ಮೂರನೇ ದೇಶ ಯುದ್ಧದಲ್ಲಿ ಸಹಭಾಗಿಯಾದರೆ ವಿಶ್ವಯುದ್ಧವಾಗಿ ರೂಪಾಂತರ ಆಗಲಿದೆ ! – ಝೆಲೆನ್ಸ್ಕಿಯ ಎಚ್ಚರಿಕೆ

  • ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆಯ ದಾವೆ

  • ಉಕ್ರೇನ್ ವಿರುದ್ಧದ ಯುದ್ಧದಲ್ಲಿ, ಉತ್ತರ ಕೊರಿಯಾದ 12 ಸಾವಿರ ಸೈನಿಕರು ರಷ್ಯಾಗೆ ಸಹಾಯ ಮಾಡಿದ್ದರು !

ಸಿಯೋಲ್ (ದಕ್ಷಿಣ ಕೊರಿಯಾ) – ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾಗೆ ಸಹಾಯ ಮಾಡಲು ಉತ್ತರ ಕೊರಿಯಾ ತನ್ನ 12 ಸಾವಿರ ಸೈನಿಕರನ್ನು ಕಳುಹಿಸಿದೆ. ಇದರಲ್ಲಿ ವಿಶೇಷ ಕಾರ್ಯಾಚರಣೆಯ ಸೈನ್ಯಗಳ ಶಕ್ತಿಶಾಲಿ ತುಕಡಿ ಒಳಗೊಂಡಿದೆ ಎಂದು ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿವೆ. ಮೂರನೇ ದೇಶ ಯುದ್ಧಕ್ಕೆ ಸೇರಿದರೆ, ವಿಶ್ವಯುದ್ಧವಾಗಿ ಬದಲಾಗಬಹುದು ಎಂದು ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ.

‘ನಾಟೋ’ದ ( ‘ನಾಟೋ’ಅಂದರೆ ‘ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್’ ಹೆಸರಿನ ಜಗತ್ತಿನ 29 ದೇಶಗಳ ಸಮಾವೇಶ ಇರುವ ಒಂದು ಸೈನ್ಯದ ಸಂಘಟನೆ) ಮಹಾಸಚಿವ ಮಾರ್ಕ್ ರಟೆ ಮಾತನಾಡಿ, “ಉತ್ತರ ಕೊರಿಯಾದ ಸೈನ್ಯ ಯುದ್ಧದಲ್ಲಿ ಸಹಭಾಗಿಯಾಗಿದೆ ಎಂಬುದಕ್ಕೆ ನಮ್ಮ ಬಳಿ ಯಾವುದೇ ಪುರಾವೆಗಳಿಲ್ಲ; ಆದರೆ ಉತ್ತರ ಕೊರಿಯಾ ರಷ್ಯಾಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದು, ಹಾಗೆಯೇ ಯುದ್ಧವನ್ನು ಬೆಂಬಲಿಸಲು ತಾಂತ್ರಿಕ ಸರಬರಾಜು, ಹೀಗೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತಿದೆ. ಇದು ತುಂಬಾ ಕಳವಳಕಾರಿಯಾಗಿದೆ ಎಂದಿದ್ದಾರೆ.