ಈಶ್ವರನ ಈಶ್ವರತ್ತ್ವದ ಮತ್ತು ಅವನ ಇತರ ಎಲ್ಲ ದೈವೀ ಗುಣಗಳ ಉಗಮವು ಅವನ ‘ನಿರಪೇಕ್ಷ ಪ್ರೀತಿ’ ಈ ಗುಣದಿಂದಲೇ ಆಗುತ್ತದೆ. ಈಶ್ವರನ ಪ್ರೀತಿಯೇ ನಮ್ಮ ಜನ್ಮದ ಮತ್ತು ನಮ್ಮ ಆನಂದಪ್ರಾಪ್ತಿಯ ಕಾರಣವಾಗಿದೆ. ಭಗವಂತನು ಪೃಥ್ವಿಯ ಮೇಲೆ ಹತ್ತು ಅವತಾರಗಳನ್ನು ತಾಳುವ ಕಾರಣವೂ ಅದೇ ಆಗಿದ್ದು ಭಕ್ತರ ಮೇಲಿನ ಪ್ರೀತಿಯಿಂದಲೇ ಈಶ್ವರನು ಧರ್ಮಸಂಸ್ಥಾಪನೆಯ ಕಾರ್ಯವನ್ನು ಮಾಡುತ್ತಾನೆ. ಈಶ್ವರನ ಪ್ರೀತಿಯೇ ಧಾರಣಶಕ್ತಿಯಾಗಿದ್ದು ಅದುವೇ ಧರ್ಮವಾಗಿದೆ. ಈಶ್ವರನ ‘ಪ್ರೀತಿ’ ಈ ಅಸಾಧಾರಣ ಗುಣದಿಂದಲೇ ಎಲ್ಲ ಜೀವಗಳಿಗೆ ಅವನ ಸೆಳೆತ ನಿರ್ಮಾಣವಾಗುತ್ತದೆ. ಅವನ ಪ್ರೀತಿ ಇಲ್ಲದಿದ್ದರೆ ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು ಒಂದು ಕ್ಷಣದಲ್ಲಿ ನಿಷ್ಕ್ರಿಯವಾಗುವವು ಹಾಗೂ ನಮ್ಮೆಲ್ಲರ ಜೀವನ ನಿಷ್ಪ್ರಯೋಜನವಾಗುವುದು. ಇಂತಹ ಆ ಈಶ್ವರನ, ಆ ಬ್ರಹ್ಮಾಂಡನಾಯಕನ ಸಗುಣ ರೂಪವಾಗಿರುವ ಪರಾತ್ಪರ ಗುರು ಡಾ. ಆಠವಲೆಯವರ ಅಲೌಕಿಕ ಪ್ರೀತಿಯೇ ನಮ್ಮೆಲ್ಲ ಸಾಧಕರ ಇಹಲೋಕ ಮತ್ತು ಪರಲೋಕದ ವೈಭವವಾಗಿದೆ.
೧. ಸಚ್ಚಿದಾನಂದ ಪರಬ್ರಹ್ಮನಾಗಿರುವ ಪರಾತ್ಪರ ಗುರು ಡಾ. ಆಠವಲೆಯವರು ಸರ್ವಶಕ್ತಿವಂತ, ಸರ್ವಜ್ಞಾನಿ ಹಾಗೂ ಪರಿಪೂರ್ಣರಾಗಿರುವುದರಿಂದ ಅವರು ಸೌಂದರ್ಯದ ಗಣಿಯಾಗಿದ್ದಾರೆ; ಅವರು ಸಾಧಕರ ಶ್ವಾಸ, ಪ್ರಾಣ ಮತ್ತು ಜೀವನದ ಸರ್ವಸ್ವರಾಗಿದ್ದಾರೆ
ಸಚ್ಚಿದಾನಂದ ಪರಬ್ರಹ್ಮವಾಗಿರುವ ಪರಾತ್ಪರ ಗುರು ಡಾ. ಆಠವಲೆಯವರು ಸರ್ವಶಕ್ತಿವಂತ, ಸರ್ವಜ್ಞಾನಿ ಹಾಗೂ ಪರಿಪೂರ್ಣರಾಗಿರುವುದರಿಂದ ಅವರು ಸೌಂದರ್ಯದ ಗಣಿಯಾಗಿದ್ದಾರೆ; ಅವರು ಸಾಧಕರ ಶ್ವಾಸ, ಪ್ರಾಣ ಮತ್ತು ಜೀವನದ ಸರ್ವಸ್ವರಾಗಿದ್ದಾರೆ. ಪರಾತ್ಪರ ಗುರು ಡಾಕ್ಟರರು ಸಚ್ಚಿದಾನಂದ ಪರಬ್ರಹ್ಮರಾಗಿದ್ದಾರೆ, ಅವರು ಪರಮಾತ್ಮರಾಗಿದ್ದಾರೆ; ಆದರೆ ‘ಇದೆಲ್ಲ ನಮಗೆ ಸಾಧಕರಿಗೆ ಎಲ್ಲಿ ಗೊತ್ತಿದೆ ?’ ನಮಗೆ ಕೇವಲ ‘ಅವರು ನಮ್ಮ ಪರಮಕೃಪಾಳು ಗುರುದೇವರಾಗಿದ್ದಾರೆ’, ಇಷ್ಟೇ ಗೊತ್ತಿದೆ. ನಮ್ಮ ಶ್ವಾಸ, ಪ್ರಾಣ, ಅಸ್ತಿತ್ವ ಮತ್ತು ಜೀವನ ಎಲ್ಲವೂ ಅವರೇ ಆಗಿದ್ದಾರೆ. ಇಲ್ಲಿ ನಮ್ಮದೇನೂ ಇಲ್ಲ. ಎಲ್ಲವು ಅವರ ಕೃಪೆಯಿಂದಲೇ ನಮಗೆ ಸಿಕ್ಕಿದೆ.
೨. ಪರಾತ್ಪರ ಗುರು ಡಾ. ಆಠವಲೆಯವರ ಸರ್ವವ್ಯಾಪಕ ಪ್ರೀತಿ !
೨ ಅ. ಪರಾತ್ಪರ ಗುರು ಡಾ. ಆಠವಲೆಯವರ ಸರ್ವಾಂಗದಿಂದ ಪ್ರೀತಿಯ ಅನಂತಧಾರೆ ಸತತವಾಗಿ ಹರಿಯುತ್ತಿರುವುದರಿಂದ ಅವರ ಸಾನಿಧ್ಯದಲ್ಲಿ ಸತತವಾಗಿ ಚೈತನ್ಯ ಮತ್ತು ಆನಂದವನ್ನು ಅನುಭವಿಸಬಹುದು : ಪರಾತ್ಪರ ಗುರು ಡಾಕ್ಟರರ ನಡೆ-ನುಡಿ, ನಗು, ವೀಕ್ಷಣೆ ಇತ್ಯಾದಿ ಎಲ್ಲ ಕೃತಿಗಳು ಮೃದು, ಸಹಜ ಮತ್ತು ಸುಂದರವಾಗಿರುತ್ತವೆ. ಅವರು ಮೃದು ಮತ್ತು ಮಧುರವಾಗಿದ್ದಾರೆ. ಅವರ ಸರ್ವಾಂಗದಿಂದ ಸತತವಾಗಿ ಪ್ರೀತಿಯ ಅನಂದದಧಾರೆ ಹರಿಯುತ್ತಿರುವುದರಿಂದ ಅವರ ಎಲ್ಲ ಕೃತಿಗಳೂ ಶ್ರೀಕೃಷ್ಣನಂತೆ ಮಧುರವಾಗಿರುತ್ತವೆ. ಆದುದರಿಂದ ಅವರ ಸಾನಿಧ್ಯದಲ್ಲಿ ಸತತವಾಗಿ ಚೈತನ್ಯ ಮತ್ತು ಆನಂದವನ್ನು ಅನುಭವಿಸಲು ಸಾಧ್ಯವಾಗುತ್ತದೆ.
೨ ಆ. ‘ಸನಾತನದ ವಿಶ್ವಕುಟುಂಬ’ವು ಪರಾತ್ಪರ ಗುರು ಡಾ. ಆಠವಲೆಯವರ ಪ್ರೀತಿಯ ದಾರದಿಂದ ಜೋಡಿಸಲ್ಪಟ್ಟಿದ್ದು, ಅವರೇ ಎಲ್ಲ ಸಾಧಕರ ಮನಸ್ಸನ್ನು ಜೋಡಿಸಿಟ್ಟಿದ್ದಾರೆ : ಪ್ರತಿಯೊಂದು ಮಗುವಿಗೆ, ‘ತಾಯಿಯ ಪ್ರೀತಿ ತನ್ನ ಮೇಲೆಯೇ ಹೆಚ್ಚಿದೆ !’ ಎಂದು ಅನಿಸುತ್ತದೆ. ಅದೇ ರೀತಿ ಪ್ರತಿಯೊಬ್ಬ ಸಾಧಕನಿಗೂ ‘ನಾನು ಪರಾತ್ಪರ ಗುರು ಡಾಕ್ಟರರ ಪ್ರೀತಿಯ ಸಾಧಕನಾಗಿದ್ದೇನೆ’, ಎಂದು ಅನಿಸುತ್ತದೆ. ಪ್ರತ್ಯಕ್ಷದಲ್ಲಿ ನಾವು ಅವರಿಂದಲೇ ಸಾಧನೆಯನ್ನು ಮಾಡತೊಡಗಿದೆವು, ಸಾಧನೆಯಲ್ಲಿ ಉಳಿದುಕೊಂಡೆವು ಮತ್ತು ಪರಸ್ಪರರೊಂದಿಗೆ ಜೋಡಿಸಲ್ಪಟ್ಟೆವು. ಅವರೇ ನಮ್ಮೆಲ್ಲರ ಮನಸ್ಸನ್ನು ಜೋಡಿಸಿಟ್ಟಿದ್ದಾರೆ. ಈ ‘ಸನಾತನ ವಿಶ್ವಕುಟುಂಬ’ವು ಪರಾತ್ಪರ ಗುರು ಡಾಕ್ಟರರ ಪ್ರೀತಿಯ ದಾರದಿಂದ ಪರಸ್ಪರ ಜೋಡಿಸಲ್ಪಟ್ಟಿದೆ.
೨ ಇ. ಸೂರ್ಯನ ತೇಜ, ಅಗ್ನಿಯ ದಾಹಕತೆ, ಆಕಾಶದ ವ್ಯಾಪಕತೆ ಮತ್ತು ವಾಯುವಿನ ಗತಿಮಾನತೆ ಇವು ಅವುಗಳ ವೈಶಿಷ್ಟ್ಯಗಳಾಗಿವೆ. ಅದೇ ರೀತಿ ಪರಾತ್ಪರ ಗುರು ಡಾಕ್ಟರರ ‘ಪ್ರೀತಿಯೇ (ನಿರಪೇಕ್ಷ ಪ್ರೇಮ)’ ಅವರ ವೈಶಿಷ್ಟ್ಯವಾಗಿದೆ.
೩. ಗುರುಕಾರ್ಯಕ್ಕಿಂತ ಸಾಧಕರಿಗೆ ಹೆಚ್ಚು ಮಹತ್ವವನ್ನು ನೀಡುವ ಮತ್ತು ಪ್ರೀತಿಯಿಂದ ಎಲ್ಲ ಸಾಧಕರ ಕಾಳಜಿಯನ್ನು ತೆಗೆದುಕೊಳ್ಳುವ ಪ್ರೀತಿಮಯ ಪರಾತ್ಪರ ಗುರು ಡಾ. ಆಠವಲೆ !
೩ ಅ. ಸಾಧಕಿಯರು ಅನುಭವಿಸಿದ ಪರಾತ್ಪರ ಗುರು ಡಾಕ್ಟರರ ಪ್ರೀತಿ ! : ಬೇರೆ ಬೇರೆ ೩ ಪ್ರಸಂಗಗಳಲ್ಲಿ ಸಾಧಕಿಯರು ಪರಾತ್ಪರ ಗುರು ಡಾಕ್ಟರರಿಗೆ ಹೇಳಿದ ಅಡಚಣೆಗಳು ಮತ್ತು ಅವರು ಸಾಧಕಿಯರಿಗೆ ನೀಡಿದ ಉತ್ತರಗಳನ್ನು ಇಲ್ಲಿ ಕೊಡಲಾಗಿದೆ.
೧. ಓರ್ವ ವೃದ್ಧ ಸಾಧಕಿ : ಪರಮ ಪೂಜ್ಯ (ಪರಾತ್ಪರ ಗುರು ಡಾ. ಆಠವಲೆ), ಈಗ ನನ್ನಿಂದ ಸೇವೆ ಆಗುವುದಿಲ್ಲ.
ಪರಾತ್ಪರ ಗುರು ಡಾ. ಆಠವಲೆ : ನೀವು ವಯಸ್ಸಿನಲ್ಲಿ ನನಗಿಂತ ಹಿರಿಯದ್ದೀರಲ್ಲ ? ಇಷ್ಟು ವಯಸ್ಸಾದ ನಂತರ ನೀವು ಈಗ ಏನು ಸೇವೆ ಮಾಡುವಿರಿ ? ಇಷ್ಟು ವರ್ಷ ತುಂಬಾ ಸೇವೆಯನ್ನು ಮಾಡಿರುವಿರಿ. ಈಗ ದೇವರಿಗೆ ನಿಮ್ಮಿಂದ ಸೇವೆಯ ಅಪೇಕ್ಷೆ ಇಲ್ಲ. ಈಗ ನೀವು ನಾಮಜಪ ಮಾಡಿರಿ.
೨. ಓರ್ವ ಸಾಧಕಿ : ಪರಮ ಪೂಜ್ಯ, ನನ್ನಿಂದ ಸೇವೆ ಆಗುವುದಿಲ್ಲ.
ಪರಾತ್ಪರ ಗುರು ಡಾ. ಆಠವಲೆ : ಹೀಗೆ ಹೇಳಿದರೆ ಹೇಗೆ ? ಸ್ವಲ್ಪವಾದರೂ ಸೇವೆಯನ್ನು ಮಾಡಬೇಕು, ಸೇವೆಯ ಬಗ್ಗೆ ವಿಚಾರ ಮಾಡುವುದು ಬೇಡ. ಅದಕ್ಕಾಗಿ ಸ್ವಯಂಸೂಚನೆಗಳನ್ನು ಕೊಡಿ. ಸೇವೆ ಆಗುವುದೇ ಇದೆ. ಅದರ ಬಗ್ಗೆ ಒತ್ತಡ ಬೇಡ. ಎಷ್ಟು ಆಗುತ್ತದೆ, ಅಷ್ಟು ಮಾಡಿರಿ !
೩. ವಯಸ್ಕರ ಸಾಧಕಿ : ನನ್ನ ಆರೋಗ್ಯ ಸರಿ ಇರುವುದಿಲ್ಲ. ಆದುದರಿಂದ ನನಗೆ ಸೇವೆಯನ್ನು ಮಾಡಲು ಆಗುವುದಿಲ್ಲ.
ಪರಾತ್ಪರ ಗುರು ಡಾ. ಆಠವಲೆ : ಆರೋಗ್ಯ ಸರಿ ಇರದಿದ್ದರೆ, ಹಾಸಿಗೆಯ ಮೇಲೆ ಮಲಗಿ ಸಮಷ್ಟಿಗಾಗಿ ನಾಮಜಪವನ್ನು ಮಾಡಬಹುದು. ಸಮಷ್ಟಿಗಾಗಿ ‘ನಾಮಜಪ ಮಾಡುವುದು’, ಇದು ದೊಡ್ಡ ಸಮಷ್ಟಿ ಸೇವೆಯೇ ಆಗಿದೆ. ನೀವು ಈಗ ಸಮಷ್ಟಿಗಾಗಿ ನಾಮಜಪಿಸಿರಿ !
೩ ಆ. ಪ್ರಾಣಶಕ್ತಿ ಕಡಿಮೆ ಇರುವಾಗಲೂ ಸೇವೆಯನ್ನು ಮಾಡುವ ಮತ್ತು ಸಾಧಕರೊಂದಿಗೆ ಪ್ರೀತಿಯಿಂದ ಮಾತನಾಡಿ ಅವರನ್ನು ಮುಂದೆ ಕರೆದುಕೊಂಡು ಹೋಗುವ ಪರಾತ್ಪರ ಗುರು ಡಾ. ಆಠವಲೆ ! : ಪ್ರಾಣಶಕ್ತಿ ಕಡಿಮೆ ಇರುವಾಗಲೂ ಪರಾತ್ಪರ ಗುರು ಡಾಕ್ಟರರು ಸೇವೆಯಲ್ಲಿ ನಿರತರಾಗಿರುತ್ತಾರೆ, ಉದಾ. ‘ಗ್ರಂಥಗಳಿಗೆ ಸಂಬಂಧಿಸಿದ ಗಣಕೀಯ ಕಡತಗಳನ್ನು ಓದುವುದು, ವಿವಿಧ ಗ್ರಂಥಗಳ ಸಂಕಲನವನ್ನು ಮಾಡುವುದು, ಸಾಧಕರ ಸಾಧನೆಯಲ್ಲಿನ ಅಡಚಣೆಗಳ ನಿವಾರಣೆಯನ್ನು ಮಾಡುವುದು, ಸಾಧಕರೊಂದಿಗೆ ಮಾತನಾಡಿ ಅವರನ್ನು ಮುಂದೆ ಕರೆದುಕೊಂಡು ಹೋಗುವುದು ಇತ್ಯಾದಿ.
‘ಪ್ರತಿಯೊಬ್ಬರಿಗೂ ಅವರೇ (ಪ.ಪೂ. ಡಾಕ್ಟರರು) ಬೇಕು’, ಇಂತಹ ಸ್ಥಿತಿ ಇರುತ್ತದೆ. ಈಗ ಪರಾತ್ಪರ ಗುರು ಡಾಕ್ಟರರಿಗೆ ವಯಸ್ಸಾಗಿದೆ. ಅವರ ಪ್ರಾಣಶಕ್ತಿಯೂ ಕಡಿಮೆ ಇರುತ್ತದೆ ಮತ್ತು ಅನೇಕ ಬಾರಿ ಅವರು ಅನಾರೋಗ್ಯದಲ್ಲಿರುತ್ತಾರೆ. ಇಷ್ಟೊಂದು ತೊಂದರೆ ಇರುವಾಗ ಮತ್ತು ತುಂಬಾ ಕಾರ್ಯನಿರತರಾಗಿದ್ದರೂ ಅವರು ಸಾಧಕರಿಗೆ ಸಮಯವನ್ನು ಕೊಟ್ಟು ಅವರನ್ನು ಮುಂದೆ ಕರೆದುಕೊಂಡು ಹೋಗುತ್ತಾರೆ ಮತ್ತು ಅವರ ಪ್ರಶಂಸೆಯನ್ನು ಮಾಡಿ ಅವರಿಗೆ ಪ್ರಸಾದವನ್ನೂ ಕಳುಹಿಸುತ್ತಾರೆ. ಪರಾತ್ಪರ ಗುರು ಡಾಕ್ಟರರಲ್ಲಿ ಸಾಧಕರಿಗಾಗಿ ತುಂಬಾ ಸಮಯವಿರುತ್ತದೆ; ಏಕೆಂದರೆ ಅವರಲ್ಲಿ ನಿರಪೇಕ್ಷ ಪ್ರೀತಿಯಿದೆ. ನಾವು (ಸಾಧಕರು) ನಮ್ಮ ಲಾಭಕ್ಕೆ ಪ್ರಾಧಾನ್ಯತೆಯನ್ನು ನೀಡಿ ಇತರರ ಮೇಲೆ ಪ್ರೇಮವನ್ನು ಮಾಡುತ್ತೇವೆ.
೪. ಸಾಧಕರ ಮೇಲೆ ತಂದೆಯಂತೆ ಪ್ರೇಮವನ್ನು ಮಾಡಿ ಅವರಿಗೆ ಸಾಧನೆ ಮತ್ತು ಸೇವೆಗಾಗಿ ಪ್ರೋತ್ಸಾಹ ನೀಡಿ ಅವರ ಪ್ರಶಂಸೆಯನ್ನು ಮಾಡುವ ಪರಮ ಪಿತಾ !
೪ ಅ. ಸಾಧಕರಿಗೆ ವಿವಿಧ ಸೇವೆಗಳನ್ನು ಕಲಿಸಿ ಅವುಗಳನ್ನು ಪರಿಪೂರ್ಣವಾಗಿ ಮಾಡಿಸಿಕೊಳ್ಳುವ ಮತ್ತು ಮಾಡಿದ ಸೇವೆಯ ಪ್ರಶಂಸೆಯನ್ನು ಮಾಡಿ ಸಾಧಕರಿಗೆ ತಿನಿಸುಗಳನ್ನು ಕೊಡುವ ಪ್ರೇಮಮಯಿ ಪರಮ ಪಿತಾ ! : ಪರಾತ್ಪರ ಗುರು ಡಾಕ್ಟರರೊಂದಿಗೆ ಗಣಕೀಯ ಕಡತಗಳನ್ನು ಓದುವ ಸೇವೆಯನ್ನು ಮಾಡುವ ಓರ್ವ ಸಾಧಕನಿಗೆ ನಾನು, “ಪರಾತ್ಪರ ಗುರು ಡಾಕ್ಟರರು ನಿನಗೆ ಯಾವುದಾದರೊಂದು ಸೇವೆಯನ್ನು ಕೊಟ್ಟರೆ ಮತ್ತು ನಿನಗೆ ಆ ಸೇವೆಯನ್ನು ಮಾಡಲು ಬರದಿದ್ದರೆ, ಆಗ ನೀನು ಏನು ಮಾಡುತ್ತೀ ?” ಎಂದು ಕೇಳಿದಾಗ ಅವನು ಹೀಗೆಂದನು, ಹಾಗೆ ಇರುವುದಿಲ್ಲ ಕಾಕೂ ! ಅವರು ಸೇವೆಯನ್ನು ಕೊಡುತ್ತಾರೆ ಮತ್ತು ‘ಆ ಸೇವೆಯನ್ನು ಹೇಗೆ ಮಾಡಬೇಕು ?’, ಎಂಬುದನ್ನು ಅವರೇ ಹೇಳುತ್ತಾರೆ. ನಂತರ ಆ ಸೇವೆಯಲ್ಲಿ ‘ಎಲ್ಲಿ ಮತ್ತು ಏನು ತಪ್ಪಾಗಿವೆ ?’, ಎಂಬುದನ್ನು ಹೇಳಿ ಅವರೇ ಆ ತಪ್ಪುಗಳನ್ನು ನಮ್ಮಿಂದ ಸರಿಪಡಿಸಿಕೊಳ್ಳುತ್ತಾರೆ. ಅವರೇ ನಮಗೆ ಸೇವೆಯನ್ನು ಕಲಿಸುತ್ತಾರೆ ಮತ್ತು ಅವರೇ ಸಾಧಕರನ್ನು ಪ್ರಶಂಸಿಸಿ ಅವರಿಗೆ ಆ ಮಾಡಿದ ಸೇವೆಗಾಗಿ ತಿನಿಸನ್ನೂ ಕೊಡುತ್ತಾರೆ ! ನಾವು ಕೇವಲ ಸೇವೆಗಾಗಿ ತಯಾರಿರಬೇಕು, ಇಷ್ಟೇ. ಎಲ್ಲವನ್ನೂ ಅವರೇ ಮಾಡುತ್ತಾರೆ !
೪ ಅ ೧. ಜ್ಞಾನವನ್ನು ಸಹಜವಾಗಿ ಮತ್ತು ಧಾರಾಳವಾಗಿ ಹಂಚುವ ಪರಾತ್ಪರ ಗುರು ಡಾ. ಆಠವಲೆ ! : ಆ ಸಾಧಕನು, ಪರಾತ್ಪರ ಗುರು ಡಾಕ್ಟರರು ನನಗೆ, “ನಾನು ಇಲ್ಲದಿದ್ದರೂ ಮುಂದಿನ ಪೀಳಿಗೆಗೆ ಗ್ರಂಥಗಳ ರೂಪದಲ್ಲಿ ಜ್ಞಾನ ಸಿಗಬೇಕು” ಎಂದು ಹೇಳಿದರು ಮತ್ತು ಅವರು ನನಗೆ ಮುಂದೆ ಕೆಲವು ವರ್ಷಗಳ ವರೆಗೆ ನಡೆಯಲಿರುವ ಗ್ರಂಥಗಳ ನಿರ್ಮಿತಿಯ ಸೇವೆಯನ್ನು ಎಷ್ಟು ಬೇಗನೇ ಮತ್ತು ಸಹಜತೆಯಿಂದ ಕಲಿಸಿದರು ಎಂದು ಹೇಳಿದನು.
– ಗುರುಚರಣಳಲ್ಲಿ ಶರಣಾಗತ, ಸೌ. ಶಾಲಿನಿ ಮರಾಠೆ (ಆಧ್ಯಾತ್ಮಿಕ ಮಟ್ಟ ಶೇ. ೬೬ ರಷ್ಟು, ೭೪ ವರ್ಷ), ಸನಾತನ ಆಶ್ರಮ, ರಾಮನಾಥಿ, ಗೋವಾ. (೩.೩.೨೦೨೧)