ ಆಶ್ರಮದ ಆಕಾಶಮಂಡಲದಲ್ಲಿ ಮೋಡಗಳ ರೂಪದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರಿಗೆ ಕಾಣಿಸಿದ ಶ್ರೀ ಗಣೇಶನ ಸುಂದರ ರೂಪ !

ಮೋಡಗಳಲ್ಲಿ ವಿಘ್ನಹರ್ತಾ ಶ್ರೀ ಗಣೇಶನ ರೂಪ ಕಾಣಿಸಿದ್ದು ಒಂದು ವಿಭಿನ್ನ ಮತ್ತು ವೈಶಿಷ್ಟ್ಯಪೂರ್ಣ ಘಟನೆ !

ಕು. ಸಾಯಲಿ ಡಿಂಗರೆ

 

ಮೋಡಗಳ ರೂಪದಲ್ಲಿ ಕಾಣಿಸಿದ ಶ್ರೀ ಗಣೇಶನ ಆಕಾರ (ಪಕ್ಕದ ಚಿತ್ರದಲ್ಲಿ ಗೆರೆಗಳ ಮೂಲಕ ತೋರಿಸಲಾಗಿದೆ.)

‘ಅಕಾರ ಚರಣಯುಗುಲ | ಉಕಾರ ಉದರ ವಿಶಾಲ |

ಮಕಾರ ಮಹಾಮಂಡಲ | ಮಸ್ತಕಾಕಾರೇಂ ||

ಹೇ ತಿನ್ಹೀ ಏಕವಟಲೇ | ತೇಥೇಂ ಶಬ್ದಬ್ರಹ್ಮ ಕವಳಲೇಂ |

ತೇಂ ಮಿಯಾಂ ಗುರುಕೃಪಾ ನಮಿಲೇಂ | ಆದಿಬೀಜ ||

– ಜ್ಞಾನೇಶ್ವರೀ, ಅಧ್ಯಾಯ ೧, ಓವೀ ೧೯ ಮತ್ತು ೨೦

ಅರ್ಥ : ಓಂಕಾರದ ಮೊದಲ ಅಕಾರಮಾತ್ರೆಯು ಆ ಗಣಪತಿಯ ಎರಡು ಚರಣಗಳಾಗಿದ್ದು, ಎರಡನೇಯ ಉಕಾರಮಾತ್ರೆಯು ಇದು ಅವನ ದೊಡ್ಡ ಹೊಟ್ಟೆಯಾಗಿದೆ ಮತ್ತು ಮೂರನೇಯ ಮಕಾರಮಾತ್ರೆಯು ಅವನ ದೊಡ್ಡ ಮತ್ತು ಮಂಡಲಾಕಾರದ ತಲೆಯ ಆಕಾರವಾಗಿದೆ. ಈ ಮೂಲ ಬೀಜರೂಪಿ ಗಣೇಶನಿಗೆ ನಾನು ಗುರುಕೃಪೆಯಿಂದ ನಮಸ್ಕರಿಸುತ್ತೇನೆ.

ಇದು ಜ್ಞಾನೇಶ್ವರಿಯ ಆರಂಭದಲ್ಲಿ ಸಂತ ಜ್ಞಾನೇಶ್ವರ ಮಹಾರಾಜರು ವರ್ಣನೆಯನ್ನು ಮಾಡಿದ ಶ್ರೀಗಣೇಶನ ರೂಪ  ! ಈ ಶ್ಲೋಕದಂತೆಯೇ ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದ ಪೂರ್ವದಿಕ್ಕಿನ ಆಕಾಶದಲ್ಲಿ ಒಂದು ವಿಶಾಲ ಶ್ರೀ ಗಣೇಶನ ದರ್ಶನವಾಯಿತು ! ೩೧.೫.೨೦೨೧ ಈ ದಿನ ಪರಾತ್ಪರ ಗುರು ಡಾ. ಆಠವಲೆಯವರಿಗೆ ಅವರ ಕೋಣೆಯ ಹೊರಗೆ ಆಕಾಶದಲ್ಲಿ ಮೋಡಗಳ ಆಕಾರವು ಗಣಪತಿಯಂತೆ ಆಗಿರುವುದು ಕಾಣಿಸಿತು. ಆ ಆಕಾರವನ್ನು ಅವರು ಸಾಧಕರಿಗೆ ತೋರಿಸಿದರು. ಅದರಿಂದ ಅದರ ಛಾಯಾಚಿತ್ರವನ್ನು ತೆಗೆಯಲು ಸಾಧ್ಯವಾಯಿತು. ಗಣಪತಿಯ ಆ ಆಕಾರವು ಸಾತ್ತ್ವಿಕ ಕಾಣಿಸುತ್ತದೆ, ಹಾಗೆಯೇ ಅದು ಮನಸ್ಸಿಗೆ ಆನಂದವನ್ನು ನೀಡುವುದಾಗಿದೆ.

೧. ‘ರಾಮನಾಥಿ ಆಶ್ರಮದ ಆಕಾಶದಲ್ಲಿ ದರ್ಶನವನ್ನು ನೀಡಿ ಶ್ರೀ ಗಣೇಶನು ಸಾಧಕರಿಗೆ ಪ್ರಾಣಶಕ್ತಿಯನ್ನು ನೀಡಿದನು, ಹಾಗೆಯೇ ವಾತಾವರಣವನ್ನು ಶುದ್ಧ ಮಾಡಿದನು’, ಎಂದು ಅರಿವಾಗುವುದು

ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರಿಗೆ ಮೋಡಗಳಲ್ಲಿ ಶ್ರೀ ಗಣೇಶನ ದರ್ಶನವಾಗುವುದು, ಇದು ಸನಾತನದ ಸಾಧಕರಿಗೆ ಒಂದು ದೊಡ್ಡ ಆಶೀರ್ವಾದವೇ ಆಗಿದೆ. ಶ್ರೀ ಗಣೇಶನು ವಿದ್ಯೆಯ ದೇವತೆಯಾಗಿದ್ದಾನೆ. ಅವನು ವಿಘ್ನಹರ್ತನಾಗಿದ್ದಾನೆ. ಅವನನ್ನು ಸಂಕಲ್ಪಪೂರ್ವಕ ಪೂಜಿಸಿದರೆ ನಮ್ಮ ಕಾರ್ಯ ನಿರ್ವಿಘ್ನವಾಗಿ ನಡೆಯುತ್ತದೆ. ಶ್ರೀ ಗಣೇಶನು ಪ್ರಾಣಶಕ್ತಿದಾತನೂ ಆಗಿದ್ದಾನೆ. ಸದ್ಯ ಕೊರೊನಾ ಮಹಾಮಾರಿಯಿಂದ ಎಲ್ಲ ಜನರು ತೊಂದರೆಗೀಡಾಗಿದ್ದಾರೆ. ‘ದೇವರು ರಾಮನಾಥಿಯಲ್ಲಿನ ಸನಾತನದ ಆಶ್ರಮದ ಆಕಾಶದಲ್ಲಿ ಮೋಡಗಳಲ್ಲಿ ಗಣಪತಿಯ ಆಕಾರವನ್ನು ನಿರ್ಮಿಸಿ ಸಾಧಕರಿಗೆ ಪ್ರಾಣಶಕ್ತಿಯನ್ನು ನೀಡಿದನು, ಹಾಗೆಯೇ ಅಲ್ಲಿನ ವಾತಾವರಣವನ್ನು ಶುದ್ಧ ಮಾಡಿದನು’, ಎಂದು ನನಗೆ ಅರಿವಾಯಿತು. ‘ಗಣಪತಿಯು ಹತ್ತು ದಿಕ್ಕುಗಳ ಸ್ವಾಮಿಯಾಗಿದ್ದಾನೆ. ಅವನು ದರ್ಶನವನ್ನು ನೀಡಿ ಆಶ್ರಮದ ಸುತ್ತಮುತ್ತಲಿನ ವಾತಾವರಣದಲ್ಲಿರುವ ವಿಷಾಣುಗಳ ನಿವಾರಣೆ ಮಾಡಿದನು’, ಎಂದು ಸಹ ನನಗೆ ಅನಿಸಿತು.

೨. ಮೋಡಗಳ ಶ್ರೀ ಗಣೇಶನಂತಹ ಆಕಾರವಾಗುವುದು, ಇದು ಸನಾತನದ ಆಶ್ರಮದ ಹೊರಗಿನ ವಾತಾವರಣ ಸಾತ್ತ್ವಿಕವಾಗಿರುವುದರ ದರ್ಶಕವಾಗಿದೆ !

ಸನಾತನದ ರಾಮನಾಥಿಯಲ್ಲಿನ ಆಶ್ರಮದಲ್ಲಿ ಮಹರ್ಷಿಗಳು ಶ್ರೀಮಹಾವಿಷ್ಣುವಿನ ಅವತಾರವೆಂದು ಗೌರವಿಸಿದ ಪರಾತ್ಪರ ಗುರು ಡಾ. ಆಠವಲೆಯವರೊಂದಿಗೆ ಸನಾತನದ ಸದ್ಗುರುಗಳು ಮತ್ತು ಸಂತರ ಮಂಗಲಮಯ ವಾಸ್ತವ್ಯವಿದೆ. ಇಲ್ಲಿ ಕಳೆದ ೧೭ ವರ್ಷಗಳಿಂದ ನೂರಾರು ಸಾಧಕರು ಸಾಧನೆಯನ್ನು ಮಾಡಿದ್ದಾರೆ. ಆದ್ದರಿಂದ ಆಶ್ರಮದಲ್ಲಿ ಸಾತ್ತ್ವಿಕ ವಾತಾವರಣವಿದೆ. ಆಶ್ರಮದ ಈ ವಾತಾವರಣದ ಪ್ರಭಾವವು ಅದರ ಪರಿಸರದಲ್ಲಿನ ವಾತಾವರಣದ ಮೇಲೆಯೂ ಬೀಳುತ್ತದೆ. ಆದ್ದರಿಂದ ಆಶ್ರಮದ ಸುತ್ತಮುತ್ತಲಿನ ವಾತಾವರಣವು ಸಾತ್ತ್ವಿಕವಾಗಿದೆ. ಇಂತಹ ಈ ಸಾತ್ತ್ವಿಕ ವಾತಾವರಣದಲ್ಲಿ ನಿಸರ್ಗದ ಮಾಧ್ಯಮದಿಂದ ಈಶ್ವರನು ಅನುಭೂತಿಗಳನ್ನು ನೀಡುತ್ತಾನೆ. ಆದ್ದರಿಂದ ಆಕಾಶದಲ್ಲಿ ತಿಳಿಹಳದಿ ಬಣ್ಣದ ಪ್ರಕಾಶ ಕಾಣಿಸುವುದು, ಕಾಮನಬಿಲ್ಲು ಕಾಣಿಸುವುದು, ಮೋಡಗಳ ಸಾತ್ತ್ವಿಕ ಆಕಾರಗಳು ಕಾಣಿಸುವುದು ಇಂತಹ ಅನೇಕ ಅನುಭೂತಿಗಳು ಬರುತ್ತವೆ. ಈ ಅನುಭೂತಿಗಳಿಂದ ಆಶ್ರಮದಲ್ಲಿನ ಸಾಧಕರ ಮನಸ್ಸು ಹೆಚ್ಚು ಉತ್ಸಾಹಿಯಾಗುತ್ತದೆ, ಹಾಗೆಯೇ ಅವರಿಗೆ ಆನಂದವೂ ದೊರಕುತ್ತದೆ. ಈಶ್ವರನು ಸಾಧನೆಯನ್ನು ಮಾಡುವವರಿಗೆ ಅನುಭೂತಿಗಳನ್ನು ನೀಡುತ್ತಾನೆ. ನಿಸರ್ಗದಲ್ಲಿನ ಇಂತಹ ಸಾತ್ತ್ವಿಕ ಪರಿವರ್ತನೆಯು ಸಾಮಾನ್ಯ ಮನುಷ್ಯರಿಗೆ ತಕ್ಷಣ ಗಮನಕ್ಕೆ ಬರುವುದಿಲ್ಲ; ಆದರೆ ಅದು ಸಂತರು, ಉನ್ನತ ಸಾಧಕರ ಗಮನಕ್ಕೆ ಬರುತ್ತದೆ.

ಸನಾತನದ ಆಶ್ರಮದಲ್ಲಿ ಯಾವ ರೀತಿ ವಿವಿಧ ದೇವತೆಗಳ ತತ್ತ್ವಗಳ ಮತ್ತು ಪಂಚಮಹಾಭೂತಗಳ ವಿವಿಧ ಮಾಧ್ಯಮಗಳಿಂದ ಪ್ರಕಟೀಕರಣವಾಗುತ್ತದೆಯೋ, ಅದರಂತೆ ಆಶ್ರಮದ ಹೊರಗಿನ ವಾತಾವರಣದಲ್ಲಿಯೂ ಈ ರೀತಿಯ ಸಾತ್ತ್ವಿಕ ಅನುಭೂತಿಗಳು ಬರುತ್ತಿವೆ. ಇದು ವೈಶಿಷ್ಟ್ಯಪೂರ್ಣವಾಗಿದೆ. ವಿಘ್ನಹರ್ತಾ ಶ್ರೀ ಗಣೇಶ ಮತ್ತು ಸಾಧಕರ ಜೀವನದ ಆಧ್ಯಾತ್ಮೀಕರಣವನ್ನು ಮಾಡುವ ಮತ್ತು ಸರ್ವವ್ಯಾಪಿಯಾದ ಭಗವಂತನ ವಿವಿಧ ಮಾಧ್ಯಮಗಳಿಂದ ಅನುಭವಿಸಲು ಕಲಿಸಿದ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !’

– ಕು. ಸಾಯಲಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೯.೧.೨೦೨೨)