೧. ಮಾಹಿತಿ ಯುದ್ಧದ ಮಾಧ್ಯಮದಿಂದ ರಷ್ಯಾ ಗಣಕಯಂತ್ರದ ಸಹಾಯದಿಂದ ಸಿದ್ಧಪಡಿಸಿರುವ ನಕಲಿ ಕಾರ್ಯಾಚರಣೆಗಳನ್ನು ತೋರಿಸುವುದು !
ರಷ್ಯಾ ಮತ್ತು ಉಕ್ರೇನ್ ಯುದ್ಧ ದಲ್ಲಿ ಮಾಹಿತಿ ಯುದ್ಧ ಅಥವಾ ಮಾನಸಿಕ ಯುದ್ಧವೆಂಬುದು ಒಂದು ಪ್ರತ್ಯೇಕವಾದ ಆಯಾಮವಾಗಿದೆ. ರಷ್ಯಾ ಮತ್ತು ಉಕ್ರೇನ್‌ನ ನಡುವಿನ ವಿವಾದದಲ್ಲಿ ಪ್ರತ್ಯಕ್ಷ ಭೂಮಿಯ ಮೇಲೆ ಯುದ್ಧ ನಡೆಯುತ್ತಿರುವಾಗ ಮಾನಸಿಕ ಯುದ್ಧವೂ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ರಷ್ಯಾವನ್ನು ಮಾಹಿತಿ ಯುದ್ಧ ಅಥವಾ ಮಾನಸಿಕ ಯುದ್ಧ ಮಾಡುವ ಅಗಾಧ ಕ್ಷಮತೆಯಿರುವ ರಾಷ್ಟ್ರವೆಂದು ತಿಳಿಯಲಾಗುತ್ತದೆ. ರಷ್ಯಾ ಇದನ್ನು ಸಿರಿಯಾ, ಇರಾನ್ ಮತ್ತು ಆರ್ಮೇನಿಯಾ ಈ ದೇಶಗಳಲ್ಲಿಯೂ ಮಾಡಿತ್ತು. ಅಮೇರಿಕಾ, ಯುರೋಪ್ ಮತ್ತು ‘ನಾಟೋ (ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಘಟನೆ)’ ಇವು ಸಹ ಮಾಹಿತಿ ಯುದ್ಧದಲ್ಲಿ ನಿಪುಣವಾಗಿವೆ. ರಷ್ಯಾದ ಮಾಹಿತಿ ಯುದ್ಧದಲ್ಲಿ ‘ಡಿಪ್ ಫೇಕ್’ ತಂತ್ರಜ್ಞಾನವನ್ನು ಉಪಯೋಗಿಸಲಾಗಿದೆ. ಇದರ ಅರ್ಥ ಗಣಕಯಂತ್ರದ ಸಹಾಯದಿಂದ ಸಿದ್ಧಪಡಿಸಿದ ಸುಳ್ಳು ಕಾರ್ಯಾಚರಣೆಗಳು, ಅದು ಪ್ರತ್ಯಕ್ಷ ನಡೆಯದಿರುವಾಗ ಅದನ್ನು ನಿರಂತರ ತೋರಿಸುತ್ತಿರುವುದು. ಉಕ್ರೇನ್ನಿನ ಜನರನ್ನು ಹೆದರಿಸಲು ‘ರಷ್ಯಾ ನಮ್ಮ ಮೇಲೆ ಆಕ್ರಮಣ ಮಾಡಲಿಕ್ಕಿದೆ’, ಎನ್ನುವ ಭ್ರಮೆಯನ್ನುಂಟು ಮಾಡುವುದು. ಅದರಿಂದ ಅವರು ತಮ್ಮ ಸರಕಾರದ ವಿರುದ್ಧ ಹೋಗುವರು; ಆದರೆ ಹಾಗೆ ಆಗಿಲ್ಲ. ತದ್ವಿರುದ್ಧ ಉಕ್ರೇನ್‌ನ ರಾಷ್ಟ್ರಾಧ್ಯಕ್ಷ ಝೆಲೆನ್‌ಸ್ಕಿ ಇವರು ಉಕ್ರೇನ್‌ನ ನಾಯಕರಾದರು.
೨. ರಷ್ಯಾ ಮಾಹಿತಿ ಯುದ್ಧವನ್ನು ನಿಖರವಾಗಿ ಹಾಗೂ ಚಾತುರ್ಯದಿಂದ ಉಪಯೋಗಿಸಿ ಉಕ್ರೇನ್ ಸಹಿತ ಜಗತ್ತಿನ ದಾರಿ ತಪ್ಪಿಸುವುದು
‘ಡಿಪ್ ಫೇಕ್’ ತಂತ್ರಜ್ಞಾನದಲ್ಲಿ ‘ಇಂಟರ್‌ನೆಟ್’ನ ಮೂಲಕ ವಿವಿಧ ಸುಳ್ಳು ಚಿತ್ರಗಳು, ಗ್ರಾಫಿಕ್ಸ್, ಬೇರೆ ಬೇರೆ ವಿಷಯಗಳ ಲೇಖನ ಹಾಗೂ ಛಾಯಾಚಿತ್ರಗಳನ್ನು ಬಿತ್ತರಿಸಲಾಗುತ್ತದೆ. ಯುದ್ಧದ ಮಾಹಿತಿಯನ್ನು ಪಡೆಯಲು ಮಾಧ್ಯಮಗಳು ಹುಡುಕುತ್ತಿರುತ್ತವೆ. ಅವರಿಗೆ ದೊಡ್ಡ ಪ್ರಮಾಣದಲ್ಲಿ ಇಂತಹ ಮಾಹಿತಿ ಸಿಗುತ್ತದೆ. ರಷ್ಯಾ ‘ಸೈಬರ್’ ಜಗತ್ತಿನಲ್ಲಿ ಗಡಿಯಲ್ಲಿ ಸೈನ್ಯವನ್ನು ನೇಮಕ ಮಾಡಿರುವ ನೂರಾರು ವಿಡಿಯೋಗಳನ್ನು ಪ್ರಸಾರ ಮಾಡಿತು. ‘ಟಿಕ್ ಟಾಕ್’ ಅಥವಾ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ರಷ್ಯಾ ಆಕ್ರಮಕ ಕಾರ್ಯಾಚರಣೆ ಮಾಡುತ್ತಿರುವುದನ್ನು ತೋರಿಸಲಾಯಿತು. ಇದಲ್ಲದೆ ‘ಅಂತರರಾಷ್ಟ್ರೀಯ ಸಹಾನುಭೂತಿಯನ್ನು ಗಳಿಸಲು ರಷ್ಯಾ ಸೈನ್ಯವನ್ನು ಹಿಂಪಡೆಯಲಿದೆ’, ‘ರಷ್ಯಾ ಈಗ ವಿಶ್ವ ಸಂಸ್ಥೆಯಲ್ಲಿ ಜವಾಬ್ದಾರಿಯಿಂದ ವರ್ತಿಸುವುದು’, ಎನ್ನುವ ಲೇಖನಗಳ ನಿಯೋಜನೆ ಮಾಡಲಾಯಿತು; ಆದರೆ ತಕ್ಷಣ ಈ ಪದ್ಧತಿಯನ್ನು ಬದಲಾಯಿಸಿ ‘ಬೇಲ್‌ರೂಸ್‌ನಲ್ಲಿನ ಕೇವಲ ಸ್ವಾತಂತ್ರ್ಯ ಹೋರಾಟಕ್ಕೆ ರಷ್ಯಾ ಸಹಾಯ ಮಾಡಿತು’, ಎಂದು ಬಿಂಬಿಸಲಾಯಿತು. ಉಕ್ರೇನ್‌ನಿಂದ ವಿಭಜಿಸಿಲ್ಪಟ್ಟ ಎರಡು ರಾಜ್ಯಗಳು ಕೂಡ ಅವುಗಳು ಸ್ವತಃ ಬೇರೆಯಾಗುವ ಬೇಡಿಕೆಯನ್ನು ಮಾಡುತ್ತಿದ್ದವು, ಎಂದು ತೋರಿಸಲಾಯಿತು. ಇದರ ಹಿಂದೆ ರಷ್ಯಾದ ಸೈನ್ಯ ಈ ಯುದ್ಧಕ್ಕೆ ಯುದ್ಧವೆಂದು ಹೇಳುವುದಿಲ್ಲ, ಅದಕ್ಕೆ ಕೇವಲ ಒಂದು ‘ವಿಶೇಷ ಅಭಿಯಾನ’ವೆಂದು ಹೇಳುತ್ತದೆ, ಎನ್ನುವ ಉದ್ದೇಶವಾಗಿತ್ತು.
ಕೇವಲ ಉಕ್ರೇನ್‌ನಲ್ಲಿ ಅಸಮಾಧಾನವಿರುವ ಜನರಿಗೆ ಸಹಾಯ ಮಾಡಲು ರಷ್ಯಾದ ಸೈನ್ಯವು ಅಲ್ಲಿಗೆ ತಲುಪಿದೆ. ನಂತರ ‘ರಷ್ಯಾದ ನೌಕಾದಳ ಸಮುದ್ರ ಮಾರ್ಗದಿಂದ ನಿಕೋರಾಯ ಭಾಗದಲ್ಲಿ ಆಕ್ರಮಣ ಮಾಡಲಿಕ್ಕಿದೆ’, ಎಂದು ಕೂಡ ತೋರಿಸಲಾಯಿತು. ವಾಸ್ತವದಲ್ಲಿ ಖಾರಕೀವ್ ಮತ್ತು ಖರಸಾನ ಈ ನಗರಗಳ ಮೇಲೆ ಆಕ್ರಮಣ ಮಾಡಲಾಯಿತು. ಇದರರ್ಥ ಮಾಧ್ಯಮಗಳನ್ನು ಎಚ್ಚರಿಕೆ ಮತ್ತು ಚಾತುರ್ಯದಿಂದ ಉಪಯೋಗಿಸಿ ಉಕ್ರೇನ್ ಸಹಿತ ಜಗತ್ತನ್ನು ದಾರಿ ತಪ್ಪಿಸಿತು.
೩. ರಷ್ಯಾದ ಮಾಹಿತಿ ಯುದ್ಧಕ್ಕೆ ಉಕ್ರೇನ್ ‘ಮುಯ್ಯಿಗೆ-ಮುಯ್ಯಿ’ ಎನ್ನುವ ಹಾಗೆ ಉತ್ತರ ಕೊಟ್ಟಿತು ಹಾಗೂ ಈ ಯುದ್ಧದಲ್ಲಿ ಉಕ್ರೇನ್‌ನ ಕೈ ಮೇಲಾಗಿದೆ.
ಉಕ್ರೇನ್‌ನ ಮೇಲೆ ಸೈಬರ್ ಹಲ್ಲೆಯಾದ ನಂತರ ಅಲ್ಲಿನ ಇಂಟರ್‌ನೆಟ್ ಸೇವೆ ಸಂಪೂರ್ಣ ಸ್ಥಬ್ಧವಾಯಿತು. ಆಗ ಎಲನ್ ಮಸ್ಕ್ ಇವರು ಉಪಗ್ರಹದ ಸಹಾಯದಿಂದ ಉಕ್ರೇನ್‌ಗೆ ಇಂಟರ್‌ನೆಟ್ ಪೂರೈಸಿದರು. ಆದ್ದರಿಂದ ಉಕ್ರೇನ್ ಮಾನಸಿಕ ಯುದ್ಧದಲ್ಲಿ ರಷ್ಯಾದೊಂದಿಗೆ ಸರಿಸಾಟಿಯಾಗಿ ಹೋರಾಡುತ್ತಿದೆ. ಉಕ್ರೇನ್ ನೆಕ್ ಐಲ್ಯಾಂಡ್‌ನಲ್ಲಿ ತಮ್ಮ ೧೨ ಸೈನಿಕರು ರಷ್ಯಾದ ಸೈನ್ಯದೊಂದಿಗೆ ಹೋರಾಡಿದರು, ಎಂದು ತೋರಿಸಿದೆ, ಆದರೆ ಇದು ಸತ್ಯವಾಗಿತ್ತೇ ? ಉಕ್ರೇನ್ನಿನ ವೀರ ಸೈನಿಕರು ಮತ್ತು ಸಾಮಾನ್ಯ ನಾಗರಿಕರು ಯುದ್ಧಕ್ಕಾಗಿ ಸಿದ್ಧರಾಗಿದ್ದಾರೆ, ಎಂಬುದನ್ನು ತೋರಿಸಲು ಈ ರಣನೀತಿಯಾಗಿತ್ತು. ಅದರಲ್ಲಿ ಯಶಸ್ವಿಯಾಗಿರಲೂ ಬಹುದು; ಆದರೆ ಇನ್ನೊಂದೆಡೆ ೨೦ ಲಕ್ಷಕ್ಕಿಂತ ಹೆಚ್ಚು ನಾಗರಿಕರು ಉಕ್ರೇನ್ ತೊರೆದರು. ಇದೇ ರೀತಿ ಉಕ್ರೇನ್ನಿನ ರಾಷ್ಟ್ರಪತಿಯವರನ್ನು ವಿವಿಧ ಸ್ಥಳಗಳಲ್ಲಿ ತೋರಿಸಲಾಯಿತು. ಇದರಿಂದ ಉಕ್ರೇನ್‌ನ ರಾಷ್ಟ್ರಪತಿ ಸ್ವತಃ ಯುದ್ಧದಲ್ಲಿ ಭಾಗವಹಿಸುತ್ತಿರುವುದು ಕಾಣಿಸಿತು. ಇದರಿಂದ ಅವರು ದೇಶದ ನಾಯಕರಾದರು.
ಪಾಶ್ಚಾತ್ಯ ಮಾಧ್ಯಮಗಳಲ್ಲಿ ರಷ್ಯಾದ ಆಕ್ರಮಣವನ್ನು ‘ಒಂದು ಸೈತಾನಿ’ ಆಕ್ರಮಣವೆಂದು ತೋರಿಸಲಾಯಿತು. ರಷ್ಯಾದ ಸೈನ್ಯವು ಉಕ್ರೇನ್ನಿನ ಆಸ್ಪತ್ರೆಯ ಮೇಲೆ ಆಕ್ರಮಣ ಮಾಡಿತು. ಅದರಲ್ಲಿ ಮಹಿಳೆಯರು ಮತ್ತು ಸಣ್ಣ ಮಕ್ಕಳು ಮೃತಪಟ್ಟರು, ಎಂದು ಕೂಡ ತೋರಿಸಲಾಯಿತು.
ಉಕ್ರೇನ್ ಕೂಡ ರಷ್ಯಾದ ವಿರುದ್ಧ ದೊಡ್ಡ ಪ್ರಮಾಣದ ಬಾಂಬ್ ಉಪಯೋಗಿಸುತ್ತಿದೆ, ಎನ್ನುವ ಭ್ರಮೆಯನ್ನು ನಿರ್ಮಿಸಿತು; ಆದರೆ ಅದು ನಿಜವಾಗಿರಲಿಕ್ಕಿಲ್ಲ. ರಷ್ಯಾ ಉಕ್ರೇನ್‌ನ ಅಣುಸ್ಥಾವರದ ಮೇಲೆ ಆಕ್ರಮಣ ಮಾಡಿರುವುದರಿಂದ ಅಲ್ಲಿ ಅಣುಬಾಂಬ್‌ನ ಸ್ಫೋಟವಾಗಬಹುದು, ಎಂದು ತೋರಿಸಲಾಯಿತು. ಅದರಿಂದ ಚಿಂತೆ ಹೆಚ್ಚಾಯಿತು. ಉಕ್ರೇನ್ ಸೆರೆಹಿಡಿದಿರುವ ರಷ್ಯಾದ ಸೈನಿಕರ ಸಂದರ್ಶನವು ದೂರಚಿತ್ರವಾಹಿನಿಯಲ್ಲಿ ಪ್ರಸಾರವಾಯಿತು. ಅದರಲ್ಲಿ ಅವರು ‘ನಮಗೆ ಈ ಯುದ್ಧದಲ್ಲಿ ಪಾಲ್ಗೊಳ್ಳಲಿಕ್ಕಿರಲಿಲ್ಲ. ನಾವು ಕೇವಲ ೩ ವರ್ಷಗಳಿಗಾಗಿ ಸೈನ್ಯದಲ್ಲಿ ಸೇರಿಕೊಂಡಿದ್ದೇವೆ’, ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇದರ ಬದಲು ರಷ್ಯಾದ ನಾಶಗೊಳಿಸಿರುವ ಟ್ಯಾಂಕ್, ದೊಡ್ಡ ವಾಹನಗಳನ್ನು ಕೂಡ ಛಾಯಾಚಿತ್ರದಲ್ಲಿ ತೋರಿಸಲಾಗಿದೆ. ಇದು ಸತ್ಯವಿರಬಹುದೇ ? ಎನ್ನುವ ವಿಷಯದಲ್ಲಿ ಸಂದೇಹವಿದೆ.
ರಷ್ಯಾ ಮಾಡಿದ ಮಾಹಿತಿ ಯುದ್ಧದಿಂದ ಉಕ್ರೇನ್‌ಗೆ ಹೆಚ್ಚೇನೂ ಪರಿಣಾಮವಾಗಿಲ್ಲ. ಉಕ್ರೇನ್‌ನ ನೇತೃತ್ವ, ಅವರ ಸೈನ್ಯ ಮತ್ತು ಹೆಚ್ಚಿನ ನಾಗರಿಕರು ಯುದ್ಧ ಮಾಡುತ್ತಿದ್ದಾರೆ; ಆದರೆ ‘ನಾವು ಕೇವಲ ಸೇನಾನೆಲೆಯ ಮೇಲೆ ಹಲ್ಲೆ ಮಾಡುತ್ತಿದ್ದೇವೆ ಅಥವಾ ಎಲ್ಲಿಂದ ಶಸ್ತ್ರಗಳ ಹೊಡೆತ ಬೀಳುತ್ತಿದೆಯೊ, ಅವರಿಗೆ ಪ್ರತ್ಯುತ್ತರ ಕೊಡುತ್ತಿದ್ದೇವೆ ಅದಲ್ಲದೆ ನಾವು ನಾಗರಿಕರ ಮನೆಗಳ ಮೇಲೆ ಹಲ್ಲೆ ಮಾಡುವುದಿಲ್ಲ’, ಎಂದು ರಷ್ಯಾ ಹೇಳಲು ಪ್ರಯತ್ನಿಸುತ್ತಿತ್ತು.
೪. ಪಾಶ್ಚಾತ್ಯ ಜಗತ್ತು ಮತ್ತು ಉಕ್ರೇನ್ ರಷ್ಯಾದ ವಿರುದ್ಧ ಮಾಹಿತಿ ಯುದ್ಧ ನಡೆಸಿರುವುದರಿಂದ ಜಾಗತಿಕ ಅಭಿಪ್ರಾಯ ರಷ್ಯಾದ ವಿರುದ್ಧವಿದೆ
ರಷ್ಯಾದ ವಿರುದ್ಧ ನಡೆಯುತ್ತಿರುವ ಮಾಹಿತಿ ಯುದ್ಧವನ್ನು ಪಾಶ್ಚಾತ್ಯ ಜಗತ್ತು ಮತ್ತು ಉಕ್ರೇನ್ ನಡೆಸುತ್ತಿದೆ, ಇದರಲ್ಲಿ ಅವರಿಗೆ ಹೆಚ್ಚು ಯಶಸ್ಸು ಸಿಗುತ್ತಿದೆ. ಜಗತ್ತಿನಲ್ಲಿ ಹೆಚ್ಚಿನ ದೇಶಗಳು ಮಾಹಿತಿ ಯುದ್ಧದಲ್ಲಿ ರಷ್ಯಾದ ವಿರುದ್ಧ ಹೋಗಿವೆ. ವಿಶ್ವ ಸಂಸ್ಥೆಗಳಲ್ಲಿ ಆಗಿರುವ ಮತದಾನದಲ್ಲಿ ೧೪೩ ದೇಶಗಳು ರಷ್ಯಾದ ವಿರುದ್ಧ ತಟಸ್ಥವಾಗಿದ್ದವು. ಇದರ ಅರ್ಥ ಜಗತ್ತಿನ ಅಭಿಪ್ರಾಯವು ದೊಡ್ಡ ಪ್ರಮಾಣದಲ್ಲಿ ರಷ್ಯಾದ ವಿರುದ್ಧವಿದೆ; ಆದರೆ ರಷ್ಯಾ ಯುದ್ಧವನ್ನು ನಿಲ್ಲಿಸುವುದೇ ? ಎಂಬುದರ ಉತ್ತರ ‘ಇಲ್ಲ !’ ಎಂದಾಗಿದೆ. ರಷ್ಯಾಗೆ ‘ನಾಟೋ’ ಅಥವಾ ಯುರೋಪ್ ಕೇವಲ ಮಾಹಿತಿ ಯುದ್ಧವನ್ನು ಮಾಡಲು ಸಾಧ್ಯವಿದೆ ಎಂಬುದು ತಿಳಿದಿದೆ. ಪ್ರತ್ಯಕ್ಷ ಹೋರಾಟ ಮಾಡುವ ಕ್ಷಮತೆ ಅವರಲ್ಲಿಲ್ಲ. ೨೪ ದಿನಗಳ ಯುದ್ಧದ ನಂತರ ಹೀಗೆ ಹೇಳಬಹುದು, ಉಕ್ರೇನ್ ಮತ್ತು ರಷ್ಯಾ ಪರಸ್ಪರರ ವಿರುದ್ಧ ಮಾಹಿತಿ ಯುದ್ಧವನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿವೆ ಹಾಗೂ ಜಗತ್ತಿನ ಮಾಧ್ಯಮಗಳು ಅದಕ್ಕೆ ಬಲಿಯಾಗುತ್ತಿವೆ. ಇದರಲ್ಲಿ ನಿಜವಾಗಿಯೂ ಸತ್ಯವೇನು ಹಾಗೂ ಸುಳ್ಳೇನು ಎಂಬುದು ತಿಳಿಯುವುದು ಕಷ್ಟವಾಗಿದೆ. ಸದ್ಯಕ್ಕಂತೂ ಈ ಮಾಹಿತಿ ಯುದ್ಧದಲ್ಲಿ ಉಕ್ರೇನ್ ಮೇಲುಗೈ ಸಾಧಿಸಿದೆ; ಆದರೆ ಇದರಿಂದ ರಷ್ಯಾದ ಆಕ್ರಮಣ ನಿಲ್ಲಬಹುದು ಹಾಗೂ ರಷ್ಯಾ ಹಿಂದಕ್ಕೆ ಸರಿಯುವುದು, ಎನ್ನುವ ಸಾಧ್ಯತೆಯಿಲ್ಲ.
– (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ. (ಆಧಾರ : ದೈನಿಕ‘ಪುಢಾರಿ)